2022ರ ಎಡೆಲ್‌ಗಿವ್ ಹುರುನ್ ಇಂಡಿಯಾ ಫಿಲೋಂಥ್ರಾಫಿ ಲಿಸ್ಟ್ ನಲ್ಲಿ ಶಿವ ನಾಡರ್, ಮುಕೇಶ್ ಅಂಬಾನಿ ಮತ್ತು ಇತರೆ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಸೇರಿಸಲಾಗಿದೆ. ಫಿಲೋಂಥ್ರಾಫಿಸ್ಟ್ ನಾಡರ್ ಅವರು ವಾರ್ಷಿಕ 1,161 ಕೋಟಿ ರೂ.ವನ್ನು ಚಾರಿಟಿಗೆ ನೀಡುವ ಮೂಲಕ ಭಾರತದ ಅತ್ಯಂತ ಉದಾರ ವ್ಯಕ್ತಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಮೈಂಡ್‌ಟ್ರೀಯ ಸುಸ್ಮಿತಾ ಮತ್ತು ಸುಬ್ರೊಟೊ ಬಾಗ್ಚಿ ಅವರು ವಾರ್ಷಿಕ 213 ಕೋಟಿ ರೂ.ವನ್ನು ದಾನ ಮಾಡುವ ಮೂಲಕ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬೈನ್ ಅಂಡ್ ಕಂಪೆನಿ ಹಾಗೂ ದಸ್ರಾದ 2022ರ ಇಂಡಿಯಾ ಫಿಲೋಂಥ್ರಫಿ ವರದಿ ಪ್ರಕಾರ, ದೇಶದ ಶೇ.1ಕ್ಕಿಂತ ಕಡಿಮೆ ಬಿಲಿಯನೇರ್‌ಗಳು ತಮ್ಮ ಬಂಡವಾಳವನ್ನು ದತ್ತಿ ಪ್ರಯತ್ನಗಳಿಗೆ ದಾನ ಮಾಡುತ್ತಿದ್ದಾರೆ.

ಸುಸ್ಮಿತಾ ಬಾಗ್ಚಿ ಯಾರು?
ಸುಸ್ಮಿತಾ ಅವರು ಒಡಿಯಾದ ಜನಪ್ರಿಯ ಲೇಖಕಿಯಾಗಿದ್ದು, ಮಾಸಿಕ ಪತ್ರಿಕೆ ಸುಚಿತ್ರಾವನ್ನು ಕಟ್ಟಿ ಬೆಳೆಸಿದವರು. ಸುಸ್ಮಿತಾ ಅವರ ಕೆಲಸ-ಕಾರ್ಯಗಳನ್ನು ಮೊದಲು ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ತಮ್ಮ ತಾಯಿಯಂತೆ ಸುಸ್ಮಿತಾ ಅವರು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದರು. ಸುಸ್ಮಿತಾ ಬಾಗ್ಚಿ ಮೈಂಡ್‌ಟ್ರೀಯ ಸಹ-ಸಂಸ್ಥಾಪಕರಾಗಿ ಸಮಾಜ ಸುಧಾರಣೆ ಜತೆ ಪ್ರತಿಭಾವಂತ ಲೇಖಕಿಯೂ ಹೌದು. ಅವರು ಪ್ರವಾಸ ಕಥನ, ಹಲವು ಸಣ್ಣ ಕಾದಂಬರಿಗಳು ಹಾಗೂ ಐದು ದೊಡ್ಡ ಕಾದಂಬರಿಗಳನ್ನು ಬರೆದಿದ್ದಾರೆ. ಅವರು ಇಂಗ್ಲಿಷ್ ಹಾಗೂ ಒಡಿಯಾ ಭಾಷೆಯಲ್ಲಿ ಬರೆಯುತ್ತಾರೆ.
