ಭಾರತದಲ್ಲಿ ಪ್ರಸ್ತುತ ಅತೀ ಅಧಿಕವಾಗಿ ಯುಪಿಐ ವಹಿವಾಟನ್ನು ನಡೆಸಲಾಗುತ್ತದೆ. ಅತೀ ಸರಳವಾದ, ವೇಗವಾದ ವಹಿವಾಟು ಇದಾದ ಕಾರಣ ಹೆಚ್ಚಿನ ಜನರು ಯುಪಿಐ ವಹಿವಾಟಿನ ಮೇಲೆ ಆಧಾರಿತವಾಗಿದ್ದಾರೆ. ಯುಪಿಐ ವಹಿವಾಟಿನ ಮೇಲೆ ಅವಲಂಭಿತವಾಗಿದ್ದಾರೆ. ಕೋಟ್ಯಾಂತರ ಜನರು ತಮ್ಮ ದೈನಂದಿನ ವಹಿವಾಟಿಗೂ ಕೂಡಾ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೇ ಬಳಸುತ್ತಾರೆ. ಭಾರತ ಮೂಲದ್ದೆ ಆದ ಪೇಟಿಎಂ ಪೇಮೆಂಟ್ ಬ್ಯಾಂಕ್ ರಿಯಲ್ ಟೈಮ್ ಯುಪಿಐ ಪೇಮೆಂಟ್ಸ್ ಅನ್ನು ಆರಂಭಿಸಿದ್ದು ಒಂದು-ಟ್ಯಾಪ್‌ನಲ್ಲಿ ಯುಪಿಐ ಪಾವತಿಗಳನ್ನು ಸಕ್ರಿಯಗೊಳಿಸಬಹುದಾಗಿದೆ.
ಗರಿಷ್ಠ ವಹಿವಾಟಿನ ಸಮಯದಲ್ಲಿ ಬ್ಯಾಂಕ್‌ಗಳು ಎಷ್ಟೇ ಅಧಿಕ ವಹಿವಾಟು ಟ್ರಾಫಿಕ್ ಹೊಂದಿದ್ದರೂ ಕೂಡಾ ಈ ಪಾವತಿಗಳು ಎಂದಿಗೂ ವಿಫಲಗೊಳ್ಳುವುದಿಲ್ಲ. ಯುಪಿಐ ಲೈಟ್ ಆಪ್‌ನಲ್ಲಿ ಮಾಡಲಾದ ವಹಿವಾಟು ಪೇಟಿಎಂ ಬ್ಯಾಲೆನ್ಸ್ ಮತ್ತು ಹಿಸ್ಟರಿಯಲ್ಲಿಯೇ ಲಭ್ಯವಾಗಲಿದೆ. ಬ್ಯಾಂಕ್ ಪಾಸ್‌ಬುಕ್‌ನಲ್ಲಿ ಲಭ್ಯವಾಗುವುದಿಲ್ಲ. ಯುಪಿಐ ಲೈಟ್‌ನಲ್ಲಿ ಹಣದ ವಹಿವಾಟನ್ನು ಆನ್‌ಲೈನ್ ಮೋಡ್‌ನಲ್ಲಿ ಎಎಫ್‌ಎ ಅಥವಾ ಯುಪಿಐ ಆಟೋಪೇನಲ್ಲಿ ಮಾತ್ರ ಅನುಮತಿಸಲಾಗುತ್ತದೆ.

"ಯುಪಿಐ ಲೈಟ್ ವ್ಯಾಲೆಟ್ ಭರ್ತಿಯಾದ ಬಳಿಕ ಬಳಕೆದಾರರು ಒಂದು ಬಾರಿಗೆ 200 ರೂಪಾಯಿವರೆಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಯುಪಿಐ ಪಿನ್ ಇಲ್ಲದೆಯೇ ವಹಿವಾಟು ನಡೆಸಬಹುದಾಗಿದ್ದು, ಇದು ಶೀಘ್ರವಾಗಿ ನಡೆಸಬಹುದಾದ ವಹಿವಾಟಾಗಿದೆ. ಯುಪಿಐ ಲೈಟ್‌ನಲ್ಲಿ ದಿನದಲ್ಲಿ ಎರಡು ಬಾರಿಗೆ 2000 ಸಾವಿರ ರೂಪಾಯಿ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಒಂದು ದಿನದಲ್ಲಿ 4000 ರೂಪಾಯಿ ವಹಿವಾಟು ನಡೆಸಬಹುದಾಗಿದೆ," ಎಂದು ಪೇಟಿಎಂ ಮಾಹಿತಿ ನೀಡಿದೆ.
