ಆಧಾರ್‌ ಅಸಲಿಯೇ, ನಕಲಿಯೇ?: ಹೀಗೆ ತಿಳಿಯಿರಿ..

ಆಧಾರ್ ಕಾರ್ಡ್ ಇದು ಸರ್ಕಾರದಿಂದ ನೀಡಲಾಗುವ ಅತ್ಯಂತ ಮಹತ್ವದ ಗುರುತಿನ ಚೀಟಿಗಳಲ್ಲೊಂದಾಗಿದೆ. ಆಧಾರ್ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿದ 12-ಅಂಕಿಯ ಗುರುತಿಸುವಿಕೆಯ ಸಂಖ್ಯೆಯಾಗಿದೆ. ಆಧಾರ್‌ ಕಾರ್ಡ್ ಸಂಖ್ಯೆ ಈಗ ಭಾರತದಲ್ಲಿ ಬಹುಮುಖ್ಯವಾದ ಸಂಖ್ಯೆಯಾಗಿದೆ. ಆಧಾರ್‌ ಅನ್ನು ಜನರು ಐಡಿ ರೂಪದಲ್ಲಿಯೂ ಬಳಸುತ್ತಾರೆ. ಹಾಗಾಗಿ ಎಲ್ಲಾ ವಲಯದಲ್ಲೂ ಆಧಾರ್‌ ಕಾರ್ಡ್ ಈಗ ಪ್ರಮುಖವಾಗಿದೆ.

ಬ್ಯಾಂಕ್, ಏರ್‌ಪೋರ್ಟ್‌, ಶಾಲೆ ಕಾಲೇಜು, ಪಿಎಫ್‌, ಹೀಗೆ ಹಲವು ಸಂದರ್ಭದಲ್ಲಿ ಆಧಾರ್‌ ಕಾರ್ಡ್‌ಗಳನ್ನು ಬಳಸುವುದು ಈಗ ಕಡ್ಡಾಯವೆಂಬಂತೆ ಪರಿಗಣಿಸಲ್ಪಟ್ಟಿದೆ. ಆದರೆ ಈ ಸಂದರ್ಭದಲ್ಲಿ ಆಧಾರ್‌ ಕಾರ್ಡ್ ಅಸಲಿಯೇ ಅಥವಾ ನಕಲಿಯೇ ಎಂದು ತಿಳಿಯುವುದು ಮುಖ್ಯ. ಇತ್ತೀಚೆಗೆ ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ನಕಲಿ ಆಧಾರ್‌ ಕಾರ್ಡ್ ಅನ್ನು ಬಳಸಿಕೊಂಡು 244 ಮಕ್ಕಳನ್ನು ಕಳ್ಳ ಸಾಗಣೆ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದಕ್ಕೂ ಕೆಲವು ವಾರಗಳ ಮುನ್ನ, ಹರಿಯಾಣದ ಗುರುಗ್ರಾಮದಲ್ಲಿ ನಕಲಿ ಆಧಾರ್‌ ರಾಕೆಟ್‌ ಅನ್ನು ಅಲ್ಲಿ ಪೊಲೀಸರು ಬಯಲಿಗೆ ಎಳೆದಿದ್ದಾರೆ.

ಈಗ ಕಂಪ್ಯೂಟರ್‌ ಸಾಫ್ಟ್‌ವೇರ್‌ಗಳನ್ನು ಬಳಸಿಕೊಂಡು ಕೇವಲ ಹತ್ತು ನಿಮಿಷದಲ್ಲಿಯೇ ನಕಲಿ ಆಧಾರ್‌ ಕಾರ್ಡ್ ಅನ್ನು ಮಾಡುತ್ತಿದ್ದಾರೆ. ಈ ನಕಲಿ ಆಧಾರ್‌ ಕಾರ್ಡ್‌ಗಳನ್ನು ಸುಮಾರು ಐನ್ನೂರು ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ ಈ ನಡುವೆ ನಾವು ನಕಲಿ ಹಾಗೂ ಅಸಲಿ ಆಧಾರ್‌ ಕಾರ್ಡ್ ಯಾವುದು ಎಂದು ತಿಳಿಯುವುದು ಬಹಳ ಮುಖ್ಯವಾಗಿದೆ. ಅದಕ್ಕಾಗಿ ಯುಐಡಿಎಐ ಒಂದು ವಿಧಾನವನ್ನೇ ತಿಳಿಸಿದೆ. ಹಾಗಾದರೆ ಆಧಾರ್‌ ಕಾರ್ಡ್ ನಕಲಿಯೇ ಅಸಲಿಯೇ ಎಂದು ನಾವು ಹೇಗೆ ಪತ್ತೆ ಹಚ್ಚುವುದು ಎಂದು ತಿಳಿಯಲು ಮುಂದೆ ಓದಿ....

