ದೇಶದ ಪ್ರಮುಖ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿರುವ ರತನ್ ಟಾಟಾ ಅವರ ಟಾಟಾ ಗ್ರೂಪ್ ವಿಶ್ವದ ಪ್ರಮುಖ ಕಾಫಿ ಕಂಪನಿಯಾದ ಸ್ಟಾರ್‌ಬಕ್ಸ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಭಾರತ ದೇಶಕ್ಕೆ ಟಾಟಾ ಗ್ರೂಪ್ ತಂದಿರುವ ಸ್ಟಾರ್‌ಬಕ್ಸ್ ಇಂಡಿಯಾದ ಸಿಇಒ ಸುಶಾಂತ್ ದಾಶ್.
ಸುಶಾಂತ್ ದಾಶ್ ಅವರು ಟಾಟಾ ಸ್ಟಾರ್‌ಬಕ್ಸ್‌ನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಇದು ಸ್ಟಾರ್‌ಬಕ್ಸ್‌ನ ಭಾರತದ ಬ್ರಾಂಚ್ ಆಗಿದ್ದು, ದೇಶಾದ್ಯಂತ ನೂರಾರು ಮಳಿಗೆಗಳನ್ನು ತೆರೆಯಲಾಗಿದೆ. ಅಂತಾರಾಷ್ಟ್ರೀಯ ಬ್ರಾಂಡ್ ಭಾರತಕ್ಕೆ ಬಂದ ಒಂದು ದಶಕದ ನಂತರ 2021ರಲ್ಲಿ ದಾಶ್ ಅವರನ್ನು ಸ್ಟಾರ್‌ಬಕ್ಸ್‌ನ ಸಿಇಒ ಆಗಿ ನೇಮಕಗೊಳಿಸಲಾಗಿದೆ.

ಸ್ಟಾರ್‌ಬಕ್ಸ್ 2012ರಲ್ಲಿ ಟಾಟಾ ಗ್ರೂಪ್‌ನೊಂದಿಗೆ 50-50 ಒಪ್ಪಂದವನ್ನು ಮಾಡುವ ಮೂಲಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ದೇಶಾದ್ಯಂತ ನೂರಾರು ಮಳಿಗೆಗಳನ್ನು ತೆರೆದ ಬಳಿಕ ಸ್ಟಾರ್‌ಬಕ್ಸ್ ಇಂಡಿಯಾ ಈಗ 683 ಕೋಟಿ ರೂಪಾಯಿಗೂ ಹೆಚ್ಚು ಆದಾಯವನ್ನು ಹೊಂದಿದೆ. ಸ್ಟಾರ್‌ಬಕ್ಸ್ ಅಂತಾರಾಷ್ಟ್ರೀಯವಾಗಿ 2.60 ಲಕ್ಷ ಕೋಟಿ ರೂಪಾಯಿ ಆದಾಯವನ್ನು ಹೊಂದಿದೆ.
ಸುಶಾಂತ್ ದಾಶ್ ಅವರು ಆರಂಭದಲ್ಲಿ ಟಾಟಾ ಸಂಸ್ಥೆಯ ಉದ್ಯೋಗಿಯಾಗಿದ್ದು, ಬಳಿಕ ಸ್ಟಾರ್‌ಬಕ್ಸ್ ಇಂಡಿಯಾ ಪ್ರಾಜೆಕ್ಟ್‌ನ ಭಾಗವಾಗಿದ್ದರು. ವಿಶ್ವದ ಅತಿದೊಡ್ಡ ಕಾಫಿ ಕಂಪನಿಯಾದ ಸ್ಟಾರ್‌ಬಕ್ಸ್ ಭಾರತದಲ್ಲಿ ಬಾಗಿಲು ತೆರೆಯುವಲ್ಲಿ ದಾಶ್ ಅವರು ಬಹುದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. 2023ರ ಮಾಹಿತಿಯಂತೆ ಸ್ಟಾರ್‌ಬಕ್ಸ್ ದೇಶದೆಲ್ಲೆಡೆ 340 ಕಾಫಿ ಮಳಿಗೆಗಳನ್ನು ಹೊಂದಿವೆ.
ಟಾಟಾ ಗ್ರೂಪ್ ಜತೆ ಉದ್ಯೋಗಿಯಾಗಿ ಬಹಳ ಸುಧೀರ್ಘ ಸಂಬಂಧವನ್ನು ಹೊಂದಿರುವ ಸುಶಾಂತ್ ದಾಶ್ ಅವರು 2021ರಲ್ಲಿ ಟಾಟಾ ಸ್ಟಾರ್‌ಬಕ್ಸ್‌ನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಆರಂಭದಲ್ಲಿ ಸುಶಾಂತ್ ಅವರು ಟಾಟಾ ಕನ್ಸೂಮರ್ ಪ್ರಾಡೆಕ್ಟ್‌ನ ಭಾಗವಾಗಿದ್ದು, ಅದು ಟಾಟಾ ಟೀ, ಟಾಟಾ ಸಾಲ್ಟ್ ಹಾಗೂ ಟೆಟ್ಲಿ ಪಾನೀಯವನ್ನು ತಯಾರಿಸುತ್ತಿದೆ.
ಟಾಟಾ ಸ್ಟಾರ್‌ಬಕ್ಸ್‌ನ ಸಿಇಒ ಆಗುವ ಮೊದಲು, ಡ್ಯಾಶ್ ಅವರು ಟಾಟಾ ಗ್ರಾಹಕ ಉತ್ಪನ್ನಗಳಲ್ಲಿ ಭಾರತ, ಬಾಂಗ್ಲಾದೇಶ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಪ್ಯಾಕೇಜ್ಡ್ ಪಾನೀಯಗಳ ವ್ಯಾಪಾರದ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿದ್ದರು. ಪಾನೀಯ ವಿಭಾಗದಲ್ಲಿ ಕಂಪನಿಯ ಅಂತಾರಾಷ್ಟ್ರೀಯ ವ್ಯವಹಾರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು.
ಸುಶಾಂತ್ ದಾಶ್ ಅವರು ಪಡೆಯುತ್ತಿರುವ ನಿಖರವಾದ ವೇತನ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಕಂಪನಿಯು ಬಹಿರಂಗಪಡಿಸಿಲ್ಲ. ಆದರೆ ಟಾಟಾ ಸಿಇಒಗಳ ವೃತನ ಶ್ರೇಣಿಯು ಅವರ ವಾರ್ಷಿಕ ಹಣಕಾಸು ವರದಿಗಳ ಪ್ರಕಾರ, ಸುಮಾರು 2 ರಿಂದ 3 ಕೋಟಿ ರೂಪಾಯಿ ಆಗಿದೆ.


Click it and Unblock the Notifications