For Quick Alerts
ALLOW NOTIFICATIONS  
For Daily Alerts

Loan Against Property: ಆಸ್ತಿ ಅಡಮಾನದ ಸಾಲ, ಬಡ್ಡಿ, ಮರುಪಾವತಿ ಮತ್ತಿತರ ಮಾಹಿತಿ

|

ಬ್ಯಾಂಕ್ ಗಳು, ಬಹುತೇಕ ಹಣಕಾಸು ಸಂಸ್ಥೆಗಳು ಹಾಗೂ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಗಳು ಆಸ್ತಿಯನ್ನು ಅಡಮಾನ ಮಾಡಿಕೊಂಡು ಸಾಲ ನೀಡುತ್ತವೆ. ಇದನ್ನು ಮಾರ್ಟಗೇಜ್ ಲೋನ್ ಅಥವಾ ಆಸ್ತಿ ಅಡಮಾನ ಸಾಲ ಎನ್ನಲಾಗುತ್ತದೆ. ಇಂಥದ್ದು ಸೆಕ್ಯೂರ್ಡ್ ಲೋನ್. ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ಹೊಂದಿರುವವರು ಅದನ್ನು ಅಡಮಾನ ಮಾಡಿ, ಅದರ ಮೇಲೆ ಸಾಲವನ್ನು ಪಡೆಯಬಹುದು.

ಮದುವೆ, ಈಗಾಗಲೇ ಮನೆಯ ನವೀಕರಣ, ವಿಸ್ತರಣೆ, ಶಿಕ್ಷಣ.. ಹೀಗೆ ನಾನಾ ಉದ್ದೇಶಗಳಿಗೆ ಸಾಲವನ್ನು ಪಡೆಯಬಹುದು. ಆಸ್ತಿಯ ಮೌಲ್ಯದ ಮೇಲೆ ಶೇಕಡಾ 70ರಷ್ಟು ಸಾಲವನ್ನು ಭಾರತದಲ್ಲಿ ನೀಡಲಾಗುತ್ತದೆ. ಈ ಸಾಲ ಪರಿಣಾಮಕಾರಿ ಹಾಗೂ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದೂ ಸಲೀಸು. ಅಡಮಾನದ ಮೇಲಿನ ಸಾಲಕ್ಕೆ ಬಡ್ಡಿ ದರ ಕಡಿಮೆಯಾದ್ದರಿಂದ ಮರುಪಾವತಿ ಕೂಡ ಉಳಿದ ಸಾಲಕ್ಕೆ ಹೋಲಿಸಿದಲ್ಲಿ ಹೆಚ್ಚಿನ ಹೊರೆಯಲ್ಲ.

 

ಹೌಸಿಂಗ್ ಲೋನ್ ಬಡ್ಡಿ 7%ಗಿಂತ ಕಡಿಮೆ ಇರುವ ಭಾರತದ ಪ್ರಮುಖ ಬ್ಯಾಂಕ್ ಗಳಿವು

ಆಸ್ತಿ ಮೇಲೆ ಸಾಲ ಪಡೆಯುವುದಕ್ಕೆ ಸಂಬಂಧಿಸಿದಂತೆ ಇಲ್ಲಿ ವಿವರಗಳಿವೆ. ಇದರ ಮತ್ತಷ್ಟು ಮಾಹಿತಿಗಳು ನಿಮ್ಮೆದುರು ಇವೆ.

ಆಸ್ತಿ ಮೇಲಿನ ಸಾಲ ಎಂದರೇನು?

ಆಸ್ತಿ ಮೇಲಿನ ಸಾಲ ಎಂದರೇನು?

ಆಸ್ತಿಯ ಮೇಲೆ ಸಾಲ ಅಥವಾ ನಿರ್ದಿಷ್ಟವಾದ ಆಸ್ತಿಯನ್ನು ಅಡಮಾನ ಮಾಡಿ ಸಾಲ ಪಡೆಯುವ ಸಾಲ ಇದು. ಸಾಲ ಪಡೆದಂಥ ವ್ಯಕ್ತಿ ನಿರ್ದಿಷ್ಟ ಕಾಲಾವಧಿಯಲ್ಲಿ ಮರುಪಾವತಿ ಮಾಡಬೇಕು. ಬಡ್ಡಿ ದರ ನಿಶ್ಚಿತವಾಗಿ ಇರುತ್ತದೆ. ಸಾಲಗಾರರು 25 ಕೋಟಿ ರುಪಾಯಿ ತನಕ ಸಾಲ ಪಡೆಯಬಹುದು. ಅದು ಆಸ್ತಿಯ ಮೌಲ್ಯದ ಆಧಾರದ ಮೇಲೆ ನಿರ್ಧಾರ ಆಗುತ್ತದೆ. ಇನ್ನು ಮರುಪಾವತಿ ಅವಧಿ ಇಪ್ಪತ್ತು ವರ್ಷದ ತನಕ ಇರುತ್ತದೆ.

