ಜಾಗತಿಕ ಚಾಕಲೇಟ್ ಕಂಪನಿಯಾದ ಮಾರ್ಸ್ ರಿಗ್ಲಿ ಬ್ರ್ಯಾಂಡ್‌ನ ಗ್ಯಾಲಕ್ಸಿ ಚಾಕಲೇಟ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಾಲಿವುಡ್‌ನ ಜನಪ್ರಿಯ ನಟಿ ಕಿಯಾರಾ ಅಡ್ವಾಣಿ ನೇಮಕಗೊಂಡಿದ್ದಾರೆ. ಗ್ಯಾಲಕ್ಸಿ ಚಾಕಲೇಟ್‌ನೊಂದಿಗಿನ ಸಹಯೋಗವನ್ನು ಪ್ರಕಟ ಮಾಡಿದ ಕಿಯಾರಾ ಅಡ್ವಾಣಿ, ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಸಣ್ಣ ಟೀಸರ್ ವೀಡಿಯೋವನ್ನು, ಪೂರ್ಣ ಜಾಹೀರಾತು ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ನಟಿ ಕಿಯಾರಾ ಅಡ್ವಾಣಿ ಇದಾದ ಬಳಿಕ ಇಸ್ತಾನ್‌ಬುಲ್‌ನಲ್ಲಿ ಚಾಕೊಲೇಟ್‌ನ ಸೆಟ್ಟಿಂಗ್‌ನಲ್ಲಿ ಡಿಡಿಬಿ ಟ್ರೈಬಲ್‌ನ ಟೆಲಿವಿಜನ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮಾರ್ಸ್ ರಿಗ್ಲಿ ಇಂಡಿಯಾದ ಮಾರ್ಕೆಟಿಂಗ್ ಡೈರೆಕ್ಟರ್ ವರುಣ್ ಕಾಂಧಾರಿ, "ನಾವು ನಮ್ಮ ಬ್ರ್ಯಾಂಡ್‌ಗೆ ಕಿಯಾರಾ ಅಡ್ವಾಣಿ ಅವರು ಅಂಬಾಸಿಡರ್ ಆಗಿರುವುದಕ್ಕೆ ಸಂತಸಪಡುತ್ತೇವೆ," ಎಂದು ತಿಳಿಸಿದ್ದಾರೆ.

"ಜಾಗತಿಕವಾಗಿ ಜನಪ್ರಿಯವಾದ ಬ್ರ್ಯಾಂಡ್ ಆದ ಗ್ಯಾಲಕ್ಸಿ ಚಾಕಲೇಟ್‌ನ ಭಾರತದ ಮಾರುಕಟ್ಟೆ ಅಂಬಾಸಿಡರ್ ಆಗಿ ಕಿಯಾರಾ ಅಡ್ವಾಣಿ ನೇಮಕಗೊಂಡಿರುವುದಕ್ಕೆ ನಾವು ಅತೀ ಸಂತೋಷವಾಗಿದ್ದೇವೆ. ನಟಿಯ ಕಿಯಾರಾರ ಸೊಬಗು ಹಾಗೂ ಮೋಡಿಯು ಬ್ರ್ಯಾಂಡ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಕಿಯಾರಾ ಅಡ್ವಾಣಿ ಒಳಗೊಂಡಿರುವ ಈ ಇತ್ತೀಚಿನ ಅಭಿಯಾನದ ಮೂಲಕ, ನಾವು ಗ್ಯಾಲಕ್ಸಿ ಚಾಕಲೇಟ್‌ಗಳ ಹೊಸ ಸಿಗ್ನೇಚರ್ ರೆಸಿಪಿಯನ್ನು ಪರಿಚಯಿಸುತ್ತೇವೆ," ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಕಂಪನಿಯು ಭಾರತೀಯ ಗ್ರಾಹಕರ ಮನಸ್ಸಿನಲ್ಲಿ ನಮ್ಮ ಗ್ಯಾಲಕ್ಸಿ ಚಾಕೊಲೇಟ್ ಉತ್ಪನ್ನದ ಹೆಸರನ್ನು ಅಚ್ಚಳಿಯದಂತೆ ಉಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿರುವ ವರುಣ್ ಕಾಂಧಾರಿ, "ಈ ಹೊಸ ಬೆಳವಣಿಗೆಯ ಮೂಲಕ ನಾವು ಗ್ಯಾಲಕ್ಸಿ ಚಾಕೊಲೇಟ್‌ಗಳ ಜೊತೆಗಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದ್ದೇವೆ. ಪ್ರಪಂಚದಾದ್ಯಂತ ಪ್ರೀತಿಪಾತ್ರಕ್ಕೆ ಒಳಗೋದ ಐಕಾನಿಕ್ ಚಾಕೊಲೇಟ್ ಬ್ರ್ಯಾಂಡ್ ಇದಾಗಿದೆ," ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಜಾಹೀರಾತು ಚಿತ್ರದಲ್ಲಿ, ಕಿಯಾರಾ ಅಡ್ವಾಣಿ ತಾನು ಮತ್ತು ಚಂದ್ರನ ನಡುವೆ ಕಣ್ಣಾಮುಚ್ಚಾಲೆ ಆಡುವಂತೆ ಕಾಣಿಸಿಕೊಂಡಿದ್ದಾರೆ. ಇನ್ನೊಂದೆಡೆ ಗ್ಯಾಲಕ್ಸಿ ಚಾಕಲೇಟ್‌ನ ಚಿತ್ರಣವಿದೆ. ಪ್ರಪಂಚದ ಹೊರಗಿನ ದೃಶ್ಯದಂತೆ ಕಾಣಿಸಲಾಗುತ್ತದೆ. ಈ ಚಾಕಲೇಟ್ ವಿಶ್ವದಾದ್ಯಂತ ಉತ್ತಮ ಬ್ರ್ಯಾಂಡ್ ಆಗಿದೆ ಎಂಬಂತೆ ಚಿತ್ರೀಕರಿಸಲಾಗಿದೆ.
