ಇಂದು ದೊಡ್ಡ ದೊಡ್ದ ಕಾರ್ಪೋರೇಟ್ ಕಂಪನಿಗಳಿಂದ ಹಿಡಿದು, ಅತ್ಯಾಧುನಿಕವಾದ ಸ್ಟಾರ್ಟ್ಅಪ್‌ಗಳವರೆಗೆ ಇರಬಹುದು, ಪ್ರತಿ ಉದ್ಯಮದಲ್ಲೂ ಮಹಿಳೆಯರು ಮಾಲೀಕರಾಗಿ ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದಾರೆ. ಇಂತಹ ಯಶಸ್ವಿ ಮಹಿಳೆಯರ ಸಾಲಿನಲ್ಲಿ ನೇಹಾ ನಾರ್ಖೆಡೆಯೂ ಒಬ್ಬರಾಗಿದ್ದಾರೆ. "ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022" ರ ಪ್ರಕಾರ ಅವರು ಪಟ್ಟಿಯಲ್ಲಿ "ಕಿರಿಯ ವಯಸ್ಸಿನ ಸ್ವ ಪ್ರಯತ್ನದಿಂದ ಯಶಸ್ವಿಗಳಿಸಿದ ಮಹಿಳಾ ಉದ್ಯಮಿ" ಎಂದು ಗುರುತಿಸಲ್ಪಟ್ಟಿದ್ದಾರೆ.
ಇನ್ನು ಫೋರ್ಬ್ಸ್ ಪ್ರಕಾರ, ಭಾರತೀಯ ಅಮೇರಿಕನ್ ಆಗಿರುವ ನೇಹಾ ನಾರ್ಖೆಡೆ ಈ ಹಿಂದೆ 2018ರಲ್ಲಿ ಫೋರ್ಬ್ಸ್ ಟೆಕ್ ನಲ್ಲಿ ವಿಶ್ವದ ಟಾಪ್ 50 ಮಹಿಳೆಯರಲ್ಲಿ ಓರ್ವರಾಗಿದ್ದಾರೆ ಮತ್ತು 2022ರ ಅಮೇರಿಕಾದ "ಸೆಲ್ಪ್ ಮೇಡ್ ಮಹಿಳಾ ಉದ್ಯಮಿ" ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

ನೇಹಾ ನಾರ್ಖೆಡೆ ನಿವ್ವಳ ಮೌಲ್ಯ
ಪುಣೆಯಲ್ಲಿ ಬೆಳೆದ ನೇಹಾ ಅವರ ಶಿಕ್ಷಣ ಬಗ್ಗೆ ಹೇಳಬೇಕೆಂದರೆ ಅವರು, ಅಮೇರಿಕಾದ ಜಾರ್ಜಿಯಾ ಟೆಕ್ ಮತ್ತು ಪುಣೆಯ ವಿಶ್ವವಿದ್ಯಾನಿಯದಲ್ಲಿ ಇನ್ ಸ್ಟ್ರಿಟ್ಯೂಟ್ ಆಫ್ ಕಂಪ್ಯೂಟರ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದಾರೆ. ನಾರ್ಖೆಡೆ ಅವರು ಗ್ಲೋಬಲ್ ಸ್ಟ್ರೀಮಿಂಗ್ ಟೆಕ್ನಾಲಾಜಿ ಅಪಾಚೆ ಕಾಫ್ಕಾಯ ಸಹ -ಸಂಸ್ಥಾಪಕರಾಗಿದ್ದಾರೆ. ಅಲ್ಲದೆ 4,700 ಕೋಟಿ ರೂ ಅಂದಾಜು ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಹುರುನ್ ಇಂಡಿಯಾ ರಿಚ್ ಲಿಸ್ಟ್ ಪಟ್ಟಿಯಲ್ಲಿ 226 ನೇ ಸ್ಥಾನವನ್ನು ಪಡೆದಿದ್ದಾರೆ.
'ಕನ್ಪ್ಮುಯೆಂಟ್' ಸಹ ಸಂಸ್ಥಾಪಕಿ
ಇವರು ಕ್ಲೌಡ್ ಕಂಪ್ಯೂಟಿಂಗ್ ಕಂಪನಿ 'ಕನ್ಪ್ಮುಯೆಂಟ್' ಸಹ ಸಂಸ್ಥಾಪಕರಾಗಿದ್ದಾರೆ. ಈ ಸಂಸ್ಥೆಯಲ್ಲಿ ಅವರು ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ)ಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಇವರು ಕ್ಯಾಲಿಪೋರ್ನಿಯಾದ ಪಾಲೊ ಆಲ್ಟೊ ನಿವಾಸಿಯಾಗಿದ್ದಾರೆ. ಅವರ ಲಿಂಕ್ಡ್ ಇನ್ ಪ್ರೊಫೈಲ್, ಮಾರ್ಚ್ 2020ರಿಂದ ಅವರು ಫ್ರೀ- ಲ್ಯಾನ್ಸ್ ಡಿಜಿಟಲ್ ಉದ್ಯಮಿ, ಹೂಡಿಕೆದಾರರು ಮತ್ತು ಸಲಹೆಗಾರರಾಗಿದ್ದಾರೆ ಎಂದು ವಿವರಿಸುತ್ತದೆ.
ನೇಹಾ ನಾರ್ಖೆಡೆ: ವೃತ್ತಿ ಬದುಕು
ಇದೆಲ್ಲದಕ್ಕೂ ಮೊದಲು ನೇಹಾ ನಾರ್ಖೆಡೆ ಅವರು ಒರಾಕಲ್ ಮತ್ತು ಲಿಂಕ್ಡ್ ಇನ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಫೋರ್ಬ್ಸ್ ಪ್ರಕಾರ, 2014ರಲ್ಲಿ ನಾರ್ಖೆಡೆ ತಮ್ಮಿಬ್ಬರು ಸಹೋದ್ಯೋಗಿಗಳೊಂದಿಗೆ ಲಿಂಕ್ಡ್ ಇನ್ ತೊರೆದು "ಕನ್ಪ್ಮುಯೆಂಟ್" ಸ್ಥಾಪಿಸಿದರು. ಇದು ಅಪಾಚೆ ಕಾಫ್ಕಾವನ್ನು ಬಳಸಿಕೊಂಡು ಅಗಾಧ ಪ್ರಮಾಣದ ಡೇಟಾವನ್ನು ನಿರ್ವಹಿಸಲು ಕಂಪನಿಗಳಿಗೆ ಸಹಾಯ ಮಾಡುವ ಸಂಸ್ಥೆಯಾಗಿದೆ. ಕನ್ಪ್ಮುಯೆಂಟ್ ಆಡಳಿತ ಮಂಡಳಿಗೆ 2020ರಲ್ಲಿ ಸೇರ್ಪಡೆಗೊಂಡರು.


Click it and Unblock the Notifications