Vehicle Scrappage Policy : ಹಳೆಯ ವಾಹನ ಗುಜರಿ ನೀತಿ; ಯಾರಿಗೆ ಲಾಭ, ಯಾರಿಗೆ ನಷ್ಟ?

ಕಳೆದ ವರ್ಷ ಕೇಂದ್ರ ಸರ್ಕಾರ ವಾಹನ ಗುಜರಿ ನೀತಿ ಪ್ರಕಟಿಸಿತ್ತು. ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮೊನ್ನೆಯೂ ಈ ವಿಚಾರವನ್ನು ಪ್ರಸ್ತಾಪಿಸಿ, 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲಾಗುವುದು ಎಂದರು. ಈಗಾಗಲೇ 15 ವರ್ಷಗಳ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿರುವುದು ತಿಳಿದುಬಂದಿದೆ.

ಈ ಅಧಿಸೂಚನೆ ಪ್ರಕಾರ 15 ವರ್ಷಗಳ ಆಯಸ್ಸು ಮುಗಿದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ವಾಹನಗಳನ್ನು 2023 ಏಪ್ರಿಲ್ 1ರಿಂದ ಗುಜರಿಗೆ ಹಾಕಲು ಆದೇಶಿಸಲಾಗಿದೆ. ಸರ್ಕಾರಿ ಬಸ್ಸು, ಕಾರು ಇತ್ಯಾದಿ ವಾಹನಗಳೂ ಇದರಲ್ಲಿ ಒಳಗೊಂಡಿವೆ.

ಕರ್ನಾಟಕದಲ್ಲಿ ಕೆಎಸ್ಸಾರ್ಟಿಸಿ ನಿಗಮಗಳು ಬಹಳಷ್ಟು ಹೊಸ ಬಸ್ಸುಗಳನ್ನು ಖರೀದಿಸಿವೆ. ಹೀಗಾಗಿ, ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರೂ ಪ್ರಯಾಣಿಕ ಸೇವೆ ಅಬಾಧಿತವಾಗಿ ಮಾಡುವಷ್ಟು ಸಂಖ್ಯಾಬಲ ಇದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಹಳೆಯ ವಾಹನ ಗುಜರಿ ನೀತಿ ಕೇವಲ ಸರ್ಕಾರಿ ವಾಹನಗಳಿಗೆ ಮಾತ್ರವಲ್ಲ, ಎಲ್ಲಾ ವಾಹನಗಳಿಗೂ ಅನ್ವಯ ಆಗುತ್ತದೆ. ಕೆಲ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲೇ ಅತಿ ಹೆಚ್ಚು ಹಳೆಯ ವಾಹನಗಳಿವೆ. ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರ ಮುಂದಿನ 15 ದಿನಗಳಲ್ಲಿ ನೀತಿ ಹೊರತರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಗುಜರಿ ನೀತಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಸ್ಕ್ರಾಪೇಜ್ ಪಾಲಿಸಿ ತರಲಿದೆ. ಹಳೆದ ವಾಹನವನ್ನು ಬಿಸುಟ್ಟು, ಹೊಸ ವಾಹನ ಕೊಳ್ಳಲು ಮುಂದಾಗುವ ಜನರಿಗೆ ಇಂತಿಷ್ಟು ರಿಯಾಯಿತಿ ಕೊಡುವುದು, ತೆರಿಗೆ ವಿನಾಯಿತಿ ಇತ್ಯಾದಿ ಹಲವು ಉತ್ತೇಜನಗಳನ್ನು ರಾಜ್ಯ ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಎಷ್ಟಿವೆ ಹಳೆಯ ವಾಹನಗಳು?

ಕರ್ನಾಟಕದಲ್ಲಿ ಎಷ್ಟಿವೆ ಹಳೆಯ ವಾಹನಗಳು?

ರಾಜ್ಯ ಸಾರಿಗೆ ಇಲಾಖೆ 2021ರಲ್ಲಿ ಬಿಡುಗಡೆ ಮಾಡಿದ ವರದಿ ಪ್ರಕಾರ ಕರ್ನಾಟಕದಲ್ಲಿ 2.8 ಕೋಟಿ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ಇವುಗಳ ಪೈಕಿ 15 ವರ್ಷಕ್ಕಿಂತ ಹೆಚ್ಚು ಹಳೆಯದಾದ ವಾಹನಗಳ ಸಂಖ್ಯೆ 79 ಲಕ್ಷದಷ್ಟಿದೆ. 25 ವರ್ಷಗಳಿಗಿಂತ ಹೆಚ್ಚು ಹಳೆಯದಾದ ಸಾವಿರಾರು ವಾಹನಗಳು ಈಗಲೂ ರಾಜ್ಯದ ರಸ್ತೆಗಳಲ್ಲಿ ಸಂಚರಿಸುತ್ತಿರುವುದು ತಿಳಿದುಬಂದಿದೆ. ದೇಶದ ಬೇರೆ ಯಾವ ರಾಜ್ಯದಲ್ಲೂ ಇಷ್ಟು ಪ್ರಮಾಣದಲ್ಲಿ ಹಳೆಯ ವಾಹನಗಳಿಲ್ಲ ಎನ್ನಲಾಗಿದೆ.

