ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ಸೋಥೆಬಿ ಹರಾಜಿನಲ್ಲಿ ವಿಸ್ಕಿ ಬಾಟಲಿಯ ಹರಾಜು ಇತಿಹಾಸವನ್ನು ಸೃಷ್ಟಿಸಿದೆ. ಒಂದು ಸ್ಕಾಚ್ ವಿಸ್ಕಿ ಬಾಟಲಿಯು ಹರಾಜಿನಲ್ಲಿ 2.2 ಮಿಲಿಯನ್ ಪೌಂಡ್‌ಗಳಿಗೆ (2.7 ಮಿಲಿಯನ್ ಡಾಲರ್) ಮಾರಾಟವಾಗಿದೆ ಎಂದರೆ ನೀವು ನಂಬುತ್ತೀರಾ?!
ಈ ಹರಾಜು ಪ್ರಕ್ರಿಯೆಯ ಬಳಿಕ ಕೇವಲ ಒಂದು ಬಾಟಲಿಯ ಮದ್ಯಕ್ಕೆ ಪಾವತಿ ಮಾಡಲಾದ ಅತ್ಯಧಿಕ ಹರಾಜು ಬೆಲೆ ಎಂಬ ಹೊಸ ದಾಖಲೆ ಸೃಷ್ಟಿಯಾಗಿದೆ. ಈ ಬಾಟಲಿಯನ್ನು ನವೆಂಬರ್ 18 ರಂದು ಅದರ ಅಂದಾಜು ಬೆಲೆಗಿಂತ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗಿದೆ.

ವಿಶ್ವದ ಅತ್ಯಂತ ಬೆಲೆಬಾಳುವ ವಿಸ್ಕಿ
"ವಿಶ್ವದ ಅತ್ಯಂತ ಬೆಲೆಬಾಳುವ ವಿಸ್ಕಿ" ಎಂದು ಕರೆಯಲ್ಪಡುವ ಮಕಲನ್ ಅದಾಮಿ 1926 ಗಾಗಿ, ಹರಾಜು ಸಂದರ್ಭದಲ್ಲಿ, ಹರಾಜು ನಡೆಯುತ್ತಿದ್ದ ಕೊಠಡಿಯಲ್ಲಿ ಜನರು ಹರಾಜು ಕೂಗಿರುವುದು ಮಾತ್ರವಲ್ಲದೆ, ಫೋನ್‌ಗಳಲ್ಲಿಯೂ ಖರೀದಿದಾರರಿಂದ ತೀವ್ರ ಬಿಡ್ಡಿಂಗ್ ಅನ್ನು ಮಾಡಿದ್ದಾರೆ. ಅತೀ ಅಧಿಕ ಬಿಡ್ಡಿಂಗ್ ಈ ಒಂದು ವಿಸ್ಕಿ ಬಾಟಲಿಗೆ ನಡೆದಿದೆ.
ಈ ಅಪರೂಪದ ವಿಸ್ಕಿ, 1986 ರಲ್ಲಿ 60 ವರ್ಷಗಳ ಕಾಲ ಶೆರ್ರಿ ಪೀಪಾಯಿಗಳಲ್ಲಿ ತಯಾರಿಸಿದ ನಂತರ ಉತ್ಪಾದನೆ ಮಾಡಲಾದ ವಿಸ್ಕಿ ಆಗಿದೆ. ಕೇವಲ 40 ಬಾಟಲಿಗಳ ಈ ವಿಸ್ಕಿಯನ್ನು ಉತ್ಪಾದಿಸಲಾಗಿದ್ದು, ಈ ನಿಟ್ಟಿನಲ್ಲಿ ಈ ವಿಸ್ಕಿಗೆ ಹೆಚ್ಚು ಬೇಡಿಕೆಯಿದೆ.
ಹರಾಜಿನಲ್ಲಿ ಮಾರಾಟವಾದ ಬಾಟಲಿಯು ಇಟಾಲಿಯನ್ ಕಲಾವಿದ ವ್ಯಾಲೆರಿಯೊ ಅಡಾಮಿ ವಿನ್ಯಾಸಗೊಳಿಸಿದ ಲೇಬಲ್ ಅನ್ನು ಒಳಗೊಂಡಿದೆ. ಈ ವಿಶಿಷ್ಟ ಲೇಬಲ್ ಹೊಂದಿರುವ ಕೇವಲ ಹನ್ನೆರಡು ಬಾಟಲಿಗಳಲ್ಲಿ ಒಂದು ಇದಾಗಿದೆ. ಇಲ್ಲಿಯವರೆಗೆ, 2018 ಮತ್ತು 2019 ರ ನಡುವೆ ಮೂರು ಬಾರಿ ದಾಖಲೆಯನ್ನು ಮುರಿಯಲಾಗಿದೆ. ಸರ್ ಪೀಟರ್ ಬ್ಲೇಕ್, ಮೈಕೆಲ್ ದಿಲ್ಲನ್ ಮತ್ತು ಫೈನ್ ಅಂಡ್ ರೇರ್ ಈ ದಾಖಲೆಯನ್ನು ಮುರಿದಿದೆ.
