ಮುಕೇಶ್ ಅಂಬಾನಿ ಅವರ ರಿಲಯನ್ಸ್ ಹಾಗೂ ಟಾಟಾ ಗ್ರೂಪ್‌ನ ಟಾಟಾ ಕಂಪನಿಯು ಭಾರತದಲ್ಲಿ ಮುಂಚೂಣಿಯಲ್ಲಿರುವ ಎರಡು ಉದ್ಯಮ ಸಂಸ್ಥೆಗಳು. ಇದೀಗ ಅಂಬಾನಿ ಅವರ ಆರ್‌ಐಎಲ್ (ರಿಲಯನ್ಸ್) ಕಂಪನಿಯು ಬಹುಕೋಟಿ ಹೂಡಿಕೆಯೊಂದಿಗೆ ಆತಿಥ್ಯ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದೆ. ಆ ಮೂಲಕ ಟಾಟಾ ಸಮೂಹದ ತಾಜ್ ಗ್ರೂಪ್ ಹೋಟೆಲ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಪ್ರಬಲ ಪೈಪೋಟಿ ನೀಡುವತ್ತ ಗಮನಹರಿಸಿದೆ.
1902ರಲ್ಲಿ ತಾಜ್ ಹೋಟೆಲ್ಸ್ ಅನ್ನು ಸ್ಥಾಪಿಸಲಾಗಿದ್ದು, ವಿಶ್ವದಾದ್ಯಂತ ಐಷಾರಾಮಿ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಈ ನಡುವೆ, ಈಗ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜಗತ್ತಿನಾದ್ಯಂತ ಐಶಾರಾಮಿ ಆತಿಥ್ಯ ಒದಗಿಸುವುದಕ್ಕೆ ಅದ್ದೂರಿ ಹೋಟೆಲ್‌ಗಳನ್ನು ಖರೀದಿಸುವುದಕ್ಕೆ ಮುಂದಾಗಿದೆ.

ಅಂಬಾನಿ ಅವರ ಬಳಿಯಿರುವ ಅತ್ಯಂತ ಐಶಾರಾಮಿ ಆಸ್ತಿ ಅಂದರೆ ಅದು ಮುಂಬೈನಲ್ಲಿರುವ ಅವರ ಆಂಟಿಲಿಯಾ ಮನೆ. ಇದರ ಮೌಲ್ಯವೇ ಸುಮಾರು 15000 ಕೋಟಿ ರೂಪಾಯಿ ಆಗಿದೆ. ಈಗ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ಜಗತ್ತಿನ ಅಪರೂಪದ ಅದ್ಭುತ ತಾಣಗಳನ್ನು ಖರೀದಿಸಿ ಅಲ್ಲಿ ಐಶಾರಾಮಿ ಸೌಲಭ್ಯ ಒದಗಿಸುವುದಕ್ಕೆ ಶುರು ಮಾಡಿದೆ. ಅಲ್ಲದೆ ತಾಜ್ ಹೋಟೆಲ್‌ನಂಥ ಐಶಾರಾಮಿ ಹೋಟೆಲ್‌ಗಳ ಸಾವಿರಾರು ಕೋಟಿ ರೂಪಾಯಿ ಆದಾಯವನ್ನು ತನ್ನತ್ತ ಸೆಳೆಯುವುದಕ್ಕೆ ರಿಲಯನ್ಸ್ ಸಿದ್ಧತೆ ಪ್ರಾರಂಭಿಸಿದೆ.
ವಿಶೇಷವೆಂದರೆ, ತಾಜ್ ಹೋಟೆಲ್‌ಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಒಬೆರಾಯ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ ಜತೆಗೆ ರಿಲಯನ್ಸ್ ಕಂಪನಿ ಡೀಲ್ ಮಾಡಿಕೊಂಡಿದೆ. ಒಬೆರಾಯ್‌ನ ಒಟ್ಟು ಮೂರು ಹೋಟೆಲ್‌ಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ರಿಲಯನ್ಸ್ ಈಗ ಒಪ್ಪಂದ ಮಾಡಿಕೊಂಡಿದೆ. ಆ ಪೈಕಿ ಒಂದು ಹೋಟೆಲ್ ಯುಕೆಯಲ್ಲಿ ಹಾಗೂ ಎರಡು ಹೋಟೆಲ್ ಭಾರತದಲ್ಲಿದೆ.
