ಡಿಜಿಟಲ್ ಕ್ರಾಂತಿಯು ಜನರ ಜೀವನ, ಕೆಲಸ ಮಾಡುವ ಮತ್ತು ಸಂವಹನ ಮಾಡುವ ವಿಧಾನವನ್ನು ಸಂಪೂರ್ಣವಾಗಿ ಬದಲಿಸಿದೆ. ಡಿಜಿಟಲ್ ಯುಗವು ಹಣ ವರ್ಗಾವಣೆ ಸೇರಿದಂತೆ ಹಲವಾರು ಕಾರ್ಯಗಳನ್ನು ಸರಳಗೊಳಿಸಿದೆ. ಈ ಹಿಂದೆ ಹಣದ ವರ್ಗಾವಣೆ ಮಾಡಬೇಕೆಂದರೆ ಬ್ಯಾಂಕ್ ಗಳಿಗೆ ಭೇಟಿ ನೀಡಬೇಕಾಗಿತ್ತು, ಆದರೆ ಈಗ, ನೀವು ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಬಳಸಿಕೊಂಡು ಕುಳಿತಲ್ಲಿದ್ದಂತೆ ಬ್ಯಾಂಕಿಂಗ್ ಸೇರಿದಂತೆ ಹಲವು ಸೌಕರ್ಯಗಳನ್ನು ಸಲೀಸಾಗಿ ಮಾಡಬಹುದು.
ಇತ್ತೀಚೆಗೆ ಈ ಕ್ರಾಂತಿಕಾರ ಬದಲಾವಣೆಯಿಂದ ಇತ್ತೀಚೆಗೆ ಜನ ತಮ್ಮೊಂದಿಗೆ ಹೆಚ್ಚಿನ ನಗದು ಕೊಂಡೊಯ್ಯಲು ಇಚ್ಚಿಸುವುದಿಲ್ಲ. ವಹಿವಾಟಿಗಾಗಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಅಥವಾ ಯುಪಿಐ ಬಳಸುವುದು ಸಾಮಾನ್ಯ ಮತ್ತು ಜನಪ್ರಿಯ ವಿಧಾನವಾಗಿದೆ. ವಿಶೇಷ ಎಂದರೆ ಇದೀಗ ಇಂಟರ್ನೆಟ್ ಸಂಪರ್ಕವಿಲ್ಲದೆ ಯುಪಿಐ ಮೂಲಕ ಸರಾಗವಾಗಿ ಹಣವನ್ನು ಕಳುಹಿಸಬಹುದಾಗಿದೆ.

ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ತೀಚೆಗೆ ಯುಪಿಐಗೆ ಸಂಬಂಧಿಸಿದ ಮೂರು ಡಿಜಿಟಲ್ ಪ್ರೊಡಕ್ಟ್ ಗಳನ್ನು ಪರಿಚಯಿಸಿದೆ. ಇವುಗಳಿಗೆ ಯುಪಿಐ 123ಪೇ, ವ್ಯಾಪಾರಿಗಳಿಗೆ ತಮ್ಮ ವಹಿವಾಟುಗಳಿಗಾಗಿ ಯುಪಿಐ ಪ್ಲಗ್-ಇನ್ ಸೇವೆ ಮತ್ತು ಆಟೋಪೇ ಆನ್ QR ಕೋಡ್ ಎಂದು ಹೆಸರಿಸಲಾಗಿದೆ.
1. ಯುಪಿಐ 123ಪೇ: ಐವಿಆರ್ ಮೂಲಕ ಪಾವತಿ
ಯುಪಿಐ 123ಪೇಯಲ್ಲಿ ಬಳಕೆದಾರರು ಕೇವಲ ಒಂದು ಫೋನ್ ಕರೆಯ ಮೂಲಕ ಯುಪಿಐ ಪಾವತಿಯನ್ನು ಸಕ್ರಿಯಗೊಳಿಸಬಹುದು. ಇಂಟರ್ನೆಟ್ ಸೌಲಭ್ಯವಿಲ್ಲದ ಅಥವಾ ಸ್ಮಾರ್ಟ್‌ಫೋನ್‌ಗಳಿಲ್ಲದವರಿಗೆ ಇದು ಅನುಕೂಲಕರವಾಗಿದ್ದು ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್) ಮೂಲಕ ಗ್ರಾಹಕರು ಸೇವೆ/ ವಹಿವಾಟುಗಳಿಗೆ ಪಾವತಿ ಮಾಡಬಹುದು.
2. ವ್ಯಾಪಾರಿಗಳ ವಹಿವಾಟುಗಳಿಗಾಗಿ ಯುಪಿಐ ಪ್ಲಗ್-ಇನ್ ಸೇವೆ
ಯುಪಿಐ ಪ್ಲಗ್-ಇನ್ ಸೇವೆಯು ಯುಪಿಐ ಪಾವತಿಗಳನ್ನು ಸುವ್ಯವಸ್ಥಿತಗೊಳಿಸುತ್ತದೆ ಖರೀದಿಗಳನ್ನು ಮಾಡುವ ಸಂದರ್ಭ ವಿವಿಧ ಅಪ್ಲಿಕೇಶನ್‌ಗಳ ನಡುವೆ ಬದಲಾಯಿಸುವ ಅನಿವಾರ್ಯತೆಯನ್ನು ನಿವಾರಣೆ ಮಾಡುತ್ತದೆ.
3. ಕ್ಯೂಆರ್ ಕೋಡ್‌ನಲ್ಲಿ ಸ್ವಯಂ ಪಾವತಿ
ಕ್ಯೂಆರ್ ಕೋಡ್‌ಗಳೊಂದಿಗೆ ಸ್ವಯಂ ಪಾವತಿಯು ಪುನಾರಾವರ್ತಿತ ಪಾವತಿಗಳನ್ನು ಸರಳಗೊಳಿಸುತ್ತದೆ. ಯುಪಿಐ ಕ್ಯೂಆರ್ ಕೋಡ್‌ಗಳನ್ನು ಬಳಸಿಕೊಂಡು ಸ್ಟ್ರೀಮಿಂಗ್ ಸರ್ವಿಸ್, ಚಂದಾದಾರಿಕೆಗಳು ಮತ್ತು ಹೆಚ್ಚಿನವುಗಳಿಗಾಗಿ ಆಟೋಮ್ಯಾಟಿಕ್ ಪಾವತಿಗಳನ್ನು ಸೆಟ್ ಆಪ್ ಮಾಡಿ, ಮಾನ್ಯುಯಲ್ ವಹಿವಾಟುಗಳ ಅಗತ್ಯವನ್ನು ತೆಗೆದುಹಾಕುತ್ತದೆ.


Click it and Unblock the Notifications