ಮುಂಬೈನ ನಿವಾಸಿಯೊಬ್ಬರು 2023 ರಲ್ಲಿ ಸ್ವಿಗ್ಗಿಯಿಂದ 42.3 ಲಕ್ಷ ರೂಪಾಯಿ ಮೌಲ್ಯದ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂದು ಆನ್‌ಲೈನ್ ಆಹಾರ-ವಿತರಣಾ ಅಪ್ಲಿಕೇಶನ್ ಡಿಸೆಂಬರ್ 14 ರಂದು ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. 2023 ಕೊನೆಗೊಳ್ಳುತ್ತಿದ್ದಂತೆ, ಸ್ವಿಗ್ಗಿ ತನ್ನ ವಾರ್ಷಿಕ ಆಹಾರ ವಿತರಣಾ ವರದಿಯನ್ನು ಅನಾವರಣಗೊಳಿಸಿದೆ.
ವರದಿಯು ಭಾರತದಲ್ಲಿ ಯಾವ ಊಟಕ್ಕೆ ಆದ್ಯತೆಯನ್ನು ನೀಡುತ್ತಾರೆ ಎಂಬುವುದನ್ನು ಒಳಗೊಂಡಿದೆ. ಪ್ಲಾಟ್‌ಫಾರ್ಮ್ ಮೂಲಕ ಆರ್ಡರ್ ಮಾಡಿದ ರಾಷ್ಟ್ರದ ಅತ್ಯಂತ ಪ್ರೀತಿಯ ಖಾದ್ಯವಾಗಿ ಬಿರಿಯಾನಿಯು ಮೊದಲು ಸ್ಥಾನದಲ್ಲಿ ನಿಂತಿದೆ. ಅಂದರೆ ಈ ವರ್ಷದಲ್ಲಿ ಜನರು ಅಧಿಕವಾಗಿ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ.

ಇದು ಮುಂಬೈ ನಿವಾಸಿಯ ಕಥೆಯಾಗಿದೆ. ನಿಮ್ಮನ್ನು ಬೆರಗೊಳಿಸುವುದಂತು ಖಂಡಿತ. ನೀವು ಮೇಲೆ ಓದಿದ್ದು ಸರಿಯಾಗಿದೆ. ಈ ವ್ಯಕ್ತಿ 42 ಲಕ್ಷ ರೂಪಾಯಿ ಮೌಲ್ಯದ ಫುಡ್ ಆರ್ಡರ್ ಮಾಡಿದ್ದಾರೆ. ಕೇಕ್‌ಗಳು, ಗುಲಾಬ್ ಜಾಮೂನ್, ಪಿಜ್ಜಾಗಳಂತಹ ಆಹಾರ ಪದಾರ್ಥಗಳನ್ನು ಇವರ ಪಟ್ಟಿಯಲ್ಲಿದೆ.
"ಮುಂಬೈನ ಬಳಕೆದಾರೊಬ್ಬರು 42.3 ಲಕ್ಷ ರೂಪಾಯಿ ಮೌಲ್ಯದ ಆಹಾರ ಆರ್ಡರ್ ಮಾಡಿದ್ದಾರೆ. ನೀವು ಓದುತ್ತಿರುವುದು ಸರಿಯಾಗಿದೆ. ಇದು ಅವರ ವೇತನವಲ್ಲ, ಆರ್ಡರ್ ಮಾಡಿರುವ ಆಹಾರದ ಮೌಲ್ಯ," ಎಂದು ಸ್ವಿಗ್ಗಿ ತನ್ನ ವರದಿಯಲ್ಲಿ ತಿಳಿಸಿದೆ.
ಬಿರಿಯಾನಿಯೇ ರಾಜ
ಭಾರತೀಯರು ಸಾಮಾನ್ಯವಾಗಿಯೇ ಬಿರಿಯಾನಿಯನ್ನು ಇಷ್ಟಪಡುತ್ತಾರೆ. ವರದಿಯಲ್ಲಿ ತೋರಿಸಿರುವ ದಿಗ್ಭ್ರಮೆಗೊಳಿಸುವ ಅಂಕಿಅಂಶಗಳಲ್ಲಿ ಇದು ಸ್ಪಷ್ಟವಾಗಿದೆ. ಜನರು ವರ್ಷವಿಡೀ ಸೆಕೆಂಡಿಗೆ 2.5 ಬಾರಿ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ.
2023ರಲ್ಲಿ ಬಿರಿಯಾನಿ ಸತತವಾಗಿ ಸ್ವಿಗ್ಗಿಯ ಚಾರ್ಟ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಇದು ಸತತ ಎಂಟನೇ ಬಾರಿಗೆ ದೇಶದಲ್ಲಿ ಅತೀ ಹೆಚ್ಚು ಜನರು ಇಷ್ಟಪಡುವ ಆಹಾರವಾಗಿದೆ. ಹೈದರಾಬಾದ್ ಆಹಾರ ಪ್ರೇಮಿಯೊಬ್ಬರು ಅತ್ಯುತ್ತಮ ಬಿರಿಯಾನಿ ಪ್ರಿಯರಾಗಿದ್ದಾರೆ.
ವರ್ಷದಲ್ಲಿ ಒಟ್ಟು 1,633 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಅಂದರೆ ಪ್ರತಿ ದಿನ ಸರಾಸರಿ ನಾಲ್ಕು ಪ್ಲೇಟ್‌ಗಳಿಗಿಂತ ಹೆಚ್ಚು ಬಿರಿಯಾನಿಯನ್ನು ಈ ವ್ಯಕ್ತಿ ಆರ್ಡರ್ ಮಾಡಿದ್ದಾರೆ. ಚಿಕನ್ ಬಿರಿಯಾನಿಯು ಫೇವರಿಟ್ ಆಗಿ ಮುಂದುವರಿದರೆ, ಸಸ್ಯಾಹಾರಿಗಳು ಕೂಡಾ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದಾರೆ.
ಸಸ್ಯಾಹಾರಿಗಳು ಕೂಡಾ ಬಿರಿಯಾನಿಯನ್ನು ಅಧಿಕವಾಗಿ ಆರ್ಡರ್ ಮಾಡಿದ್ದಾರೆ. ಪ್ರತಿ 5.5 ಚಿಕನ್ ಬಿರಿಯಾನಿಗಳಿಗೆ ಒಂದು ವೆಜ್ ಬಿರಿಯಾನಿ ಆರ್ಡರ್ ಮಾಡಲಾಗುತ್ತಿದೆ. ಚಂಡೀಗಢದ ಒಂದು ಕುಟುಂಬವು ಒಂದೇ ಬಾರಿಗೆ 70 ಪ್ಲೇಟ್ ಬಿರಿಯಾನಿಯನ್ನು ಆರ್ಡರ್ ಮಾಡಿದೆ. ಭಾರತ ಮತ್ತು ಪಾಕಿಸ್ತಾನದ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಬಿರಿಯಾನಿಯ ಕ್ರೇಜ್ ಉತ್ತುಂಗಕ್ಕೇರಿದೆ.
ಇತರ ವಿಜೇತರು ಇವರು ನೋಡಿ
ಝಾನ್ಸಿ ನಿವಾಸಿಯೊಬ್ಬರು ಒಂದೇ ದಿನದಲ್ಲಿ 269 ಐಟಂಗಳನ್ನು ಆರ್ಡರ್ ಮಾಡುವ ಮೂಲಕ ಬೆರಗುಗೊಳಿಸಿದ್ದಾರೆ. ಭುವನೇಶ್ವರದಲ್ಲಿ, ಒಂದು ಮನೆಯವರು 207 ಪಿಜ್ಜಾಗಳನ್ನು ಆರ್ಡರ್ ಮಾಡಿಕೊಂಡಿದ್ದಾರೆ. ಪಿಜ್ಜಾ ಫೀಸ್ಟ್ ಅನ್ನು ಆಚರಿಸಿದ್ದಾರೆ.
ಬೆಂಗಳೂರು ತನ್ನ 8.5 ಮಿಲಿಯನ್ ಚಾಕೊಲೇಟ್ ಕೇಕ್ ಆರ್ಡರ್‌ಗಳಿಗಾಗಿ 'ಕೇಕ್ ಕ್ಯಾಪಿಟಲ್' ಎಂಬ ಬಿರುದನ್ನು ಗಳಿಸಿದೆ. ಇಡೀ ದೇಶವು ಪ್ರೇಮಿಗಳ ದಿನದಂದು ಪ್ರತಿ ನಿಮಿಷಕ್ಕೆ 271 ಕೇಕ್‌ಗಳನ್ನು ಆರ್ಡರ್ ಮಾಡಿದೆ. ಭಾರತದಾದ್ಯಂತ ವಿವಿಧ ಆಹಾರ ಸಂಸ್ಕೃತಿಯನ್ನು ನಾವು ನೋಡಬಹುದಾಗಿದೆ.
ಇದಲ್ಲದೆ, 2023 ರ ಅಂತರರಾಷ್ಟ್ರೀಯ ಮಿಲ್ಲೆಟ್ ವರ್ಷದ ಆಚರಣೆಯು ತನ್ನ ಗುರುತನ್ನು ಕಾಪಾಡಿಕೊಂಡಿದೆ. ಗಿಲ್ಟ್‌ಫ್ರೀಯಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಗಿ ಆಧಾರಿತ ಭಕ್ಷ್ಯಗಳ ಆರ್ಡರ್ ಗಮನಾರ್ಹವಾಗಿ ಏರಿದೆ. ಶೇಕಡ 124 ರಷ್ಟು ಬೆಳವಣಿಗೆ ಕಂಡಿದೆ.
ಆರೋಗ್ಯ ಪ್ರಜ್ಞೆಯಿಂದಾಗಿ ರಾಗಿ ಊಟದ ಸರ್ಚ್ ಶೇಕಡ 38 ರಷ್ಟು ಹೆಚ್ಚಳವಾಗಿದೆ. ಇನ್ನು ದಕ್ಷಿಣ ಭಾರತದ ಇಡ್ಲಿಗೂ ಬೇಡಿಕೆ ಅಧಿಕವಾಗಿದೆ. ಹೈದರಾಬಾದ್‌ನ ವ್ಯಕ್ತಿಯೊಬ್ಬರು 6 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications