ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಬಳಕೆಯಲ್ಲಿರುವ ಕೆಲವು ಪರಿಭಾಷೆಗಳು ಗೊಂದಲಮಯವಾಗಿರಬಹುದು ಅಥವಾ ಒಂದೇ ರೀತಿ ಧ್ವನಿಸಬಹುದು. ಆದರೆ ಅವುಗಳ ವ್ಯಾಖ್ಯಾನ ಮತ್ತು ಬಳಕೆಯ ಉದ್ದೇಶ ಬೇರೆಯೇ ಆಗಿರುತ್ತದೆ. ನಿಮಗೆ ಸುಲಭವಾಗಿ ಅರ್ಥವಾಗದ ಈ ಶಬ್ದಕೋಶಗಳನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳದ ಹೊರತು, ತೆರಿಗೆ ವಿವರ ಸಲ್ಲಿಕೆಯ ಪ್ರಕ್ರಿಯೆ ನಿಜಕ್ಕೂ ಕಷ್ಟವಾಗುತ್ತದೆ. ಹಾಗಾಗಿ, ಆದಾಯ ತೆರಿಗೆ ವಿವರ ಸಲ್ಲಿಸುವಾಗ ನಿಮಗೆ ಎದುರಾಗುವ ಪ್ಯಾನ್, ಟ್ಯಾನ್ ಮತ್ತು ಟಿನ್ ಇತ್ಯಾದಿ ಪ್ರಚಲಿತ ಪದಗಳನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಿ.
ತೆರಿಗೆಗೆ ಸಂಬಂಧಿಸಿದ ಪದಗಳು ಗೊಂದಲಮಯವಾಗಿರುತ್ತವೆ, ಏಕೆಂದರೆ ಅವು ವೈವಿಧ್ಯಮಯ ಅರ್ಥ ನೀಡುವ ಜತೆಗೆ, ಬೇರೆಯದೇ ಉದ್ದೇಶಗಳನ್ನು ಹೊಂದಿರುತ್ತವೆ. ನೀವು ಆದಾಯ ತೆರಿಗೆ ಅಥವಾ ಇನ್ನಾವುದೇ ರೂಪದ ತೆರಿಗೆ ವಿವರ ಸಲ್ಲಿಸುವಾಗ, ಪ್ಯಾನ್, ಟ್ಯಾನ್ ಮತ್ತು ಟಿನ್ ನಂತಹ ಶಬ್ದ ಕೋಶಗಳು ಪದೇಪದೆ ಬಳಕೆಗೆ ಬರುತ್ತವೆ.
ಕಾಯಂ ತೆರಿಗೆ ಖಾತೆ ಸಂಖ್ಯೆ (ಪ್ಯಾನ್) ಏನಿದು?
ಪ್ಯಾನ್(PAN) ಪದವು 'ಕಾಯಂ ಖಾತೆ ಸಂಖ್ಯೆ'ಯ ಸಂಕ್ಷಿಪ್ತ ರೂಪ. ಆಂಗ್ಲಭಾಷೆಯ ವರ್ಣಗಳು ಮತ್ತು ಸಂಖ್ಯೆಗಳಿಂದ ಮಾಡಿದ 10 ಅಂಕಿಗಳ ಸಂಕೇತ ಇದಾಗಿದೆ. ಭಾರತೀಯ ಕಂದಾಯ ಸೇವೆಯು ತೆರಿಗೆದಾರರಿಗೆ ಪ್ಯಾನ್ ಸಂಖ್ಯೆಯನ್ನು ಕಾರ್ಡ್ ರೂಪದಲ್ಲಿ ವಿತರಿಸುತ್ತದೆ. ತೆರಿಗೆದಾರ ತನ್ನ ಜೀವಿತಾವಧಿಯಲ್ಲಿ ನಡೆಸುವ ಎಲ್ಲ ರೀತಿಯ ವಹಿವಾಟಿನ ಮೇಲೆ ಪ್ಯಾನ್ ಸಂಖ್ಯೆ ನಿರಂತರ ನಿಗಾ ಇಟ್ಟಿರುತ್ತದೆ. ತೆರಿಗೆದಾರನ ಎಲ್ಲ ವಹಿವಾಟನ್ನು ಪತ್ತೆ ಮಾಡಲು ಪ್ಯಾನ್ ಸಂಖ್ಯೆಯನ್ನು ತೆರಿಗೆ ಇಲಾಖೆ ಬಳಸುತ್ತದೆ. ವೈಯಕ್ತಿಕ ತೆರಿಗೆದಾರನೇ ಇರಬಹುದು, ಉದ್ಯಮ ವ್ಯವಹಾರ ಸಂಸ್ಥೆಗಳು ಅಥವಾ ತೆರಿಗೆ ಪಾವತಿ ಸಂಸ್ಥೆಗಳೇ ಇರಬಹುದು, ಅವುಗಳ ಎಲ್ಲ ವಹಿವಾಟನ್ನು ಪ್ಯಾನ್ ಸಂಖ್ಯೆಯಿಂದಲೇ ಪತ್ತೆ ಮಾಡಲಾಗುತ್ತದೆ. ಪ್ರತಿ ಪ್ಯಾನ್ ಸಂಖ್ಯೆ ಅನನ್ಯವಾಗಿರುತ್ತದೆ. ಅಂದರೆ, ಪ್ರತಿಯೊಬ್ಬರಿಗೂ ಬೇರೆ ಬೇರೆ ವರ್ಣ ಮತ್ತು ಸಂಖ್ಯೆಯುಳ್ಳ ಪ್ಯಾನ್ ಸಂಖ್ಯೆ ನೀಡಲಾಗುತ್ತದೆ.
ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ(ಟ್ಯಾನ್) ಏನಿದು?
ಆದಾಯ ತೆರಿಗೆ ಇಲಾಖೆಯು ವರ್ಣಮಾಲೆ ಮತ್ತು ಸಂಖ್ಯೆಗಳನ್ನು ಸಂಯೋಜಿಸಿ, ನೀಡುವ 10 ಅಂಕಿಗಳ ಸಂಕೇತವೇ ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ - ಟ್ಯಾನ್(TAN) ಆಗಿದೆ. ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್) ಮತ್ತು ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್)ವನ್ನು ಪತ್ತೆ ಮಾಡಲು ಟ್ಯಾನ್ ಸಂಖ್ಯೆಯನ್ನು ಬಳಸಲಾಗುತ್ತದೆ. ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್) ಮತ್ತು ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ಮಾಡುವ ಉದ್ಯೋಗದಾತರ ದಾಖಲೆಗಳಿಗೆ ಟ್ಯಾನ್ ಸಂಖ್ಯೆ ಅತ್ಯಗತ್ಯ. ಟ್ಯಾನ್ ಸಂಖ್ಯೆ ಸೇರಿಸುವುದನ್ನು ನೀವು ನಿರ್ಲಕ್ಷಿಸಿದ್ದೇ ಆದಲ್ಲಿ, ಬ್ಯಾಂಕ್‌ಗಳು ನಿಮ್ಮ ಟಿಡಿಎಸ್ ಪಾವತಿ ಮತ್ತು ರಿಟರ್ನ್ಸ್ ಗಳನ್ನು ತಿರಸ್ಕರಿಸುತ್ತವೆ. ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ನಮೂನೆ 49ಬಿಯಲ್ಲಿ ಟ್ಯಾನ್ ಸಂಖ್ಯೆಗೆ ಅರ್ಜಿ ಸಲ್ಲಿಸಬೇಕು. ಆಂತರಿಕ ಕಂದಾಯ ಸೇವೆಗಾಗಿ ಮೂಲದಲ್ಲೇ ತೆರಿಗೆ ಸಂಗ್ರಹಿಸುವ ಅಥವಾ ಮೂಲದಲ್ಲೇ ತೆರಿಗೆ ಕಡಿತ ಮಾಡುವ ವೈಯಕ್ತಿಕ ತೆರಿಗೆದಾರರು ಅಥವಾ ಸಂಸ್ಥೆಗಳು ಅಥವಾ ಉದ್ಯೋಗದಾತರು ಕಡ್ಡಾಯವಾಗಿ ಟ್ಯಾನ್ ಸಂಖ್ಯೆ ಪಡೆಯಬೇಕು.
