"ಲೀನಾ ನಾಯರ್" ಇವರು ಭಾರತೀಯ ಮೂಲದವರಾಗಿದ್ದು, ಫ್ರೆಂಚ್ ಲಕ್ಸುರಿ ಬ್ರ್ಯಾಂಡ್ "ಶನೆಲ್"ನ ಮೊದಲ ಮಹಿಳಾ ಸಿಇಒ ಆಗುವ ಮೂಲದ ಇತಿಹಾಸ ಬರೆದವರು. 52 ವರ್ಷದ ಇವರು ಈ ಹಿಂದೆ ಪ್ರತಿಷ್ಟಿತ ಸಂಸ್ಥೆ "ಯುನಿಲಿವರ್" ನಲ್ಲಿ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ(CHRO)ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಯುನಿಲಿವರ್ ನ CHRO ಹುದ್ದೆಗೆ ಜನವರಿ 2022 ರಲ್ಲಿ ರಾಜೀನಾಮೆ ಸಲ್ಲಿಸಿದ್ದ ಲೀನಾ ನಾಯರ್, "ಶನೆಲ್" ಸಿಇಒ ಆದ ಬಳಿಕ ಲಂಡನ್‌ನಲ್ಲಿ ನೆಲೆಸಿದ್ದಾರೆ.
ಲೀನಾ ನಾಯರ್ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದ್ದು, ತಮ್ಮ ಕಠಿಣ ಪರಿಶ್ರಮದಿಂದಲೇ ಮತ್ತು ಪ್ರತಿಭೆಯಿಂದಲೇ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದವರು. ಅವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ವಾಲ್ ಚಂದ್ ಕಾಲೇಜು ಆಫ್ ಇಂಜಿನಿಯರಿಂಗ್ ನಿಂದ ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿಕಮ್ಯೂನಿಕೇಶನ್ ಇಂಜಿನಿಯರಿಂಗ್ ಪದವಿ ಪಡೆದರು. ಜಮ್ ಷೆಡ್ಪುರದ XLRI 1992ರಲ್ಲಿ ಮಾನವ ಸಂಪನ್ಮೂಲ ವಿಷಯದಲ್ಲಿ ಎಂಬಿಎ ಪೂರ್ಣಗೊಳಿಸಿದರು.

ಲೀನಾ ನಾಯರ್ ಬಗ್ಗೆ ಅಧಿಕ ಮಾಹಿತಿ
ಇದಾದ ಬಳಿಕ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL)ನಲ್ಲಿ ಟ್ರೈನಿಯಾಗಿ ಸೇರ್ಪಡೆಗೊಂಡರು. ನಂತರ ಅದೇ ಸಂಸ್ಥೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ ಸಿಎಚ್ಆರ್ ಒ ಆಗಿ ಪದೋನ್ನತಿಗೊಂಡರು. ಈ ವೇಳೆ ಹಿಂದುಸ್ತಾನ ಲಿವರ್ ಸಂಸ್ಥೆಯ 90 ವರ್ಷಗಳ ಇತಿಹಾಸದಲ್ಲಿಅತ್ಯಂತ ಕಿರಿಯ ನಿರ್ದೇಶಕಿ ಹಾಗೂ ಆಡಳಿತ ಮಂಡಳಿಯಲ್ಲಿರೋ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ಶನೆಲ್ ಸೇರ್ಪಡೆಗೊಂಡರು.
ಲೀನಾ ನಾಯರ್ ಅವರು ಕೆ. ಕಾರ್ತಿಕೇಯನ್ ಅವರ ಪುತ್ರಿಯಾಗಿದ್ದು, ಕೈಗಾರಿಕೋದ್ಯಮಿಗಳಾದ ವಿಜಯ್ ಮೆನನ್ ಮತ್ತು ಸಚಿನ್ ಮೆನನ್ ಅವರ ಕಸಿನ್ ಆಗಿದ್ದಾರೆ. "ಶನೆಲ್" ಅನ್ನು 1910ರಲ್ಲಿ ಫ್ಯಾಶನ್ ದಂತಕಥೆ ಗೇಬ್ರಿಯಲ್ ಕೊಕೊ ಶನೆಲ್ ಸ್ಥಾಪಿಸಿದರು. ಟ್ವೀಡ್ ಸೂಟ್ ಗಳು, ಕ್ವಿಲ್ಟೆಡ್ ಹ್ಯಾಂಡ್ ಬ್ಯಾಗ್ ಗಳು ಮತ್ತು ಸುಗಂಧ ದ್ರವ್ಯಗಳಿಗೆ ಶನೆಲ್ ಲಕ್ಸುರಿಯಸ್ ಬ್ರ್ಯಾಂಡ್ ಹೆಸರುವಾಸಿಯಾಗಿದೆ. ಶನೆಲ್ ನ ವಾರ್ಷಿಕ ಆದಾಯ 2021ರ ವೇಳೆಯಲ್ಲಿ USD 15.6 ಬಿಲಿಯನ್‌ನಷ್ಟಿತ್ತು.
ಲೀನಾ ನಾಯರ್ ಅವರ ಸ್ಯಾಲರಿ ಪ್ಯಾಕೇಜ್ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ. ಆದರೆ ಅವರ ಸ್ಯಾಲರಿಯೂ ಸುಮಾರು 2 ಕೋಟಿ ರೂ.ಗಳಿಷ್ಟಿವೆ ಎಂದು ಕೆಲವೆಡೆ ವರದಿಯಾಗಿದೆ.
ಲೀನಾ ನಾಯರ್ ಅವರು ಕುಮಾರ್ ನಾಯರ್ ಅವರನ್ನು ವಿವಾಹವಾಗಿದ್ದು, ಕುಮಾರ್ ಅವರು ತಮ್ಮದೇ ಆದಂತಹ ಫೈನಾನ್ಶಿಯಲ್ ಸರ್ವಿಸ್ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಈ ದಂಪತಿಗಳಿಗೆ 14ವರ್ಷದ ಆರ್ಯನ ಮತ್ತು 10 ವರ್ಷದ ಸಿಧಂತ್ ಎಂಬ ಇಬ್ಬರು ಪುತ್ರರಿದ್ದಾರೆ.
ಲೀನಾ ನಾಯರ್ ಅವರಿಗೆ 2021ರಲ್ಲಿ, "ರೋಲ್ ಮಾಡೆಲ್ ಆಫ್ ಇಯರ್", "ದಿ ಗ್ರೇಟ್ ಬ್ರಿಟಿಷ್ ಬ್ಯುಸಿನೆಸ್ ವುಮನ್" ಪ್ರಶಸ್ತಿ ಒಲಿದುಬಂದಿದೆ. ಮಾತ್ರವಲ್ಲದೇ 2021ರಲ್ಲಿ ಫಾರ್ಚ್ಯೂನ್ ಇಂಡಿಯಾದ ಮೋಸ್ಟ್ ಪವರ್ ಪುಲ್ ವುಮೆಲ್ ಲಿಸ್ಟ್ ನಲ್ಲಿಯೂ ಗುರುತಿಸಿಕೊಂಡಿದ್ದರು. ಇದಲ್ಲದೇ 2017ರಲ್ಲಿ ಲೀನಾ ನಾಯರ್ ಅವರನ್ನು ರಾಣಿ ಎಲಿಜಬೆತ್ II ಯುಕೆಯಲ್ಲಿರುವ ಭಾರತೀಯ ಬ್ಯುಸಿನೆಸ್ ಲೀಡರ್ ಒಬ್ಬರು ಎಂದು ಗುರುತಿಸಿದ್ದಾರೆ.
ಲಭ್ಯವಾದ ಪ್ರಶಸ್ತಿ, ಸ್ಥಾನಗಳು ಯಾವುದು?
* ಪೋರ್ಬ್ಸ್ ಇಂಡಿಯಾದ ಟಾಪ್ ಸೆಲ್ಫ್ ಮೇಡ್ ವುಮೆನ್ಸ್ ಪಟ್ಟಿ
* 2021ರ ಗ್ರೇಟ್ ಬ್ರಿಟಿಷ್ ಬ್ಯುಜಿನೆಸ್ ವುಮೆನ್ಸ್ ಅವಾರ್ಡ್, ರೋಲ್ ಮಾಡೆಲ್ ಆಫ್ ಇಯರ್
* ಫಾರ್ಚ್ಯೂನ್ ಇಂಡಿಯಾದ ಅತೀ ಪ್ರಬಲ ಮಹಿಳೆ (2021)
* ಗ್ಲೋಬಲ್ ಇಂಡಿಯನ್ ಆಫ್ ದಿ ಇಯರ್, ಇಕಾನಮಿಕ್ ಟೈಮ್ಸ್ ಪ್ರೈಮ್ ವುಮೆನ್ಸ ಲೀಡರ್‌ಶಿಪ್ ಅವಾರ್ಡ್ (2020)
* ಲಿಂಕ್ಡಿನ್ ಟಾಪ್ ವಾಯ್ಸ್ (2018-2020)


Click it and Unblock the Notifications