ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಹಾಗೂ ಬಿಲಿಯನೇರ್ ರತನ್ ಟಾಟಾ ಜಗತ್ತಿನಾದ್ಯಂತ ಚಿರಪರಿಚಿತ ಹೆಸರು. ರತನ್ ಟಾಟಾ ಅವರು ಉದ್ಯಮಿಗಳ ಕುಟುಂಬಕ್ಕೆ ಸೇರಿದ್ದರೂ, ಟಾಟಾ ಕುಟುಂಬದ ಇತರ ಸದಸ್ಯರ ಬಗ್ಗೆ ಭಾರತದಲ್ಲಿ ಜನರಿಗೆ ಅಷ್ಟೊಂದು ತಿಳಿದಿಲ್ಲ. ಸಾಮಾನ್ಯವಾಗಿ ಟಾಟಾ ಕುಟುಂಬದ ಸದಸ್ಯರು ಮುಖ್ಯ ವಾಹಿನಿಯಿಂದ ದೂರ ಉಳಿಯಲು ಬಯಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.
ಟಾಟಾದ ಮುಂದಿನ ಪೀಳಿಗೆಯು ಸಾಮಾನ್ಯವಾಗಿ ಸಾರ್ವಜನಿಕ ಜೀವನದಲ್ಲಿ ಹೆಚ್ಚು ಕಾಣಿಸುವುದಿಲ್ಲ ಹಾಗೂ ಅವರೆಲ್ಲ ಟಾಟಾ ಗ್ರೂಪ್ ಕಂಪೆನಿಗಳಲ್ಲಿ ಬಹಳ ಕೆಳ ಹಂತದ ಪ್ರೊಫೈಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೂ ಕೆಲವು ತಿಂಗಳ ಹಿಂದೆ ರತನ್ ಟಾಟಾ ಅವರು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು, ಟಾಟಾ ಮೆಡಿಕಲ್ ಟ್ರಸ್ಟ್‌ನಲ್ಲಿ ಮೂವರು ಒಡಹುಟ್ಟಿದವರನ್ನು ಸೇರಿಸಿಕೊಂಡಿದ್ದಾರೆ.

ಲೇಹ್ ಟಾಟಾ, ಮಾಯಾ ಟಾಟಾ ಮತ್ತು ನೆವಿಲ್ಲೆ ಟಾಟಾ ಎಂಬವರು ಈ ಟಾಟಾ ಗ್ರೂಪ್ ಉತ್ತರಾಧಿಕಾರಿಗಳಾಗಿ ಪ್ರಾಮುಖ್ಯತೆಯನ್ನು ನೀಡುವುದರಿಂದ ಈ ಕ್ರಮವು ಮಹತ್ವದ್ದಾಗಿದೆ.
ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ ಮಂಡಳಿಗೆ ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಅವರ ಮಕ್ಕಳಾದ ಲೇಹ್, ನೆವಿಲ್ಲೆ ಮತ್ತು ಮಾಯಾ ಅವರನ್ನು ಸೇರಿಸಿಕೊಂಡಿದೆ.
ಲೇಹ್ ಟಾಟಾ, ನೆವೆಲ್ಲೆ ಮತ್ತು ಮಾಯಾ ಅವರು ರತನ್ ಟಾಟಾ ಅವರ ನಾಯಕತ್ವದಲ್ಲಿ ಮುನ್ನಡೆಯಲಿದ್ದಾರೆ. ನೋಯೆಲ್ ಅವರು ರತನ್ ಟಾಟಾ ಅವರ ತಂದೆಯ ಕಡೆಯಿಂದ ಮಲ ಸಹೋದರ. ಜತೆಗೆ ಟಾಟಾ ಗ್ರೂಪ್‌ನ ಷೇರುದಾರರು ಆಗಿದ್ದಾರೆ.
ಲೇಹ್ ಟಾಟಾ ಅವರು ಯಾರು?
ಲೇಹ್ ಟಾಟಾ ಅವರು ನೋಯೆಲ್ ಅವರ ಹಿರಿಯ ಮಗಳು. ವರದಿಗಳ ಪ್ರಕಾರ, ಲೇಹ್ ಟಾಟಾ ಅವರು ಸ್ಪೈನ್‌ನ ಮ್ಯಾಡ್ರಿಡ್‌ನಲ್ಲಿರುವ ಐಇ ಬಿಸಿನೆಸ್ ಸ್ಕೂಲ್‌ನಲ್ಲಿ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಲೇಹ್ ಟಾಟಾ ಅವರು 2006ರಲ್ಲಿ ತಾಜ್ ಹೋಟೆಲ್ ರೆಸಾರ್ಟ್ ಮತ್ತು ಪ್ಯಾಲೇಸ್‌ಗಳಲ್ಲಿ ಸಹಾಯಕ ಮಾರಾಟ ಮ್ಯಾನೇಜರ್ ಆಗಿ ಕೆಲಸ ಪ್ರಾರಂಭಿಸುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.
ಟಾಟಾ ಹೋಟೆಲ್ಸ್‌ನಲ್ಲಿ ಅಭಿವೃದ್ಧಿ ಮತ್ತು ವಿಸ್ತರಣೆ ವಿಭಾಗದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಲೇಹ್ ಟಾಟಾ(37) ಅವರು ರತನ್ ಟಾಟಾ ಅವರ ಹಿರಿಯ ಸೊಸೆಯಾಗಿದ್ದು, ಮುಂಬೈಯ ಜೈ ಹಿಂದ್ ಕಾಲೇಜು ಹಳೇ ವಿದ್ಯಾರ್ಥಿನಿ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?



Click it and Unblock the Notifications