ಡಿಜಿಲಾಕರ್ ಎನ್ನುವುದು ಆನ್‌ಲೈನ್ ಆಧಾರಿತ ದಾಖಲೆಗಳ ಸಂಗ್ರಹ ಹಾಗೂ ಹಂಚಿಕೆ ಪ್ಲಾಟ್‌ಫಾರಂ ಆಗಿದ್ದು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಇನ್ನಿತರ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಇಡಲು ಜನರಿಗೆ ಅನುಕೂಲ ಕಲ್ಪಿಸಿದೆ. ಈ ವ್ಯವಸ್ಥೆಯು ವ್ಯಕ್ತಿಗಳಿಗೆ ಅನುಕೂಲಕರ ಹಾಗೂ ಸುರಕ್ಷಿತ ರೀತಿಯಲ್ಲಿ ತಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳುವುದಕ್ಕೆ ಹಾಗೂ ನಿರ್ವಹಣೆ ಮಾಡುವುದಕ್ಕೆ ನೆರವಾಗುತ್ತದೆ.
ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಇತರೆ ಮಹತ್ವದ ದಾಖಲೆಗಳನ್ನು ಡಿಜಿಲಾಕರ್‌ನಲ್ಲಿ ಲಿಂಕ್ ಮಾಡುವುದು ಅತ್ಯಂತ ಸುಲಭ ವಿಧಾನವಾಗಿದ್ದು, ನೀವು ಕೆಲವೊಂದು ಸ್ಟೆಪ್‌ಗಳನ್ನು ಅನುಸರಿಸಬೇಕು. ಹಾಗಾದರೆ, ಹೇಗೆ ನಿಮ್ಮ ಮಹತ್ವದ ದಾಖಲೆಗಳನ್ನು ಡಿಜಿಲಾಕರ್ ಜತೆಗೆ ಲಿಂಕ್ ಮಾಡಬೇಕು ಎನ್ನುವುದಕ್ಕೆ ಇಲ್ಲಿದೆ ಕೆಲವೊಂದು ಮಾರ್ಗದರ್ಶನಗಳು. ಮುಂದೆ ಓದಿ..
ಹಂತ 1: ಡಿಜಿಲಾಕರ್ ಅಕೌಂಟ್ ರಚಿಸಿ
ಮೊದಲ ಹಂತವೆಂದರೆ ಡಿಜಿಲಾಕರ್‌ನಲ್ಲಿ ಅಕೌಂಟ್‌ನ್ನು ಕ್ರಿಯೇಟ್ ಮಾಡಬೇಕು. ನೀವು ಈ ಅಕೌಂಟ್‌ನ್ನು ಡಿಜಿಲಾಕರ್ ವೆಬ್‌ಸೈಟ್‌ನಲ್ಲಿ ಅಥವಾ ಡಿಜಿಲಾಕರ್ ಆಪ್‌ನ್ನು ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಮಾಡಬಹುದಾಗಿದೆ. ಈ ಅಕೌಂಟ್‌ನ್ನು ರಚಿಸಲು ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ಒಟಿಪಿ ಮೂಲಕ ದೃಢೀಕರಣ ಮಾಡಿಕೊಳ್ಳಬೇಕು.
ಹಂತ 2: ಡಿಜಿಲಾಕರ್ ಅಕೌಂಟ್‌ಗೆ ಲಾಗಿನ್ ಆಗಿ
ಒಮ್ಮೆ ನೀವು ಅಕೌಂಟ್ ಅನ್ನು ಕ್ರಿಯೇಟ್ ಮಾಡಿದ ಬಳಿಕ ನಿಮ್ಮ ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್ ಅನ್ನು ಬಳಸಿಕೊಂಡು ಲಾಗಿನ್ ಆಗಬೇಕು. ಲಾಗಿನ್ ಆದ ಬಳಿಕ ಡಿಜಿಲಾಕರ್ ಅಕೌಂಟ್‌ನ ಹೋಮ್‌ಪೇಜ್‌ಗೆ ಹೋಗಬೇಕು.
