Mukesh Ambani vs Tata: ಕಾಫಿ ಮಾರುಕಟ್ಟೆಗೆ ರಿಲಯನ್ಸ್ ಎಂಟ್ರಿ, ಟಾಟಾ ಸ್ಟಾರ್‌ಬಕ್ಸ್‌ಗೆ ನೇರ ಸವಾಲು

ಮುಕೇಶ್ ಅಂಬಾನಿ ನೇತೃತ್ವದ‌ ರಿಲಯನ್ಸ್ ಸಂಸ್ಥೆಯು ಹಲವಾರು ವಲಯಗಳಿಗೆ ಎಂಟ್ರಿ ನೀಡುತ್ತಾ ಸಾಗಿದೆ. ಶುಕ್ರವಾರ ರಿಲಯನ್ಸ್ ಯುಕೆಯ ಜನಪ್ರಿಯವಾದ ಸ್ಯಾಂಡ್ ವಿಚ್ ಹಾಗೂ ಕಾಫಿ ಚೇನ್ ಪ್ರೆಟ್ ಎ ಮ್ಯಾಂಗರ್ ಅನ್ನು‌ ಭಾರತದಲ್ಲಿ‌ ಆರಂಭ ಮಾಡಿದೆ. ಮುಂಬೈನ‌ ಬಾಂದ್ರಾ ಮಾರುಕಟ್ಟೆಯಲ್ಲಿ‌ ಈ ಅಂತಾರಾಷ್ಟ್ರೀಯ ಸಂಸ್ಥೆಯು ಆರಂಭವಾಗಿದೆ.

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಹಭಾಗಿತ್ವದೊಂದಿಗೆ ಈ ಅಂತಾರಾಷ್ಟ್ರೀಯ ಸಂಸ್ಥೆಯನ್ನು‌ ಪ್ರಾರಂಭ ಮಾಡಲಾಗಿದೆ. ದೇಶದಲ್ಲಿ‌ ಅತೀ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿಯ ರಿಲಯನ್ಸ್ ಸಂಸ್ಥೆಯು ನೇರವಾಗಿ ಟಾಟಾ ಗ್ರೂಪ್‌ಗೆ ಟಕ್ಕರ್ ನೀಡಲು, ಸವಾಲು‌ ಎಸೆಯಲು‌ ಮುಂದಾದಂತೆ ಕಾಣುತ್ತಿದೆ. ಎಲ್ಲ ವಲಯದಲ್ಲಿ ವಿಸ್ತಾರವಾಗಿ ತನ್ನ ಕಬಂಧ ಬಾಹುವನ್ನು ರಿಲಯನ್ಸ್ ಸಂಸ್ಥೆ ಚಾಚುತ್ತಿದೆ.

 ಕಾಫಿ ಮಾರುಕಟ್ಟೆಗೆ ರಿಲಯನ್ಸ್ ಎಂಟ್ರಿ, ಟಾಟಾ ಸ್ಟಾರ್‌ಬಕ್ಸ್‌ಗೆ ನೇರ

ಆಪಲ್ ಸಂಸ್ಥೆಯು ಭಾರತದಲ್ಲಿ ತನ್ನ ಮೊದಲ ಎರಡು ಆಪಲ್ ಸ್ಟೋರ್‌ಗಳನ್ನು ಉದ್ಘಾಟನೆ ಮಾಡಿದ ಕೆಲವೇ ದಿನಗಳಲ್ಲಿ ಈ ಅಂತಾರಾಷ್ಟ್ರೀಯ ಕಾಫಿ‌ ಸಂಸ್ಥೆಯು ಭಾರತದಲ್ಲಿ ಆರಂಭವಾಗಿದೆ. ಆಪಲ್ ಸಿಇಒ ಟಿಮ್ ಕುಕ್ ತನ್ನ ಸಂಸ್ಥೆಯ ಎರಡು ಸ್ಟೋರ್‌ಗಳನ್ನು ಭಾರತದಲ್ಲಿ‌ ಆರಂಭಿಸಲು ಭಾರತಕ್ಕೆ ಭೇಟಿ ನೀಡಿದ್ದು, ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಮನೆ ಅಂಟಿಲಿಯಾಕ್ಕೆ ಭೇಟಿ‌ ನೀಡಿದ್ದಾರೆ.

