For Quick Alerts
ALLOW NOTIFICATIONS  
For Daily Alerts

ಸಾಲ ಸಿಗದಿದ್ದರೂ ಪ್ರೊಸೆಸಿಂಗ್ ಶುಲ್ಕ ಕೊಡಬೇಕಾ? ಇಲ್ಲಿದೆ ಪೂರ್ಣ ಮಾಹಿತಿ

|

ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಆರ್ಥಿಕ ವಿಚಾರಗಳು ಪ್ರಾಧಾನ್ಯ ಪಡೆದುಕೊಂಡಿವೆ. ಜತೆಗೆ ಅದರ ಬಗ್ಗೆ ತಿಳಿವಳಿಕೆ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕೆಲಸ ಕಳೆದುಕೊಳ್ಳುವುದು, ಸಂಬಳದ ಕಡಿತ ಇಂಥ ವಿದ್ಯಮಾನಗಳು ಸಹಜ ಎಂಬಂತಾಗಿದೆ. ಈ ಮಧ್ಯೆ ಕಷ್ಟಕ್ಕೆ ಎಂದು ಬ್ಯಾಂಕ್ ಗಳಲ್ಲಿ ಸಾಲಕ್ಕೆ ಅರ್ಜಿ ಹಾಕಿಕೊಂಡರೆ, ಅದೇನೋ ತಿರಸ್ಕೃತ ಆಗಿಹೋಗುತ್ತದೆ. ಆದರೆ ಪ್ರೊಸೆಸಿಂಗ್ ಶುಲ್ಕವನ್ನು ವಸೂಲಿ ಮಾಡುತ್ತಾರೆ.

 

ಬಹಳ ಮಂದಿ ಪ್ರಶ್ನೆ ಏನೆಂದರೆ, ನಮಗೆ ಸಾಲವೇನೋ ಕೊಡಲ್ಲ ಅಂತ ಹೇಳಿದರು. ಆದರೆ ಈ ಪ್ರೊಸೆಸಿಂಗ್ ಶುಲ್ಕವನ್ನು ಏಕೆ ವಸೂಲಿ ಮಾಡುತ್ತಾರೆ? ಈ ಲೇಖನದಲ್ಲಿ ಆ ಬಗ್ಗೆಯೇ ತಿಳಿಸಲಾಗುವುದು. ಪ್ರೊಸೆಸಿಂಗ್ ಶುಲ್ಕ ಅಂದರೇನು ಏತಕ್ಕಾಗಿ ಅದನ್ನು ಕಡಿತ ಮಾಡಲಾಗುತ್ತದೆ ಇತ್ಯಾದಿ ಸಂಗತಿಗಳು ಇಲ್ಲಿವೆ.