ತೆರಿಗೆ ಗುರುತಿನ ಸಂಖ್ಯೆ ಎಂದರೇನು?
ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಪದ್ಧತಿಗೆ ನೋಂದಾಯಿಸಿಕೊಳ್ಳುವ ವೈಯಕ್ತಿಕ ವ್ಯವಹಾರ ಅಥವಾ ಉದ್ಯಮ ಮಾಲಿಕ ಅಥವಾ ಉದ್ಯಮ ಸಂಸ್ಥೆಗಳಿಗೆ ತೆರಿಗೆ ಗುರುತಿನ ಸಂಖ್ಯೆ ಟಿನ್ ನೀಡಲಾಗುತ್ತದೆ. ಈ ಸಂಖ್ಯೆಯನ್ನು ಅಂತರಾಜ್ಯ ಮಾರಾಟ ವಹಿವಾಟು ನಡೆಸಲು ಮತ್ತು ಬಹುವಿಧದ ವ್ಯಾಟ್ ಪಾವತಿಗಳನ್ನು ಪತ್ತೆ ಮಾಡಲು ಈ ಸಂಖ್ಯೆಯನ್ನು ಬಳಸಲಾಗುತ್ತದೆ. ವರ್ಣ-ಸಂಖ್ಯೆಗಳ ಸಂಯೋಜನೆಯ 11 ಅಂಕಿಗಳ ಈ ಸಂಕೇತದಲ್ಲಿ ಮೊದಲ 2 ಅಂಕಿಗಳು ರಾಜ್ಯ ಸಂಕೇತವನ್ನು ಪ್ರತಿನಿಧಿಸುತ್ತದೆ. ಇದನ್ನು ಕೇಂದ್ರ ಗೃಹ ಸಚಿವಾಲಯ ಕಡ್ಡಾಯ ಮಾಡಿದೆ. ಇನ್ನುಳಿದ 9 ಅಂಕಿಗಳು ಉದ್ಯಮ ಸಂಸ್ಥೆ ನೋಂದಣಿಯಾಗಿರುವ ಜಿಲ್ಲೆ ಅಥವಾ ಮುನಿಸಿಪಾಲಿಟಿಯನ್ನು ಪ್ರತಿನಿಧಿಸುತ್ತವೆ.
ಪ್ಯಾನ್, ಟ್ಯಾನ್, ಟಿನ್ ನಮಗೇಕೆ ಅಗತ್ಯ?
ಈ ಸಂಖ್ಯೆಗಳು ಅಸ್ತಿತ್ವಕ್ಕೆ ಬರಲು ಬಲವಾದ ಕಾರಣಗಳಿವೆ. ಪ್ಯಾನ್ ಜಾಗತಿಕ ಸಂಕೇತವಾಗಿದ್ದು, ಹಣಕಾಸು ವಹಿವಾಟು ಗುರುತಿಸಲು ಬಳಸಲಾಗುತ್ತದೆ. ಸಂಭಾವ್ಯ ತೆರಿಗೆಗೆ ಒಳಪಡುವ ಯಾವುದೇ ವಹಿವಾಟಿನ ಮೇಲೆ ಇದು ನಿಗಾ ಇಡುತ್ತದೆ. ಮತ್ತೊಂದೆಡೆ ಟ್ಯಾನ್ ಅನ್ನು ಮತ್ತೊಂದೆಡೆ, ಸಂಗ್ರಹಣೆಯ ಹಂತದಲ್ಲಿ ತೆರಿಗೆಗಳ ಕಡಿತ ಮತ್ತು ಸಂಗ್ರಹವನ್ನು ಸ್ವಯಂಚಾಲಿತಗೊಳಿಸಲು ಬಳಸಲಾಗುತ್ತದೆ. ವ್ಯಾಟ್‌ನಲ್ಲಿ ನೋಂದಣಿಯಾಗಿರುವ ಮಾರಾಟಗಾರರ ವಹಿವಾಟನ್ನು ಪತ್ತೆ ಹಚ್ಚಲು ಟಿನ್ ಸಂಖ್ಯೆ ಬಳಸಲಾಗುತ್ತದೆ. ದೇಶದಲ್ಲಿ ನಡೆಯುವ ವ್ಯಾಟ್ ಸಂಬಂಧಿತ ಎಲ್ಲಾ ವಹಿವಾಟು ಕಾರ್ಯಾಚರಣೆಗಳ ಮೇಲೆ ತೆರಿಗೆ ಇಲಾಖೆಯು ಟಿನ್ ಸಂಖ್ಯೆ ಮೂಲಕ ನಿಗಾ ಇಡುತ್ತದೆ.
ನಿಯಂತ್ರಣಗಳು
ಪ್ಯಾನ್, ಟ್ಯಾನ್, ಟಿನ್ ಸೇರಿದಂತೆ ತೆರಿಗೆ ಲೆಕ್ಕ ಹಾಕಲು ಬಳಸುವ ಸಂಖ್ಯೆಗಳಿಗೆ ಸಾಂವಿಧಾನಿಕ ಶಾಸನ ತರಲಾಗಿದೆ. 1961ರ ಮಾಹಿತಿ ತಂತ್ರಜ್ಞಾನ ಕಾಯಿದೆಯ ಪರಿಚ್ಛೇದ 139ರಲ್ಲಿ ಪ್ಯಾನ್ ವ್ಯಾಖ್ಯಾನಿಸಲಾಗಿದೆ. 1961ರ ಆದಾಯ ತೆರಿಗೆ ಕಾಯಿದೆಯ ಪರಿಚ್ಛೇದ 203ಎ ಅಡಿ ಟ್ಯಾನ್‌ಗೆ, ಹಲವು ರಾಜ್ಯಗಳ ತೆರಿಗೆ ಕಾಯಿದೆಗಳ ಅಡಿ ಟಿನ್‌ಗೆ ವ್ಯಾಖ್ಯಾನ ನೀಡಲಾಗಿದೆ.
ಯಾರೆಲ್ಲಾ ಪ್ಯಾನ್, ಟ್ಯಾನ್ ಮತ್ತು ಟಿನ್ ಹೊಂದಿರಬೇಕು?
ಸರಳವಾಗಿ ಹೇಳುವುದಾದರೆ, ತೆರಿಗೆಗೆ ಒಳಪಡುವ ಹಣಕಾಸು ವಹಿವಾಟು ನಡೆಸುವ ಜನರು ಪ್ಯಾನ್ ಸಂಖ್ಯೆ ಹೊಂದಿರಲೇಬೇಕು. ಪ್ರತಿ ತೆರಿಗೆದಾರ ಗುರುತಿನ ಉದ್ದೇಶಕ್ಕಾಗಿ ಪ್ಯಾನ್ ಸಂಖ್ಯೆ ಹೊಂದುವುದು ಕಡ್ಡಾಯ. ಮೂಲದಲ್ಲೇ ತೆರಿಗೆ ಸಂಗ್ರಹಿಸುವ, ಕಡಿತ ಮಾಡುವ ವೈಯಕ್ತಿಕ ತೆರಿಗೆದಾರ ಅಥವಾ ವ್ಯವಹಾರ ಸಂಸ್ಥೆ ಅಥವಾ ಕಂಪನಿ ಅಥವಾ ಉದ್ಯೋಗಿಗಳಿಂದ ತೆರಿಗೆ ಮುರಿಯುವ ಉದ್ಯೋಗದಾತರು ಟ್ಯಾನ್ ಸಂಖ್ಯೆ ಹೊಂದಿರಬೇಕು. ಮೌಲ್ಯವರ್ಧಿತ ತೆರಿಗೆ ಪಾವತಿಸುವ ಎಲ್ಲ ವರ್ತಕರು ಮತ್ತು ಡೀಲರ್ ಗಳು ಟಿನ್ ಸಂಖ್ಯೆ ಹೊಂದಿರಬೇಕು.