ಸ್ಟೋರ್‌ ಉದ್ಘಾಟನೆಗೆ ಸಾರಾ ಅಲಿ ಖಾನ್ ಎಂಟ್ರಿ

ಇನ್ನು ಪ್ರೆಟ್ ಎ ಮ್ಯಾಂಗರ್ ಉದ್ಘಾಟನೆ ವೇಳೆ ಬಾಲಿವುಡ್ ಸ್ಟಾರ್ ಸಾರಾ ಅಲಿ ಖಾನ್ ಕೂಡಾ ಕಾಣಿಸಿಕೊಂಡಿದ್ದಾರೆ. ಸ್ಟೋರ್‌ನ ಹೊರಭಾಗದಲ್ಲಿ ಮಾತನಾಡಿದ ಸಾರಾ ಅಲಿ ಖಾನ್ ತಾನು ಕಾಫಿಯನ್ನು ಎಷ್ಟು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. "ಕಾಫಿ‌ ಎಂದಿಗೂ ಕೂಡಾ ನನ್ನ ಅತೀ ಇಷ್ಟವಾದುದ್ದು. ಐ ಲವ್ ಕಾಫಿ. ನಾನು‌ ಹಲವಾರು ಬಾರಿ ಲಂಡನ್ ನಲ್ಲಿ‌ ನನ್ನ ತಂದೆಯೊಂದಿಗೆ ಪ್ರೆಟ್ ಸ್ಟೋರ್ ಗೆ ಭೇಟಿ‌ ನೀಡಿದ್ದೇನೆ‌. ಈಗ ಈ‌ ಸ್ಟೋರ್ ಭಾರತಕ್ಕೆ ಎಂಟ್ರಿ‌‌‌ ನೀಡಿರುವುದು ಅತೀ ಸಂತಸ ಉಂಟು‌ ಮಾಡಿದೆ," ಎಂದು ಸಾರಾ ಅಲಿ‌ ಖಾನ್ ತಿಳಿಸಿದ್ದಾರೆ. ಮುಂಬೈನಲ್ಲಿರುವ ಈ ಕಾಫಿ‌ ಸ್ಟೋರ್ 2567 ಸ್ಕ್ವೇರ್ ಫೀಟ್ ಇದೆ.

ಇನ್ನು ಈ ಸ್ಟೋರ್ ಆರಂಭದ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ ರಿಲಯನ್ಸ್ ಮ್ಯಾನೆಜಿಂಗ್ ಡೈರೆಕ್ಟರ್ ದರ್ಶನ್ ಮೆಹ್ತಾ, "ಬಳಸುವ ಉತ್ಪನ್ನಗಳ ತಾಜಾತನ, ಸರಿಯಾದ ಪ್ರಮಾಣದ ರೆಸೆಪಿ, ಪ್ರಕ್ರಿಯೆಯ‌ ಬಗ್ಗೆಗಿನ ಕೂತೂಹಲವು ಭಾರತದ ಗ್ರಾಹಕರನ್ನು ಸೆಳೆಯುತ್ತದೆ. ನಾವು ಪ್ರೆಟ್ ಎ ಮ್ಯಾಂಗರ್ ಜೊತೆ ಸಹಭಾಗಿತ್ವ ವನ್ನು ಮಾಡಿಕೊಂಡಿದ್ದೇವೆ. ಈ ಕಾಫಿ ಸ್ಟೋರ್ ಬಗ್ಗೆ ನಮಗೆ ಹೆಮ್ಮೆಯಿದೆ," ಎಂದು ಹೇಳಿದ್ದಾರೆ.

ಪ್ರೆಟ್ ಎ ಮ್ಯಾಂಗರ್ ಲಂಡನ್ ನಲ್ಲಿ 1986ರಲ್ಲಿ ಆರಂಭವಾಗಿದೆ.‌ಪ್ರಸ್ತುತ ಯುಕೆ, ಯುಎಸ್, ಹಾಂಗ್ ಕಾಂಗ್, ಫ್ರಾನ್ಸ್, ದುಬೈ, ಸ್ವಿಜರ್ಲ್ಯಾಂಡ್, ಬ್ರಸೆಲ್ಸ್, ಸಿಂಗಾಪುರ, ಜರ್ಮನಿ‌ ಸೇರಿದಂತೆ ಒಟ್ಟಾಗಿ 550 ಸ್ಟೋರ್ ಗಳನ್ನು‌‌ ಹೊಂದಿದೆ. ಈ ಸ್ಟೋರ್ ನಲ್ಲಿ ಕಾಫಿ, ಸ್ಯಾಂಡ್ ವಿಚ್, ಸಲಾಡ್ಸ್, ವ್ರಾಪಲ್ಸ್ ಲಭ್ಯವಾಗುತ್ತದೆ.

39 ವರ್ಷ ಹಳೆಯ ಬ್ರಿಟಿಷ್ ಸ್ಯಾಂಡ್‌ವಿಚ್ ಶಾಪ್ ಪ್ರೆಟ್ ಎ ಮ್ಯಾಂಗರ್ ಹೆಸರು ಫ್ರೆಂಚ್‌ನ ಮೂಲದಿಂದ ಬಂದಿದೆ. 'ತಿನ್ನಲು ಸಿದ್ಧ' ಎಂಬ ಅರ್ಥವನ್ನು ಹೊಂದಿದೆ. ಮುಂಬರುವ ವಾರಗಳಲ್ಲಿ ಮುಂಬೈನ ಲೋವರ್ ಪರೇಲ್‌ನ ಪಲ್ಲಾಡಿಯಮ್ ಮಾಲ್‌ನಲ್ಲಿ ಎರಡನೇ ಔಟ್‌ಲೆಟ್ ಅನ್ನು ತೆರೆಯಲಿದೆ ಮತ್ತು ಎನ್‌ಸಿಆರ್ ತನ್ನ ಮೊದಲ ಔಟ್‌ಲೆಟ್ ಅನ್ನು ಡಿಎಲ್‌ಎಫ್ ಸೈಬರ್‌ಹಬ್‌ನಲ್ಲಿ ಮೇ ತಿಂಗಳಲ್ಲಿ ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+