ಪ್ರಸ್ತುತ ಗೌತಮ್ ಅದಾನಿ ವಿಶ್ವದಾದ್ಯಂತ ಹೆಚ್ಚಾಗಿ ಸುದ್ದಿಯಾಗುತ್ತಿರುವ ವ್ಯಕ್ತಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆಯಿಂದ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ, ದೇಶದ ಅತೀ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಆದರೆ ಅದಾನಿ ಸಂಸ್ಥೆ ವಿರುದ್ಧ ಹಿಂಡನ್ ಬರ್ಗ್ ವರದಿ ಬಳಿಕ ಸ್ಟಾಕ್ ನಷ್ಟ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಈ ನಡುವೆ ಗೌತಮ್ ಅದಾನಿ ಹಿರಿಯ ಪುತ್ರ ಕರಣ್ ಅದಾನಿ ಕಳೆದ ಕೆಲವು ವರ್ಷಗಳಿಂದ ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದ್ದಾರೆ.
ಹೌದು ಪ್ರಸ್ತುತ ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿಯ ಹಿರಿಯ ಪುತ್ರ ಕರಣ್ ಅದಾನಿ ತಮ್ಮ ರೆಸ್ಯೂಮ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಿದ್ದಾರೆ. ಅಂದರೆ ಕಳೆದ ಕೆಲವು ವರ್ಷಗಳಿಂದ ಉದ್ಯೋಗ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದ್ದಾರೆ. ಕರಣ್ ಅದಾನಿ ಭಾರತದ ಉದ್ಯಮಿಯಾಗಿ ಬೆಳೆದಿದ್ದು, ಅದಾನಿ ಗ್ರೂಪ್‌ನ ಪ್ರಮುಖ ವ್ಯಕ್ತಿಯಾಗಿದ್ದಾರೆ. 2016ರಲ್ಲಿ ಅದಾನಿ ಪೋರ್ಟ್ಸ್ & ಎಸ್‌ಇಜೆಡ್ ಲಿಮಿಟೆಡ್‌ನ ಸಿಇಒ ಆಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಕರಣ್ ಅದಾನಿ ಆದಾಯ ಶಿಕ್ಷಣ ವೃತ್ತಿ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

ಕರಣ್ ಅದಾನಿ ಯಾರು?
ಕರಣ್ ಅದಾನಿ ಗೌತಮ್ ಅದಾನಿ ಹಾಗೂ ಪ್ರೀತಿ ಅದಾನಿಯ ಹಿರಿಯ ಪುತ್ರನಾಗಿದ್ದು 1987, ಏಪ್ರಿಲ್ 7ರಂದು ಗುಜರಾತ್‌ನಲ್ಲಿ ಜನಿಸಿದ್ದಾರೆ. 2009ರಲ್ಲಿ ಮ್ಯಾನೆಜ್‌ಮೆಂಟ್ ಸ್ಕೂಲ್ ಆಫ್ ಪರ್ಡ್ಯೂ ಯೂನಿವರ್ಸಿಟಿಯಲ್ಲಿ ಇಕಾನಮಿಕ್ಸ್‌ನಲ್ಲಿ (ಅರ್ಥಶಾಸ್ತ್ರ) ಪದವಿ ಪಡೆದಿದ್ದಾರೆ. ಮುಂಬೈ ಮೂಲದ ವಕೀಲ ಸಿರಿಲ್ ಶ್ರಾಫ್‌ನ ಪುತ್ರಿ ಪರಿಧಿ ಶ್ರಾಫ್‌ರನ್ನು ಕರಣ್ ವಿವಾಹವಾಗಿದ್ದಾರೆ. ಕರಣ್‌ಗೆ ಒಂದು ಹೆಣ್ಣು ಮಗುವಿದೆ. 2009ರಿಂದ ಕರಣ್, ಅದಾನಿ ಪೋರ್ಟ್ಸ್‌ನ ಹಲವಾರು ಕಾರ್ಯಗಳನ್ನು ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಅದಾನಿ ಪೋರ್ಟ್ಸ್‌ನ ಜವಾಬ್ದಾರಿ ಕರಣ್ ಅದಾನಿಗಿದೆ.
ಕರಣ್ ಅದಾನಿ ನಿವ್ವಳ ಆದಾಯವೆಷ್ಟಿದೆ?
ಅಂದಾಜಿನ ಪ್ರಕಾರ ಕರಣ್ ಅದಾನಿಯ ನಿವ್ವಳ ಆದಾಯವು 1.2 ಬಿಲಿಯನ್ ಡಾಲರ್ ಅಥವಾ 87.8 ಬಿಲಿಯನ್ ರೂಪಾಯಿ ಆಗಿದೆ. ಅದಾನಿ ಪೋರ್ಟ್ಸ್ & ಎಸ್‌ಇಜೆಡ್ ಲಿಮಿಟೆಡ್‌ನ ಸಿಇಒ ಆಗಿದ್ದಾರೆ. ಹಾಗೆಯೇ 16,151 ಕೋಟಿ ರೂಪಾಯಿ ಆದಾಯವನ್ನು ಹೊಂದಿರುವ ಅಂಬುಜಾ ಸಿಮೆಂಟ್ಸ್‌ನ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅದಾನಿ ಗ್ರೂಪ್‌ನ ವಿಮಾನ ನಿಲ್ದಾಣ ಯೋಜನೆಯಲ್ಲಿ ಯೋಜನೆಯ ನಿರ್ವಾಹಕರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ.
ಕರಣ್ ಅದಾನಿ ಮುಂಬೈ ಮೂಲದ ಭಾರತದ ಸಿಮೆಂಟ್ ಉತ್ಪಾದನಾ ಸಂಸ್ಥೆಯಾದ ಎಸಿಸಿ ಲಿಮಿಟೆಡ್‌ನ ಚೇರ್‌ಮನ್ ಕೂಡಾ ಹೌದು. ಹಾಗೆಯೇ ದೇಶದ ಉನ್ನತಿಗಾಗಿ ಮಾಡಲಾದ ಹಲವಾರು ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಯೋಜಿಸಿದ್ದಾರೆ. ಅಲ್ಲದೆ, ಅವರು ಅನೇಕ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದಾರೆ. ತಾನು ಕೂಡಾ ರಕ್ತದಾನ ಮಾಡುತ್ತಾ ಬಂದಿದ್ದಾರೆ.
ಕರಣ್ ಅದಾನಿಯನ್ನು "ನಾಳೆಯ (ಭವಿಷ್ಯದ) ಉದ್ಯಮಿ" Tycoons of Tomorrow ಎಂಬ 2008 ರ ಫೋರ್ಬ್ಸ್ ಇಂಡಿಯಾದ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಅದಾನಿ ಪೋರ್ಟ್ಸ್ & ಎಸ್‌ಇಜೆಡ್ ಲಿಮಿಟೆಡ್‌ನ ಪರವಾಗಿ ಬೆಳಯುತ್ತಿರುವ ಸಂಸ್ಥೆಯ ಅಡಿಯಲ್ಲಿ ಎಕನಾಮಿಕ್ ಟೈಮ್ಸ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಫೋರ್ಬ್ಸ್ ಪ್ರಕಾರ, ಗೌತಮ್ ಅದಾನಿ ಮತ್ತು ಅವರ ಕುಟುಂಬದ ಅಂದಾಜು ನಿವ್ವಳ ಆದಾಯವು 150 ಬಿಲಿಯನ್ ಡಾಲರ್ ಆಗಿದೆ.


Click it and Unblock the Notifications