ರೇಣು ಗುಜ್ರಾಲ್ ಅವರ ಮೊದಲ ಸಂಬಳ ಕೇವಲ 3200ರೂ. ಆಗಿತ್ತು. ದೆಹಲಿಯ ಮಧ್ಯಮ ವರ್ಗ ಕುಟುಂಬದ ಈ ಮಹಿಳೆಗೆ ಜೆನಿತ್ ಕಂಪ್ಯೂಟರ್‌ನಲ್ಲಿ ಪಡೆಯುತ್ತಿದ್ದ ಸಂಬಳದಿಂದ ಜೀವನ ನಡೆಸುವುದು ಬಹಳ ಕಷ್ಟಕರವಾಗಿತ್ತು. ಆಗ ತಾನು ಏನಾದರೂ ದೊಡ್ಡ ಕೆಲಸವನ್ನು ಮಾಡಬೇಕೆಂದು ಬಯಸಿದ್ದರು. ಆಗ ಎಚ್‌ಆರ್ ಎಕ್ಸಿಕ್ಯೂಟಿವ್ ಮೂರು ಮಂದಿ ಉದ್ಯೋಗಿಗಳೊಂದಿಗೆ ಕಂಪೆನಿಯೊಂದನ್ನು ಶುರು ಮಾಡಿದರು. 2005ರಲ್ಲಿ ಅವರ ಪತಿ ನರೇಶ್ ಕೂಡ ಕಂಪೆನಿಗೆ ಸೇರಿದ್ದರು. ಜತೆಯಾಗಿ ಅವರು ಬೆಳೆದಿದ್ದು, ಈಸಿ ಸೋರ್ಸ್ ಎಚ್‌ಆರ್ ಸೊಲ್ಯೂಷನ್ಸ್ ಪ್ರೈ.ಲಿ. ಈಗ 202 ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ.
ಈ ಕಂಪೆನಿಯು 70 ಪೂರ್ಣಕಾಲಿಕ ಉದ್ಯೋಗಿಗಳನ್ನು ಹೊಂದಿದ್ದು, 12000 ಹೊರಗುತ್ತಿಗೆ ನೌಕರರನ್ನು ಹೊಂದಿದೆ. ಕಂಪೆನಿಯ ಅಧಿಕಾರಿಗಳು ಗುರುಗಾಂವ್, ದಿಲ್ಲಿ ಹಾಗೂ ನೋಯ್ಡಾದಲ್ಲಿ ಇದ್ದಾರೆ. ರೇಣು ಅವರ ಪೋಷಕರು ಸರ್ವೀಸ್ ಕ್ಲಾಸ್ ಜನರಾಗಿದ್ದು, ದಿಲ್ಲಿಯ ಜಾನಕಿಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಸೀಮಿತ ಆದಾಯವಿದ್ದರೂ ಮಗಳಿಗೆ ಉತ್ತಮ ಶಿಕ್ಷಣವನ್ನು ನೀಡಿದ್ದರು. ಉತ್ತಮ ಬಟ್ಟೆ ಹಾಕಿಕೊಳ್ಳುವುದಕ್ಕೆ ಅಥವಾ ಶಾಲಾ ಪ್ರವಾಸಕ್ಕೆ ಕಳುಹಿಸುವ ಪರಿಸ್ಥಿತಿಯಲ್ಲಿಯೂ ಇರಲಿಲ್ಲ. ಆದರೆ ಒಳ್ಳೆಯ ಶಿಕ್ಷಣವನ್ನು ನೀಡುವುದಕ್ಕೆ ಬಹಳ ಪರಿಶ್ರಮಪಟ್ಟಿದ್ದರು.

ಇಂಡಿಯಾ ಗೇಟ್‌ಗೆ ಪಿಕಿನಿಕ್ ಹೋಗುವುದಕ್ಕೆ ಡಿಟಿಸಿ ಬಸ್‌ನ್ನು ಬಳಸುತ್ತಿದ್ದರು. ಇನ್ನು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರೂ ರೇಣು ಕಲಿಕೆಯಲ್ಲಿ ಸಾಧಾರಣ ವಿದ್ಯಾರ್ಥಿನಿಯಾಗಿದ್ದರು. ಅವರು ತಮ್ಮ ಇಂಟರ್‌ಶಿಪ್‌ನ್ನು ಜೆನಿತ್ ಕಂಪ್ಯೂಟರ್ಸ್‌ನಲ್ಲಿ ಪೂರ್ಣಗೊಳಿಸಿ 3200ರೂ. ವೇತನದೊಂದಿಗೆ 1993ರಲ್ಲಿ ಉದ್ಯೋಗ ಪ್ರಾರಂಭಿಸಿದ್ದರು. ಅವರು ದಿಲ್ಲಿಯ ಭಾರತೀಯ ವಿದ್ಯಾಭವನದಿಂದ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
1994ರಲ್ಲಿ ಅವರು ಕೆಲಸವನ್ನು ಬಿಟ್ಟು ಬ್ರೋಕಿಂಗ್ ಫರ್ಮ್‌ಗೆ ಸೇರಿದ್ದು, ಅಲ್ಲಿ ಬಿಟೆಕ್ ಪದವೀಧರರಾಗಿರುವ ಪತಿ ನರೇಶ್ ಗುಜ್ರಾಲ್ ಅವರನ್ನು ಭೇಟಿಯಾಗಿದ್ದರು. ರೇಣು ಅವರು 1994ರ ನವೆಂಬರ್‌ನಲ್ಲಿ ಜೆನಿತ್ ಅನ್ನು ತೊರೆದು ದಿಲ್ಲಿಯ ರಾಹುಲ್ ಮಲಿಕ್ ಅಂಡ್ ಕೋ. ಷೇರು ಕಂಪೆನಿಯಲ್ಲಿ ಕಸ್ಟಮರ್ ಸರ್ವೀಸ್ ಕೆಲಸಕ್ಕೆ ಸೇರಿದ್ದರು. ಬಳಿಕ 1997 ಅವರು ಈಸಿ ಸರ್ಚ್ ಕಂಪೆನಿಯನ್ನು ಮೂರು ಮಂದಿ ಉದ್ಯೋಗಿಗಳೊಂದಿಗೆ ಪ್ರಾರಂಭಿಸಿದರು.
ಅವರ ಮೊದಲ ಗ್ರಾಹಕರಾಗಿದ್ದವರು ವರ್ಲ್‌ಪೂಲ್ ಹಾಗೂ ಪೆಪ್ಸಿ. 2005ರಲ್ಲಿ ಗುಜ್ರಾಲ್ ಅವರು ತಮ್ಮ ಉದ್ಯಮವನ್ನು ತೊರೆದು ರೇಣು ಅವರ ವೆಂಚರ್ ಜತೆ ಸೇರಿಕೊಂಡರು. ಅವರು ಆಗ 20 ಲಕ್ಷ ರೂ.ವನ್ನು ತಮ್ಮ ಜೇಬಿನಿಂದ ಹಾಕಿ ಕಂಪೆನಿಯನ್ನು ಬೆಳೆಸಿದರು. ಈಗ ಅವರು ಅದನ್ನು ಯಶಸ್ವಿ ಕಂಪೆನಿಯಾಗಿ ಬೆಳೆಸಿದ್ದಾರೆ. ಅವರು ತಮ್ಮ ಗ್ರಾಹಕ ಕಂಪೆನಿಗಳ ವೇತನ, ಪಿಎಫ್ ಹಾಗೂ ಉದ್ಯೋಗ ನೇಮಕಾತಿಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದಾರೆ.
ಕಂಪೆನಿಯ ವಹಿವಾಟು 2 ಕೋಟಿಯನ್ನು ತಲುಪಿದಾಗ ತಮ್ಮ ಉದ್ಯೋಗಿಗಳಿಗೆ ಗೃಹೋಪಯೋಗಿ ವಸ್ತುಗಳ ಖರೀದಿಗೆ 20000 ರೂ. ಕೊಡುಗೆಯಾಗಿ ನೀಡಿದ್ದಾರೆ. ಅವರ ಮಗ ರಾಷ್ಟ್ರ ರಾಜಧಾನಿಯಲ್ಲಿ ಅಪೋಲೊ ಟೈರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾನವ ಸಂಪನ್ಮೂಲದ ಮೇಲೆ ಹೂಡಿಕೆ ಮಾಡಿ ಅವರ ಐಡಿಯಾಗಳ ಅನುಷ್ಠಾನಕ್ಕೆ ಅವಕಾಶ ನೀಡುವುದು ಅವರ ಯಶಸ್ವಿ ಉದ್ಯಮದ ಬಹುದೊಡ್ಡ.


Click it and Unblock the Notifications