ರಿಲಯನ್ಸ್ ಚೇರ್‌ಮನ್ ಮುಕೇಶ್ ಅಂಬಾನಿ ಪ್ರಸ್ತುತ ಭಾರತದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಗೌತಮ್ ಅದಾನಿಯನ್ನು ಕೆಳಕ್ಕೆ ತಳ್ಳಿ ದೇಶದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮುಂಚೂಣಿಯಲ್ಲಿದ್ದಾರೆ. 2002ರಿಂದ ಮುಕೇಶ್ ಅಂಬಾನಿ ಸಂಸ್ಥೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಹಾಗೆಯೇ ಮುಕೇಶ್ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಸಂಸ್ಥೆಯು ಮಹತ್ವದ ಬೆಳವಣಿಗೆಯನ್ನು ಕಂಡಿದೆ.
ಅತೀ ವಿಸ್ತಾರವಾದ ಉದ್ಯಮ ವಲಯಕ್ಕೆ ಎಂಟ್ರಿ ನೀಡಲು ಮುಕೇಶ್ ಅಂಬಾನಿ ಹಲವಾರು ವರ್ಷಗಳ ಕಾಲ ಶ್ರಮಿಸಿದ್ದಾರೆ. ಒಮ್ಮೆ ಉದ್ಯಮ ವಲಯಕ್ಕೆ ಎಂಟ್ರಿ ನೀಡಿದ ರಿಲಯನ್ಸ್ ಸಂಸ್ಥೆಯು ಅದಾದ ಬಳಿಕ ತಮ್ಮ ಉದ್ಯಮವನ್ನು ವಿಸ್ತಾರ ಮಾಡುತ್ತಾ ಹೋಗಿದೆ. ಟೆಲಿಕಾಂ, ರಿಟೇಲ್ ವಲಯ ಮೊದಲಾದ ಕ್ಷೇತ್ರಗಳಿಗೆ ಎಂಟ್ರಿ ನೀಡುತ್ತಾ ಸಾಗಿದ್ದಾರೆ. ಪ್ರಸ್ತುತ ಬಹುತೇಕ ಎಲ್ಲ ವಲಯಗಳಲ್ಲೂ ಮುಕೇಶ್ ಅಂಬಾನಿ ಸಂಸ್ಥೆಯು ತನ್ನ ಕೊಡುಗೆಯನ್ನು ನೀಡಿದೆ.

ಪ್ರಸ್ತುತ ಭಾರತದಲ್ಲಿ ಟಾಪ್ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯಾಗಿದ್ದಾರೆ. ಈ ಹಿಂದೆ ಗೌತಮ್ ಅದಾನಿ ದೇಶದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ ಅದಾನಿ ಸಂಸ್ಥೆ ಸ್ಟಾಕ್ ಮಾರುಕಟ್ಟೆಯಲ್ಲಿ ಹಗರಣವನ್ನು ಮಾಡಿದೆ ಎಂಬ ಹಿಂಡನ್‌ಬರ್ಗ್ ಆರೋಪದ ಬಳಿಕ ಗೌತಮ್ ಅದಾನಿ ಭಾರೀ ನಷ್ಟವನ್ನು ಕಂಡು, ಭಾರತದ ಮಾತ್ರವಲ್ಲದೆ ಜಾಗತಿಕವಾಗಿ ಶ್ರೀಮಂತರ ಪಟ್ಟಿಯಿಂದ ಕೆಳಕ್ಕಿಳಿದಿದ್ದಾರೆ.
ಸದ್ಯ ಮುಕೇಶ್ ಅಂಬಾನಿ ದೇಶದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಹಾಗೆಯೇ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ವಿಶ್ವದ ಟಾಪ್ 15 ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಕೂಡಾ ಕಾಣಿಸಿಕೊಳ್ಳುತ್ತಾರೆ. ಪೋರ್ಬ್ಸ್ ಪ್ರಕಾರ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಅಂಬಾನಿ ನಿವ್ವಳ ಆದಾಯವು 83.4 ಬಿಲಿಯನ್ ರೂಪಾಯಿ ಆಗಿದೆ.
ಮುಕೇಶ್ ಅಂಬಾನಿ ಏಪ್ರಿಲ್ 19, 1957ರಲ್ಲಿ ಜನಿಸಿದ್ದು ಇಂದಿಗೆ 66 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಆದಾಯವು ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಆದಾಯ ಎಷ್ಟು ಬದಲಾವಣೆಯಾಗಿದೆ ಎಂದು ತಿಳಿಯೋಣ ಮುಂದೆ ಓದಿ...
ಮುಕೇಶ್ ಅಂಬಾನಿ ಆದಾಯ ಎಷ್ಟು ಏರಿಕೆ?
2014: ಕಳೆದ ಹತ್ತು ವರ್ಷಗಳಲ್ಲಿ ಮುಕೇಶ್ ಅಂಬಾನಿ ಆದಾಯದಲ್ಲಿ ಭಾರೀ ಏರಿಕೆಯಾಗಿದೆ. ಪೋರ್ಬ್ಸ್ ಪ್ರಕಾರ 2014ರಲ್ಲಿ ಮುಕೇಶ್ ಅಂಬಾನಿ ಆದಾಯವು 18.6 ಬಿಲಿಯನ್ ಡಾಲರ್ ಆಗಿತ್ತು.