ಪೇಟಿಎಂ ಯುಪಿಐ ಲೈಟ್‌ಗೆ ಸಹಕಾರಿಯಾದ 10 ಬ್ಯಾಂಕುಗಳು
* ಪೇಟಿಎಂ ಪೇಮೆಂಟ್ಸ್ ಬ್ಯಾಂಕ್
* ಕೆನರಾ ಬ್ಯಾಂಕ್
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
* ಎಚ್‌ಡಿಎಫ್‌ಸಿ ಬ್ಯಾಂಕ್
* ಇಂಡಿಯನ್ ಬ್ಯಾಂಕ್
* ಕೋಟಕ್ ಮಹೀಂದ್ರಾ ಬ್ಯಾಂಕ್
* ಪಂಜಾಬ್ ನ್ಯಾಷನಲ್ ಬ್ಯಾಂಕ್
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
* ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಯುಪಿಐ ಲೈಟ್ ಫೀಚರ್ ಅನ್ನು ಜಾರಿ ಮಾಡಿದೆ. ಈ ಫೀಚರ್ ಮೂಲಕ ನಾವು ಯುಪಿಐ ಆಪ್‌ನಲ್ಲಿ 200 ರೂಪಾಯಿವರೆಗೆ ಯಾವುದೇ ಯುಪಿಐ ಪಿನ್ ಇಲ್ಲದೆಯೇ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಕಳೆದ ವರ್ಷ ಆರ್‌ಬಿಐ ಈ ಫೀಚರ್ ಅನ್ನು ಘೋಷಣೆ ಮಾಡಿದೆ. ಆದರೆ ಈವರೆಗೆ ಯಾವುದೇ ಯುಪಿಐ ವಹಿವಾಟು ಆಪ್‌ಗಳಲ್ಲಿ ಈ ಫೀಚರ್ ಅಳವಡಿಕೆ ಮಾಡಲಾಗಿಲ್ಲ. ಆದರೆ ಈಗ ಪೇಟಿಎಂ ಈ ಫೀಚರ್ ಅನ್ನು ಆರಂಭಿಸಿದೆ.
ಬೆಂಗಳೂರಿನಲ್ಲಿ ಅಧಿಕ ಯುಪಿಐ ವಹಿವಾಟು
ದೇಶದಲ್ಲಿ ಈಗ ಡಿಜಿಟಲ್, ಆನ್‌ಲೈನ್, ಯುಪಿಐ ವಹಿವಾಟು ನಡೆಸುವವರ ಸಂಖ್ಯೆ ಅಧಿಕವಾಗುತ್ತಿದೆ. ಜನರು ಸರಳವಾದ, ಸುಲಭವಾದ ಡಿಜಿಟಲ್ ವಹಿವಾಟಿನಂತ ಈಗಾಗಲೇ ವಾಲಿದ್ದಾರೆ. ಅದರಲ್ಲೂ ದೇಶದಲ್ಲೇ ಅಧಿಕವಾಗಿ ಯುಪಿಐ ವಹಿವಾಟು ಬೆಂಗಳೂರಿನಲ್ಲಿ ನಡೆದಿದೆ. 2022ರ ಜನವರಿಯಿಂದ ಅಕ್ಟೋಬರ್‌ವರೆಗಿನ ಹತ್ತು ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದೇಶದಲ್ಲೇ ಅಧಿಕ ಯುಪಿಐ ವಹಿವಾಟು ನಡೆದಿದೆ. ಸುಮಾರು 14.82 ಮಿಲಿಯನ್ ಡಿಜಿಟಲ್ ಪಾವತಿ ನಡೆದಿದೆ. ಜನವರಿಯಿಂದ ಅಕ್ಟೋಬರ್‌ವರೆಗೆ ಸುಮಾರು 36.2 ಬಿಲಿಯನ್ ರೂಪಾಯಿಯ ವಹಿವಾಟು ನಡೆದಿದೆ ಎಂದು ವರದಿಯಾಗಿದೆ.


Click it and Unblock the Notifications