ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ (ಜುಲೈ 31ರ ತನಕ) ಬಜಾಜ್ ಫೈನಾನ್ಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅತಿ ಹೆಚ್ಚು ಗಳಿಕೆ ಕಂಡಿವೆ. ಒಟ್ಟಾರೆ 8 ಕಂಪನಿಗಳ ಮಾರುಕಟ್ಟೆ ಮೌಲ್ಯ ಚೇತರಿಕೆ ಕಂಡಿದೆ.
ಕಳೆದ ವಾರ ಎಲ್ಲಾ ಟಾಪ್ 10 ಕಂಪನಿಗಳ 8 ಕಂಪನಿಗಳಿಂದ ಒಟ್ಟಾರೆ 1,91,622.95 ಕೋಟಿ ರು ಮೌಲ್ಯ ಹೆಚ್ಚಳವಾಗಿದೆ. ದೇಶದ ಅತಿ ದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಾಭವನ್ನು ದಾಖಲಿಸಿದೆ. ಬಜಾಜ್ ಫೈನಾನ್ಸ್ ಟಾಪ್ ಗೇನರ್ ಆಗಿದೆ.
ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಆರ್ಥಿಕ ಪರಿಸ್ಥಿತಿ ಕುರಿತ, ಆಮದು -ರಫ್ತು ನಿರ್ಬಂಧ, ಜಿಎಸ್ಟಿ ಸಭೆ, ಸಮ್ಮೇಳನ ನಂತರ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸವಾಗಿದೆ.
ಕಳೆದ ವಾರದಲ್ಲಿ 30 ಷೇರುಗಳ ಬಾಂಬೆ ಮಾರುಕಟ್ಟೆ ಎಕ್ಸ್‌ಚೇಂಜ್‌ನಲ್ಲಿ ಸೆನ್ಸೆಕ್ಸ್ 1,498.02 ಅಂಕ ಅಥವಾ ಶೇಕಡ 2.67ರಷ್ಟು ಏರಿಕೆಯನ್ನು ಕಂಡಿದೆ. ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾದರು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..
ಟಾಪ್ ಕಂಪನಿಗಳು ಯಾವುದು?
ಬಜಾಜ್ ಫೈನಾನ್ಸ್ ಮಾರುಕಟ್ಟೆ ಮೌಲ್ಯವು ಅಧಿಕ ಹೆಚ್ಚಳವಾಗಿದೆ. ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಬಜಾಜ್ ಫೈನಾನ್ಸ್ ಮಾರುಕಟ್ಟೆ ಮೌಲ್ಯವು ರೂಪಾಯಿ 57,673.19 ಕೋಟಿಯಿಂದ ರೂಪಾಯಿ 4,36,447.88 ಕೋಟಿಗೆ ಏರಿಕೆಯಾಗಿದೆ. ಇನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮಾರುಕಟ್ಟೆ ಮೌಲ್ಯವು ರೂಪಾಯಿ 47,494.49 ಕೋಟಿಯಿಂದ ರೂಪಾಯಿ 12,07,779.68 ಕೋಟಿಗೆ ಏರಿಕೆಯಾಗಿದೆ.
ಈ ಕಂಪನಿಗಳ ಮಾರುಕಟ್ಟೆ ಮೌಲ್ಯ ಏರಿಕೆ
ಬಜಾಜ್ ಫೈನಾನ್ಸ್, ಟಿಸಿಎಸ್ ಮಾರುಕಟ್ಟೆ ಮೌಲ್ಯ ಏರಿಕೆ ಕಂಡಿರುವ ಸಂದರ್ಭದಲ್ಲೇ ಉಳಿದ ಪ್ರಮುಖ ಆರು ಕಂಪನಿಗಳ ಮಾರುಕಟ್ಟೆ ಮೌಲ್ಯವು ಹೆಚ್ಚಳವಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಹಿಂದಿನ ಮಾರುಕಟ್ಟೆ ಮೌಲ್ಯ ರೂಪಾಯಿ 7,97,251.18 ಕೋಟಿಗೆ ರೂಪಾಯಿ 23,481.09 ಕೋಟಿ ಸೇರ್ಪಡೆಯಾಗಿದೆ. ಇನ್ನು ಇನ್ಫೋಸಿಸ್ ಕಂಪನಿಯ ಈ ಹಿಂದಿನ ಮಾರುಕಟ್ಟೆ ಮೌಲ್ಯ ರೂಪಾಯಿ 6,52,012.91 ಕೋಟಿಗೆ ರೂಪಾಯಿ 18,219 ಕೋಟಿ ಸೇರ್ಪಡೆಯಾಗಿದೆ. ಎಚ್‌ಡಿಎಫ್‌ಸಿ ಮಾರುಕಟ್ಟೆ ಮೌಲ್ಯ ರೂಪಾಯಿ 14,978.42 ಕೋಟಿ ಏರಿಕೆಯಾಗಿ ರೂಪಾಯಿ 4,31,679.65 ಕೋಟಿಗೆ ತಲುಪಿದೆ.
ಮಾರುಕಟ್ಟೆ ಮೌಲ್ಯ ಏರಿಕೆಯಾದ ಇತರೆ ಸಂಸ್ಥೆ
ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾರುಕಟ್ಟೆ ಮೌಲ್ಯವು ಕೂಡಾ ಹೆಚ್ಚಳವಾಗಿದೆ. ಎಸ್‌ಬಿಐ ಮಾರುಕಟ್ಟೆ ಮೌಲ್ಯ 12,940.69 ಕೋಟಿ ರೂಪಾಯಿ ಏರಿಕೆಯಾಗಿ, 4,71,397.99 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಐಸಿಐಸಿಐ ಬ್ಯಾಂಕ್ ಮಾರುಕಟ್ಟೆ ಮೌಲ್ಯವು 12,873.62 ಕೋಟಿ ರೂಪಾಯಿ ಅಧಿಕವಾಗಿ 5,69,400.43 ಕೋಟಿ ರೂಪಾಯಿ ತಲುಪಿದೆ. ದೇಶದ ಅತೀ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾರುಕಟ್ಟೆ ಮೌಲ್ಯ ರೂಪಾಯಿ 3,962.45 ಕೋಟಿ ಹೆಚ್ಚಳವಾಗಿ ರೂಪಾಯಿ 16,97,208.18 ಕೋಟಿಗೆ ತಲುಪಿದೆ.
ಯಾವ ಸಂಸ್ಥೆಗಳ ಮಾರುಕಟ್ಟೆ ಮೌಲ್ಯ ಕುಸಿತ
ಈ ನಡುವೆ ಭಾರತದ ಅತೀ ದೊಡ್ಡ ಜೀವ ವಿಮಾ ಸಂಸ್ಥೆ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಾರುಕಟ್ಟೆ ಮೌಲ್ಯವು ಕುಸಿತವಾಗಿದೆ. ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಾ ಬಂದಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು ಸುಮಾರು ರೂಪಾಯಿ 7,020.75 ಕುಸಿತ ಕಂಡು ರೂಪಾಯಿ 4,28,739.97 ಕೋಟಿಗೆ ತಲುಪಿದೆ. ಇನ್ನು ಹಿಂದೂಸ್ತಾನ್ ಯೂನಿಲಿವರ್ ಮಾರುಕಟ್ಟೆ ಮೌಲ್ಯ ಮತ್ತೆ ಈ ವಾರವು ಕುಸಿದಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯವು ರೂಪಾಯಿ 810.61 ಕೋಟಿ ಕುಸಿದು ರೂಪಾಯಿ 6,19,551.97ಕ್ಕೆ ತಲುಪಿದೆ.
ಟಾಪ್ 10 ಕಂಪನಿಗಳು
ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ ಎನಿಸಿಕೊಂಡಿದೆ. ಅದರ ಬಳಿಕ ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ, ಎಲ್‌ಐಸಿ ಪ್ರಮುಖ ಟಾಪ್ 10 ಕಂಪನಿಗಳು ಆಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications