ಹೂಡಿಕೆದಾರರೇ ಇಲ್ಲಿ ನೀವು ನಿಮ್ಮ ಖಾತೆ ಕೆವೈಸಿ (KYC) ಮಾಡಿಸಿದ್ದೀರಾ..? ಇನ್ನೂ ಮಾಡಿಸಿಲ್ಲ ಎಂದರೆ ತಪ್ಪದೇ ಈ ಸುದ್ದಿಯನ್ನು ನೀವು ಓದಲೇಬೇಕು..? ಯಾಕೆಂದರೆ ಕೆವೈಸಿ ಮಾಡಿಸಿಲ್ಲ ಅಂದ್ರೆ ನೀವು ವಂಚನೆಗಳಿಗೆ ಗುರಿಯಾಗಬಹುದು.
ಹೌದು, ಸೆಬಿ (SEBI) ನಿಯಮದ ಪ್ರಕಾರ ಡಿಮ್ಯಾಟ್ ಖಾತೆ ಹೊಂದಿರುವವರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಕೆವೈಸಿ ಕಡ್ಡಾಯವನ್ನು ಮಾಡಿದೆ. ನೀವು ಕೆವೈಸಿ ಮಾಡಿಸಿಯೂ ಒಂದು ವೇಳೆ ನಿಮ್ಮ ಕೆವೈಸಿ ಸ್ಥಿತಿಯನ್ನು 'ತಿರಸ್ಕರಿಸಲಾಗಿದೆ' 'ತಡೆಹಿಡಿಯಲಾಗಿದೆ' ಅಥವಾ 'ಪರಿಶೀಲನೆ ಬಾಕಿ ಇದೆ' ಎಂದು ತೋರಿಸಿದರೆ, ನೀವು ಯಾವುದೇ ಹೊಸ ಹೂಡಿಕೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನೀವು ಕೆವೈಸಿ ಈ ಕೂಡಲೇ ಮಾಡಿ.

ಇದು ವಂಚನೆ ಚಟುವಟಿಕೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಹಣಕಾಸು ಸಂಸ್ಥೆಗಳಿಗೆ ಹಣ ವರ್ಗಾವಣೆಯನ್ನು ಗುರುತಿಸಲು ಮತ್ತು ತಡೆಯಲು ಸಹಕಾರಿಯಾಗುತ್ತದೆ. ಆದ್ದರಿಂದ, ತಡೆರಹಿತ ಮತ್ತು ಒತ್ತಡ ರಹಿತ ಹೂಡಿಕೆಗಾಗಿ ಇದು ಬಹಳ ಮುಖ್ಯವಾದ ಕ್ರಮವಾಗಿದೆ.
ನಿಮ್ಮ ಕೆವೈಸಿಯನ್ನು ಆನ್‌ಲೈನ್‌ನಲ್ಲಿ ಮಾಡವುದು ಹೇಗೆ..?
- ನಿಮ್ಮ ಕೆವೈಸಿ ಅಪ್ಡೇಟ್ ಮಾಡಲು ನೀವು ಮ್ಯೂಚುವಲ್ ಫಂಡ್‌ನ ವೆಬ್‌ಸೈಟ್, ಬ್ರೋಕರ್ ಪೋರ್ಟಲ್ ಅಥವಾ ಕೆಆರ್‌ಎ (KRA) ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಇದನಂತರ ನಂತರ ಸ್ಕ್ಯಾನ್ ಮಾಡಿದ ನಿಮ್ಮ ದಾಖಲೆಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹೊಸ ಭಾವಚಿತ್ರವನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
- ನಂತರ ಕೆಲವು ಪೋರ್ಟಲ್‌ಗಳು ಆಧಾರ್ ಒಟಿಪಿ (OTP) ಬಳಸಿಕೊಂಡು ಇ-ಕೆವೈಸಿ (eKYC) ಸೌಲಭ್ಯವನ್ನು ಹೊಂದಿವೆ. ಆದ್ದರಿಂದ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭವಾಗಿದೆ.