ಆಸ್ತಿಯ ಮೇಲೆ ಸಾಲ ಪಡೆಯುವುದರ ಬಗ್ಗೆ ಇನ್ನಷ್ಟು ವಿವರ
 

ಆಸ್ತಿಯ ಮೇಲೆ ಸಾಲ ಪಡೆಯುವುದರ ಬಗ್ಗೆ ಇನ್ನಷ್ಟು ವಿವರ

* ಇಂಡಿಪೆಂಡೆಂಟ್ ಆದ ಮನೆ, ಅಪಾರ್ಟ್ ಮೆಂಟ್ ಅಥವಾ ಫ್ಲ್ಯಾಟ್ ಅಡಮಾನ ಮಾಡಿದರೆ ಸಾಲ ಮಂಜೂರು ಮಾಡಲಾಗುತ್ತದೆ.

* ವಾಣಿಜ್ಯ ಆಸ್ತಿಗಳಾದ ಮಳಿಗೆ, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಕಚೇರಿ ಕಟ್ಟಡ... ಹೀಗೆ ವಾಣಿಜ್ಯ ಆಸ್ತಿಗಳ ಮೇಲೂ ಸಾಲ ದೊರೆಯುತ್ತದೆ.

* ಬಾಡಿಗೆ ವಸತಿ ಆಸ್ತಿಯ ಮೇಲೂ ಈ ಸಾಲ ದೊರೆಯುತ್ತದೆ.

* ವೇತನದಾರರು ಹಾಗೂ ಸ್ವ ಉದ್ಯೋಗಿಗಳು ಇಬ್ಬರೂ ಸಾಲಕ್ಕೆ ಪ್ರಯತ್ನಿಸಬಹುದು.

* ಸಾಲಗಾರರಿಗೆ ನಿವೇಶನ ಇದ್ದಲ್ಲಿ ಅದರ ಮೇಲೂ ಸಾಲ ಪಡೆಯುವುದಕ್ಕೆ ಅವಕಾಶ ಇದೆ.

* ಆಸ್ತಿ ಮೇಲೆ ಪಡೆಯುವ ಸಾಲಕ್ಕೆ ಕಟ್ಟುವ ಬಡ್ಡಿಗೆ ಆದಾಯ ತೆರಿಗೆ ಕಾಯ್ದೆ 1961, ಸೆಕ್ಷನ್ 37 (1) ಅಡಿಯಲ್ಲಿ ತೆರಿಗೆ ಅನುಕೂಲ ಇದೆ.

* ಸಾಲದ ಮೇಲೆ ಕಟ್ಟುವ ಬಡ್ಡಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 24ರ ಅಡಿಯಲ್ಲಿ 2 ಲಕ್ಷದ ತನಕ ತೆರಿಗೆ ಅನುಕೂಲ ದೊರೆಯುತ್ತದೆ.

* ಈ ಸಾಲದ ಮರುಪಾವತಿ ಅವಧಿ ಸಲೀಸಾಗಿರುತ್ತದೆ.

* ಪರ್ಸನಲ್ ಲೋನ್ ಗೆ ಹೋಲಿಸಿದಲ್ಲಿ ಆಸ್ತಿಯ ಮೇಲೆ ಪಡೆದ ಸಾಲಕ್ಕೆ ಬಡ್ಡಿ ದರ ಕಡಿಮೆ.

* ಈ ಸಾಲದ ಮೇಲೆ ಬಡ್ಡಿ ದರ ಫಿಕ್ಸೆಡ್ ಅಥವಾ ಫ್ಲೋಟಿಂಗ್ ಇರುತ್ತದೆ. ಫಿಕ್ಸೆಡ್ ಪಡೆದುಕೊಂಡರೆ ಮರುಪಾವತಿ ಅವಧಿಯುದ್ದಕ್ಕೂ ಬಡ್ಡಿ ದರ ಒಂದೇ ಇರುತ್ತದೆ. ಅದೇ ಫ್ಲೋಟಿಂಗ್ ಬಡ್ಡಿ ದರವಾದಲ್ಲಿ ಬದಲಾವಣೆ ಆಗುತ್ತದೆ.

