ಫೋರ್ಬ್ಸ್ ಇತ್ತೀಚೆಗೆ ತನ್ನ 400 ಶ್ರೀಮಂತ ಅಮೆರಿಕನ್‌ಗಳ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವಿಶ್ವದಲ್ಲೇ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಫೋರ್ಬ್ಸ್ ಪ್ರಕಾರ, ಯುಎಸ್‌ನಲ್ಲಿ ಶ್ರೀಮಂತ ವ್ಯಕ್ತಿಗಳ ಸಂಪತ್ತು ಒಂದು ವರ್ಷದಲ್ಲಿ ಸುಮಾರು 500 ಬಿಲಿಯನ್ ಡಾಲರ್ ಹೆಚ್ಚಾಗಿದೆ.
ಒಟ್ಟು ಸಂಪತ್ತು 4.5 ಟ್ರಿಲಿಯನ್ ಡಾಲರ್ ಆಗಿದ್ದು, ಇದು 2021 ರಲ್ಲಿನ ದಾಖಲೆಗೆ ಸರಿಸಮಾನವಾಗಿದೆ. ಫೋರ್ಬ್ಸ್ 400 ಶ್ರೀಮಂತ ಅಮೆರಿಕನ್‌ಗಳ ಪಟ್ಟಿಯಲ್ಲಿ 251 ಬಿಲಿಯನ್ ಡಾಲರ್ ಅಂದಾಜು ನಿವ್ವಳ ಆದಾಯದೊಂದಿಗೆ ಎಲಾನ್ ಮಸ್ಕ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇದು ಹಿಂದಿನ ವರ್ಷದಂತೆಯೇ ಇದೆ.

ಕುತೂಹಲಕಾರಿಯಾಗಿ, ಎಲೈಟ್ ಕ್ಲಬ್‌ಗೆ ಸೇರಲು ಅಗತ್ಯವಿರುವ ಕನಿಷ್ಠ ಸಂಪತ್ತು 2.9 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಕಳೆದ ವರ್ಷ 2.7 ಬಿಲಿಯನ್ ಡಾಲರ್‌ನಿಂದ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಈ ವರ್ಷ, ನಾಲ್ಕು ಭಾರತೀಯ ಮೂಲದ ಬಿಲಿಯನೇರ್‌ಗಳು ಫೋರ್ಬ್ಸ್ 400 ಶ್ರೀಮಂತ ಅಮೆರಿಕನ್‌ಗಳ 2023 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಜೈ ಚೌಧರಿ, ಶ್ರೇಣಿ: 89, ನಿವ್ವಳ ಮೌಲ್ಯ: 9.2 ಬಿಲಿಯನ್ ಡಾಲರ್
2008 ರಲ್ಲಿ ಸ್ಥಾಪಿಸಿದ ಸೈಬರ್ ಸೆಕ್ಯುರಿಟಿ ಸಂಸ್ಥೆ Zscaler ನ ಸಿಇಒ ಜೈ ಚೌಧರಿ ಆಗಿದ್ದಾರೆ. Zscaler ಮಾರ್ಚ್ 2018 ರಲ್ಲಿ ಪಬ್ಲಿಕ್ ಆಗಿದೆ. ಜೈ ಚೌಧರಿ 1958 ರಲ್ಲಿ ಹಿಮಾಚಲ ಪ್ರದೇಶದ ಉನಾದಲ್ಲಿ ಜನಿಸಿದರು. 1980 ರಲ್ಲಿ ಯುಎಸ್‌ಗೆ ಹೋಗಿ ಪದವಿ ಪಡೆದಿದ್ದಾರೆ. ವಾರಣಾಸಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಬಿಎಚ್‌ಯು) ಹಳೆಯ ವಿದ್ಯಾರ್ಥಿಯೂ ಹೌದು.