ಹಂತ 3: ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿ
ಡಿಜಿಲಾಕರ್ ಜತೆಗೆ ಆಧಾರ್ ಕಾರ್ಡ್‌ನ್ನು ಲಿಂಕ್ ಮಾಡಲು ಡಿಜಿಲಾಕರ್ ಅಕೌಂಟ್‌ನ ಹೋಮ್‌ಪೇಜ್‌ನಲ್ಲಿರುವ ನಿಮ್ಮ ಆಧಾರ್ ಲಿಂಕ್ ಬಟನ್ ಒತ್ತಬೇಕು. ಆಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವಂತೆ ಸೂಚನೆ ಕಾಣಿಸಲಿದ್ದು, ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ ಮೂಲಕ ಅದನ್ನು ದೃಢೀಕರಿಸಿಕೊಳ್ಳಬೇಕು.
ಹಂತ 4: ನಿಮ್ಮ ಪ್ಯಾನ್ ಕಾರ್ಡ್ ಲಿಂಕ್ ಮಾಡಿ
ಡಿಜಿಲಾಕರ್ ಜತೆ ನಿಮ್ಮ ಪ್ಯಾನ್‌ಕಾರ್ಡ್‌ನ್ನು ಲಿಂಕ್ ಮಾಡಲು ಡಿಜಿಲಾಕರ್ ಅಕೌಂಟ್‌ನ ಹೋಂಪೇಜ್‌ನಲ್ಲಿರುವ ನಿಮ್ಮ ಪ್ಯಾನ್ ಲಿಂಕ್ ಬಟನ್ ಒತ್ತಬೇಕು. ಆಗ ನಿಮ್ಮ ಪ್ಯಾನ್‌ಕಾರ್ಡ್ ಸಂಖ್ಯೆ ಹಾಗೂ ಹುಟ್ಟಿದ ದಿನಾಂಕವನ್ನು ನಮೂದಿಸುವಂತೆ ಸೂಚನೆ ಕಾಣಿಸುತ್ತದೆ. ಒಮ್ಮೆ ಈ ಮಾಹಿತಿಯನ್ನು ನಮೂದಿಸಿದ ಬಳಿಕ ಪ್ಯಾನ್ ಕಾರ್ಡ್‌ನ್ನು ಲಿಂಕ್ ಮಾಡಲು ಸೇವ್ ಬಟನ್‌ನ್ನು ಒತ್ತಬೇಕು.
ಹಂತ 5: ಇತರೆ ಮಹತ್ವದ ದಾಖಲೆ ಲಿಂಕ್ ಮಾಡಿ
ಇನ್ನು ಇತರೆ ಮಹತ್ವದ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್, ಪ್ರಮಾಣಪತ್ರಗಳು ಹಾಗೂ ಇತರೆ ದಾಖಲೆಗಳನ್ನು ಲಿಂಕ್ ಮಾಡಲು ಡಿಜಿಲಾಕರ್ ಅಕೌಂಟ್‌ನ ಹೋಂಪೇಜ್‌ನಲ್ಲಿರುವ ಅಪ್‌ಲೋಡ್ ಬಟನ್‌ನ್ನು ಕ್ಲಿಕ್ ಮಾಡಿ. ಅಲ್ಲಿ ನೀವು ದಾಖಲೆಗಳನ್ನು ಪಿಡಿಎಫ್, ಜೆಪಿಜಿ ಅಥವಾ ಪಿಎನ್‌ಜಿ ಫಾರ್ಮಾಟ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಒಮ್ಮೆ ನೀವು ದಾಖಲೆಗಳನ್ನು ಅಪ್ಲೋಡ್ ಮಾಡಿದ ಬಳಿಕ ಅವುಗಳು ಡಿಜಿಲಾಕರ್ ಅಕೌಂಟ್‌ನಲ್ಲಿ ಸೇವ್ ಆಗಿಬಿಡುತ್ತವೆ.


Click it and Unblock the Notifications