ಯೂಟ್ಯೂಬ್‌ನ ನೂತನ ಸಿಇಒ ಆಗಿ ಭಾರತೀಯ ಮೂಲದ ನೀಲ್ ಮೋಹನ್ ನೇಮಕಗೊಂಡಿದ್ದಾರೆ. 2014ರಿಂದ ಸಿಇಒ ಆಗಿದ್ದ ಸುಸಾನ್ ವೊಜಿಕ್ಸಿ ಪದತ್ಯಾಗ ಬಳಿಕ ನೀಲ್ ಮೋಹನ್ ಅಧಿಕಾರವಹಿಸಿಕೊಂಡಿದ್ದಾರೆ. ಸುಸಾನ್ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದರಿಂದ ರಾಜೀನಾಮೆ ನೀಡಿದ್ದರು. ನೀಲ್ ಮೋಹನ್ ಅವರು ಬಹಳ ಪರಿಣಾಮಕಾರಿಯಾದ ವೃತ್ತಿ ಬದುಕನ್ನು ಹೊಂದಿದ್ದಾರೆ.
ನೀಲ್ ಮೋಹನ್ ತರಗತಿಗಳಲ್ಲಿ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಅವರು ತಮ್ಮ ಬಾಲ್ಯವನ್ನು ಲಕ್ನೋದಲ್ಲಿ ಕಳೆದಿದ್ದು, ನಗರದ ಪ್ರತಿಷ್ಠಿತ ಶಾಲೆಯಲ್ಲಿ ಓದಿದ್ದರು. ಅವರು ತಮ್ಮ ಹೊಸ ಹುದ್ದೆಗೆ ಭಾರೀ ವೇತನ ಪಡೆಯಲಿದ್ದಾರೆ. 2013ರಲ್ಲಿ ಅವರು 100 ಮಿಲಿಯನ್ ಅಂದರೆ ಆ ಕಾಲದಲ್ಲಿ 544 ಕೋಟಿ ರೂ.ವನ್ನು ಬೋನಸ್ ಆಗಿ ಪಡೆಯುವ ಮೂಲಕ ಭಾರೀ ಸುದ್ದಿಯಾಗಿದ್ದರು. ಹೀಗಿರುವಾಗ, ಇಲ್ಲಿದೆ ನೀಲ್ ಮೋಹನ್ ಅವರ ಕಥೆ.

ನೀಲ್ ಮೋಹನ್ ಅವರು ಲಕ್ನೋದ ಸೇಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ಓದಿದ್ದರು. ನೀಲ್ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದು, ತುಂಬಾ ನಾಚಿಕೆಯ ವ್ಯಕ್ತಿ ಎನ್ನುತ್ತಾರೆ ಅವರ ಸಹಪಾಠಿಗಳು. ಅವರು ಈ ಶಾಲೆಯಲ್ಲಿ ಐದು ವರ್ಷ ಓದಿದ್ದು ತರಗತಿಯಲ್ಲಿ ಕಲಿಕೆಯಲ್ಲಿ ಟಾಪರ್ ಆಗಿದ್ದರು. ನೀಲ್ ಅವರ ಸಹಪಾಠಿಯಾಗಿದ್ದ ಶಾಂತನು ಕುಮಾರ್ ತಾವಿಬ್ಬರು 7ನೇ ತರಗತಿಯಲ್ಲಿ ಒಂದೇ ಸೆಕ್ಷನ್‌ನಲ್ಲಿದ್ದೆವು ಎಂಬುದಾಗಿ ಟಿಒಐಗೆ ತಿಳಿಸಿದ್ದಾರೆ.
ನೀಲ್ ಮೋಹನ್ ಬಗ್ಗೆ ಮಾಹಿತಿ
ಅಮೆರಿಕದಿಂದ ಬಂದಿದ್ದ ನೀಲ್ ಮೋಹನ್ ಬಹಳ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ. ನೀಲ್ ಮೋಹನ್‌ಗೆ ಹಿಂದಿ ಗೊತ್ತಿರಲಿಲ್ಲ. ಆದರೆ ಬಹಳ ಕಡಿಮೆ ಅವಧಿಯಲ್ಲಿ ಆ ಭಾಷೆಯನ್ನು ಕಲಿತು ಆ ವಿಷಯದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದರು. ನೀಲ್ ಲಕ್ನೋದಲ್ಲಿ ಹುಟ್ಟಿದ್ದರು. ಆದರೆ ಬಾಲ್ಯವನ್ನು ಮೆಸ್ಸಿಗನ್‌ನಲ್ಲಿ ಕಳೆದಿದ್ದರು. ಆಗ ಅವರ ತಂದೆಯು ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆಯುತ್ತಿದ್ದರು.
ಅವರು ಭಾರತದಲ್ಲಿ 1985ರ ಅವಧಿಯಲ್ಲಿ ಕಲಿಯುತ್ತಿದ್ದರು. ಲಕ್ನೋದಲ್ಲಿ 7ರಿಂದ 12ನೇ ತರಗತಿವರೆಗೆ ಓದಿದ್ದರು. ಬಳಿಕ ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಓದಿದ್ದರು. ನೀಲ್ ತರಗತಿಯಲ್ಲಿ ಟಾಪರ್ ಆಗಿದ್ದರೂ ತುಂಬಾ ಖಾಸಗಿ ವ್ಯಕ್ತಿ. ಅಲ್ಲದೆ ಕ್ರಿಕೆಟ್ ಕೂಡ ಅವರ ನೆಚ್ಚಿನ ಆಟವಾಗಿತ್ತು. ನೀಲ್ ಮೋಹನ್ ಯೂಟ್ಯೂಬ್‌ನಲ್ಲಿ ಚೀಫ್ ಪ್ರಾಡೆಕ್ಟ್ ಆಪೀಸರ್ ಆಗಿದ್ದರು. ವೋಜ್ಸಿಕಿ ಬಳಿಕ ಅವರು ಯೂಟೂಬ್‌ನ ಅತ್ಯಂತ ಹಿರಿಯ ಅಧಿಕಾರಿಯಾಗಿದ್ದರು.
ನೀಲ್ ಅವರು ಇಂಟರ್‌ಶಿಪ್ ಮಾಡುವ ಮೂಲಕ ತಮ್ಮ ವೃತ್ತಿ ಬದುಕನ್ನು ಮೈಕ್ರೋಸಾಫ್ಟ್‌ನಲ್ಲಿ ಪ್ರಾರಂಭಿಸಿದ್ದರು. ಯೂಟ್ಯೂಬ್‌ನಲ್ಲಿ ಗೂಗಲ್ ಡಿಸ್ಪ್ಲೇ ನೆಟ್‌ವರ್ಕ್, ಆಡ್‌ಸೆನ್ಸ್, ಆಡ್‌ಮೋಬ್ ಹಾಗೂ ಡಬಲ್‌ಕ್ಲಿಕ್ ಆಡ್ ಟೆಕ್ ಪ್ರಾಡೆಕ್ಟ್ ಸರ್ವೀಸಸ್‌ನಲ್ಲಿ ಕೆಲಸ ಮಾಡಿದ್ದರು. ವೋಜ್ಸಿಕಿ ಅವರ ತಿಂಗಳ ವೇತನ $374,829 ಆಗಿತ್ತು. ಇದನ್ನು ರೂಪಾಯಿಗೆ ಮಾಡಿದರೆ ತಿಂಗಳಿಗೆ ಬರೋಬ್ಬರಿ 3.1 ಕೋಟಿ ರೂ. ಆದರೆ ನೀಲ್ ಅವರ ಸಂಬಳವನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.
ಬೋನಸ್ ಹೊರತಾಗಿ ವೇತನವೆಷ್ಟು?
ಆದರೆ ಅವರು ಇಷ್ಟು ಮೊತ್ತವನ್ನು ವೇತನವಾಗಿ ಪಡೆಯುವುದರಲ್ಲಿ ಅನುಮಾನವಿಲ್ಲ. ಅಂದರೆ ಅವರ ದಿನದ ಸಂಬಳ ಬೋನಸ್ ಹೊರತಾಗಿ 10 ಲಕ್ಷ ರೂ. ಆಗಿದೆ. ಈ ಹಿಂದೆ ಅವರು ಟ್ವಿಟರ್‌ಗೆ ಸೇರುವುದನ್ನು ತಪ್ಪಿಸುವುದಕ್ಕಾಗಿ ಕಂಪೆನಿಯು 544 ಕೋಟಿ ರೂ.ವನ್ನು ಬೋನಸ್ ಆಗಿ ನೀಡಿತ್ತು. ಅವರು ಟ್ವಟರ್‌ಗೆ ಸೇರಲು ನಿರ್ಧರಿಸಿದ್ದರೂ ಅವರ ನೇತೃತ್ವವು ಯೂಟ್ಯೂಬ್‌ಗೆ ಬಹಳ ಮೌಲ್ಯಯುತವಾಗಿತ್ತು.
ನೀಲ್ ಮೋಹನ್ ಅವರು ತಮ್ಮ ಪೂರ್ಣ ಪ್ರಮಾಣದ ವೃತ್ತಿ ಜೀವನವನ್ನು ಗ್ಲೋರಿಫೈಡ್ ಟೆಕ್ನಿಕಲ್ ಸಪೋರ್ಟ್‌ನಲ್ಲಿ 2.15ಲಕ್ಷ ರೂ. ಸಂಬಳದೊಂದಿಗೆ ಪ್ರಾರಂಭಿಸಿದ್ದರು. ಅಮೆರಿಕದಲ್ಲಿ ಈ ವೇತನವು ಅತ್ಯುತ್ತಮ ಸಂಭಾವನೆಯಾಗಿತ್ತು. ಅವರು ಡಬಲ್‌ಕ್ಲಿಕ್ ಇಂಚ್‌ನಲ್ಲಿ ಕಂಪೆನಿ ಬೆಳವಣಿಗೆಗೆ ಶ್ರಮಿಸಿದ್ದು, ಅಲ್ಲಿ ಅವರು ಗೋಬಲ್ ಕ್ಲೈಂಟ್ ಸರ್ವೀಸಸ್‌ನ ಡೈರೆಕ್ಟರ್ ಆಗಿದ್ದರು.
ಆ ಕೂಡಲೇ ಗೂಗಲ್ ಈ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಬಳಿಕ ಗೂಗಲ್‌ನಲ್ಲಿ ವಿಪಿಯಾಗಿ ಸೇರಿದ್ದರು. 2015ರಲ್ಲಿ ಅಲ್ಲಿ ಅವರು ಚೀಫ್ ಪ್ರಾಡೆಕ್ಟ್ ಆಪೀಸರ್ ಆದರು. ಅಲ್ಲಿಂದ ಅವರು ಯೂಟ್ಯೂಬ್‌ನಲ್ಲಿ ಸಿಇಒನ ಉತ್ತರಾಧಿಕಾರಿಯಾಗಿ ಬೆಳೆದರು. ನೀಲ್ ಅವರ ನಿವ್ವಳ ಆಸ್ತಿ ಮೌಲ್ಯ 1200 ಕೋಟಿ ರೂ. ಆಗಿದೆ.


Click it and Unblock the Notifications