ಭಾರತದ ಅತೀ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ ಅತೀ ಶೀಘ್ರವಾಗಿ ತನ್ನ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಅತೀ ಶ್ರೀಘ್ರವಾಗಿ ಬೆಳೆಸಿದ್ದಾರೆ. ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಹಲವಾರು ವಲಯಗಳಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಬೇರೆ ಬೇರೆ ವಲಯಗಳಲ್ಲಿ ವಿಸ್ತರಣೆಯನ್ನು ಕಾಣುತ್ತಾ ಇದೆ. ಈಗ ದೆಹಲಿ ಎನ್‌ಆರ್‌ಸಿಯಲ್ಲಿ ವರ್ಲ್ಡ್ ಕ್ಲಾಸ್ ಸಿಟಿಯನ್ನು ನಿರ್ಮಾಣ ಮಾಡುತ್ತಿದ್ದಾರೆ!
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆ ಮಾಡೆಲ್ ಎಕನಾಮಿಕ್ ಟೌನ್‌ಶಿಪ್ ಲಿಮಿಟೆಡ್ ಅಥವಾ ಎಂಇಟಿ ಸಿಟಿಯನ್ನು ಪ್ರಸ್ತುತ ರಾಷ್ಟ್ರ ರಾಜಧಾನಿ ಪ್ರದೇಶದ ಬಳಿ ನಿರ್ಮಾಣ ಮಾಡುತ್ತಿದೆ. ಈ ಹಿಂದಿಗಿಂತಲೂ ಹೆಚ್ಚು ವಿಶ್ವದರ್ಜೆಯ ಸ್ಮಾರ್ಟ್ ಸಿಟಿಯನ್ನು ನಿರ್ಮಾಣ ಮಾಡುವ ಯೋಜನೆಯನ್ನು ಮುಕೇಶ್ ಅಂಬಾನಿ ಹೊಂದಿದ್ದಾರೆ. ಇಲ್ಲಿದೆ ವಿವರ ಮುಂದೆ ಓದಿ....

ವರ್ಲ್ಡ್ ಕ್ಲಾಸ್ ಸಿಟಿಯ ಬಗ್ಗೆ ತಿಳಿಯಿರಿ
ಹೊಸ ಗ್ರೀನ್‌ಫೀಲ್ಡ್ ನಗರವನ್ನು ಗುರುಗ್ರಾಮದ ಬಳಿ ಹರಿಯಾಣದ ಜಜ್ಜರ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಪ್ರಮುಖ ದೆಹಲಿ ಎನ್‌ಸಿಆರ್ ಆರ್ಥಿಕ ಪ್ರದೇಶವಾಗಿದೆ. 8,000 ಎಕರೆ ಪ್ರದೇಶದಲ್ಲಿ ನಗರವನ್ನು ನಿರ್ಮಿಸಲಾಗುತ್ತಿದೆ. 220 ಕೆವಿ ವಿದ್ಯುತ್ ಉಪಕೇಂದ್ರ, ನೀರು ಸರಬರಾಜು, ಸಂಸ್ಕರಣಾ ಘಟಕ ಮತ್ತು ವಿಶಾಲ ರಸ್ತೆಗಳಂತಹ ಮೂಲಸೌಕರ್ಯಗಳು ಈಗಾಗಲೇ ಆ ಪ್ರದೇಶದಲ್ಲಿದೆ.
ಪ್ರಸ್ತುತ, ಹೊಸ ರಿಲಯನ್ಸ್ ಸ್ಮಾರ್ಟ್ ಸಿಟಿಯು 4 ಜಪಾನಿನ ದೈತ್ಯರಿಗೆ ನೆಲೆಯಾಗಿದೆ. ನಿಹಾನ್ ಕೊಹ್ಡೆನ್, ಪ್ಯಾನಾಸೋನಿಕ್, ಡೆನ್ಸೊ ಮತ್ತು ಟಿ-ಸುಜುಕಿ ಸಂಸ್ಥೆಗಳು ಈ ಪ್ರದೇಶದಲ್ಲಿಯೆ ಇದೆ. ನಿಹಾನ್ ಕೊಹ್ಡೆನ್ ನಿರ್ಮಾಣದ ಅಡಿಯಲ್ಲಿನ ಸೌಲಭ್ಯವು ಭಾರತದಲ್ಲಿನ ಅದರ ಅತಿದೊಡ್ಡ ಉತ್ಪಾದನಾ ಘಟಕವಾಗಿದೆ. ಎಂಇಟಿ ಸಿಟಿಯು ಜಪಾನ್ ಇಂಡಸ್ಟ್ರಿಯಲ್ ಟೌನ್‌ಶಿಪ್ ಆಗಿದೆ.
ಎಂಇಟಿ ಸಿಟಿಯ ಸಿಇಒ ಎಸ್‌ವಿ ಗೋಯಲ್ ಪ್ರಕಾರ, ಕಂಪನಿಯು 400 ಕ್ಕೂ ಹೆಚ್ಚು ಕೈಗಾರಿಕಾ ಗ್ರಾಹಕರನ್ನು ಹೊಂದಿದೆ. ಉತ್ತರ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರೀನ್‌ಫೀಲ್ಡ್ ಸ್ಮಾರ್ಟ್ ಸಿಟಿಗಳಲ್ಲಿ ಒಂದಾದ ವಾಕ್-ಟು-ವರ್ಕ್ ಮಾಸ್ಟರ್‌ಪ್ಲಾನ್ ಅನ್ನು ಮಾಡೆಲ್ ಎಕನಾಮಿಕ್ ಟೌನ್‌ಶಿಪ್ ಲಿಮಿಟೆಡ್ ನಿರ್ಮಿಸಿದೆ. ಅಲ್ಲಿ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೆ ನಗರವು ಪ್ಲಗ್-ಎನ್-ಪ್ಲೇ ಮೂಲಸೌಕರ್ಯವನ್ನು ಸಹ ನೀಡುತ್ತದೆ.
ಹೊಸ ರಿಲಯನ್ಸ್ ನಗರವು ದೆಹಲಿ, ಗುರುಗ್ರಾಮ್, ನೋಯ್ಡಾ ಮತ್ತು ಪ್ರದೇಶದ ಇತರ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ನಗರವು ಕುಂಡ್ಲಿ ಮನೇಸರ್ ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇ ಮತ್ತು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಆಯಕಟ್ಟಿನ ಸ್ಥಳವಾಗಿದೆ. ಇದು ದೆಹಲಿ ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್‌ನ (ಡಿಎಂಐಸಿ) ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಡಿಎಫ್‌ಸಿ) ನೊಂದಿಗೆ ರೈಲು ಸಂಪರ್ಕವನ್ನು ಹೊಂದಿರುತ್ತದೆ.
ಎಂಇಟಿ ಸಿಟಿ ವೆಬ್‌ಸೈಟ್ ಪ್ರಕಾರ ಇದು ತಕ್ಷಣದ ಅಭಿವೃದ್ಧಿಗಾಗಿ ಭೂಮಿಯ ಸಿದ್ಧ ಲಭ್ಯತೆಯನ್ನು ನೀಡುತ್ತದೆ. ಇನ್ನು ಶೈಕ್ಷಣಿಕ ಸೌಲಭ್ಯಗಳ ವಿಚಾರಕ್ಕೆ ಬಂದಾಗ ಇಲ್ಲಿ ಉತ್ತಮ ಶಾಲಾ ಕಾಲೇಜುಗಳು ಕೂಡಾ ಇದೆ. ಎಸ್‌ಜಿಟಿ ವಿಶ್ವವಿದ್ಯಾನಿಲಯ ಮತ್ತು ದಿ ಸೆಹ್ವಾಗ್ ಶಾಲೆ (ಮಾಜಿ ಕ್ರಿಕೆಟಿಗರಿಂದ ನಡೆಸಲ್ಪಡುವ) ಈ ಪ್ರದೇಶದಲ್ಲಿ ಇದೆ. ಸಮೀಪದಲ್ಲಿ ಎಮ್ಸ್ ಆಸ್ಪತ್ರೆಯೂ ಕೂಡಾ ಇದೆ.
ಮುಕೇಶ್, ಆಕಾಶ್ ಅಂಬಾನಿ ಸಂಸ್ಥೆಗೆ ಆದಾಯ ತೆರಿಗೆ ನೋಟಿಸ್!
ದೇಶದ ಅತೀ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿಯ ಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಮೇಲೆ ನೋಟಿಸ್ ಅನ್ನು ನೀಡಿದೆ ಎಂದು ವರದಿಯಾಗಿದೆ. ಇನ್ನು ಟಾಟಾ ಕಮ್ಯೂನಿಕೇಷನ್‌ಗೂ ಕೂಡಾ ಆದಾಯ ತೆರಿಗೆ ಇಲಾಖೆಯು ನೋಟಿಸ್ ಅನ್ನು ಸಲ್ಲಿಸಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಇಂಟರ್‌ಕನೆಕ್ಷನ್ ಬಳಕೆ ಶುಲ್ಕದ ವಿಚಾರದಲ್ಲಿ ಆದಾಯ ತೆರಿಗೆ ಇಲಾಖೆಯು ಮುಕೇಶ್ ಅಂಬಾನಿಯ ಸಂಸ್ಥೆಗೆ ನೋಟಿಸ್ ಅನ್ನು ಕಳುಹಿಸಿದೆ. ಇನ್ನು ಎರಡು ಕಂಪನಿಗಳು ಕೂಡಾ ಈ ನೋಟಿಸ್ ವಿರುದ್ಧವಾಗಿ ಆದಾಯ ತೆರಿಗೆ ಆಯುಕ್ತರಿಗೆ (ಮನವಿಗಳು) ಮೇಲ್ಮನವಿ ಸಲ್ಲಿಸಿವೆ. ನೋಟಿಸ್ ವಿರುದ್ಧ ಟಾಟಾ ಕೂಡ ಮೇಲ್ಮನವಿ ಸಲ್ಲಿಸಿದೆ.


Click it and Unblock the Notifications