2019 ರಲ್ಲಿ, ಸೋಥೆಬಿಸ್ ಹರಾಜಿನಲ್ಲಿ ಮದ್ಯವೊಂದು ಸುಮಾರು 1.5 ಮಿಲಿಯನ್ ಪೌಂಡ್‌ಗಳಿಗೆ ಮಾರಾಟವಾಗಿದೆ. ಆ ಸಂದರ್ಭದಲ್ಲಿ ಅದು ಹೊಸ ದಾಖಲೆಯಾಗಿದೆ. ಸೋಥೆಬಿಯ ಸ್ಪಿರಿಟ್ಸ್‌ನ ಜಾಗತಿಕ ಮುಖ್ಯಸ್ಥ ಜಾನಿ ಫೌಲ್ ಅವರು ಮಾರಾಟದ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
"ಮಕಲನ್ 1926 ಪ್ರತಿ ಹರಾಜುದಾರರು ಮಾರಾಟ ಮಾಡಲು ಬಯಸುವ ಮತ್ತು ಪ್ರತಿ ಸಂಗ್ರಾಹಕನು ಹೊಂದಲು ಬಯಸುವ ಒಂದು ವಿಸ್ಕಿಯಾಗಿದೆ," ಎಂದು ಜಾನಿ ಫೌಲ್ ಹೇಳಿಕೊಂಡಿದ್ದಾರೆ. "ಆರು ದಶಕಗಳ ಕಾಲ ಶೆರ್ರಿ ಪೀಪಾಯಿಗಳಲ್ಲಿ ಇದ್ದ 1986 ರಲ್ಲಿ ದಿ ಮಕಲನ್ 1926 ರ ಕೇವಲ 40 ಬಾಟಲಿಗಳನ್ನು ಸಿದ್ಧಪಡಿಸಲಾಯಿತು. ಇದು ಇದುವರೆಗೆ ಉತ್ಪಾದಿಸಿದ ಅತ್ಯಂತ ಹಳೆಯ ಮಕಲನ್ ವಿಂಟೇಜ್ ಆಗಿದೆ," ಎಂದು ಹರಾಜು ಸಂಸ್ಥೆ ಸೋಥೆಬಿಸ್ ಹೇಳಿದೆ.
40 ಬಾಟಲಿಗಳನ್ನು ಕೂಡಾ ಖರೀದಿಗೆ ಇಡಲಾಗಿಲ್ಲ. ಬದಲಾಗಿ, ಕೆಲವನ್ನು ದಿ ಮಕಲನ್‌ನ ಉನ್ನತ ಗ್ರಾಹಕರಿಗೆ ನೀಡಲಾಯಿತು ಎಂದು ವರದಿಯಾಗಿದೆ. 2018 ಮತ್ತು 2019 ರಾದ್ಯಂತ, ಹರಾಜು ದಾಖಲೆಯನ್ನು ಮೂರು ಬಾರಿ ಮೂರು ವಿಭಿನ್ನ ಹೆಸರುಗಳಲ್ಲಿ ಇದು ಮುರಿದಿದೆ.
ಸೋಥೆಬಿಯ ಸ್ಪಿರಿಟ್ಸ್‌ನ ಜಾಗತಿಕ ಮುಖ್ಯಸ್ಥ ಜಾನಿ ಫೌಲ್ ಈ ಮಾರಾಟವನ್ನು ಒಟ್ಟಾರೆಯಾಗಿ ವಿಸ್ಕಿ ಉದ್ಯಮಕ್ಕೆ ಪ್ರಮುಖ ಕ್ಷಣ ಎಂದು ಬಣ್ಣಿಸಿದರು. "ಇದು ಲಘುವಾಗಿ ತೆಗೆದುಕೊಳ್ಳುವ ವಿಸ್ಕಿ ಏನಲ್ಲ. ಇದು ಶ್ರೀಮಂತ, ಶ್ರೀಮಂತ ಡ್ರ್ಯಾಮ್, ಆದರೆ ಇದು ಅದ್ಭುತವಾಗಿದೆ," ಎಂದು ಹೇಳಿಕೊಂಡಿದ್ದಾರೆ.
ಮಕಲನ್ 1926 ವಿಸ್ಕಿ ಯಾಕಿಷ್ಟು ವಿಶೇಷ?
ಕೊನೆಯ ಮಾರಾಟದ ಬೆಲೆಯು 2,187,500 ಪೌಂಡ್‌ಗಳು (2,714,250 ಡಾಲರ್) ಇದು ಆರಂಭಿಕ ಅಂದಾಜುಗಳಾದ 750,000 ರಿಂದ 1.2 ಮಿಲಿಯನ್ ಪೌಂಡ್‌ಗಳನ್ನು ಮೀರಿದೆ. ಮಕಾಲನ್‌ನ ಮಾಸ್ಟರ್ ವಿಸ್ಕಿ ತಯಾರಕರು ಕರ್ಸ್ಟೀನ್ ಕ್ಯಾಂಪ್‌ಬೆಲ್, ವಿಸ್ಕಿಯ ತಯಾರಿಕ ಅನುಭವವನ್ನು ಹಂಚಿಕೊಂಡಿದ್ದಾರೆ.
ದುಬಾರಿ ಕಪ್ಪು ಹಣ್ಣುಗಳು, ಕಪ್ಪು ಚೆರ್ರಿ ಕಾಂಪೋಟ್, ಕರ್ಜೂರ, ಓಕ್ ಮರದ ಹಣ್ಣಿನ ಸುವಾಸನೆಯೊಂದಿಗೆ ಈ ವಿಸ್ಕಿಯನ್ನು ತಯಾರಿಸಲಾಗಿದೆ. ಹಾಗೆಯೇ ಡಾರ್ಕ್ ಚಾಕೊಲೇಟ್, ಸಕ್ಕರೆ ಪಾಕ, ಶುಂಠಿ ಮೊದಲಾದವುಗಳನ್ನು ಈ ವಿಸ್ಕಿ ತಯಾರಿಸುವಾಗ ಸೇರಿಸಲಾಗಿದೆ ಎಂದು ಮಕಾಲನ್‌ನ ಮಾಸ್ಟರ್ ವಿಸ್ಕಿ ತಯಾರಕರು ಹೇಳಿಕೊಂಡಿದ್ದಾರೆ.


Click it and Unblock the Notifications