ಆಧಾರ್‌ ಅಸಲಿಯೇ, ನಕಲಿಯೇ?: ಹೀಗೆ ತಿಳಿಯಿರಿ..

ಆಧಾರ್‌ ಕಾರ್ಡ್ ನಕಲಿಯೇ, ಅಸಲಿಯೇ ಎಂದು ಪತ್ತೆ ಹಚ್ಚುವುದು ಹೇಗೆ?

* ಮೊದಲು ನೀವು ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡಿ
* ಬಳಿಕ Aadhaar services ಇರುವ ಪುಟಕ್ಕೆ ಹೋಗಿ
* Verify an Aadhaar number ಮೇಲಿ ಕ್ಲಿಕ್‌ ಮಾಡಿ
* Verify Aadhaar ಪುಟದಲ್ಲಿ ನಿಮ್ಮ 12 ಅಂಕಿಗಳ ಆಧಾರ್‌ ಸಂಖ್ಯೆಯನ್ನು ನಮೂದಿಸಿ
* ಕಾಪ್ಚಾವನ್ನು ನಮೂದಿಸಿ, Proceed to Verify ಮೇಲೆ ಕ್ಲಿಕ್‌ ಮಾಡಿ
* ಈ ವೇಳೆ ಈ ಆಧಾರ್‌ ಸಂಖ್ಯೆ ಇದೆಯೇ, ಈ ಆಧಾರ್‌ ಕಾರ್ಡ್‌ನಲ್ಲಿ ಇರುವ ಎಲ್ಲಾ ಮಾಹಿತಿಗಳು ಸರಿಯಾಗಿದೆಯೇ ಎಂಬುವುದು ಇರಲಿದೆ
* ಈ ಮೂಲಕ ಆಧಾರ್‌ ಕಾರ್ಡ್ ನಕಲಿಯೇ, ಅಸಲಿಯೇ ಎಂದು ನೀವು ತಿಳಿಯಲು ಸಾಧ್ಯವಾಗುತ್ತದೆ.

ಇನ್ನು ನೀವು ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ, ಭಾಷೆ ಸೇರಿದಂತೆ ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ನಿಮ್ಮ ವಿವರಗಳನ್ನು ಬದಲಾವಣೆ ಮಾಡಲು ಕೂಡಾ ಸಾಧ್ಯವಾಗುತ್ತದೆ. ನೀವು ಸ್ವಯಂ ಸೇವಾ ನವೀಕರಣ ಪೋರ್ಟಲ್‌ ಮೂಲಕವೇ ನಿಮ್ಮ ಆಧಾರ್‌ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಭಾಷೆಯನ್ನು ಅಪ್‌ಡೇಟ್‌ ಮಾಡಬಹುದಾಗಿದೆ. ನೀವು ಕಚೇರಿಗೆ ಭೇಟಿ ನೀಡಿದೆಯೇ ಆಧಾರ್‌ ಕಾರ್ಡ್‌ನಲ್ಲಿ ಇರುವ ತಪ್ಪನ್ನು ಸರಿ ಪಡಿಸಬಹುದು. ಅದಕ್ಕಾಗಿ ನೀವು ಮೊದಲು UIDAI ನ ಅಧಿಕೃತ ವೆಬ್‌ಸೈಟ್‌ಗೆ https://ssup.uidai.gov.in/ssup/ ಭೇಟಿ ನೀಡಬೇಕು. ಬಳಿಕ ಆಧಾರ್‌ ಅಪ್‌ಡೇಟ್‌ ಮಾಡಲು ಮುಂದುವರಿಯಿರಿ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು. ನಿಮ್ಮ ಎಲ್ಲಾ ಸಂಬಂಧಿತ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸಬೇಕು. ಈ ವೇಳೆ ಆಧಾರ್‌ ಸಂಖ್ಯೆ ಹಾಗೂ ಕ್ಯಾಪ್ಚಾವನ್ನು ಕೂಡಾ ಉಲ್ಲೇಖ ಮಾಡಬೇಕು. ಬಳಿಕ ನೀವು ಒಟಿಪಿ ಕಳುಹಿಸಿ, ಬಟನ್‌ ಅನ್ನು ಟ್ಯಾಪ್‌ ಮಾಡಬೇಕು. ಬಳಿಕ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬಂದ ಒಟಿಪಿಯನ್ನು ನಮೂದಿಸಿ, ಹುಟ್ಟಿದ ದಿನಾಂಕವನ್ನು ನವೀಕರಿಸಲು ನಿಮಗೆ ಸಾಧ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+