ಬೆಂಗಳೂರು, ಜೂನ್ 20: ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿ ಲಾಭ ಗಳಿಸಬೇಕು ಎಂದರೆ ಪ್ರಾಪರ್ಟಿ ಅಥವಾ ಆಸ್ತಿ ಖರೀದಿ ಮಾಡಲೇಬೇಕು ಅಂತೆನೂ ಇಲ್ಲ. ಇದು ಹೇಗೆ ಎನ್ನುತ್ತೀರಾ? ಇದಕ್ಕೆ ಉತ್ತರ ನಾವು ಕೊಡುತ್ತೇವೆ. ರಿಯಲ್ ಎಸ್ಟೇಟ್‌ನಲ್ಲಿ ಫ್ರಾಕ್ಷನಲ್ ಓನರ್‌ಶಿಪ್ ಆಧಾರದಲ್ಲಿ ಹೂಡಿಕೆ ಮಾಡಿ ಹಣ ಗಳಿಸಲು ಸಾಧ್ಯವಿದೆ.ಫ್ರಾಕ್ಷನಲ್ ಓನರ್‌ಶಿಪ್ ಎಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಇದರಲ್ಲಿ ನೀವು ಎಷ್ಟು ರಿಟರ್ನ್ ಗಳಿಸಬಹುದು ಎಂದು ನೋಡೋಣ ಬನ್ನಿ.
ಇಡೀ ಆಸ್ತಿ ಖರೀದಿ ಮಾಡದೇ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಒಂದು ವಿಧಾನವೇ ಫ್ರಾಕ್ಷನಲ್ ಓನರ್‌ಶಿಪ್. ಒಂದು ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡಲು ಹಲವು ಖರೀದಿದಾರರು ಒಟ್ಟಾಗುತ್ತಾರೆ. ಇದು ಸಾಮಾನ್ಯವಾಗಿ ಕಮರ್ಷಿಯಲ್ ಅಥವಾ ವೆಕೇಶನ್ ಹೋಮ್ ಖರೀದಿ ವಿಷಯದಲ್ಲಿ ಆಗುತ್ತದೆ. ಪ್ರತಿ ಖರೀದಿದಾರರಿಗೂ ಪ್ರಾಪರ್ಟಿಯಲ್ಲಿ ಒಂದಷ್ಟು ಭಾಗದ ಮಾಲೀಕತ್ವ ಸಿಗುತ್ತದೆ.

ಉದಾಹರಣೆಗೆ, ಮೂರು ಕೋಟಿ ರೂ. ಮೌಲ್ಯದ ಪ್ರಾಪರ್ಟಿ ಇದ್ದರೆ, ಒಬ್ಬ ಸಾಮಾನ್ಯ ಮನುಷ್ಯ ಅದನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಫ್ರಾಕ್ಷನಲ್ ಓನರ್‌ಶಿಪ್ ಮಾಡಿದರೆ 10 ಜನರು ಒಟ್ಟಾಗಿ ಇದರಲ್ಲಿ ಹೂಡಿಕೆ ಮಾಡಬಹುದು. ಇದರಿಂದ, ಪ್ರತಿ ವ್ಯಕ್ತಿಯ ಹೂಡಿಕೆ ವೆಚ್ಚ 30 ಲಕ್ಷ ರೂ. ಆಗುತ್ತದೆ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಅವರಿಗೆ 10% ಪಾಲು ಸಿಗುತ್ತದೆ.
ಹಲವು ಫ್ರಾಕ್ಷನಲ್ ಓನರ್‌ಶಿಪ್ ಪ್ಲಾಟ್‌ಫಾರಂಗಳು ಈ ಅನುಕೂಲವನ್ನು ಒದಗಿಸುತ್ತವೆ. ಸ್ಟ್ರಾಟಾ, ಎಚ್‌ಬಿಟ್ಸ್, ಪ್ರಾಪರ್ಟಿಶೇರ್ ಮತ್ತು ಬಿಹೈವ್ ಸೇರಿದಂತೆ ಹಲವು ಪ್ಲಾಟ್‌ಫಾರಂಗಳು ಈ ವಲಯದಲ್ಲಿವೆ. ಸಾಮಾನ್ಯವಾಗಿ, ಹೂಡಿಕೆ 10 ರಿಂದ 25 ಲಕ್ಷ ರೂ.ವರೆಗೆ ಆಗುತ್ತದೆ. ಇಂಥ ವ್ಯವಸ್ಥೆಯಲ್ಲಿ ಈ ಪ್ಲಾಟ್‌ಫಾರಂಗಳು ಪ್ರಾಪರ್ಟಿ ನಿರ್ವಹಣೆ ಮಾಡುತ್ತವೆ, ಮೇಂಟೆನೆನ್ಸ್ ವೆಚ್ಚವನ್ನು ಕವರ್ ಮಾಡುತ್ತವೆ ಮತ್ತು ಬಾಡಿಗೆ ಆದಾಯವನ್ನು ಹೂಡಿಕೆದಾರರಿಗೆ ಹಂಚಿಕೆ ಮಾಡುತ್ತವೆ.
ಆದರೆ, ಫ್ರಾಕ್ಷನಲ್ ಓನರ್‌ಶಿಪ್ ಪ್ಲಾಟ್‌ಫಾರಂಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಫ್ರಾಕ್ಷನ್ ಓನರ್‌ಶಿಪ್ ಪ್ಲಾಟ್‌ಫಾರಂಗಳು ಖಾಸಗಿ ನಿಯಮಿತ ಕಂಪನಿಯನ್ನು ಕ್ರಿಯೇಟ್ ಮಾಡುತ್ತವೆ. ಇದನ್ನು ಸ್ಪೆಷಲ್ ಪರ್ಪಸ್ ವೆಹಿಕಲ್ ಅಥವಾ ಎಸ್‌ಪಿವಿ ಎಂದು ಕರೆಯಲಾಗುತ್ತದೆ. ಪ್ರಾಪರ್ಟಿ ಮೌಲ್ಯದಷ್ಟು ಹಣವನ್ನು ಹೂಡಿಕೆದಾರರಿಂದ ಈ ಎಸ್‌ಪಿವಿ ಸಂಗ್ರಹಿಸಿ, ಪ್ರಾಪರ್ಟಿ ಖರೀದಿ ಮಾಡುತ್ತದೆ. ಸೆಲ್ಲರ್ ಮತ್ತು ಎಸ್‌ಪಿವಿ ಮಧ್ಯೆ ಪ್ರಾಪರ್ಟಿ ರಿಜಿಸ್ಟ್ರೇಶನ್ ನಡೆಯುತ್ತದೆ. ಹೂಡಿಕೆದಾರರು ಅಥವಾ ಖರೀದಿದಾರರು ಈ ಕಂಪನಿಯ ಷೇರುದಾರರಾಗುತ್ತಾರೆ.
ಇದರಲ್ಲಿ ಲಾಭ ನಷ್ಟ ಎರಡು ಇದೆ. ಮಾಲೀಕತ್ವ ನಿಮ್ಮ ಬಳಿ ಸಂಪೂರ್ಣವಾಗಿ ಇರುವುದಿಲ್ಲ.. ಆದರೆ ರಿಯಲ್ ಎಸ್ಟೇಟ್ ವಲಯದ ಬೆಳವಣಿಗೆ ಲಾಭವನ್ನು ನೀವು ಇಲ್ಲಿ ಪಡೆದುಕೊಳ್ಳಬಹುದು.


Click it and Unblock the Notifications