ನಮ್ಮ ಮನೆಯಲ್ಲಿ ಆಗಲಿ ಅಥವಾ ಯಾವುದೇ ಕಚೇರಿಯಲ್ಲಿ ಆಗಲಿ, ಬೇಡದ, ಯಾರಿಗೂ ಬಳಕೆ ಮಾಡಲು ಸಾಧ್ಯವಾಗದ ವಸ್ತುಗಳನ್ನು ನಾವು ಕಂಡರೆ ಅದನ್ನು ಗುಜರಿಗೆ ಮಾರಾಟ ಮಾಡುತ್ತೇವೆ. ಇದು ಸಾಮಾನ್ಯವಾಗಿಯೇ ಜನರು ಮಾಡುವ ಕಾರ್ಯವಾಗಿದೆ. ಕೇಂದ್ರ ಸರ್ಕಾರವು ಇದರಿಂದಾಗಿ ಹಣ ಸಂಪಾದನೆ ಮಾಡಿದೆ.
ಹೌದು, ಅಕ್ಟೋಬರ್ 2021 ರಿಂದ, ಈ ವರ್ಷದ ಅಕ್ಟೋಬರ್‌ನಲ್ಲಿ ಒಂದು ತಿಂಗಳ ಕ್ಯಾಂಪೇನ್‌ನಿಂದ ಕೇಂದ್ರ ಸರ್ಕಾರವು ಸುಮಾರು 557 ಕೋಟಿ ರೂಪಾಯಿಯನ್ನು ಸಂಪಾದನೆ ಮಾಡಿದೆ. ಆದರೆ ಅಕ್ಟೋಬರ್ 2021 ರಿಂದ, ಮೋದಿ ಸರ್ಕಾರವು ಸ್ಕ್ರ್ಯಾಪ್ ಮಾರಾಟದಿಂದ ಸುಮಾರು 1,163 ಕೋಟಿ ರೂಪಾಯಿಗಳನ್ನು ಸಂಪಾದನೆ ಮಾಡಿದೆ.

ಅಕ್ಟೋಬರ್ 2021 ರಿಂದ, 96 ಲಕ್ಷ ಫೈಲ್‌ಗಳನ್ನು ಕೇಂದ್ರ ಸರ್ಕಾರಿ ಕಚೇರಿಗಳಿಂದ ತೆಗೆದುಹಾಕಲಾಗಿದೆ. ಒಟ್ಟಾರೆ 355 ಲಕ್ಷ ಚದರ ಅಡಿ ಜಾಗವನ್ನು ಕ್ಲೀನ್ ಮಾಡಲಾಗಿದೆ ಎಂದು ಸರ್ಕಾರದ ವರದಿಯೊಂದು ಹೇಳುತ್ತದೆ. ಪರಿಣಾಮವಾಗಿ, ಕೆಲಸದ ಸ್ಥಳದ ಹಜಾರಗಳನ್ನು ಸ್ವಚ್ಛಗೊಳಿಸಲಾಗಿದೆ. ಖಾಲಿ ಜಾಗವನ್ನು ಮನರಂಜನಾ ಕೇಂದ್ರಗಳು ಮತ್ತು ಇತರ ಪ್ರಯೋಜನಕಾರಿ ಬಳಕೆಗಳಿಗಾಗಿ ಬಳಸಲಾಗಿದೆ.
ಭಾರತದ ಯಶಸ್ವಿ ಚಂದ್ರಯಾನ-3 ಕ್ಕೆ ಸುಮಾರು 600 ಕೋಟಿ ರೂಪಾಯಿ ವೆಚ್ಚಾಗಿದೆ ಎಂದು ವರದಿಯು ಹೇಳುತ್ತದೆ. ಈ ಮೌಲ್ಯಮಾಪನದ ಪ್ರಕಾರ, ನರೇಂದ್ರ ಮೋದಿ ಸರ್ಕಾರವು ಕಾರುಗಳು, ಕಚೇರಿ ಉಪಕರಣಗಳು ಮತ್ತು ಫೈಲ್‌ಗಳನ್ನು ಒಳಗೊಂಡಂತೆ ಅಗತ್ಯವಿಲ್ಲದ, ಉಪಯೋಗಕ್ಕೆ ಬಾರದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಇಂತಹ ಎರಡು ಯೋಜನೆಗೆ ಹಣ ವಿನಿಯೋಗ ಮಾಡಬಹುದಾಗಿದೆ!.