ಏನಿದು ಪ್ರೊಸೆಸಿಂಗ್ ಶುಲ್ಕ

ಏನಿದು ಪ್ರೊಸೆಸಿಂಗ್ ಶುಲ್ಕ

ಸಾಲ ನೀಡುವವರು ಒಂದು ಬಾರಿ ಮಾತ್ರ ವಿಧಿಸುವ ಶುಲ್ಕ ಇದು. ಒಬ್ಬ ಅರ್ಜಿದಾರರಿಗೆ ಸಾಲ ನೀಡಬೇಕಾ ಅಥವಾ ಬೇಡವಾ ಎಂದು ನಿರ್ಧರಿಸಲು ನಡೆಯುವಂಥ ಪ್ರಕ್ರಿಯೆಗಾಗಿ ಪಡೆಯುವ ಶುಲ್ಕ ಇದು. ಇದರಲ್ಲಿ ದಾಖಲೆಗಳ ಪರಿಶೀಲನೆ ಶುಲ್ಕ, ಲಾಯರ್ ಗಳ ಶುಲ್ಕ (ಏನಾದರೂ ಇಲ್ಲ), ಗೃಹ ಸಾಲ ಅಥವಾ ಆಸ್ತಿ ಅಡಮಾನ ಮಾಡಿ ಸಾಲ ಪಡೆಯುತ್ತಿದ್ದಲ್ಲಿ ಅದರ ಮೌಲ್ಯಮಾಪನಕ್ಕಾಗಿ ಟೆಕ್ನಿಕಲ್ ಶುಲ್ಕ ಹೀಗೆ ಇತರ ಶುಲ್ಕಗಳು ಇರುತ್ತವೆ. ಸಾಲ ನೀಡುವವರು ಎಷ್ಟು ಪ್ರೊಸೆಸಿಂಗ್ ಶುಲ್ಕ ವಿಧಿಸಬಹುದು ಎಂಬುದಕ್ಕೆ ಯಾವ ನಿಯಮಾವಳಿ ಇಲ್ಲ. ಆಯಾ ಹಣಕಾಸು ಸಂಸ್ಥೆಗಳು ಅದನ್ನು ನಿರ್ಧರಿಸುತ್ತವೆ. ಅದಕ್ಕೆ ವಿವಿಧ ಮಾನದಂಡಗಳು ಸಹ ಇರುತ್ತವೆ. ಯಾವ ರೀತಿಯ ಸಾಲ ಪಡೆಯಲಾಗುತ್ತಿದೆ, ಸಾಲದ ಮೊತ್ತ ಹಾಗೂ ಸಾಲ ಪಡೆಯುತ್ತಿರುವವರಿಗೆ ಅದನ್ನು ಹಿಂತಿರುಗಿಸುವ ಸಾಮರ್ಥ್ಯ ಇತ್ಯಾದಿಗಳ ಮೇಲೆ ಅವಲಂಬನೆ ಆಗುತ್ತದೆ.

ಹೀಗೊಂದು ಉದಾಹರಣೆ
 

ಹೀಗೊಂದು ಉದಾಹರಣೆ

ಈಗ ಗೃಹ ಸಾಲಕ್ಕೆ ಅಂತ ಅರ್ಜಿ ಹಾಕಿಕೊಂಡಿದ್ದಲ್ಲಿ 5,000 ಅಥವಾ ಸಾಲದ ಮೊತ್ತದ 1 ಪರ್ಸೆಂಟ್ ಪ್ರೊಸೆಸಿಂಗ್ ಶುಲ್ಕ ಎಂದು ಪಡೆಯಲಾಗುತ್ತದೆ. ಅದೇ ಅನ್ ಸೆಕ್ಯೂರ್ಡ್ ಲೋನ್, ಅಂದರೆ ಯಾವುದೇ ಅಡಮಾನ ಇಲ್ಲದೆ ಪಡೆಯುತ್ತಿರುವಂಥ ಸಾಲಕ್ಕೆ 1,000 ರುಪಾಯಿ ಅಥವಾ ಅರ್ಜಿ ಸಲ್ಲಿಸಿದ ಮೊತ್ತದ 4 ಪರ್ಸೆಂಟ್ ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ ಕಡಿಮೆ ಮೊತ್ತದ ಸಾಲಕ್ಕೆ ಹಣಕಾಸು ಸಂಸ್ಥೆಗಳು ಹೆಚ್ಚಿನ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುತ್ತವೆ. ಅದೇ ಗೃಹ ಸಾಲದಂಥ ದೊಡ್ಡ ಮೊತ್ತಕ್ಕೆ ರಿಯಾಯಿತಿ ನೀಡುತ್ತವೆ ಎನ್ನುತ್ತಾರೆ ಇದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಅನುಭವಿಗಳು. ಕೆಲವು ಪ್ರಸಂಗಗಳಲ್ಲಿ ಪ್ರತಿಸ್ಪರ್ಧಿ ಸಂಸ್ಥೆಗಳು ಎಷ್ಟು ಶುಲ್ಕ ವಿಧಿಸುತ್ತಿವೆ ಎಂಬುದನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪೆನಿಗಳಿಗಿಂತ ಬ್ಯಾಂಕ್ ಗಳು ಕಡಿಮೆ ಪ್ರೊಸೆಸಿಂಗ್ ಶುಲ್ಕ ವಿಧಿಸುತ್ತವೆ.

ಯಾವ ಸಂಸ್ಥೆ ಏನು ನಿಯಮ ಪಾಲಿಸುತ್ತದೆ?

ಯಾವ ಸಂಸ್ಥೆ ಏನು ನಿಯಮ ಪಾಲಿಸುತ್ತದೆ?