- ನಿಮ್ಮ ವಿಳಾಸದಲ್ಲಿ ಏನಾದರೂ ಬದಲಾವಣೆ ಇದ್ದರೆ, ವಿಳಾಸದ ಪುರಾವೆಗಳನ್ನು ಸಹ ಅಪ್‌ಲೋಡ್ ಮಾಡಬೇಕಾಗಬಹುದು. ಸಾಮಾನ್ಯವಾಗಿ ಕೆವೈಸಿ ಅಪ್ಡೇಟ್ ಆಗಲು 5 ರಿಂದ 7 ದಿನಗಳು ಆಗಬಹುದು.
- ನಿಮ್ಮ ಪ್ಯಾನ್ ಅಥವಾ ಆಧಾರ್ ಮಾಹಿತಿ ಹೊಂದಿಕೆಯಾಗದಿದ್ದಲ್ಲಿ, ನೀವು ಖುದ್ದಾಗಿ ಪರಿಶೀಲನೆಗೆ (IPV - In-Person Verification) ಅವರನ್ನು ಭೇಟಿ ಮಾಡಬಹುದು ಇನ್ನೂ ಕೆಲವು ಬ್ರೋಕರ್‌ಗಳು ವೀಡಿಯೊ ಕರೆ ಅಥವಾ ಮನೆ ಬಾಗಿಲಿಗೆ ಬಂದು ಪರಿಶೀಲನೆ ಮಾಡುವ ಸೌಲಭ್ಯವನ್ನು ಸಹ ನೀಡುತ್ತಾರೆ.
- ನಿಮ್ಮ ದಾಖಲೆಗಳನ್ನು ಸರಿಯಾಗಿ ಸ್ಕ್ಯಾನ್ ಮಾಡಿ ಮತ್ತು ಓಟಿಪಿ ಪರಿಶೀಲನೆಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಿರುವುದು ಉತ್ತಮ ದಾಖಲೆಗಳ ವಿವರದಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ ಮತ್ತು ವಿಳಾಸ ಒಂದೇ ಇರುವಂತೆ ನೋಡಿಕೊಳ್ಳುಬೇಕು. ಇದರಿಂದಾಗಿ ಮುಂದೆ ಬರುವಂತಹ ಸಮಸ್ಯೆಗಳನ್ನು ಎದುರಿಸಬಹುದು.
ನಿಮ್ಮ ಕೆವೈಸಿ ಮತ್ತೆ ಸ್ಥಗಿತಗೊಳ್ಳುವುದನ್ನು ತಪ್ಪಿಸುವುದು ಹೇಗೆ?
- ನಿಮ್ಮ ಕೆವೈಸಿ ಪೂರ್ಣಗೊಂಡ ನಂತರ, ಅದರ ಸ್ಥಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರುವುದು ಒಳ್ಳೆಯ ಮಾರ್ಗ
- ವಿಳಾಸ ಬದಲಾವಣೆ ಅಥವಾ ದಾಖಲೆಗಳನ್ನು ನವೀಕರಿಸಿದ ಸಂದರ್ಭದಲ್ಲಿ ಮ್ಯಾಚ್ ಆಗದ ಅಥವಾ ಅವಧಿ ಮೀರಿದ ದಾಖಲೆಗಳು ಮುಂದಿನ ದಿನಮಾನಗಳಲ್ಲಿ 'ಕೆವೈಸಿ ತಡೆಹಿಡಿಯುವಿಕೆ' (KYC hold) ಪರಿಸ್ಥಿತಿಗೆ ಕಾರಣವಾಗಬಹುದು.
- ನಿಮ್ಮ ಮೊಬೈಲ್ ಮತ್ತು ಇಮೇಲ್ ಸಂಖ್ಯೆ ಆಕ್ಟೀವ್ ಆಗಿ ಇಟ್ಟುಕೊಳ್ಳಿ.
ಹೀಗೆ ನೀವು ಕೆವೈಸಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.


Click it and Unblock the Notifications