ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ವಿಶ್ವದಲ್ಲೇ ಅತೀ ದುಬಾರಿ ಖಾಸಗಿ ಮನೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿಯ ಈ ದುಬಾರಿ ಮನೆಯನ್ನು ಅಂಟಿಲಿಯಾ ಎಂದು ಕರೆಯಲಾಗುತ್ತದೆ. ಈ 27 ಅಂತಸ್ತಿನ ಮನೆಯಲ್ಲಿ ಮುಕೇಶ್ ಅಂಬಾನಿಯ ಕುಟುಂಬವಾದ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕ ಅಂಬಾನಿ, ಪೃತ್ವಿ ಅಂಬಾನಿ ವಾಸಿಸುತ್ತಾರೆ.
ಪ್ರಸ್ತುತ ಭಾರತದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್ ಅಂಬಾನಿಯ ಕುಟುಂಬವು 2012ರಲ್ಲಿ ಅಂಟಿಲಿಯಾದಲ್ಲಿ ವಾಸಿಸಲು ಆರಂಭಿಸಿದ್ದಾರೆ. ಪ್ರಸ್ತುತ ಮುಕೇಶ್ ಅಂಬಾನಿಯ ಈ ಮನೆಯ ಮೌಲ್ಯವು 15,000 ಕೋಟಿ ರೂಪಾಯಿ ಆಗಿದೆ. 2012ರಿಂದ ಈವರೆಗೂ ಕೂಡಾ ಈ ಅಂಟಿಲಿಯಾ ಮನೆಯು ತನ್ನ ಐಷಾರಾಮಿ ವ್ಯವಸ್ಥೆಯಿಂದಲೇ ಅತೀ ಜನಪ್ರಿಯವಾಗಿದೆ. ಈಗಲೂ ನಿರಂತರವಾಗಿ ಈ ಅಂಟಿಲಿಯಾ ಸುದ್ದಿಯಾಗುತ್ತದೆ. ಪ್ರಮುಖವಾಗಿ ಅಲ್ಲಿನ ಸೌಲಭ್ಯ, ಅದ್ದೂರಿ ಪಾರ್ಟಿ, ರಕ್ಷಣೆ ವಿಚಾರದಲ್ಲಿ ಸುದ್ದಿಯಾಗುತ್ತಿದೆ.

ಇಂಟರ್‌ನೆಟ್‌ನಲ್ಲಿ ಅಂಟಿಲಿಯಾದ ಅತೀ ಕಡಿಮೆ ಫೋಟೋ ಲಭ್ಯವಿದೆ. ಅಂಟಿಲಿಯಾದ ಒಳ ಭಾಗದ ಫೋಟೋಗಳು ಹೆಚ್ಚಾಗಿ ಲಭ್ಯವಿಲ್ಲ. ಈ ಅಂಟಿಲಿಯಾ ಮನೆಯು ಸುಮಾರು 173 ಮೀಟರ್ ಎತ್ತರವಾಗಿದೆ ಮತ್ತು 37000 ಸ್ಕ್ವೇರ್ ಫೀಟ್ ಅನ್ನು ಹೊಂದಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಈ ಅತೀ ಎತ್ತರದ ಬಿಲ್ಡಿಂಗ್‌ಗಲ್ಲಿ ಎರಡು ಅಂತಸ್ತು ಕಾರು ಪಾರ್ಕಿಂಗ್‌ಗಾಗಿ ಕಾಯ್ದಿರಿಸಲಾಗಿದೆ. ಹಾಗೆಯೇ 9 ಎಲವೇಟರ್‌ಗಳು ಇದೆ. ಸಿಬ್ಬಂದಿಗಳಿಗೆ ವಿಶೇಷ ಯೂನಿಫಾರ್ಮ್ ಇದೆ. ಆದರೆ ಈವರೆಗೂ ಹಲವಾರು ಮಂದಿಗೆ ಈ ಮನೆಗೆ ಅಂಟಿಲಿಯಾ ಎಂದು ಹೆಸರಿಟ್ಟಿರುವುದು ಏಕೆ, ಏನಿದರ ಅರ್ಥ ಎಂದು ತಿಳಿದಿಲ್ಲ. ಈ ಬಗ್ಗೆ ಇಲ್ಲಿದೆ ವಿವರ.
