ಅನೇಕರು ಇನ್ನೂ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಮಾರ್ಗದಲ್ಲಿದ್ದಾರೆ. ಅದರಲ್ಲೂ ಮುಖ್ಯವಾಗಿ 25-35 ವಯಸ್ಸಿನವರು ಹೊಸ ಹೊಸ ವೃತ್ತಿಯ ಹುಡುಕಾಡುತ್ತಿದ್ದಾರೆ. ಈ ನಡುವೆ ಅವನಿ ದಾವ್ಡಾ ಟಾಟಾ ಗ್ರೂಪ್ ಕಂಪನಿಯ ಅತ್ಯಂತ ಕಿರಿಯ ಸಿಇಒ ಆಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವನಿ ಟಾಟಾ ಗ್ರೂಪ್‌ನ ಸ್ಟಾರ್‌ಬಕ್ಸ್ ಸಿಇಒ ಪಾತ್ರವನ್ನು ವಹಿಸಿದಾಗ 33 ವರ್ಷ!
ಮೂಲತಃ ಮುಂಬೈನವರಾದ ಅವನಿ ದಾವ್ಡಾ ಪ್ರತಿಷ್ಠಿತ ಎಚ್. ಆರ್ ಕಾಲೇಜ್ ಆಫ್ ಕಾಮರ್ಸ್ ಆಂಡ್ ಎಕನಾಮಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ. ಅವನಿ ನಾರ್ಸಿ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಬ್ಯುಜಿನೆಸ್ ಅಡ್ಮಿನೆರೇಷನ್ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಟಾಟಾ ಗ್ರೂಪ್‌ನ ಅತೀ ಕಿರಿಯ ಸಿಇಒ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಅವನಿ ದಾವ್ಡಾ ವೃತ್ತಿ ಜೀವನ
ಅವನಿ ದಾವ್ಡಾ 2002 ರಲ್ಲಿ ಟಾಟಾ ಅಡ್ಮಿನಿಸ್ಟ್ರೇಟಿವ್ ಸರ್ವಿಸಸ್ (ಟಿಎಎಸ್) ಮೂಲಕ ಟಾಟಾ ಗ್ರೂಪ್‌ಗೆ ಎಂಟ್ರಿ ನೀಡಿದ್ದಾರೆ. ಟಾಟಾ ಕುಟುಂಬದ ಸಂಸ್ಥೆಗಳಲ್ಲಿ ತನ್ನ ವೃತ್ತಿ ಜೀವನವನ್ನು ಮುಂದುವರಿಸಲು ಅಲ್ಲಿಂದ ಅವನಿ ದಾವ್ಡಾ ಆರಂಭಿಸಿದ್ದಾರೆ. ವರ್ಷಗಳಲ್ಲಿ, ತಾಜ್ ಐಷಾರಾಮಿ ಹೋಟೆಲ್ಸ್ (ಐಎಚ್‌ಸಿಎಲ್) ಮತ್ತು ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ ಲಿಮಿಟೆಡ್ ಸೇರಿದಂತೆ ಅವನಿ ಟಾಟಾ ಕಂಪನಿಯ ಹಲವಾರು ಅಂಗಸಂಸ್ಥೆಗಳಲ್ಲಿ ದುಡಿದಿದ್ದಾರೆ.
ಆರ್ ಕೆ ಕೃಷ್ಣ ಕುಮಾರ್ (ನಿರ್ದೇಶಕರು, ಟಾಟಾ ಸನ್ಸ್) ಜೊತೆ ಅವನಿ ದಾವ್ಡಾ ನಿಕಟವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಅವನಿ ದಾವ್ಡಾಗೆ ಯಶಸ್ಸಿನ ಪ್ರಯಾಣದಲ್ಲಿ ಆರ್ ಕೆ ಕೃಷ್ಣ ಕುಮಾರ್ ಮಾರ್ಗದರ್ಶನ ನೀಡಿದ್ದಾರೆ. ಟಾಟಾ ಗ್ಲೋಬಲ್ ಬೆವರೇಜಸ್ ಲಿಮಿಟೆಡ್ ಮತ್ತು ಸ್ಟಾರ್‌ಬಕ್ಸ್ ಕಾಫಿ ಕಂಪನಿಯ ನಡುವಿನ ಜಂಟಿ ಉದ್ಯಮವನ್ನು ಮೇಲ್ವಿಚಾರಣೆ ಮಾಡಲು ಅವನಿಯನ್ನು ಕುಮಾರ್ ಆಯ್ಕೆ ಮಾಡಿದರು. ಈಗ ಅವನಿ ದಾವ್ಡಾ ಟಾಟಾ ಸ್ಟಾರ್‌ಬಕ್ಸ್‌ನ ಸಿಇಒ ಆಗಿದ್ದಾರೆ.
ಅವನಿ ಟಾಟಾ ಸ್ಟಾರ್‌ಬಕ್ಸ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಾಯಕತ್ವವನ್ನು ವಹಿಸಲು ಆರಂಭಿಸಿದ್ದು, ಇದು ಸ್ಟಾರ್‌ಬಕ್ಸ್ ಕಾಫಿ ಕಂಪನಿ ಮತ್ತು ಟಾಟಾ ಗ್ಲೋಬಲ್ ಬೆವರೇಜಸ್ ಲಿಮಿಟೆಡ್ ನಡುವಿನ 50/50 ಜಂಟಿ ಉದ್ಯಮವಾಗಿದೆ. ಅವನಿ ದಾವ್ಡಾ ತಮ್ಮ ನಾಯಕತ್ವದ ಮೂಲಕ ಅಭಿವೃದ್ಧಿ ಮತ್ತು ಯಶಸ್ಸನ್ನು ಕಂಡಿದ್ದಾರೆ.
ಅವನಿ ನಾಯಕತ್ವದಲ್ಲಿ ಮೂರು ವರ್ಷಗಳಲ್ಲಿ ಭಾರತದಾದ್ಯಂತ 85 ಸ್ಟಾರ್‌ಬಕ್ಸ್ ಮಳಿಗೆಗೆ ಹೆಚ್ಚಳವಾಗಿದೆ, ವಿಸ್ತರಣೆಯಾಗಿದೆ. ಆರು ಪ್ರಮುಖ ಮೆಟ್ರೋ ನಗರಗಳಲ್ಲಿ ಸ್ಟಾರ್‌ಬಕ್ಸ್ ಸ್ಥಾಪನೆಗೊಂಡಿದೆ. ಹಾಗೆಯೇ ಕಾಫಿ ಎಂದರೆ ಸ್ಟಾರ್‌ಬಕ್ಸ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.
ಮಹಿಳೆಯರ ನಾಯಕತ್ವದ ಬಗ್ಗೆ ಅವನಿ ದಾವ್ಡಾ ಹೇಳುವುದೇನು?
ನಾಯಕತ್ವದಲ್ಲಿ ಮಹಿಳೆಯರ ಪಾತ್ರದ ಕುರಿತು ಮಾತನಾಡಿದ ಅವನಿ ದಾವ್ಡಾ, "ನೀವು ಟಾಟಾ ಗ್ರೂಪ್ ಅನ್ನು ನೋಡಿದರೆ, ಇಲ್ಲಿ ಹಲವಾರು ಕ್ಷೇತ್ರಗಳಲ್ಲಿ ನಾಯಕತ್ವದಲ್ಲಿರುವವರು ಮಹಿಳೆಯರು ಆಗಿರುವುದನ್ನು ನೀವು ಕಾಣಬಹುದಾಗಿದೆ. ಸ್ಟಾರ್‌ಬಕ್ಸ್, ವಿಶೇಷವಾಗಿ, ನನ್ನ ಪ್ರಕಾರ ಸಮಾನರ ಜಗತ್ತು," ಎಂದು ತಿಳಿಸಿದ್ದಾರೆ.
ಟಾಟಾ ಸ್ಟಾರ್‌ಬಕ್ಸ್‌ನ ಸಿಇಒ ಆಗಿ ಯಶಸ್ವಿಯಾದ ನಂತರ, ಅವನಿ ದಾವ್ಡಾ ಹೊಸ ಸವಾಲನ್ನು ಪ್ರಾರಂಭಿಸಿದರು. ಅವನಿ ಗೋದ್ರೇಜ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಗೋದ್ರೇಜ್ ನೇಚರ್ಸ್ ಬಾಸ್ಕೆಟ್ ಲಿಮಿಟೆಡ್‌ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಪಾತ್ರವನ್ನು ವಹಿಸಿಕೊಂಡರು. ಇಲ್ಲಿ 2016 ರಿಂದ ವ್ಯಾಪಾರವನ್ನು ಪರಿವರ್ತಿಸುವ ಮೂಲಕ ಮತ್ತೊಮ್ಮೆ ತಮ್ಮ ಅಸಾಧಾರಣ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಅಂತಿಮವಾಗಿ ನವೆಂಬರ್ 2019 ರಲ್ಲಿ ಕಂಪನಿಗೆ ವಿದಾಯ ಹೇಳುವ ಮೊದಲು ತನ್ನ ಅಧಿಕಾರಾವಧಿಯನ್ನು ಕೊನೆಗೊಳಿಸಿದರು.


Click it and Unblock the Notifications