ಬೆಂಗಳೂರು, ಸೆಪ್ಟೆಂಬರ್ 28: ಭಾರತೀಯ ರಿಸರ್ವ್ ಬ್ಯಾಂಕ್ ಇದೇ ಸೆಪ್ಟೆಂಬರ್ 30ರೊಳಗೆ 2,000 ರೂಪಾಯಿ ನೋಟುಗಳನ್ನು ಎಲ್ಲ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳಲು ಅವಕಾಶ ನೀಡಿದೆ. ಒಂದು ವೇಳೆ ನೀವು ಈ ಗಡುವನ್ನು ಮೀರಿದರೆ ಏನಾಗುತ್ತದೆ ಎಂದು ತಿಳಿಯೋಣ.
2,000 ರೂಪಾಯಿ ಮೌಲ್ಯದ ನೋಟುಗಳನ್ನು ಠೇವಣಿ ಮಾಡಲು ಅಥವಾ ಬ್ಯಾಂಕ್‌ಗಳಿಂದ ಇತರ ನೋಟುಗಳೊಂದಿಗೆ ಬದಲಾವಣೆ ಮಾಡಿಕೊಳ್ಳಲು ಗಡುವು ಸೆಪ್ಟೆಂಬರ್ 30 ಆಗಿದೆ. ಆರ್‌ಬಿಐ ಮೇ 19 ರಂದು ರೂ 2,000 ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿತ್ತು. ಹೀಗಾಗಿ 2,000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಿಂದ ಈ ನೋಟುಗಳನ್ನು ಸಲ್ಲಿಸಿ ಅಥವಾ ವಿನಿಮಯ ಮಾಡಿಕೊಳ್ಳಲು ಅವಧಿಯನ್ನು ನಿಗದಿಪಡಿಸಿದೆ.

ಆರ್‌ಬಿಐ ತಿಳಿಸಿರುವಂತೆ 24,000 ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಇನ್ನೂ ಮಾರುಕಟ್ಟೆಯಿಂದ ವಾಪಸ್ ಬಂದಿಲ್ಲ. ಹೊಸ ನಿಯಮಗಳ ಪ್ರಕಾರ, ಸೆಪ್ಟೆಂಬರ್ 30ರ ನಂತರವೂ ಯಾರಾದರೂ 2,000 ಮುಖಬೆಲೆಯ ನೋಟುಗಳನ್ನು ಹೊಂದಿದ್ದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.
2,000 ರೂಪಾಯಿ ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡದ ಕಾರಣ ಈ ಅವಧಿಯೊಳಗೆ ನೋಟು ಬದಲಿಸಿಕೊಳ್ಳದಿದ್ದರೆ ಉಂಟಾಗುವ ಪರಿಣಾಮಗಳ ಬಗ್ಗೆ ಹಲವಾರು ಊಹಾಪೋಹಗಳಿವೆ. ಈ ಕಾರಣದಿಂದಾಗಿ ಅಂತಹ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಸಲ್ಲಿಸಲು ಆರ್‌ಬಿಐ ಕೊನೆಯ ದಿನಾಂಕವನ್ನು ವಿಸ್ತರಿಸುತ್ತದೆ ಎಂದು ಕೂಡ ಹೇಳಲಾಗುತ್ತಿದೆ. 2016 ರಲ್ಲಿ 500 ಮತ್ತು 1,000 ರೂ. ನೋಟಗಳ ಮೇಲೆ ನಿಷೇಧಿಸಿದ ನಂತರ ಈ ಮುಖಬೆಲೆಯ ನೋಟುಗಳನ್ನು ಹೊಂದಿದ್ದರೆ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಸರ್ಕಾರ ಪರಿಗಣಿಸಿದೆ.
ಒಂದು ವೇಳೆ 500 ಅಥವಾ 1000 ಮುಖಬೆಲೆಯ 10 ಕ್ಕಿಂತ ಹೆಚ್ಚು ಹಳೆಯ ನೋಟುಗಳನ್ನು ವ್ಯಕ್ತಿಯೊಬ್ಬರು ಇಟ್ಟುಕೊಂಡರೆ ಅವರಿಗೆ ಕನಿಷ್ಠ 10,000 ರೂಪಾಯಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಸೆಪ್ಟೆಂಬರ್ 30 ರ ನಂತರ 2,000 ರೂಪಾಯಿ ನೋಟುಗಳಿಗೂ ಇದೇ ಶಿಕ್ಷೆಯನ್ನು ಸರ್ಕಾರ ಜಾರಿಗೆ ತರಲು ನಿರೀಕ್ಷೆಯಿದೆ.
2017 ರಲ್ಲಿ ಬ್ಯಾಂಕ್ ನೋಟುಗಳ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿದೆ. ಈ ಪ್ರಕಾರ ಹಳೆಯ 10 ನೋಟುಗಳನ್ನು ಜನರು ಅಧ್ಯಯನ, ಸಂಶೋಧನೆ ಅಥವಾ ನಾಣ್ಯಶಾಸ್ತ್ರದ ಉದ್ದೇಶಕ್ಕಾಗಿ 25 ಕ್ಕಿಂತ ಹೆಚ್ಚು ತುಣುಕುಗಳನ್ನು ಇಟ್ಟುಕೊಳ್ಳುವಂತಿಲ್ಲ. ಇದನ್ನು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆರ್‌ಬಿಐ ಶಿಫಾರಸುಗಳನ್ನು ಆಧರಿಸಿ 2016 ರಲ್ಲಿ ನೋಟು ಅಮಾನ್ಯೀಕರಣದ ನಿರ್ಧಾರವನ್ನು ತೆಗೆದುಕೊಂಡಿತ್ತು. ಹಣಕಾಸು ವ್ಯವಸ್ಥೆಯಿಂದ ಲೆಕ್ಕಕ್ಕೆ ಸಿಗದ ಹಣ ಮತ್ತು ನಕಲಿ ನೋಟುಗಳನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಈ ಕಾನೂನು ಡಿಸೆಂಬರ್ 31, 2016 ರ ನಂತರ ಹಳೆಯ ರೂ 500 ಮತ್ತು ರೂ 1,000 ಕರೆನ್ಸಿ ನೋಟುಗಳ ಸ್ವಾಧೀನ, ವರ್ಗಾವಣೆ ಅಥವಾ ಸ್ವೀಕರಿಸುವುದನ್ನು ನಿಷೇಧಿಸುತ್ತದೆ.


Click it and Unblock the Notifications