2015: ಒಂದು ವರ್ಷದಲ್ಲೇ ಅಂದರೆ 2015ರಲ್ಲಿ ಮುಕೇಶ್ ಅಂಬಾನಿ ಆದಾಯವು 18.6 ಬಿಲಿಯನ್ ಡಾಲರ್‌ನಿಂದ 21 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಹಾಗೆಯೇ ವಿಶ್ವದ 39ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು 2015ರಲ್ಲಿ ಮುಕೇಶ್ ಅಂಬಾನಿ ಪಡೆದಿದ್ದಾರೆ.
2016: ರಿಲಯನ್ಸ್ ಇಂಡಸ್ಟ್ರೀಸ್ 2016ರಲ್ಲಿ ಅಜಿಯೋ (Ajio) ಆರಂಭ ಮಾಡಿದೆ. ಈ ವರ್ಷದಲ್ಲಿ ಮುಕೇಶ್ ಅಂಬಾನಿ ಆದಾಯ ಕೊಂಚ ಕುಸಿತ ಕಂಡು 19.3 ಬಿಲಿಯನ್ ಡಾಲರ್ ಆಗಿದೆ.
2017: ಮುಕೇಶ್ ಅಂಬಾನಿ ಆದಾಯವು 19.3 ಬಿಲಿಯನ್ ಡಾಲರ್‌ನಿಂದ 2017ಕ್ಕೆ 23.2 ಬಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಯಾಗಿದೆ.
2018: ಇನ್ನು 2017ರಲ್ಲಿ 23.2 ಬಿಲಿಯನ್ ಯುಎಸ್ ಡಾಲರ್ ಇದ್ದ ಮುಕೇಶ್ ಅಂಬಾನಿ ಆದಾಯವು 2018ರ ವೇಳೆಗೆ 40.1 ಬಿಲಿಯನ್ ಡಾಲರ್‌ಗೆ ಹೆಚ್ಚಳವಾಗಿದೆ.
2019: ವರ್ಷದಿಂದ ವರ್ಷಕ್ಕೆ ಮುಕೇಶ್ ಅಂಬಾನಿ ಆದಾಯವು ಭಾರೀ ಏರಿಕೆಯಾಗುತ್ತಾ ಸಾಗುತ್ತಿದೆ. 2018ರ ವೇಳೆಗೆ 40.1 ಬಿಲಿಯನ್ ಡಾಲರ್ ಆಗಿದ್ದ ಮುಕೇಶ್ ಅಂಬಾನಿ ಆದಾಯವು 2019ರ ವೇಳೆಗೆ 50 ಬಿಲಿಯನ್ ಯುಎಸ್ ಡಾಲರ್‌ಗೆ ತಲುಪಿದೆ.
2020: ಕೋವಿಡ್-19 ಸಾಂಕ್ರಾಮಿಕವು ಜಾಗತಿಕವಾಗಿ ಹರಡಿದ ವರ್ಷವು 2020 ಆಗಿದೆ. ಈ ವರ್ಷದಲ್ಲಿ ವಿಶ್ವದಾದ್ಯಂತ ಹಲವಾರು ಶ್ರೀಮಂತರ ಆದಾಯವು ಕುಸಿತ ಕಂಡಿದೆ. 2019ರ ವೇಳೆಗೆ 50 ಬಿಲಿಯನ್ ಯುಎಸ್ ಡಾಲರ್ ಆಗಿದ್ದ ಮುಕೇಶ್ ಅಂಬಾನಿ ನಿವ್ವಳ ಆದಾಯವು 2020ರಲ್ಲಿ 36.8 ಬಿಲಿಯನ್ ಯುಎಸ್ ಡಾಲರ್‌ಗೆ ಇಳಿಕೆಯಾಗಿದೆ.
2021: ಮುಕೇಶ್ ಅಂಬಾನಿ ನಿವ್ವಳ ಆದಾಯವು 2021ರಲ್ಲಿ 84.5 ಬಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಯಾಗಿದೆ.
2022: 84.5 ಬಿಲಿಯನ್ ಯುಎಸ್ ಡಾಲರ್ ಆಗಿದ್ದ ಮುಕೇಶ್ ಅಂಬಾನಿ ಆದಾಯವು 2022ರಲ್ಲಿ 90.7 ಬಿಲಿಯನ್ ಯುಎಸ್ ಡಾಲರ್‌ಗೆ ತಲುಪಿದೆ.
2023: ಪೋರ್ಬ್ಸ್‌ನ ಬಿಲಿಯನೇರ್ 2023ರ ಪಟ್ಟಿಯ ಪ್ರಕಾರ ಮುಕೇಶ್ ಅಂಬಾನಿ ಭಾರತದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಏಷ್ಯಾದಲ್ಲಿಯೂ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.


Click it and Unblock the Notifications