ಕಿಯಾರಾ ಅಡ್ವಾಣಿ ಏನು ಹೇಳುತ್ತಾರೆ?
"ಸಿಹಿ ತಿನಿಸು ಎಂದರೆ ನನಗೆ ಚಾಕಲೇಟ್ ಮಾತ್ರ ಇಷ್ಟವಾಗುತ್ತದೆ. ಪ್ರತಿ ಊಟದ ನಂತರ ಒಂದು ತುಂಡಾದರೂ ಚಾಕಲೇಟ್ ಅನ್ನು ಸವಿಯಲು ನಾನು ಇಷ್ಟಪಡುತ್ತೇನೆ. ನಮ್ಮ ಬಾಲ್ಯದ ನೆನಪುಗಳನ್ನು ತರುವ ಚಾಕಲೇಟ್ ನಮ್ಮ ಹೃದಯದಲ್ಲಿ ಎಂದಿಗೂ ಕೂಡಾ ಅಚ್ಚಲಿಯದಂತೆ ಉಳಿಯುತ್ತದೆ. ನಾನು ಗ್ಯಾಲಕ್ಸಿ ಚಾಕಲೇಟ್‌ನ ನಿಷ್ಠಾವಂತ ಗ್ರಾಹಕೆ," ಎಂದು ಹೇಳಿಕೊಂಡಿದ್ದಾರೆ.
"ಗ್ಯಾಲಕ್ಸಿ ಚಾಕಲೇಟ್ ನಾನು ಅತೀ ಹೆಚ್ಚಾಗಿ ಇಷ್ಟಪಡುವ ಚಾಕಲೇಟ್ ಆಗಿದೆ. ನನ್ನ ರೆಫ್ರಿಜಿರೇಟರ್‌ನಲ್ಲಿ ಎಂದಿಗೂ ಕೂಡಾ ಚಾಕಲೇಟ್ ಇದ್ದೆ ಇರುತ್ತದೆ. ಅಂತಮ ನಾನು ಅಪ್ರತಿಮವಾಗಿ, ಹಾಗೆಯೇ ಜಾಗತಿಕವಾಗಿ ಪ್ರೀತಿಪಾತ್ರವಾದ ಬ್ರ್ಯಾಂಡ್‌ನ ಭಾಗವಾಗಲು ನನಗೆ ಅಪಾರ ಸಂತೋಷವಿದೆ," ಎಂದು ಕೂಡಾ ಹೇಳಿದ್ದಾರೆ. ಭಾರತೀಯ ಚಾಕಲೇಟ್ ಮಾರುಕಟ್ಟೆಯ ಮೌಲ್ಯವು 2022ರಲ್ಲಿ 2.4 ಬಿಲಿಯನ್ ಡಾಲರ್ ಆಗಿದೆ.
ಮಸಾಜಿಂಗ್ ಸೀಟ್ ಇರುವ ಐಷಾರಾಮಿ ಕಾರು ಖರೀದಿಸಿದ ಕಿಯಾರಾ
ಇತ್ತೀಚೆಗೆ ಕಿಯಾರಾ ಅಡ್ವಾಣಿ ಮಸಾಜಿಂಗ್ ಸೀಟ್ ಇರುವ 2.69 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ್ದಾರೆ. ಭೂಲ್ ಭೂಲೈಯಾ 2 ಸ್ಟಾರ್ ಕಿಯಾರಾ ಅಡ್ವಾಣಿ ಈಗಾಗಲೇ ತನ್ನ ದುಬಾರಿ ಕಾರು ಸಂಗ್ರಹಣೆಗೆ ಹೆಸರುವಾಸಿಯಾಗಿದ್ದಾರೆ, ಈಗ ತನ್ನ ಗ್ಯಾರೇಜ್‌ನಲ್ಲಿ ಮರ್ಸಿಡಿಸ್-ಮೇಬ್ಯಾಕ್ S580 ಅನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಕಿಯಾರಾ ಇತ್ತೀಚೆಗೆ ಕಾರನ್ನು ಖರೀದಿಸಿದ್ದಾರೆ ಎಂಬುವುದು ತಿಳಿದುಬಂದಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications