ಭಾರತೀಯ ಮೂಲದ ಅತ್ಯಂತ ಪ್ರಭಾವಿ ಟೆಕ್ ಉದ್ಯಮಿಯಾಗಿರುವ ಜಯಶ್ರೀ ಉಳ್ಳಾಲ್ ಹೆಸರನ್ನು ಗೂಗಲ್‌ನ ಸುಂದರ್ ಪಿಚ್ಚೈ, ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ಹಾಗೂ ಯೂಟ್ಯೂಬ್‌ನ ನೀಲ್ ಮೋಹನ್‌ನಂಥವರ ಸಾಲಿನಲ್ಲಿ ಪರಿಗಣಿಸಲಾಗುತ್ತಿದೆ. ಜಯಶ್ರೀ ಉಳ್ಳಾಲ್ ಅವರು ಅರಿಸ್ಟಾ ನೆಟ್‌ವರ್ಕ್‌ನ ಅಧ್ಯಕ್ಷರು ಹಾಗೂ ಸಿಇಒ ಆಗಿ 2008ರಿಂದ ಕಂಪೆನಿಗೆ ನೆರವಾಗುತ್ತಿದ್ದಾರೆ. ಅವರು ಈ ಕಂಪೆನಿಗೆ ಸೇರಿದಾಗ 50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದ್ದು, ಯಾವುದೇ ಆದಾಯ ಕೂಡ ಗಳಿಸುತ್ತಿರಲಿಲ್ಲ.
ಉಳ್ಳಾಲ್ ಅವರು ಫೋರ್ಬ್ಸ್‌ನ 2023 ಫೆ.20 ವರದಿ ಪ್ರಕಾರ ನಿವ್ವಳ 2.2 ಬಿಲಿಯನ್ ಡಾಲರ್(18,199ಕೋಟಿ ರೂ.ಗಳ) ಆಸ್ತಿ ಹೊಂದಿದ್ದಾರೆ. ಇದು ಸಿಇಒ ಉಳ್ಳಾಲ್ ಅವರನ್ನು ಅಮೆರಿಕದ ಸ್ವಯಂ ನಿರ್ಮಿತ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರನ್ನಾಗಿ ಮಾಡಿದೆ. ಅವರ ಈ ಸಂಪತ್ತು ಅರಿಸ್ಟಾ ನೆಟ್‌ವರ್ಕ್‌ನಲ್ಲಿ ಹೊಂದಿರುವ ಶೇ.5ರಷ್ಟು ಷೇರುಗಳ ಪಾಲಿನಿಂದ ಬರುತ್ತಿದೆ. ಜಯಶ್ರೀ ಉಳ್ಳಾಲ್ ತಮ್ಮ ಆಸ್ತಿಯ ಒಂದು ಪಾಲನ್ನು ಇಬ್ಬರು ಮಕ್ಕಳು, ಸೊಸೆ ಹಾಗೂ ಸೋದರಳಿಯನಿಗೆ ಮೀಸಲಿಟ್ಟಿದ್ದಾರೆ.
ಜಯಶ್ರಿ ಉಳ್ಳಾಲ್ ಲಂಡನ್‌ನಲ್ಲಿ ಜನಿಸಿದರೂ ಬೆಳೆದಿದ್ದು ಭಾರತದಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ನವದೆಹಲಿಯಲ್ಲಿ ಮುಗಿಸಿ ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಟ್ ಯೂನಿವರ್ಸಿಟಿಯಿಂದ ಬಿ.ಎಸ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಸಾಂಟಾ ಕ್ಲಾರಾ ಯೂನಿವರ್ಸಿಟಿಯಿಂದ ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಜಯಶ್ರೀ ಉಳ್ಳಾಲ್ ವೃತ್ತಿಜೀವನದ ಬಗ್ಗೆ ತಿಳಿಯಿರಿ
ಜಯಶ್ರೀ ಉಳ್ಳಾಲ್ ವೃತ್ತಿಜೀವನವನ್ನು ಗ್ರಾಫಿಕ್ ಕಾರ್ಡ್ ಮೇಜರ್ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್(ಎಎಂಡಿ)ಗೆ ಸೇರುವ ಮೂಲಕ ಪ್ರಾರಂಭಿಸಿದರು. ಬಳಿಕ ಫೇರ್ ಚೈಲ್ಡ್ ಸೆಮಿ ಕಂಡಕ್ಟರ್, ಉಂಗರ್ ಮನ್- ಬಾಸ್ ಮತ್ತು 1993ರಲ್ಲಿ ಸಿಸ್ಕೋ ಸ್ವಾಧೀನಕೊಳಪಟ್ಟ ಕ್ರೆಸೆಂಡೋ ಕಮ್ಯೂನಿಕೇಷನ್ಸ್‌ನಲ್ಲೂ ಸೇವೆ ಸಲ್ಲಿಸಿದರು. ಇದಾದ ಬಳಿಕ ಸಿಸ್ಕೊಗಾಗಿ 20 ವಿಲೀನ ಹಾಗೂ ಸ್ವಾಧೀನಗಳ ಮೇಲ್ವಿಚಾರಣೆ ಮಾಡಿದರು. ಸಿಸ್ಕೋದಲ್ಲಿ 15 ವರ್ಷಗಳ ಸುದೀರ್ಘ ವೃತ್ತಿಜೀವನ ಬಳಿಕ 2008ರಲ್ಲಿ ಅರಿಸ್ಟಾಗೆ ಸೇರ್ಪಡೆಗೊಂಡರು.
ಉಳ್ಳಾಲ್ ಈಗ 'ನೆಟ್‌ವರ್ಕಿಂಗ್ ಉದ್ಯಮ ಟಾಪ್ ಐದು ಪ್ರಭಾವಶಾಲಿ ವ್ಯಕ್ತಿಗಳು' ಹಾಗೂ 'ವಿಶ್ವದ ಅತ್ಯುತ್ತಮ ಸಿಇಒಗಳ ಪಟ್ಟಿ'ಯಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಅವರು 2014ರಲ್ಲಿ ಅರಿಸ್ಟಾವನ್ನು ಐಪಿಒಗೆ ತರುವಲ್ಲಿ ಯಶಸ್ವಿಯಾಗಿದ್ದರು. ಟಾಪ್ ಟೆಕ್ ಎಕ್ಸಿಕ್ಯೂಟೀವ್ ಆಗಿದ್ದ ವಿಜಯ್ ಉಳ್ಳಾಲ್‌ರನ್ನು ಜಯಶ್ರೀ ಮದುವೆಯಾಗಿದ್ದು, ಸದ್ಯ ಅವರು ವೆಂಚರ್ ಕ್ಯಾಪಿಟಲಿಸ್ಟ್ ಆಗಿದ್ದಾರೆ. ಈ ದಂಪತಿಗೆ ಇಬ್ಬರು ಪುತ್ರಿಯರು ಇದ್ದು, ಕ್ಯಾಲಿಫೋರ್ನಿಯಾದ ಸರಟೋಗಾದಲ್ಲಿ ನೆಲೆಸಿದ್ದಾರೆ. ಉಳ್ಳಾಲ್ ಅವರ ಸಹೋದರಿ ದಿ. ಸೂಸಿ ನಾಗ್‌ಪಾಲ್ ರಾಜಕಾರಣಿಯಾಗಿದ್ದು, ಯುಎಸ್‌ಎ ಸರಟೋಗಾ ಸಿಟಿ ಕೌನ್ಸಿಲ್ ಆಗಿದ್ದರು.


Click it and Unblock the Notifications