Ravi Pillai: ರೈತನ ಮಗ ಐಷಾರಾಮಿ ಕಾರುಗಳಷ್ಟೇ ಅಲ್ಲ, ಹೆಲಿಕಾಪ್ಟರ್‌ ಒಡೆಯ!

ಬಿಲಿಯನೇರ್‌ ರವಿ ಪಿಳ್ಳೈ ಅವರನ್ನು ಕೇರಳದ ಅತ್ಯಂತ ಶ್ರೀಮಂತ ವ್ಯಕ್ತಿಯೆಂದು ಪರಿಗಣಿಸಲಾಗಿದ್ದು, ಮಧ್ಯ ಪ್ರಾಚ್ಯದಲ್ಲಿಯೂ ಪ್ರಭಾವಿ ಭಾರತೀಯರಾಗಿದ್ದಾರೆ. ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ಈ ಶ್ರೀಮಂತ ಸ್ವಯಂ ನಿರ್ಮಿತ ದೊಡ್ಡ ಉದ್ಯಮಿಯ ಸಿರಿವಂತಿಕೆಯ ಕಥೆಯು ಬಹಳ ಸ್ಫೂರ್ತಿದಾಯಕವಾದದ್ದು. ಪಿಳ್ಳೈ ಅವರು ಇತ್ತೀಚೆಗೆ 100 ಕೋಟಿ ರೂ. ಬೆಲೆಯ H145 ಹೆಲಿಕಾಪ್ಟರ್‌ ಖರೀದಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆಯುವ ಮೂಲಕ ಸಂಪತ್ತಿನ ಇತಿಹಾಸದ ಪುಸ್ತಕದಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.

ಈ ಚಾಪರ್‌ನ ಮೊದಲ ಪ್ರಯಾಣದ ಮೂಲಕ ಅವರು ಪಂಚತಾರಾ ಹೋಟೆಲ್‌ವೊಂದಕ್ಕೆ ಹಾರಿದ್ದರು. ಬಡತನದಲ್ಲಿದ್ದ ಕೃಷಿಕನ ಮಗನಾಗಿ ಹುಟ್ಟಿದ ಪಿಳ್ಳೈ ಅವರು ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿ ಆರ್‌ಪಿ ಗ್ರೂಪ್‌ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ಬಹು ಶತಕೋಟಿ ಡಾಲರ್‌ನ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ ಉನ್ನತ ಸ್ಥಾನಕ್ಕೇರಿದ್ದಾರೆ. $7.8 ಬಿಲಿಯನ್‌(64,000 ಕೋಟಿ) ಆದಾಯವನ್ನು ಹೊಂದಿ ಸಂಪತ್ತು ಹಾಗೂ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ನಂತರ ಅವರು ಐಷಾರಾಮಿ ಹೋಟೆಲ್‌ಗಳು, ಸ್ಟೀಲ್‌, ಗ್ಯಾಸ್‌, ಎಣ್ಣೆ, ಸಿಮೆಂಟ್‌, ಶಾಪಿಂಗ್‌ ಮಾಲ್‌ಗಳಂತಹ ವ್ಯವಹಾರ ಕ್ಷೇತ್ರಗಳಿಗೆ ಕಾಲಿಟ್ಟರು.

 ರೈತನ ಮಗ ಐಷಾರಾಮಿ ಕಾರುಗಳಷ್ಟೇ ಅಲ್ಲ, ಹೆಲಿಕಾಪ್ಟರ್‌ ಒಡೆಯ!

ಪಿಳ್ಳೈ ಅವರು ಕೇರಳದ ಕೊಲ್ಲಂನ ಕರಾವಳಿ ಭಾಗದ ಹಳ್ಳಿಯೊಂದಕ್ಕೆ ಸೇರಿದವರಾಗಿದ್ದು, ಸಣ್ಣ ಕೃಷಿ ಕುಟುಂಬವೊಂದರಲ್ಲಿ ಜನಿಸಿದ್ದರು. ಜೀವನದಲ್ಲಿ ಅದೇನೆ ತೊಂದರೆಗಳಿದ್ದರೂ ಶಿಕ್ಷಣದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ನಲ್ಲಿ ಕೊಚ್ಚಿ ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ಬಳಿಕ ಸಾಲ ಪಡೆದು ಚಿಟ್‌-ಫಂಡ್‌ ಕಂಪೆನಿಯನ್ನು ಸ್ಥಾಪಿಸುವ ಮೂಲಕ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ದುರಾದೃಷ್ಟವಶಾತ್‌ ಆ ಕಂಪೆನಿ ಯಶಸ್ವಿಯಾಗಿರಲಿಲ್ಲ.

ಛಲ ಬಿಡದ ಪಿಳ್ಳೈ ಅವರು 1978ರಲ್ಲಿ ಸೌದಿ ಅರೇಬಿಯಾಕ್ಕೆ ಹೋಗಲು ನಿರ್ಧರಿಸಿದ್ದರು. ಅಂತಿಮವಾಗಿ ಅವರು 150 ಜನರೊಂದಿಗೆ ನಿರ್ಮಾಣ ಕಂಪೆನಿಯೊಂದನ್ನು ಸ್ಥಾಪಿಸಿದರು. ಈಗ ಅವರ ಬಳಿಯಿರುವ ಕೆಲಸಗಾರರ ಸಂಖ್ಯೆಯು 70,000ಕ್ಕೆ ಏರಿದ್ದು, ಇದು ಪಿಳ್ಳೈ ಉದ್ಯಮ ಎಷ್ಟು ಎತ್ತರಕ್ಕೆ ಕ್ಷಿಪ್ರವಾಗಿ ಬೆಳೆದಿದೆ ಎನ್ನುವುದಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ. ಪಿಳ್ಳೈ ಅವರು ದಿ ರವಿಜ್‌ ಅಷ್ಟಮುಡಿ, ದಿ ರವಿಜ್‌ ಕೋವಲಂ ಮತ್ತು ದಿ ರವಿಜ್‌ ಕಡವು ಮುಂತಾದ ಹಲವು ಪಂಚತಾರಾ ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ. ಅವರು ಜಗತ್ತಿನ ವಿವಿಧ ಕಡೆಗಳಲ್ಲಿ ಸ್ವಂತ ಮನೆಗಳನ್ನು ಹೊಂದಿದ್ದಾರೆ. ಈ ಪೈಕಿ ಪುಣೆಯಲ್ಲಿರುವ ಟ್ರಂಪ್‌ ಟವರ್‌ ಐಷಾರಾಮಿ ಕಾಂಡೋ ಕೂಡ ಸೇರಿದೆ.

ಅಲ್ಲದೆ ಅವರು ಬ್ಯಾಂಕ್‌ಗಳು, ರಿಯಲ್‌ ಎಸ್ಟೇಟ್‌ನಲ್ಲಿ ಷೇರುಗಳನ್ನು ಹೊಂದಿದ್ದು, ಕೊಲ್ಲಂನಲ್ಲಿ ಆರ್‌ಪಿ ಮಾಲ್‌ ಹಾಗೂ 300 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ಕೂಡ ಹೊಂದಿದ್ದಾರೆ. ಮಧ್ಯ ಪ್ರಾಚ್ಯದಲ್ಲಿ ಅವರ ಆರ್‌ಪಿ ಗ್ರೂಪ್‌ ಭಾರತೀಯ ಕಾರ್ಮಿಕರನ್ನು ಹೊಂದಿರುವ ಅತಿದೊಡ್ಡ ಉದ್ಯೋಗದಾತ ಸಂಸ್ಥೆಯಾಗಿದೆ. ಅವರ ಈ ಯಶಸ್ವಿಗೆ ಭಾರತ ಸರ್ಕಾರದಿಂದ 2008ರಲ್ಲಿ ಪ್ರವಾಸಿ ಭಾರತೀಯ ಸಮ್ಮಾನ್‌ ಹಾಗೂ 2010ರಲ್ಲಿ ಪದ್ಮಶ್ರೀ ಗೌರವ ಲಭಿಸಿದೆ. ಅವರಿಗೆ ನ್ಯೂಯಾರ್ಕ್‌ನ ಎಕ್ಸೆಲ್ಸಿಯರ್‌ ಕಾಲೇಜಿನಿಂದ ಡಾಕ್ಟರೇಟ್‌ ಪದವಿ ಲಭಿಸಿದೆ.

ಅವರು ತಮ್ಮ ಮಗಳ ಮದುವೆಗಾಗಿ 55 ಕೋಟಿ ರೂ. ಖರ್ಚು ಮಾಡಿದ್ದು, ಇದು ಕೇರಳದಲ್ಲಿನ ಅತ್ಯಂತ ದುಬಾರಿ ವಿವಾಹ ಸಮಾರಂಭವಾಗಿ ಪರಿಗಣಿಸಲಾಗಿದೆ. ಈ ಮದುವೆ ಸಮಾರಂಭದಲ್ಲಿ ಜಾಗತಿಕ ಮಟ್ಟದ ಸಿಇಒಗಳು, ರಾಜಮನೆತನದ ಸದಸ್ಯರು ಭಾಗವಹಿಸಿದ್ದರು. ಅತಿಥಿಗಳ ಪಟ್ಟಿಯಲ್ಲಿಯೇ 30,000 ಮಂದಿ ಇದ್ದರು. ಈ ಅದ್ದೂರಿ ಮದುವೆಯನ್ನು ಹಿಟ್‌ ಚಿತ್ರವಾದ ಬಾಹುಬಲಿಯ ನಿರ್ಮಾಣ ಡಿಸೈನರ್‌ ಆಯೋಜಿಸಿದ್ದರು. ಪಿಳ್ಳೈ ಅವರು ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದು, ಆ ಪೈಕಿ ಮರ್ಸಿಡಿಸಿ-Maybach S600, S500, ರೋಲ್ಸ್‌ ರಾಯ್ಸ್‌ ಗೋಸ್ಟ್‌, ಲಾಂಡ್‌ ರೋವರ್‌ ಅಟೊಬಯೋಗ್ರಾಫಿ, BMW 5-Series 520d ಹಾಗೂ Audi A6 Matrix ಬೆಲೆ ಬಾಳುವ ಕಾರುಗಳೂ ಸೇರಿವೆ. ಫೋರ್ಬ್ಸ್‌ ಪ್ರಕಾರ ಅವರ ನಿವ್ವಳ ಆಸ್ತಿ ಮೌಲ್ಯ 25,000 ಕೋಟಿ ರೂ.($3.1 ಬಿಲಿಯನ್‌).

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+