ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ರ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಸಂದರ್ಭದಲ್ಲೇ ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ ಅನ್ನು ಜಾರಿ ಮಾಡಲಾಗಿದೆ. ಇದು ಮಹಿಳೆ ಮತ್ತು ಮಕ್ಕಳಿಗಾಗಿ ಇರುವ ಹೊಸ ಸಣ್ಣ ಉಳಿತಾಯ ಯೋಜನೆಯಾಗಿದೆ. ಅಜಾದಿ ಕ ಅಮೃತ್ ಮಹೋತ್ಸವದ ಅಡಿಯಲ್ಲಿ ಕೇಂದ್ರ ಸರ್ಕಾರವು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಏಪ್ರಿಲ್ 2023ರಿಂದ ಮಾರ್ಚ್ 2025ರವರೆಗೆ ಇರಲಿದೆ. ಈ ಯೋಜನೆಯು ಗರಿಷ್ಠ ಡೆಪಾಸಿಟ್ ಅವಕಾಶವನ್ನು ನಿಮಗೆ ನೀಡುತ್ತದೆ. ಮಹಿಳೆ ಅಥವಾ ಮಕ್ಕಳ ಹೆಸರಿನಲ್ಲಿ ನೀವು 2 ವರ್ಷದ ಅವಧಿಗೆ ನಿಗದಿತ ಬಡ್ಡಿದರಕ್ಕೆ 2 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡುವ ಅವಕಾಶ ಈ ಯೋಜನೆಯಲ್ಲಿದೆ. ಇದು ಸರ್ಕಾರ ಬೆಂಬಲಿತ ಯೋಜನೆಯಾಗಿದೆ. ಆದ್ದರಿಂದಾಗಿ ಯಾವುದೇ ಕ್ರೆಡಿಟ್ ರಿಸ್ಕ್ ನಿಮಗೆ ಇರಲಾರದು.

ಯೋಜನೆಯ ಬಗ್ಗೆ ಅಧಿಕ ಮಾಹಿತಿ
ಕೇವಲ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನಿಗದಿತವಾಗಿ ಶೇಕಡ 7.5ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಇತರೆ ಬ್ಯಾಂಕ್ ಎಫ್‌ಡಿಗಳಿಗಿಂತ ಹೆಚ್ಚಾಗಿದೆ. ಈ ಯೋಜನೆಯಲ್ಲಿ ಗರಿಷ್ಠ 2 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಬಹುದು. ಇದು ನಿಗದಿತ ಅವಧಿಗೆ ಜಾರಿಯಲ್ಲಿರುವ ಯೋಜನೆಯಾಗಿದೆ.
2023ರಿಂದ 2025ರ ಅವಧಿಗೆ ಈ ಯೋಜನೆಯು ಇರಲಿದೆ. ಹಾಗೆಯೇ ಯೋಜನೆಯಡಿಯಲ್ಲಿ ಮೆಚ್ಯೂರಿಟಿಗೂ ಮುನ್ನ ವಿತ್‌ಡ್ರಾ ಮಾಡಿಕೊಳ್ಳುವ ಅವಕಾಶವಿದೆ. ಹಾಗೆಯೇ ತೆರಿಗೆ ಪ್ರಯೋಜನ ಕೂಡಾ ಯೋಜನೆಯಡಿಯಲ್ಲಿ ಲಭ್ಯವಾಗಲಿದೆ. ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಈ ಯೋಜನೆಯ ತೆರಿಗೆ ರಚನೆಯ ಬಗ್ಗೆ ಅಂತಿಮವಾಗಿ ನಿರ್ಧಾರವಾಗಿಲ್ಲ.
ಸಣ್ಣ ಉಳಿತಾಯ ಯೋಜನೆಗಳಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಹಿರಿಯ ನಾಗರಿಕರ ಸಣ್ಣ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಂತೆಯೇ ಇದು ಕೂಡಾ ತೆರಿಗೆ ಪ್ರಯೋಜನವನ್ನು ನೀಡುವ ಯೋಜನೆಯಾಗಿದೆ. ಯೋಜನೆಯ ತೆರಿಗೆ ರಚನೆಯು ಬಗ್ಗೆ ಈಗಲೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.
ಹೇಗೆ ವಿತ್‌ಡ್ರಾ ಮಾಡುವುದು?
ಹಂತ 1: ಸಮೀಪದ ಬ್ಯಾಂಕ್, ಅಂಚೆ ಕಚೇರಿಯಲ್ಲಿ ಮಹಿಳಾ ಸಮ್ಮಾನ್ ಬಚ್ತ್ ಪತ್ರ ಯೋಜನೆಯನ್ನು ಫಾರ್ಮ್ ಪಡೆಯಿರಿ
ಹಂತ 2: ವೈಯಕ್ತಿಕ, ಹಣಕಾಸು ಮತ್ತು ನಾಮಿನಿ ಮಾಹಿತಿಯನ್ನು ಅರ್ಜಿಯಲ್ಲಿ ನೀವು ನಮೂದಿಸಿ
ಹಂತ 3: ಗುರುತು ಪತ್ರ, ವಿಳಾಸ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಪಡೆಯಿರಿ
ಹಂತ 4: ಹೂಡಿಕೆ ಮೊತ್ತ ಆಯ್ಕೆ ಮಾಡಿ, ನಗದು ಅಥವಾ ಚೆಕ್ ರೂಪದಲ್ಲಿ ಡೆಪಾಸಿಟ್ ಮಾಡಿ
ಹಂತ 5: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿಯಲ್ಲಿ ನೀವು ಸದಸ್ಯರಾಗಿರುವ ಪುರಾವೆ ಲಭ್ಯವಾಗಲಿದೆ.


Click it and Unblock the Notifications