ಸುಸ್ಮಿತಾ ಬಾಗ್ಚಿ ಅವರ ಸಾಧನೆ
1990ರಲ್ಲಿ ಮೊದಲ ಸಣ್ಣ ಕಥೆ 'ಆಕಾಶ ಜ್ಯುಂತಿ ಕಥಾ' ಬಿಡುಗಡೆಯಾಗಿತ್ತು. 2006ರಲ್ಲಿ ಅವರ ಒಡಿಯಾ ಕಾದಂಬರಿ 'ದೇಬಾ ಶಿಶು' ಬಿಡುಗಡೆಯಾಗಿತ್ತು. ಪೆಂಗ್ವಿನ್ ಪುಸ್ತಕದ ಇಂಗ್ಲಿಷ್ ಅನುವಾದವಾದ ಚಿಲ್ಟ್ರನ್ ಎ ಬೆಟರ್ ಗಾಡ್ 2010ರಲ್ಲಿ ಪ್ರಕಟವಾಗಿತ್ತು. ಹೆಚ್ಚು ಜನರು ತಮ್ಮ ಮೊದಲ ಇಂಗ್ಲಿಷ್ ಭಾಷೆಯ ಪುಸ್ತಕವನ್ನು ಓದಬೇಕೆಂಬುದು ಅವರ ನಿರೀಕ್ಷೆಯಾಗಿತ್ತು. ಮಾನಸಿಕ ಆರೋಗ್ಯವು ಪುಸ್ತಕದ ವಿಷಯವಾಗಿತ್ತು.
ಯಾರಾದರೂ ಅಥವಾ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುವ ಕುಟುಂಬವು ತಮ್ಮ ಚೊಚ್ಚಲ ಇಂಗ್ಲಿಷ್ ಕಾದಂಬರಿಯ ಕಥಾವಸ್ತುವನ್ನು ಗುರುತಿಸುತ್ತಾರೆ ಎಂದು ಅವರು ಹೇಳುತ್ತಾರೆ. ಅವರ ಅನ್ಯೋನ್ಯತೆ ಹಾಗೂ ವಿ ವಿಶ್ವಾಸಾರ್ಹತೆಯಿಂದಾಗಿ ಅವರ ಕೃತಿಗಳನ್ನು ಓದಲು ಓದುಗರು ಹೆಚ್ಚು ಇಷ್ಟಪಡುತ್ತಾರೆ.
ಸುಸ್ಮಿತಾ ಬಾಗ್ಚಿ ಪಡೆದ ಪ್ರಶಸ್ತಿಗಳು
1993ರಲ್ಲಿ ಅವರು ತಮ್ಮ 'ಆಕಾಶ ಜೆಂತಿ ಕಥಾ' ಎಂಬ ಸಣ್ಣ ಕಥೆಗಳ ಸಂಗ್ರಹಕ್ಕಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಜತೆಗೆ ಅವರು ಉತ್ಕಲ ಸಮ್ಮಾನ್, ಪ್ರಜಾತಂತ್ರ ಪ್ರಶಸ್ತಿ ಹಾಗೂ ಗಂಗಾಧರ ರಥ ಫೌಂಡೇಶನ್ ಪ್ರಶಸ್ತಿ ಸೇರಿದಂತೆ ಹಲವಾರು ಇತರೆ ಪ್ರತಿಷ್ಟಿತ ಗೌರವಗಳನ್ನು ಪಡೆದುಕೊಂಡಿದ್ದಾರೆ.
ಸುಸ್ಮಿತಾ ಮತ್ತು ಸುಬ್ರೋತಾ ಬಾಗ್ಚಿ, ರಾಧಾ ಮತ್ತು ಎನ್‌ಎಸ್ ಪಾರ್ಥಸಾರಥಿ ಮತ್ತು ಇತರೆ ಮೈಂಡ್‌ಟ್ರೀ ಸಹ-ಸಂಸ್ಥಾಪಕರು ಹಾಗೂ ಇತರೆ ಫಿಲೋಂಥ್ರೊಫಿಸ್ಟ್‌ಗಳು ಆರೋಗ್ಯ ಸೇವೆಯ ಪ್ರಗತಿಗಾಗಿ 2022ರಲ್ಲಿ ಒಟ್ಟು 213 ಕೋಟಿ ರೂ. ದಾನ ಮಾಡಿದ್ದಾರೆ.


Click it and Unblock the Notifications