ಇಂತಹ ಹಳೆಯ ವಾಹನಗಳ ಫಿಟ್ನೆಸ್ ಟೆಸ್ಟ್ ಮಾಡಿಸಿ ಎಫ್‌ಸಿ ಪಡೆಯುವುದು ಕಡ್ಡಾಯಪಡಿಸಲಾಗಿದೆ. ಒಂದು ವೇಳೆ ಕ್ಷಮತಾ ಪರೀಕ್ಷೆಯಲ್ಲಿ ಪಾಸ್ ಆಗಲು ವಿಫಲವಾಗುವ ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯಪಡಿಸಲಾಗಿದೆ.

 

ಏನಿದು ವಾಹನ ಗುಜರಿ ನೀತಿ?

ಏನಿದು ವಾಹನ ಗುಜರಿ ನೀತಿ?

ವಿಶ್ವದ ಹವಾಮಾನ ಬದಲಾವಣೆ ಸಮಸ್ಯೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಹಲವು ಕ್ರಮಗಳಲ್ಲಿ ವಾಹನಗಳ ಮಾಲಿನ್ಯ ನಿಗ್ರಹಿಸುವುದು ಒಂದಾಗಿದೆ. ಭಾರತ ಈ ನಿಟ್ಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಹಂತ ಹಂತವಾಗಿ ನಿಲ್ಲಿಸಿ ಎಲೆಕ್ಟ್ರಿಕ್ ವಾಹನಗಳನ್ನು ಸಂಪೂರ್ಣವಾಗಿ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಚಾಲಿತ ವಾಹನಗಳಿಂದ ಹೆಚ್ಚು ಮಾಲಿನ್ಯವಾಗುತ್ತದೆ. ಅದರಲ್ಲೂ 15 ವರ್ಷಗಳಿಗಿಂತ ಹೆಚ್ಚು ಹಳೆಯದಾದ ವಾಹನಗಳಿಂದ ಮಾಲಿನ್ಯ ಹೆಚ್ಚು. ಹೀಗಾಗಿ, ಇವುಗಳನ್ನು ನಿಲ್ಲಿಸುವುದು ಸರ್ಕಾರದ ಸದ್ಯದ ಗುರಿ. ಈ ಹಿನ್ನೆಲೆಯಲ್ಲಿ ವಾಹನ ಗುಜರಿ ನೀತಿಯನ್ನು ಜಾರಿಗೆ ತರುತ್ತಿದೆ.

2023 ಏಪ್ರಿಲ್ 1ರಿಂದ ಇದು ಜಾರಿಗೆ ಬರುತ್ತದೆ. 15 ವರ್ಷಗಳಷ್ಟು ವಯಸ್ಸಾದ ಎಲ್ಲಾ ಸರ್ಕಾರಿ ವಾಹನಗಳನ್ನು 2023 ಏಪ್ರಿಲ್ 1ರಿಂದ ಸಂಪೂರ್ಣವಾಗಿ ಹಿಂಪಡೆದು ಗುಜರಿಗೆ ಹಾಕಲಾಗುತ್ತದೆ. ಬೇರೆ ವಾಹನಗಳನ್ನು ಫಿಟ್ನೆಸ್ ಟೆಸ್ಟ್‌ಗೆ ಒಳಪಡಿಸಲಾಗುತ್ತದೆ.

15 ವರ್ಷಕ್ಕಿಂತ ಹೆಚ್ಚು ಹಳೆಯದಾದ ಕಮರ್ಷಿಯಲ್ ವಾಹನಗಳು ಫಿಟ್ನೆಸ್ ಟೆಸ್ಟ್‌ನಲ್ಲಿ ತೇರ್ಗಡೆಯಾದರೆ ಮಾತ್ರ ರಸ್ತೆಗಳಲ್ಲಿ ಓಡಿಸಲು ಅನುಮತಿ ಇದೆ. ಪರೀಕ್ಷೆಯಲ್ಲಿ ವಿಫಲವಾದರೆ ಆ ವಾಹನಗಳನ್ನು ಗುಜರಿಗೆ ಹಾಕುವುದು ಅನಿವಾರ್ಯ. ಟ್ರಕ್‌ನಂತಹ ಹೆವಿ ಕಮರ್ಷಿಯಲ್ ವಾಹನಗಳ ಫಿಟ್ನೆಸ್ ಪರೀಕ್ಷೆಗಳು ಏಪ್ರಿಲ್ 1ರಿಂದಲೇ ನಡೆಯುತ್ತವೆ.

