ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರನ್ನು ಆನಂದ್ ಪಿರಮಾಲ್ ಅವರು 2018ರಲ್ಲಿ ವಿವಾಹವಾಗಿದ್ದಾರೆ. ಹೊಸ ಮನೆಗೆ ತೆರಳಿರುವ ಇಶಾ ಅಂಬಾನಿ ಅವರು ಆನಂದ್ ಪಿರಮಾಲ್ ಅವರೊಂದಿಗೆ ಸುಖ ಹಾಗೂ ನೆಮ್ಮದಿಯ ಜೀವನವನ್ನು ಆನಂದಿಸುತ್ತಿದ್ದಾರೆ. ಗುಲಿಟಾದಲ್ಲಿರುವ ಇಶಾ ಅಂಬಾನಿ ಮ್ಯಾನ್ಶನ್ ಎಂದು ಕರೆಯಲ್ಪಡುವ ಐಶಾರಾಮಿ ಎಸ್ಟೇಟ್‌ನಲ್ಲಿ ವಾಸಿಸಲು ಎಲ್ಲರೂ ಆಸೆಪಡುತ್ತಾರೆ.
ಮುಕೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಅವರು ಪತಿಯ ಮನೆಗೆ ಬರುವುದಕ್ಕಿಂತಲೂ ಮೊದಲು ಭಾರತದ ಅತ್ಯಂತ ದುಬಾರಿ ಮನೆಯಾದ ಅಂಟಿಲಿಯಾದಲ್ಲಿ ವಾಸಿಸುತ್ತಿದ್ದರು. ಇದು ಮಂಬೈನಲ್ಲಿರುವ ಅವರ ಕುಟುಂಬದ ಅತ್ಯಂತ ಶ್ರೀಮಂತ ಬಂಗಲೆಯಾಗಿದೆ. ಇಶಾ ಅಂಬಾನಿ ಅವರ ಮನೆಯು ನೆರೆ-ಹೊರೆಯಲ್ಲಿ ಈಗ ಅತಿಹೆಚ್ಚು ಬೇಡಿಕೆಯಿರುವ ನಿವಾಸಗಳಲ್ಲಿ ಒಂದಾಗಿದೆ. ಏಕೆಂದರೆ, ಇದು ಅರೇಬಿಯನ್ ಸಮುದ್ರದ ಕಡೆಗೆ ಮುಖ ಮಾಡಿದ್ದು, ಅತ್ಯಂತ ಸುಂದರ ನೋಟವನ್ನು ಕೂಡ ಹೊಂದಿದೆ.

ಈ ನಿವಾಸವನ್ನು ಆನಂದ್ ಪಿರಮಾಲ್ ಅವರ ಮಿಲಿಯನೇರ್ ಪೋಷಕರಾದ ಅಜಯ್ ಪಿರಮಾಲ್ ಹಾಗೂ ಸ್ವಾತಿ ಪಿರಮಾಲ್ ಅವರು ಮದುವೆಯ ಉಡುಗೊರೆಯಾಗಿ ಇಶಾ ಅಂಬಾನಿ ಹಾಗೂ ಮಗ ಆನಂದ್ ಪಿರಮಾಲ್ ಅವರಿಗೆ ನೀಡಿದ್ದಾರೆ. ಪಿರಮಾಲ್ ಕುಟುಂಬವು ಔಷಧ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.
ಗುಲಿಟಾ ಇಶಾ ಅಂಬಾನಿ ಅವರ ಮನೆಯಾಗಿದ್ದು, 5,000 ಚದರ ಅಡಿಯ ಅಲ್ಟ್ರಾ ಐಷಾರಾಮಿ ಬಂಗಲೆಯಾಗಿದೆ. ಮಿಂಟ್ ಪ್ರಕಾರ ಈ ಮನೆಯ ಬೆಲೆ ಬರೋಬ್ಬರಿ 450 ಕೋಟಿ ರೂಪಾಯಿ ಆಗಿದೆ. 2012ರಲ್ಲಿ ಆನಂದ್ ಪಿರಮಾಲ್ ಅವರ ಪೋಷಕರು ಈ ಆಸ್ತಿಗಾಗಿ 61.2 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಪಾವತಿಸಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಇಶಾ ಅಂಬಾನಿ ಹಾಗೂ ಆನಂದ್ ಪಿರಮಾಲ್ ಅವರ ಈ ಐದು ಅಂತಸ್ತಿನ ಐಷಾರಾಮಿ ನಿವಾಸದ ಮುಂಭಾಗವು ಅತ್ಯಾಕರ್ಷಕವಾದ ಗಾಜಿನ ರಚನೆಯನ್ನು ಹೊಂದಿದೆ. ಇದನ್ನು ವಜ್ರದ ಮಾಡೆಲ್‌ನಲ್ಲಿ ಉಕ್ಕಿನ ಕಟ್ಟಡವನ್ನು ಹೋಲುವಂತೆ ತ್ರಿಡಿ ಮಾಡೆಲಿಂಗ್ ಬಳಸಿ ವಿನ್ಯಾಸಗೊಳಿಸಲಾಗಿದೆ.