ವಿನೋದ್ ಖೋಸ್ಲಾ, ಶ್ರೇಣಿ: 161, ನಿವ್ವಳ ಮೌಲ್ಯ: 6.5 ಬಿಲಿಯನ್ ಡಾಲರ್
ವೆಂಚರ್ ಕ್ಯಾಪಿಟಲಿಸ್ಟ್‌ನ ವಿನೋದ್ ಖೋಸ್ಲಾ ಖೋಸ್ಲಾ ವೆಂಚರ್ಸ್‌ನ ಸಂಸ್ಥಾಪಕರಾಗಿದ್ದಾರೆ. ಇದು ಬಯೋಮೆಡಿಸಿನ್ ಮತ್ತು ರೊಬೊಟಿಕ್ಸ್‌ನಂತಹ ಪ್ರಾಯೋಗಿಕ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತದೆ. ಖೋಸ್ಲಾ 1955 ರಲ್ಲಿ ನವದೆಹಲಿಯಲ್ಲಿ ಜನಿಸಿದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ದೆಹಲಿ, ಸ್ಟ್ಯಾನ್‌ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಖೋಸ್ಲಾ 1982 ರಲ್ಲಿ ಆಂಡಿ ಬೆಚ್ಟೋಲ್ಶೀಮ್, ಬಿಲ್ ಜಾಯ್ ಮತ್ತು ಸ್ಕಾಟ್ ಮೆಕ್ನೀಲಿ ಜೊತೆ ಸನ್ ಮೈಕ್ರೋಸಿಸ್ಟಮ್ಸ್ ಅನ್ನು ಸಹ- ಸಂಸ್ಥಾಪನೆ ಮಾಡಿದ್ದಾರೆ.
ರೋಮೇಶ್ ಟಿ ವಾಧ್ವಾನಿ, ಶ್ರೇಣಿ: 215, ನಿವ್ವಳ ಮೌಲ್ಯ: 5.1 ಬಿಲಿಯನ್ ಡಾಲರ್
ರೋಮೇಶ್ ವಾಧ್ವಾನಿ 2017 ರಲ್ಲಿ ಸ್ಥಾಪಿಸಿದ ಸಿಂಫನಿ ಎಐನ ಅಧ್ಯಕ್ಷರಾಗಿದ್ದಾರೆ. 2022 ರ ಆರಂಭದಲ್ಲಿ ಸಿಂಫೋನಿಎಐನ ಸಿಇಒ ಹುದ್ದೆಯಿಂದ ಕೆಳಗಿಳಿದರು. ರೋಮೇಶ್ ಟಿ ವಾಧ್ವಾನಿ 1947 ರಲ್ಲಿ ಕರಾಚಿಯಲ್ಲಿ ಜನಿಸಿದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಬಾಂಬೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ 1972 ರಲ್ಲಿ ಪಿಎಚ್‌ಡಿ ಪಡೆದರು.
ರಾಜೀವ್ ಜೈನ್, ಶ್ರೇಣಿ: 366, ನಿವ್ವಳ ಮೌಲ್ಯ: 3.1 ಬಿಲಿಯನ್ ಡಾಲರ್
ರಾಜೀವ್ ಜೈನ್ ಆಸ್ತಿ ನಿರ್ವಹಣಾ ಸಂಸ್ಥೆ ಜಿಕ್ಯೂಜಿ ಪಾರ್ಟ್‌ನರ್ಸ್‌ನ ಸಂಸ್ಥಾಪಕ, ಅಧ್ಯಕ್ಷ ಮತ್ತು ಮುಖ್ಯ ಹೂಡಿಕೆ ಅಧಿಕಾರಿ ಆಗಿದ್ದಾರೆ. ರಾಜೀವ್ ಜೈನ್ 1990 ರ ದಶಕದ ಆರಂಭದಲ್ಲಿ ಮಿಯಾಮಿ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಮಾಡಲು ಭಾರತದಿಂದ ಯುಎಸ್‌ಗೆ ತೆರಳಿದ್ದು, ಪ್ರಸ್ತುತ ಅಲ್ಲಿಯೇ ನೆಲೆಸಿದ್ದಾರೆ.


Click it and Unblock the Notifications