ರಿಲಯನ್ಸ್ ಖರೀದಿಸಿರುವ ಅತ್ಯಂತ ದುಬಾರಿ ಹಾಗೂ ಬಹುದೊಡ್ಡ ಮೊತ್ತದ ಡೀಲ್ ನ್ಯೂಯಾರ್ಕ್‌ನಲ್ಲಿರುವ ಮ್ಯಾಂಡರಿನ್ ಓರಿಯಂಟಲ್ ಹೋಟೆಲ್‌ನದ್ದು ಆಗಿದೆ. 2022ರಲ್ಲಿ ಈ ಹೋಟೆಲ್ ಖರೀದಿ ಡೀಲ್ ಅನ್ನು 98.15 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತಕ್ಕೆ ಫೈನಲ್ ಮಾಡಿತ್ತು. ಭಾರತೀಯ ರೂಪಾಯಿ ಮೌಲ್ಯದಲ್ಲಿ ಅದರ ಮೊತ್ತ 817 ಕೋಟಿ ರೂಪಾಯಿ ಆಗಿದೆ.
ಮುಂದೆ ಮುಕೇಶ್ ಅಂಬಾನಿ ಹಾಗೂ ನಿತಾ ಅಂಬಾನಿ ಅವರು ದುಬೈನಲ್ಲಿರುವ ಐಶಾರಾಮಿ ಹೋಟೆಲ್ ಆಗಿರುವ ಪಾಮ್ ಜುಮೇರಾವನ್ನು ಖರೀದಿ ಮಾಡಿದೆ. 10 ಸ್ಪಾ ಹಾಗೂ ಎರಡು ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರುವ ಈ ಹೋಟೆಲ್ ಅನ್ನು 80 ಮಿಲಿಯನ್ ಅಮೆರಿಕನ್ ಡಾಲರ್‌ಗೆ (665 ರೂಪಾಯಿ) ಖರೀಸಿದೆ. ದುಬೈ ಟೂರ್ ಮಾಡುವವರಿಗೆ ರಜಾ ದಿನಗಳನ್ನು ಆರಾಮವಾಗಿ ಕಳೆಯುವುದಕ್ಕೆ ಇದೊಂದು ಅತ್ಯುತ್ತಮ ರೆಸಾರ್ಟ್ ಆಗಿದೆ.
ಐಷಾರಾಮಿ ಆತಿಥ್ಯ ಸೌಲಭ್ಯಗಳನ್ನು ನೀಡುವ ಮೂಲಕ ಹೋಟೆಲ್ ಚೈನ್ ಉದ್ಯಮವನ್ನು ಸ್ಥಾಪಿಸುವ ಉದ್ದೇಶದಿಂದ ಓಬೆರಾಯ್ ಹೋಟೆಲ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಮುಂಬೈಯ ಅನಂತ್ ವಿಲಾಸ್, ಯುಕೆಯ ಸ್ಟೋಕ್ ಪಾರ್ಕ್ ಮ್ಯಾನರ್ ಹಾಗೂ ಗುಜರಾತ್‌ನ ಹೋಟೆಲ್‌ವೊಂದನ್ನು ಖರೀದಿ ಮಾಡಿದ್ದು, ಇನ್ನು ಅದರ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.
ರಿಲಯನ್ಸ್ ಗ್ರೂಪ್‌ನ ಹೊಸ ಹಾಸ್ಪಿಟಾಲಿಟಿ ಉದ್ಯಮ ಕ್ಷೇತ್ರದಲ್ಲಿ ಇಂಗ್ಲೆಂಡ್‌ನ ಸ್ಟೋಕ್ ಪಾರ್ಕ್ ಮ್ಯಾನರ್ ಒಂದು ಪ್ರಮುಖ ಡೀಲ್ ಆಗಿದೆ. ಇದೊಂದು ದುಬಾರಿ ಖರೀದಿ ಒಪ್ಪಂದವಾಗಿದ್ದು, 529 ಕೋಟಿ ರೂಪಾಯಿಗೆ ಡೀಲ್ ಅನ್ನು ಅಂತಿಮಗೊಳಿಸಲಾಗಿದೆ. ಇದನ್ನು ಶೀಘ್ರದಲ್ಲೇ ಐಷಾರಾಮಿ ಹೋಟೆಲ್ ಆಗಿ ಪರಿವರ್ತಿಸಲು ಸಿದ್ಧತೆ ನಡೆಸಲಾಗುತ್ತಿದೆ.


Click it and Unblock the Notifications