ರಾಯಿಟರ್ಸ್ ಪ್ರಕಾರ, ಲಂಡನ್‌ನಲ್ಲಿರುವ ಎಂಜಿನಿಯರಿಂಗ್ ಕಂಪನಿಯಾದ ಎಕರ್ಸಿಲಿ ಒ ಕಲ್‌ಘನ್ ಈ ಮನೆಯ ಸುಂದರ ಕಲಾಕೃತಿ ಅನಾವರಣಗೊಳಿಸುವುದರ ಹಿಂದೆ ಕೆಲಸ ಮಾಡಿದೆ. ಈ ಐಷಾರಾಮಿ ಬಂಗಲೆಯು ಎತ್ತರದ ಛಾವಣಿಗಳು, ಆಧುನಿಕ ಪೀಠೋಪಕರಣಗಳು ಸೇರಿದಂತೆ ಅರಮನೆಯಂತೆ ಕಂಗೊಳಿಸುತ್ತಿದೆ.
ಗುಲಿಟಾ ಮನೆಯು ಮೂರು ನೆಲಮಹಡಿಯನ್ನು ಹೊಂದಿದ್ದು, ದೊಡ್ಡ ಹುಲ್ಲಿನ ಹಾಸು ಹಾಗೂ ಈಜುಕೊಳವನ್ನು ಹೊಂದಿದೆ. ವಿಶಿಷ್ಟವಾದ ಸೈಡ್ ಟೇಬಲ್‌ಗಳು ಹಾಗೂ ಬಹಳ ಆಕರ್ಷಕವಾದ ವಿನೂತನ ಮಾದರಿಯ ಸೋಫಾ ಸೆಟ್‌ಗಳನ್ನು ಕೂಡ ಲಿವಿಂಗ್ ರೂಂಗಳಲ್ಲಿ ಕಾಣಬಹುದು. ಅಲ್ಲದೆ ಲಿವಿಂಗ್ ರೂಂನ ಗೋಡೆಗಳು ಕೂಡ ಸುಂದರವಾದ ವರ್ಣಚಿತ್ರಗಳಿಂದ ಕಂಗೊಳಿಸುತ್ತಿವೆ. ಅಲ್ಲದೆ ಈ ಮನೆಯ ಪೀಠೋಪಕರಣಗಳನ್ನು ಕೂಡ ವಿಶೇಷವಾಗಿ ಇಶಾ ಅಂಬಾನಿ ಹಾಗೂ ಆನಂದ್ ಪಿರಮಾಲ್ ಅವರ ಕುಟುಂಬಕ್ಕಾಗಿ ವಿನ್ಯಾಸಗೊಳಿಸಲಾಗಿದೆ.
ಮುಕೇಶ್ ಅಂಬಾನಿ ಮನೆಯ ವಿವರ
ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ವಿಶ್ವದಲ್ಲೇ ಅತೀ ದುಬಾರಿ ಖಾಸಗಿ ಮನೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿಯ ಈ ದುಬಾರಿ ಮನೆಯನ್ನು ಅಂಟಿಲಿಯಾ ಎಂದು ಕರೆಯಲಾಗುತ್ತದೆ. ಈ 27 ಅಂತಸ್ತಿನ ಮನೆಯಲ್ಲಿ ಮುಕೇಶ್ ಅಂಬಾನಿಯ ಕುಟುಂಬವಾದ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕ ಅಂಬಾನಿ, ಪೃತ್ವಿ ಅಂಬಾನಿ ವಾಸಿಸುತ್ತಾರೆ.
ಪ್ರಸ್ತುತ ಭಾರತದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್ ಅಂಬಾನಿಯ ಕುಟುಂಬವು 2012ರಲ್ಲಿ ಅಂಟಿಲಿಯಾದಲ್ಲಿ ವಾಸಿಸಲು ಆರಂಭಿಸಿದ್ದಾರೆ. ಪ್ರಸ್ತುತ ಮುಕೇಶ್ ಅಂಬಾನಿಯ ಈ ಮನೆಯ ಮೌಲ್ಯವು 15,000 ಕೋಟಿ ರೂಪಾಯಿ ಆಗಿದೆ. 2012ರಿಂದ ಈವರೆಗೂ ಕೂಡಾ ಈ ಅಂಟಿಲಿಯಾ ಮನೆಯು ತನ್ನ ಐಷಾರಾಮಿ ವ್ಯವಸ್ಥೆಯಿಂದಲೇ ಅತೀ ಜನಪ್ರಿಯವಾಗಿದೆ. ಈಗಲೂ ನಿರಂತರವಾಗಿ ಈ ಅಂಟಿಲಿಯಾ ಸುದ್ದಿಯಾಗುತ್ತದೆ. ಪ್ರಮುಖವಾಗಿ ಅಲ್ಲಿನ ಸೌಲಭ್ಯ, ಅದ್ದೂರಿ ಪಾರ್ಟಿ, ರಕ್ಷಣೆ ವಿಚಾರದಲ್ಲಿ ಸುದ್ದಿಯಾಗುತ್ತಿದೆ.


Click it and Unblock the Notifications