ಒಬ್ಬ ವ್ಯಕ್ತಿಯು ಲಾಟರಿ ಗೆದ್ದು ಜಾಕ್‌ಪಾಟ್ ಹೊಡೆದರೆ ಆತನ ಜೀವನವೇ ಸಂಪೂರ್ಣ ಬದಲಾಗಿ ಬಿಡುತ್ತದೆ. ಲಾಟರಿ ಗೆದ್ದವರು ಆ ಹಣವನ್ನು ಏನು ಮಾಡುತ್ತಾರೆ ಎಂದು ಹೆಚ್ಚಿನವರು ಆಶ್ಚರ್ಯಪಡುತ್ತಾರೆ. ಹೀಗಿರುವಾಗ ಇತಿಹಾಸದಲ್ಲಿ ಲಾಟರಿ ಮೂಲಕ ಅತಿ ಹೆಚ್ಚು ಹಣ ಪಡೆದಿರುವ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರು ಇದೀಗ ತಮ್ಮ ಕಾರ್ಯ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.
ಈ ಕಥೆಯು ನಿಜಕ್ಕೂ ಪ್ರತಿಯೊಬ್ಬರ ಅದೃಷ್ಟದ ನಂಬಿಕೆಯನ್ನು ಸವಾಲು ಮಾಡುತ್ತದೆ. ಶತಕೋಟಿಗಳನ್ನು ಗೆದ್ದ ಒಬ್ಬ ವ್ಯಕ್ತಿ ವಿಶ್ವದ ಶ್ರೀಮಂತರ ಪಟ್ಟಿಗೆ ಹೋಲಿಕೆಯಾಗಿದ್ದಾರೆ. ಎಲ್ಲಿಯವರೆಗೆ ಅಂದರೆ, ಭಾರತದ ಹೆಸರಾಂತರ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿರುವ ರತನ್ ಟಾಟಾರನ್ನೂ ಈ ವ್ಯಕ್ತಿ ಶ್ರೀಮಂತಿಕೆಯಲ್ಲಿ ಹಿಂದಿಕ್ಕಿದ್ದಾರೆ. ಏಕೆಂದರೆ, ಈ ವ್ಯಕ್ತಿ ರತನ್ ಟಾಟಾರ ವೈಯಕ್ತಿಕ ಆಸ್ತಿಗಿಂತ 4 ಪಟ್ಟು ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಈಗ ರತನ್ ಟಾಟಾ ಅವರು ಸುಮಾರು 4,000 ಕೋಟಿ ರೂ. ಮೌಲ್ಯದ ವೈಯಕ್ತಿಕ ಆಸ್ತಿ ಹೊಂದಿದ್ದಾರೆ.

ಕ್ಯಾಲಿಫೋರ್ನಿಯಾದ ವ್ಯಕ್ತಿಯು 16,000 ಕೋಟಿ ರೂ. ಜಾಕ್‌ಪಾಟ್ ಗೆದ್ದ ಬಳಿಕ ವಿಶ್ವದ ಅತ್ಯಂತ ದುಬಾರಿ ಪ್ರದೇಶದಲ್ಲಿ ಬಹಳ ತ್ವರಿತವಾಗಿ ಆಸ್ತಿಯನ್ನು ಖರೀದಿಸಿದ್ದಾರೆ. ಅವರ ಅಲ್ಲಿನ ಶ್ರೀಮಂತ ನಿವಾಸಕ್ಕೆ 200 ಕೋಟಿ ರೂ. ವೆಚ್ಚವಾಗಿದೆ ಎಂದು ವರದಿಯಾಗಿದೆ. 30 ವರ್ಷದ ಈ ವ್ಯಕ್ತಿಯು ಯುಎಸ್‌ಎಯ ಕಾಲಿಫೋರ್ನಿಯಾದಲ್ಲಿ ಶ್ರೀಮಂತ ಭವನಕ್ಕಾಗಿ 25 ಮಿಲಿಯನ್ ಡಾಲರ್ ಪಾವತಿಸಿರುವುದಾಗಿ ಬ್ರಿಟಿಷ್ ಪತ್ರಿಕೆ ಇಂಡಿಪೆಂಡೆಂಟ್ ವರದಿ ಮಾಡಿದೆ.
ಹೆಚ್ಚಿನ ಹಾಲಿವುಡ್ ಸೆಲೆಬ್ರಿಟಿಗಳು ಅಲ್ಲಿ ವಾಸಿಸುತ್ತಿದ್ದು, ಇದು ವಿಶ್ವದ ಅತ್ಯಂತ ಬೆಲೆಬಾಳುವ ದುಬಾರಿ ಸ್ಥಳಗಳಲ್ಲಿ ಒಂದಾಗಿದೆ. ಅಮೆರಿಕದ ಎಡ್ವಿನ್ ಕ್ಯಾಸ್ಟ್ರೋ ಎಂಬ ವ್ಯಕ್ತಿಯು ನವೆಂಬರ್ ತಿಂಗಳಲ್ಲಿ 2 ಬಿಲಿಯನ್ ಡಾಲರ್(16,407ರೂ.) ಹಣವನ್ನು ಮೆಗಾ ಲಾಟರಿಯಲ್ಲಿ ಗೆದ್ದಿದ್ದರು. ಮಾಧ್ಯಮವು ವ್ಯಾಪಕವಾಗಿ ವರದಿಗಳನ್ನು ಪ್ರಸಾರ ಮಾಡಿದ್ದರು ಕೂಡ ಎಡ್ವಿನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರಲಿಲ್ಲ.