ಇತರ ಖಾಸಗಿ ವಾಹನಗಳು 20 ವರ್ಷಕ್ಕಿಂತ ಹೆಚ್ಚು ಹಳೆಯದಾಗಿದ್ದರೆ ಫಿಟ್ನೆಸ್ ಪರೀಕ್ಷೆಗೆ ಒಳಬೇಕಾಗುತ್ತದೆ. ಟ್ಯಾಕ್ಸಿ ಇತ್ಯಾದಿ ಕಮರ್ಷಿಯಲ್ ವಾಹನಗಳು ಮತ್ತು ಇತರ ಖಾಸಗಿ ವಾಹನಗಳ ಫಿಟ್ನೆಸ್ ಟೆಸ್ಟ್ 2024 ಜೂನ್ 1ರಿಂದ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ವಿಫಲವಾದ ವಾಹನಗಳು ಗುಜರಿಗೆ ಬೀಳುತ್ತವೆ.

 

ವಾಹನ ಗುಜರಿ ನೀತಿಯಿಂದ ಏನು ಲಾಭ?

ವಾಹನ ಗುಜರಿ ನೀತಿಯಿಂದ ಏನು ಲಾಭ?

1) ಪರಿಸರ ಮಾಲಿನ್ಯ ನಿಯಂತ್ರಣ: ಹಳೆಯ ವಾಹನಗಳಿಂದ ಮಾಲಿನ್ಯ ಹೊರಹೊಮ್ಮುವುದು ಹೆಚ್ಚು. ಹೀಗಾಗಿ ಇವುಗಳು ರಸ್ತೆಗಿಳಿಯುವುದು ನಿಂತರೆ ಪರಿಸರ ಮಾಲಿನ್ಯ ಸ್ವಲ್ಪ ತಗ್ಗುತ್ತದೆ.
2) ಆಟೊಮೊಬೈಲ್ ಕ್ಷೇತ್ರಕ್ಕೆ ಪುಷ್ಟಿ: ಹಳೆದ ವಾಹನ ಗುಜರಿಗೆ ಸೇರಿದರೆ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತದೆ. ಪರಿಣಾಮವಾಗಿ ಆಟೊಮೊಬೈಲ್ ಉದ್ಯಮಕ್ಕೆ ಒಳ್ಳೆಯ ಉತ್ತೇಜನ ಸಿಕ್ಕಂತಾಗುತ್ತದೆ.
3) ರಸ್ತೆ ಸುರಕ್ಷತೆ: ಹಳೆಯ ವಾಹನಗಳು ಸರಿಯಾಗಿ ಮೈಂಟೆನೆನ್ಸ್ ಹೊಂದಿಲ್ಲದೇ ಇರುವುದರಿಂದ ಅಪಘಾತದ ಸಾಧ್ಯತೆ ಹೆಚ್ಚು. ಹೊಸ ವಾಹನಗಳಲ್ಲಿ ಸುರಕ್ಷತೆಯ ಅಂಶಗಳು ಹೆಚ್ಚಿರುತ್ತವೆ. ರಸ್ತೆಯಲ್ಲಿ ವಾಹನ ನಿಯಂತ್ರಣ ಸುಲಭವಾಗುತ್ತದೆ. ಇದರಿಂದ ಅಪಘಾತ ಸಾಧ್ಯತೆ ಕಡಿಮೆ ಅಗಬಹುದು.
4) ಉಕ್ಕು ಉದ್ಯಮಕ್ಕೆ ಪುಷ್ಟಿ: ಹಳೆಯ ವಾಹನಗಳು ಗುಜರಿಗೆ ಸೇರುವುದರಿಂದ ಉಕ್ಕಿನ ಉದ್ಯಮಕ್ಕೆ ಗುಜರಿ ವಸ್ತುಗಳು ಹೆಚ್ಚೆಚ್ಚು ಸಿಗುತ್ತವೆ. ಅದರಲ್ಲೂ ಕಡಿಮೆ ಬೆಲೆಗೆ ಕಚ್ಛಾ ವಸ್ತುಗಳು ಸಿಕ್ಕುವುದರಿಂದ ಉಕ್ಕು ತಯಾರಕ ಸಂಸ್ಥೆಗಳಿಗೆ ಅನುಕೂಲವಾಗುತ್ತದೆ. ಇದರ ಪರೋಕ್ಷ ಪರಿಣಾಮಗಳು ಕಟ್ಟಡ ನಿರ್ಮಾಣ ಇತ್ಯಾದಿ ಸಂಬಂಧಿತ ಕ್ಷೇತ್ರಗಳ ಮೇಲಾಗಬಹುದು.
5) ಉದ್ಯೋಗ ಸೃಷ್ಟಿ: ಮುಂದಿನ ವರ್ಷದಿಂದ ಫಿಟ್ನೆಸ್ ಟೆಸ್ಟ್‌ಗಳನ್ನು ಆಟೊಮೇಟೆಡ್ ಟೆಸ್ಟಿಂಗ್ ಸ್ಟೇಷನ್‌ಗಳಲ್ಲಿ (ಎಟಿಎಸ್) ಮಾಡಿಸಬೇಕಾಗುತ್ತದೆ. ದೇಶಾದ್ಯಂತ ಸಾವಿರಾರು ಕಡೆ ಇಂಥ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಇದನ್ನು ನಿರ್ವಹಿಸಲು ಸಿಬ್ಬಂದಿಯ ಅಗತ್ಯ ಬೀಳುತ್ತದೆ. ಇದರಿಂದ ಸಾವಿರಾರು ಮಂದಿಗೆ ಉದ್ಯೋಗ ಸಿಗುತ್ತದೆ.
6) ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಪುಷ್ಟಿ: ಹಳೆಯ ವಾಹನಗಳನ್ನು ಹೊಂದಿರುವವರು ಅವನ್ನು ಗುಜರಿಗೆ ಹಾಕಿ ಹೊಸ ವಾಹನ ಕೊಳ್ಳಲು ಮುಂದಾಗುತ್ತಾರೆ. ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳಿಗೆ ಇನ್ಮುಂದೆ 15 ವರ್ಷ ಮಾತ್ರವೇ ಆಯಸ್ಸು ಎಂಬಂತಿರುವುದರಿಂದ ಬಹುತೇಕರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆದ್ಯತೆ ಕೊಡಬಹುದು. ಇದರಿಂದ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಉತ್ತೇಜನ ಸಿಗುತ್ತದೆ.
7) ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಬಹುದು: ಹೊಸ ವಾಹನಗಳನ್ನು ಖರೀದಿಸಲಾಗದ ಜನರು ಸಾರ್ವಜನಿಕ ಸಾರಿಗೆ ಬಳಕೆಗೆ ಮುಂದಾಗಬಹುದು. ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚು ಸೌಕರ್ಯ ಮತ್ತು ಬಲ ಸಿಗಲು ಎಡೆ ಮಾಡಿಕೊಡಬಹುದು.

