ಮುಕೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಹಾಗೆಯೇ 15,000 ಕೋಟಿ ರೂಪಾಯಿಗಿಂತ ಹೆಚ್ಚು ಬೆಲೆಯ ಆಂಟಿಲಿಯಾ ಎಂಬ ವಿಶ್ವದ ಅತ್ಯಂತ ದುಬಾರಿ ಮನೆಯಲ್ಲಿ ಮುಕೇಶ್ ಅಂಬಾನಿ ವಾಸಿಸುತ್ತಿದ್ದಾರೆ. ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಪುತ್ರರಾ ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ ಅಂಬಾನಿ ಮತ್ತು ಮುಕೇಶ್ ಮೊಮ್ಮಕ್ಕಳು, ಒಟ್ಟು ಕುಟುಂಬವು ಮುಂಬೈನ ಐಷಾರಾಮಿ ವಸತಿಯಲ್ಲಿ ವಾಸಿಸುತ್ತಿದ್ದಾರೆ.
ಶ್ರೀಮಂತ ಭಾರತೀಯರು ಜಗತ್ತಿನಾದ್ಯಂತ ಹಲವಾರು ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ನ್ಯೂಯಾರ್ಕ್ ಪೋಸ್ಟ್‌ನ ಇತ್ತೀಚಿನ ವರದಿಯ ಪ್ರಕಾರ, ಮುಕೇಶ್ ಅಂಬಾನಿ ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿ ತಮ್ಮ ಐಷಾರಾಮಿ ಮನೆಯೊಂದನ್ನು 74.53 ಕೋಟಿ ರೂಪಾಯಿಗೆ (9 ಮಿಲಿಯನ್ ಡಾಲರ್) ಮಾರಾಟ ಮಾಡಿದ್ದಾರೆ.

ಸುಪೀರಿಯರ್ ಇಂಕ್ ಎಂದೂ ಕರೆಯಲಾಗುವ ಅಪಾರ್ಟ್‌ಮೆಂಟ್ ಹೇಗಿದೆ?
ಮುಕೇಶ್ ಅಂಬಾನಿ ಮಾರಾಟ ಮಾಡಿದ ಅಪಾರ್ಟ್‌ಮೆಂಟ್ 400 Wನ 12 ನೇ ಬೀದಿಯ ನಾಲ್ಕನೇ ಮಹಡಿಯಲ್ಲಿದೆ. ಇದನ್ನು ಸುಪೀರಿಯರ್ ಇಂಕ್ ಎಂದೂ ಕರೆಯುತ್ತಾರೆ. ಶ್ರೀಮಂತ ಏಷ್ಯನ್ ಒಡೆತನದ ಈ ಮನೆಯು 2,406 ಸ್ಕ್ವೇರ್ ಫೀಟ್ ಅನ್ನು ಹೊಂದಿದೆ. ಎರಡು ಮಲಗುವ ಕೋಣೆಗಳಿದ್ದು, ಮೂರು ಕೋಣೆಯನ್ನು ಎರಡನ್ನಾಗಿ ಮಾಡಲಾಗಿದೆ.
ನ್ಯೂಯಾರ್ಕ್‌ನ ಈ ಅಪಾರ್ಟ್‌ಮೆಂಟ್ 3 ಸ್ನಾನಗೃಹಗಳನ್ನು ಹೊಂದಿದೆ. ಹಾಗೆಯೇ ನೀವು ಜನಪ್ರಿಯ ಹಡ್ಸನ್ ನದಿಯನ್ನು ಈ ಅಪಾರ್ಟ್‌ಮೆಂಟ್‌ನಲ್ಲಿಯೇ ನೋಡಲು ಸಾಧ್ಯವಾಗುತ್ತದೆ. ಈ ಮನೆ 10-ಅಡಿ ಎತ್ತರದ ಛಾವಣಿಗಳನ್ನು ಹೊಂದಿದೆ. ನಾಯ್ಸ್ -ಪ್ರೂಫ್ (ಶಬ್ಧ ಒಳಬರದೆ, ಹೊರಹೋಗದಂತಿರುವ) ಕಿಟಕಿಗಳು, ಬಾಣಸಿಗರ ಅಡಿಗೆ ಮತ್ತು ಹೆರಿಂಗ್ಬೋನ್ ಗಟ್ಟಿಮರದ ಮಹಡಿಗಳನ್ನು ಈ ಅಪಾರ್ಟ್‌ಮೆಂಟ್ ಹೊಂದಿದೆ.
ಅಪಾರ್ಟ್‌ಮೆಂಟ್ ಇರುವ ಕಟ್ಟಡವು 1919 ರ ಹಿಂದಿನದ್ದಾಗಿದೆ. ಇದನ್ನು ಹಿಂದೆ ಸುಪೀರಿಯರ್ ಇಂಕ್ ಫ್ಯಾಕ್ಟರಿ ಎಂದು ಕರೆಯಲಾಗುತ್ತಿತ್ತು. ಯೋಗ/ಪಿಲೇಟ್ಸ್ ಕೊಠಡಿ, ಮಕ್ಕಳ ಆಟದ ಕೋಣೆ, ವಿಶ್ರಾಂತಿ ಕೋಣೆ, ಕನ್ಸೈರ್ಜ್ ಮತ್ತು ವ್ಯಾಲೆಟ್ ಪಾರ್ಕಿಂಗ್‌ನಂತಹ ಸೌಕರ್ಯಗಳನ್ನು ಇದರಲ್ಲಿ ಮಾಡಿಕೊಂಡು ಈ ಅಪಾರ್ಟ್‌ಮೆಂಟ್ ಅನ್ನು 2009 ರಲ್ಲಿ ಮಾರಾಟ ಮಾಡಲಾಗಿದೆ. ವರ್ಷಗಳಲ್ಲಿ, ಈ ಕಟ್ಟಡದಲ್ಲಿ ಮಾರ್ಕ್ ಶಟಲ್‌ವರ್ತ್, ಲೆಸ್ಲಿ ಅಲೆಕ್ಸಾಂಡರ್, ಮಾರ್ಕ್ ಜೇಕಬ್ಸ್ ಮತ್ತು ಇತರರು ಸೇರಿದಂತೆ ಕೆಲವು ಜನಪ್ರಿಯ ವ್ಯಕ್ತಿಗಳು ಇಲ್ಲಿ ವಾಸಿಸಿದ್ದಾರೆ.


Click it and Unblock the Notifications