ಆಸ್ತಿ ಅಡಮಾನದ ಸಾಲ ಪಡೆಯಲು ಅರ್ಹತೆಗಳೇನು?

ಆಸ್ತಿ ಅಡಮಾನದ ಸಾಲ ಪಡೆಯಲು ಅರ್ಹತೆಗಳೇನು?

* ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.

* ಸಾಲ ಪಡೆಯಲು ಅರ್ಜಿ ಹಾಕುವಾಗ 21 ವರ್ಷ ಪೂರ್ಣವಾಗಿರಬೇಕು.

* ಅರ್ಜಿದಾರರ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು.

* ಅರ್ಜಿದಾರರಿಗೆ ನಿರಂತರವಾದ ಆದಾಯ ಮೂಲ ಇರಬೇಕು. ಅದಕ್ಜ್ಕಾಗಿ ವೇತನದಾರರೋ ಅಥವಾ ಸ್ವ ಉದ್ಯೋಗಿಯೋ ಆಗಿರಬೇಕು. ಸಾಲ ಪಡೆಯುವುದಕ್ಕೆ ಇಂತಿಷ್ಟು ವರ್ಷದ ಉದ್ಯೋಗದ ಅನುಭವ ಅಥವಾ ವ್ಯಾಪಾರ ನಡೆಸಿದ ಅನುಭವ ಇರಬೇಕು.

ಆಸ್ತಿಯ ಮೇಲೆ ಪಡೆದ ಸಾಲ ಮುಂಚಿತವಾಗಿ ಪಾವತಿಸಬಹುದು

ಆಸ್ತಿಯ ಮೇಲೆ ಪಡೆದ ಸಾಲ ಮುಂಚಿತವಾಗಿ ಪಾವತಿಸಬಹುದು

ಆಸ್ತಿಯ ಮೇಲೆ ಪಡೆದ ಸಾಲವನ್ನು ಅವಧಿಗೆ ಮುಂಚಿತವಾಗಿಯೇ ಪಾವತಿಸುವ ಅವಕಾಶ ಇದೆ. ಸಾಲ ಮೊತ್ತದ ಪೂರ್ತಿ ಅಥವಾ ಸ್ವಲ್ಪ ಭಾಗವನ್ನು ಮರುಪಾವತಿ ಅವಧಿಯಲ್ಲೇ ಕಟ್ಟಬಹುದು. ಇಎಂಐಗಿಂತ ಹೆಚ್ಚಿನ ಮೊತ್ತ ಅಥವಾ ಒಂದೇ ಸಲಕ್ಕೆ ಇಷ್ಟು ಮೊತ್ತ ಎಂದು ಕಟ್ಟಬಹುದು. ಆರ್ ಬಿಐ ನಿಯಮಾನುಸಾರ, ಯಾರು ಫ್ಲೋಟಿಂಗ್ ಬಡ್ಡಿ ದರದಲ್ಲಿ ಸಾಲ ಪಡೆದಿರುತ್ತಾರೋ ಅಂಥವರಿಗೆ ಪೂರ್ವ ಪಾವತಿ ಶುಲ್ಕ ಹಾಕುವಂತಿಲ್ಲ. ಆದರೆ ಕಾರ್ಪೊರೇಟ್ ಸಂಸ್ಥೆಗಳು ಪೂರ್ವಪಾವತಿ ಶುಲ್ಕ ಹಾಕುತ್ತಿವೆ. ಆದರೆ ಅದು ತುಂಬ ಕಡಿಮೆ ಪ್ರಮಾಣದ್ದು. ಪೂರ್ವ ಪಾವತಿಗೆ ಅವಕಾಶ ಇದ್ದಲ್ಲಿ ಸಾಲದ ಅಸಲಿನ ಮೊತ್ತ ಕಡಿಮೆ ಮಾಡಲು ಹಾಗೂ ಅದರ ಮೇಲೆ ಬಡ್ಡಿ ದರ ಇಳಿಕೆಗೂ ಸಹಾಯ ಆಗುತ್ತದೆ. ಇನ್ನು ಆಸ್ತಿ ಹಾಗೂ ಆದಾಯಕ್ಕೆ ಸಂಬಂಧಿಸಿದಂತೆ ಬೇಕಾದ ದಾಖಲೆ- ಪತ್ರಗಳ ಬಗೆಗಿನ ವಿವರವನ್ನು ಆಯಾ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್ ಗಳಲ್ಲೇ ವಿಚಾರಿಸಬೇಕು.

English summary

Things to Know About Loan Against Property in kannada

What is Loan against property? Here is the must know facts about this secured loan provide by banks and other financial institutions.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X