ಒಂದೇ ಬಾರಿಗೆ ಎಲ್ಲ ಮೊತ್ತ ಪಡೆದ ವ್ಯಕ್ತಿ
ಕ್ಯಾಸ್ಟ್ರೋ ಅವರು ಒಂದು ಬಾರಿಗೆಯೇ ಲಾಟರಿಯಲ್ಲಿ ಗೆದ್ದ ಎಲ್ಲ ಮೊತ್ತವನ್ನು ಪಡೆಯುವ ನಿರ್ಧಾರವನ್ನು ಮಾಡಿದ್ದರು ಎಂದು ವರದಿಯಾಗಿದೆ. ಈ ಲಾಟರಿ ಗೆಲುವಿನಲ್ಲಿ ಕ್ಯಾಸ್ಟ್ರೀ ಅವರು ತೆರಿಗೆ ಸೇರಿದಂತೆ ಇತರೆ ಎಲ್ಲ ಕಡಿತಗಳನ್ನು ಮಾಡಿದ ಬಳಿಕ 997 ಮಿಲಿಯನ್ ಡಾಲರ್ ಅಥವಾ 8,180 ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದಾರೆ. ಇಷ್ಟು ದೊಡ್ಡ ಮೊತ್ತವನ್ನು ಪಡೆದುಕೊಂಡ ಬಳಿಕ 30 ವರ್ಷದ ಈ ವ್ಯಕ್ತಿಯು ದುಬಾರಿ ಅರಮನೆಯೊಂದನ್ನು ಖರೀದಿಸಿರುವ ಬಗ್ಗೆ ಸುದ್ದಿಯಾಗಿದೆ.
ರಿಯಲ್ ಎಸ್ಟೇಟ್ ವೆಬ್‌ಸೈಟ್ ಡರ್ಟ್ ಪ್ರಕಾರ, ಕ್ಯಾಸ್ಟ್ರೋ ಅವರು ಕ್ಯಾಲಿಫೋರ್ನಿಯಾದ ಹಾಲಿವುಡ್ ಹಿಲ್ಸ್‌ನಲ್ಲಿ ಆಸ್ತಿಯನ್ನು ಖರೀದಿಸಿದ್ದಾರೆ. ವರದಿಯ ಪ್ರಕಾರ ಈ ಆಸ್ತಿಯ ಬೆಲೆಯು ಅಚ್ಚರಿ ಮೂಡಿಸುವಂತಿದ್ದು, ಅದು ಬರೋಬರಿ 30 ಮಿಲಿಯನ್ ಡಾಲರ್ ಆಗಿದೆ. ಆದರೆ, ಕ್ಯಾಸ್ಟ್ರೋಗೆ ಈ ಮನೆ ಖರೀದಿಯಲ್ಲಿ 5 ಮಿಲಿಯನ್ ಡಾಲರ್‌ನಷ್ಟು ಡಿಸ್ಕೌಂಟ್ ಲಭಿಸಿದೆ. ಈ ಐಷಾರಾಮಿ ಬಂಗಲೆಯು ಒಟ್ಟು 13,578 ಚದರ ಅಡಿ ವಿಸ್ತೀರ್ಣದ ಜಾಗವನ್ನು ಹೊಂದಿದೆ.
ಇದರಲ್ಲಿ ಎರಡು ಪೌಡರ್ ರೂಮ್ಸ್‌ಗಳಿದ್ದು, ಆರು ಟಾಯ್ಲೆಟ್-ಬಾತ್‌ರೂಮ್ ಹಾಗೂ ಐದು ಬೆಡ್‌ರೂಮ್‌ಗಳಿವೆ. ಮೂರು ಅಂತಸ್ತಿನ ಮಹಡಿಯನ್ನು ಹೊಂದಿರುವ ಈ ಭವ್ಯ ಭವನವು ವಿಹಂಗಮ ನೋಟವನ್ನು ಹೊಂದಿದೆ. ನೆಲ ಮಹಡಿಯು ಗಾಜಿನ ಸ್ಟ್ರಕ್ಚರ್ ಹೊಂದಿದ್ದು, ಹೊರಗೆ ಬಾರ್ಬೆಕ್ಯೂ ಗ್ರಿಲ್‌ಗಳಿವೆ. ಈ ಬಂಗಲೆಗೆ ಹೊಂದಿಕೊಂಡಂತೆ ಜಿಮ್, ಚಿತ್ರಮಂದಿರ, ವೈನ್ ಸೆಲ್ಲಾರ್, ಈಜುಕೊಳ ಸೇರಿದಂತೆ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ.
ಅಲ್ಲದೆ ಇದು ಮೇಲ್ಛಾವಣಿ ಡೆಕ್ ಮತ್ತು ತನ್ನದೇ ಆದ ಬಾಲ್ಕನಿಯನ್ನು ಕೂಡ ಹೊಂದಿದೆ. ಈ ಮನೆಯು ಎರಡು ಗ್ಯಾರೇಜ್‌ಗಳನ್ನು ಹೊಂದಿದ್ದು, ಕನಿಷ್ಠ ಏಳು ವಾಹನಗಳಿಗೆ ಬೇಕಾಗುವ ವಿಶಾಲ ಸ್ಥಳಾವಕಾಶವನ್ನು ಹೊಂದಿದೆ. ಇದು ಕ್ಯಾಲಿಫೋರ್ನಿಯಾದ ಹಾಲಿವುಡ್ ಹಿಲ್ಸ್‌ನ ಅತ್ಯಂತ ಫ್ಯಾನ್ಸಿಸ್ಟ್ ನೆರೆಹೊರೆಯಲ್ಲಿ ಒಂದಾಗಿದೆ.


Click it and Unblock the Notifications