ಅಂಟಿಲಿಯಾ ಎಂದು ಕರೆಯುವುದೇಕೆ?
ಅಂಟಿಲಿಯಾ ಎಂಬುವುದು ಐಸ್‌ಲ್ಯಾಂಡ್‌ನ ಹೆಸರಾಗಿದೆ. 15ನೇ ಸೆಂಚುರಿಯ ಮ್ಯಾಪ್‌ನಲ್ಲಿ ಈ ಐಸ್‌ಲ್ಯಾಂಡ್ ಅನ್ನು ನಾವು ಕಾಣಬಹುದಾಗಿದೆ. ಈ ಸ್ಥಳವು ಈವರೆಗೂ ಯಾರು ಕಾಣದ ದ್ವೀಪ ಎಂದು ನಂಬಲಾಗಿದೆ. ಹಾಗೆಯೇ ಈ ದ್ವೀಪ ಅಸ್ತಿತ್ವದ್ಲಲೇ ಇಲ್ಲ ಎಂದು ಹೇಳುವವರು ಹಲವಾರು ಮಂದಿ ಇದ್ದಾರೆ. ಈ ದ್ವೀಪವೇ ಇಲ್ಲ ಎಂದು ಹೇಳುವವರು ಇದ್ದಾರೆ. ಹಾಗೆಯೇ ಇದು ನ್ಯಾವಿಗೇಟರ್‌ಗಳ ತಪ್ಪು ಕಲ್ಪನೆಯಾಗಿದೆ ಎಂದು ಕೂಡಾ ನಂಬಲಾಗಿದೆ. ಈ ದ್ವೀಪವನ್ನು ಐಲ್ ಆಫ್ ಸೆವೆನ್ ಸಿಟೀಸ್ ಎಂದೂ ಕರೆಯುತ್ತಾರೆ.
ಆಂಟಿಲಿಯಾ ಎಂಬ ಹೆಸರು ವಸತಿ ಕಟ್ಟಡಕ್ಕೆ ಸರಿಹೊಂದುತ್ತದೆ. ಏಕೆಂದರೆ ಇದು ಸೂರ್ಯ ಮತ್ತು ಕಮಲ ಎರಡನ್ನು ಸೇರಿಸಿದ ಹೆಸರು ಆಗಿದೆ. ಸಸ್ಯಗಳ ವಿಚಾರಕ್ಕೆ ಬಂದಾಗ ಅಂಟಿಲಿಯಾವು ಆಸ್ಟರೇಸಿ ಕುಟುಂಬದಲ್ಲಿ ಹೂಬಿಡುವ ಸಸ್ಯಗಳ ಒಂದು ಕುಲವಾಗಿದೆ. ಪ್ರಸ್ತುತ ಕ್ಯೂಬಾದಲ್ಲಿ ಸ್ಥಳೀಯವಾಗಿ ಅಂಟಿಲಿಯಾ ಬ್ರಾಚಿಚೆಟಾ ಎಂಬ ಒಂದು ಜಾತಿಯಿದೆ.
ಅಂಬಾನಿ ಕುಟುಂಬದ ಮನೆಯನ್ನು ಚಿಕಾಗೋ ಮೂಲದ ಎರಡು ಪ್ರಸಿದ್ಧ ಯುಎಸ್ ಮೂಲದ ಆರ್ಕಿಟೆಕ್ಚರ್ ಸಂಸ್ಥೆಗಳಾದ ಪರ್ಕಿನ್ಸ್ & ವಿಲ್ ಮತ್ತು ಲಾಸ್ ಏಂಜಲೀಸ್‌ನಲ್ಲಿರುವ ಹಿರ್ಷ್ ಬೆಡ್ನರ್ ಅಸೋಸಿಯೇಟ್ಸ್ ವಿನ್ಯಾಸಗೊಳಿಸಿದ್ದಾರೆ. ಮನೆಯ ನಿರ್ಮಾಣವು 2006 ರಲ್ಲಿ ಪ್ರಾರಂಭವಾಯಿತು. ಈ ಯೋಜನೆಯು ಪೂರ್ಣವಾಗಲು ಆರು ವರ್ಷಗಳು ಬೇಕಾಯಿತು. ಈ ಕಟ್ಟಡವು 8 ರಷ್ಟು ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ.


Click it and Unblock the Notifications