 

 

ಏನು ತೊಂದರೆ?

ಏನು ತೊಂದರೆ?

ಬಹಳಷ್ಟು ಜನರು ಹೊಸ ವಾಹನ ಖರೀದಿಸಲಾಗದೇ 15 ವರ್ಷದ ಹಳೆಯ ವಾಹನ ಇಟ್ಟುಕೊಂಡಿರುತ್ತಾರೆ. ಇವರು ತಮ್ಮ ವಾಹನ ಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿಸುವಷ್ಟು ಶ್ರೀಮಂತಿಕೆ ಹೊಂದಿಲ್ಲದೇ ಇರಬಹುದು. ಇಂಥವರಿಗೆ ಕಷ್ಟವಾಗುತ್ತದೆ.

ಒಂದು ವೇಳೆ, ಫಿಟ್ನೆಸ್ ಟೆಸ್ಟ್ ಮಾಡಿಸಿ ವಾಹನ ಇಟ್ಟುಕೊಳ್ಳುತ್ತೇವೆ ಎಂದರೂ ಕ್ಷಮತಾ ಪರೀಕ್ಷೆಗೆ 600 ರೂಪಾಯಿ ಇದ್ದ ದರ ಈಗ 1000-1500 ರೂಗೆ ಏರಲಿದೆ.

15 ವರ್ಷಗಳಿಂತ ಹಳೆಯದಾದ ವಾಹನಗಳ ನೊಂದಣಿ ನವೀಕರಣವಂತೂ ಬಹಳ ದುಬಾರಿಯಾಗಲಿದೆ. ನಾಲ್ಕು ಚಕ್ರ ವಾಹನಗಳ ಆರ್‌ಸಿ ರಿನಿವಲ್‌ಗೆ 7,500 ರೂನಿಂದ 12,500 ರೂವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ.

15 ವರ್ಷದ ಹಳೆಯ ವಾಹನಕ್ಕೆ ಎಫ್‌ಸಿ ಮಾಡಿಸಿ ಮುಂದುವರಿಸುತ್ತೇನೆಂದರೂ ದುಬಾರಿ ದರದಿಂದಾಗಿ ಮಾಲೀಕರು ಈ ವಾಹನವನ್ನು ಗುಜರಿಗೆ ಹಾಕುವುದು ಅನಿವಾರ್ಯ ಎಂಬಂತಾಗುತ್ತದೆ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+