ಸಚಿವ ಜಿತೇಂದ್ರ ಸಿಂಗ್ ಈ ವರ್ಷದ ಆರಂಭದಲ್ಲಿ ಹೇಳಿದ ಪ್ರಕಾರ, "ರಷ್ಯಾದ 16,000 ಕೋಟಿ ರೂಪಾಯಿಯ ಚಂದ್ರನ ಮಿಷನ್ ವಿಫಲವಾಗಿದೆ. ಮತ್ತು ನಮ್ಮ (ಚಂದ್ರಯಾನ-3) ಮಿಷನ್ ಸುಮಾರು 600 ಕೋಟಿ ರೂಪಾಯಿಯದ್ದಾಗಿದೆ. ಚಂದ್ರ ಮತ್ತು ಬಾಹ್ಯಾಕಾಶ ಆಧಾರಿತ ಹಾಲಿವುಡ್ ಚಲನಚಿತ್ರಗಳು ಮಿಷನ್‌ಗಳಿಗೆ 600 ಕೋಟಿ ರೂಪಾಯಿ ವೆಚ್ಚವಾಗುತ್ತದೆ," ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿ ನಡೆದ ಸರ್ಕಾರದ ಸ್ವಚ್ಛತಾ ಅಭಿಯಾನವು ಬೃಹತ್ ಮತ್ತು ಮಹತ್ವದ್ದಾಗಿದೆ. ಇದರಡಿಯಲ್ಲಿ ಸ್ಕ್ರ್ಯಾಪ್ ಮಾರಾಟದಿಂದ 1,163 ಕೋಟಿ ರೂಪಾಯಿ ಪಡೆಯಲಾಗಿದೆ. ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಈ ಉಪಕ್ರಮದ ಮುಂದಾಳತ್ವ ವಹಿಸಿದೆ.
ಈ ವರ್ಷ ಸ್ಕ್ರ್ಯಾಪ್ ಮಾರಾಟದಿಂದ ಸರ್ಕಾರ ಸಂಗ್ರಹಿಸಿದ 556 ಕೋಟಿ ರೂಪಾಯಿಗಳಲ್ಲಿ ಸುಮಾರು 225 ಕೋಟಿ ರೂಪಾಯಿಗಳನ್ನು ರೈಲ್ವೇ ಸಚಿವಾಲಯದಿಂದಲೇ ಬಂದಿದೆ. ರಕ್ಷಣಾ ಸಚಿವಾಲಯ 168 ಕೋಟಿ ರೂಪಾಯಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 56 ಕೋಟಿ ರೂಪಾಯಿ ಮತ್ತು ಕಲ್ಲಿದ್ದಲು ಸಚಿವಾಲಯ 34 ಕೋಟಿ ರೂಪಾಯಿ ಸಂಗ್ರಹಿಸಿದೆ.
ವರದಿಗಳ ಪ್ರಕಾರ, ಈ ವರ್ಷ ಬಿಡುಗಡೆಯಾದ ಒಟ್ಟು 164 ಲಕ್ಷ ಚದರ ಅಡಿ ಜಾಗದಲ್ಲಿ, ಕಲ್ಲಿದ್ದಲು ಸಚಿವಾಲಯ (66 ಲಕ್ಷ ಚದರ ಅಡಿ), ಭಾರೀ ಕೈಗಾರಿಕೆ ಸಚಿವಾಲಯ (21 ಲಕ್ಷ ಚದರ ಅಡಿ), ರಕ್ಷಣಾ (19 ಲಕ್ಷ ಚದರ ಅಡಿ) ದಲ್ಲಿ ಅಧಿಕವಾಗಿ ಜಾಗವನ್ನು ಬಿಡುಗಡೆ ಮಾಡಲಾಗಿದೆ.


Click it and Unblock the Notifications