ದಂಡಗಳು
ತೆರಿಗೆ ವ್ಯವಸ್ಥೆಯಲ್ಲಿ ಬಳಸುವ ಈ ಸಂಖ್ಯೆಗಳಿಗೆ ಸಾಂವಿಧಾನಿಕ ಕಾನೂನುಗಳು ಮತ್ತು ಕಾಯಿದೆಗಳಿಂದ ಬೆಂಬಲಿತವಾಗಿದ್ದು, ಸ್ಥಾಪಿತ ಮಾನದಂಡಗಳನ್ನು ಅನುಸರಿಸದಿದ್ದಲ್ಲಿ ಅನಿವಾರ್ಯವಾಗಿ ದಂಡ ವಿಧಿಸಲಾಗುತ್ತದೆ. ಟಿನ್ ಸಂಖ್ಯೆ ಅನುಸರಣೆಯಲ್ಲಿ ವಿಫಲವಾದರೆ, ವಿವಿಧ ರಾಜ್ಯಗಳಲ್ಲಿ ಹಲವು ವಿಧದ ದಂಡಗಳನ್ನು ವಿಧಸಲಾಗುತ್ತದೆ. ಪ್ಯಾನ್ ಮತ್ತು ಟ್ಯಾನ್ ನಿಯಮಗಳನ್ನು ಅನುಸರಿಸದಿದ್ದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಪ್ಯಾನ್, ಟ್ಯಾನ್ ಮತ್ತು ಟಿನ್ ನಡುವಿನ ವ್ಯತ್ಯಾಸ ಏನು?
| ನಿಯತಾಂಕಗಳು | ಪ್ಯಾನ್ | ಟ್ಯಾನ್ | ಟಿನ್ |
| ಸಂಕೇತ ರಚನೆ(ವಿನ್ಯಾಸ) | ಮೊದಲ ಐದು ಆಂಗ್ಲ ವರ್ಣಗಳು ನಾನಾ ವಿಧದ ಮಾಹಿತಿ ಸೂಚಿಸುತ್ತವೆ, ನಂತ 4 ಪೂರ್ಣ ಸಂಖ್ಯೆಗಳು ಮತ್ತು ಇನ್ನೊಂದು ವರ್ಣ ಇರುತ್ತದೆ | ಇದು 4 ವರ್ಣಮಾಲೆ ಹೊಂದಿರುತ್ತದೆ, 5 ಸಂಖ್ಯೆಗಳು ಮತ್ತು 1 ವರ್ಣಮಾಲೆ | 11 ಅಂಕಿಗಳ ಸಂಕೇತದಲ್ಲಿ ಮೊದಲೆರಡು ವರ್ಣಗಳು ರಾಜ್ಯದ ಸಂಕೇತವಾಗಿರುತ್ತವೆ |
| ಸಾಂವಿಧಾನಿಕ ಶಾಸನ | 1961ರ ಮಾಹಿತಿ ತಂತ್ರಜ್ಞಾನ ಕಾಯಿದೆಯ ಪರಿಚ್ಛೇದ 139ಎ ಅಡಿ ವ್ಯಾಖ್ಯಾನ | 1961ರ ಆದಾಯ ತೆರಿಗೆ ಕಾಯಿದೆಯ ಪರಿಚ್ಛೇದ 203ಎ ಅಡಿ ವ್ಯಾಖ್ಯಾನ | ನಾನಾ ರಾಜ್ಯಗಳಲ್ಲಿ ಅನ್ವಯವಾಗುವ ಕಾಯಿದೆ ನಿಯಮಗಳ ಬದಲಾವಣೆ |
| ಅರ್ಜಿ ನಮೂನೆ | ಭಾರತೀಯರಿಗೆ ನಮೂನೆ 49ಎ | ವಿದೇಶಿ ಅರ್ಜಿದಾರರಿಗೆ ನಮೂನೆ 49ಎಎ | ನಮೂನೆ 49ಬಿ |
| ದಂಡಗಳು | ಮಾರ್ಗಸೂಚಿ ಪಾಲಿಸದ ತೆರಿಗೆದಾರರಿಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ | ಮಾರ್ಗಸೂಚಿ ಪಾಲಿಸದ ತೆರಿಗೆದಾರರಿಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ | ಟಿನ್ ಸಂಖ್ಯೆ ನಿಯಮಗಳನ್ನು ಅನುಸರಿಸದಿದ್ದರೆ ಬೇರೆ ಬೇರೆ ರಾಜ್ಯಗಳಲ್ಲಿ ಹಲವು ದಂಡ ವಿಧಿಸಲಾಗುತ್ತದೆ |
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications