For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಐಪಿಒನಲ್ಲಿ ಭಾಗಿಯಾಗಬೇಕೆ?, ಮೊದಲು ಇಲ್ಲಿ ಓದಿ

|

ನೀವು ಭಾರತೀಯ ಪ್ರಜೆಯಾಗಿದ್ದರೆ, ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ವಿಮಾ ರಕ್ಷಣೆಯನ್ನು ಹೊಂದಿರುವ ಸಾಧ್ಯತೆಯಿದೆ. ಹಾಗಾದರೆ ನಿಮಗೆ ಒಂದು ಉತ್ತಮ ಸುದ್ದಿ ಇದೆ. 2021-22 ರ ಅಂತ್ಯದ ವೇಳೆಗೆ ಭಾರತದ ಅತಿದೊಡ್ಡ ವಿಮಾದಾರರು ಐಪಿಒವನ್ನು ಆರಂಭ ಮಾಡಲಿದ್ದಾರೆ.

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಬಹು ನಿರೀಕ್ಷಿತ ಐಪಿಒ ಶೀಘ್ರದಲ್ಲೇ ಆರಂಭ ಆಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ದೇಶದಲ್ಲಿ ಅತೀ ದೊಡ್ಡ ವಿಮಾ ಕಂಪನಿಯಾದ ಎಲ್‌ಐಸಿಯ ಐಪಿಒ ಶೀಘ್ರದಲ್ಲೇ ನಡೆಯಲಿದೆ ಎಂದು ಈ ಹಿಂದೆ ವರದಿ ಆಗಿತ್ತು.

 Budget 2022: ಶೀಘ್ರದಲ್ಲೇ ಎಲ್‌ಐಸಿ ಐಪಿಒ ಎಂದ ವಿತ್ತ ಸಚಿವೆ Budget 2022: ಶೀಘ್ರದಲ್ಲೇ ಎಲ್‌ಐಸಿ ಐಪಿಒ ಎಂದ ವಿತ್ತ ಸಚಿವೆ

"ತಮ್ಮ ಸರ್ಕಾರವು ಹೊಸ ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಇ) ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಏರ್ ಇಂಡಿಯಾದ ಮಾಲೀಕತ್ವ ವರ್ಗಾವಣೆ ಪೂರ್ಣ ಮಾಡಲಾಗಿದೆ. ಹಣಕಾಸು ವರ್ಷ 2022 ರಲ್ಲಿ ವಿತರಣಾ ಗುರಿಗಳನ್ನು ಸಾಧಿಸಲು ಎಲ್‌ಐಸಿ ಐಪಿಒ ನಿರ್ಣಾಯಕವಾಗಿದೆ," ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀವು ಈ ಎಲ್‌ಐಸಿ ಐಪಿಒದಲ್ಲಿ ಭಾಗಿಯಾಗಲು ಬಯಸಿದ್ದರೆ ಮೊದಲು ನಮ್ಮ ಎಲ್‌ಐಸಿ ಪಾಲಿಸಿಯೊಂದಿಗೆ ಪ್ಯಾನ್‌ ಮತ್ತು ಆಧಾರ್‌ ಲಿಂಕ್‌ ಆಗಿದೆಯೇ ಎಂದು ನೋಡಿಕೊಳ್ಳಿ. ಇಲ್ಲವಾದರೆ ಶೀಘ್ರದಲ್ಲೇ ಲಿಂಕ್‌ ಮಾಡಿಕೊಳ್ಳಿ

 ಎಲ್‌ಐಸಿ ಐಪಿಒನಲ್ಲಿ ಭಾಗಿಯಾಗಬೇಕೆ?, ಮೊದಲು ಇಲ್ಲಿ ಓದಿ

ಎಲ್ಐಸಿ ಪಾಲಿಸಿಗೆ ಆಧಾರ್ ಸಂಖ್ಯೆಯನ್ನು ಏಕೆ ಲಿಂಕ್ ಮಾಡಬೇಕು?

ಎಲ್‌ಐಸಿ ಐಪಿಒಗಾಗಿ "ಪಾಲಿಸಿದಾರ" ವರ್ಗದ ಅಡಿಯಲ್ಲಿ, ಎಲ್‌ಐಸಿ ಪಾಲಿಸಿದಾರರು ಎಲ್‌ಐಸಿ ಐಪಿಒಗೆ ಅರ್ಜಿ ಸಲ್ಲಿಸಬಹುದು. ಆದರೆ ಈ ವರ್ಗದ ಅಡಿಯಲ್ಲಿ ಎಲ್‌ಐಸಿ ಐಪಿಒಗೆ ಅರ್ಜಿ ಸಲ್ಲಿಕೆ ಮಾಡಲು ನಿಮ್ಮ ಎಲ್‌ಐಸಿ ಪಾಲಿಸಿಯೊಂದಿಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಅತ್ಯಗತ್ಯವಾಗಿದೆ. ಅಲ್ಲದೆ, ಆನ್‌ಲೈನ್‌ನಲ್ಲಿ ಎಲ್‌ಐಸಿ ಪಾಲಿಸಿಗೆ ಆಧಾರ್ ಲಿಂಕ್ ನಿಮ್ಮ ಹೆಚ್ಚಿನ ವಿಮಾ ರಕ್ಷಣೆಯನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಎಲ್‌ಐಸಿ ಪಾಲಿಸಿದಾರರಲ್ಲದವರು ಕೂಡಾ ಐಪಿಒಗೆ ಅರ್ಜಿ ಸಲ್ಲಿಕೆ ಮಾಡಬಹುದು.

 ಎಲ್‌ಐಸಿ ಐಪಿಒನಲ್ಲಿ ಭಾಗಿಯಾಗಬೇಕೆ?, ಮೊದಲು ಇಲ್ಲಿ ಓದಿ

ಪಾಲಿಸಿಗೆ ಪ್ಯಾನ್‌, ಆಧಾರ್‌ ಲಿಂಕ್‌ ಮಾಡುವುದು ಹೇಗೆ?

ಎಲ್‌ಐಸಿಯು ವಿಮಾ ಪಾಲಿಸಿಯನ್ನು ಪಾಲಿಸಿದಾರರ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಪ್ರಾರಂಭಿಸಿದೆ. ಆದಾಗ್ಯೂ, ಈ ಸೇವೆಯನ್ನು ಬಳಸಲು, ನೀವು ನಿಮ್ಮ ಪ್ಯಾನ್ ಅನ್ನು ಸಹ ಒದಗಿಸಬೇಕು. ನೀವು ಸಂಸ್ಥೆಯ ನೋಂದಾಯಿತ ಆನ್‌ಲೈನ್ ಬಳಕೆದಾರರಾಗಿರಬೇಕು. ನೀವು ಈ ಹಿಂದೆ ಆನ್‌ಲೈನ್ ಸೇವೆಗಳಿಗೆ ದಾಖಲಾಗಿಲ್ಲದಿದ್ದರೆ, ಆನ್‌ಲೈನ್‌ನಲ್ಲಿ ನಿಮ್ಮ ವಿಮೆಯೊಂದಿಗೆ ಆಧಾರ್ ಅನ್ನು ಲಿಂಕ್‌ ಮಾಡುವ ಮೊದಲು ನೀವು ಮೊದಲು ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳಬೇಕು. ನಿಮ್ಮ ಎಲ್‌ಐಸಿ ವಿಮೆಗೆ ಆನ್‌ಲೈನ್‌ನಲ್ಲಿ ಆಧಾರ್‌ಗೆ ಲಿಂಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

* ಅಧಿಕೃತ ಸೈಟ್‌ www.licindia.in ಗೆ ಭೇಟಿ ನೀಡಿ
* "Link Aadhaar and PAN to LIC Policies - by 31.03.2018" ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ
* ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ ಮತ್ತು "Proceed" ಕ್ಲಿಕ್ ಮಾಡಿ
* ಹೆಸರು, ಹುಟ್ಟಿದ ದಿನಾಂಕ, ತಂದೆಯ ಹೆಸರು, ಲಿಂಗ, ಆಧಾರ್, ಪ್ಯಾನ್, ಪಾಲಿಸಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸದಂತಹ ನಿಮ್ಮ ವಿವರಗಳನ್ನು ಭರ್ತಿ ಮಾಡಿ
* ಎಲ್ಲಾ ವಿವರಗಳನ್ನು ಓದಿ, ಟಿಕ್ ಮಾಡಿ
* ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ
* "Get OTP" ಅನ್ನು ಕ್ಲಿಕ್‌ ಮಾಡಿ
* ನಿಮ್ಮ ಆಧಾರ್-ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ
* ಸ್ವೀಕರಿಸಿದ OTP ಅನ್ನು ನಮೂದಿಸಿ
* ಬಳಿಕ "Submit" ಅನ್ನು ಕ್ಲಿಕ್ ಮಾಡಿ
* ನಿಮ್ಮ ಆಧಾರ್-ಎಲ್‌ಐಸಿ ಪಾಲಿಸಿ ಲಿಂಕ್ ಮಾಡುವ ವಿನಂತಿಯನ್ನು ಸಲ್ಲಿಸಲಾಗುತ್ತದೆ, ಇಲ್ಲಿಗೆ ಹಂತ ಕೊನೆಯಾಗಲಿದೆ
* ಡೇಟಾವನ್ನು ಪರಿಶೀಲನೆ ಮಾಡಲು UIDAI ನ CIDR ಗೆ ಕಳುಹಿಸಲಾಗಿರುತ್ತದೆ.
* ಸರಿಯಾದ ಪರಿಶೀಲನೆಯ ನಂತರ, ನಿಮ್ಮ ಎಲ್‌ಐಸಿ ಪಾಲಿಸಿಯನ್ನು ಆಧಾರ್ ಮತ್ತು ಪ್ಯಾನ್‌ಗೆ ಲಿಂಕ್‌ ಮಾಡಲಾಗುತ್ತದೆ.

English summary

Link Your Aadhaar With LIC Policy To Participate In LIC IPO, Here Check Out How

Link Your Aadhaar With LIC Policy To Participate In LIC IPO, Here Check Out How.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X