ಅದೇ ರೀತಿ ಹಲವು ಪ್ರಕರಣಗಳಲ್ಲಿ ಒಮ್ಮೆ ಪ್ರೊಸೆಸಿಂಗ್ ಶುಲ್ಕ ನೀಡಿಬಿಟ್ಟರೆ ಅದು ವಾಪಸಾಗುವುದಿಲ್ಲ. ಇನ್ನೂ ಕೆಲವು ಸಾಲ ನೀಡುವ ಸಂಸ್ಥೆಗಳು ಏನು ಮಾಡುತ್ತವೆ ಅಂದರೆ, ಸಾಲ ಮಂಜೂರಾದ ಮೇಲಷ್ಟೇ ಪ್ರೊಸೆಸಿಂಗ್ ಶುಲ್ಕದ ಚೆಕ್ ಅನ್ನು ಜಮೆ ಮಾಡಿಕೊಳ್ಳುತ್ತವೆ. ಇನ್ನೂ ಕೆಲವು ಪ್ರಕರಣದಲ್ಲಿ ಪ್ರೊಸೆಸಿಂಗ್ ಶುಲ್ಕವನ್ನು ಎರಡು ಭಾಗವಾಗಿ ಮಾಡಲಾಗುತ್ತದೆ. ಆರಂಭದ ಶುಲ್ಕ ಎಂದು ಇಂತಿಷ್ಟು ಮೊತ್ತವನ್ನು ನೀಡಬೇಕು. ಇನ್ನು ಹಣ ಮಂಜೂರು ಅಥವಾ ವಿತರಣೆ ವೇಳೆಗೆ ಇಂತಿಷ್ಟು ಎಂದು ನೀಡಬೇಕು. ಸಾರ್ವಜನಿಕ ವಲಯದ ಬ್ಯಾಂಕ್ ಗಳು ಸಾಧಾರಣವಾಗಿ ಸಾಲ ಮಂಜೂರು ಆದ ನಂತರವೇ ಪ್ರೊಸೆಸಿಂಗ್ ಶುಲ್ಕ ಪಡೆದುಕೊಳ್ಳುತ್ತವೆ. ಖಾಸಗಿ ಬ್ಯಾಂಕ್ ಗಳು ಆರಂಭದಲ್ಲೇ ಪಡೆಯುತ್ತವೆ.

ನಿಮಗೆ ಗೊತ್ತಿರಬೇಕಾದದ್ದು ಏನು?

ನಿಮಗೆ ಗೊತ್ತಿರಬೇಕಾದದ್ದು ಏನು?

ಈ ಎಲ್ಲ ಅಂಶವನ್ನು ಗಮನಿಸಿದರೆ, ಸಾಲಕ್ಕೆ ಅರ್ಜಿ ಹಾಕುವ ಸಂದರ್ಭದಲ್ಲಿ ಪ್ರೊಸೆಸಿಂಗ್ ಶುಲ್ಕದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು. ಇನ್ನೂ ಕೆಲ ಕಡೆ ಬೇರೆ ಹೆಸರಿನಿಂದ ಪ್ರೊಸೆಸಿಂಗ್ ಶುಲ್ಕ ವಸೂಲಿ ಮಾಡುವ ವಿಧಾನ ಇದೆ. ಆ ಬಗ್ಗೆ ಕೂಡ ವಿಚಾರಿಸಿಕೊಳ್ಳಬೇಕು. ಪ್ರೊಸೆಸಿಂಗ್ ಶುಲ್ಕ ಇಷ್ಟೇ ವಿಧಿಸಬೇಕು ಎಂಬ ನಿಯಮ ಇಲ್ಲದಿರಬಹುದು. ಆದರೆ ಅದು ಪಾರದರ್ಶಕವಾಗಿ ಇರಬೇಕು ಮತ್ತು ಒಬ್ಬರಿಗೊಂದು ಮತ್ತೊಬ್ಬರಿಗೆ ಇನ್ನೊಂದು ಮಾಡುವಂತಿಲ್ಲ. ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಕೂಡದು. ಇನ್ನು ಸಾಲ ಪಡೆಯುವಾಗ ಕಡ್ಡಾಯವಾಗಿ ಇನ್ಷೂರೆನ್ಸ್ ಖರೀದಿಸಬೇಕು, ಕ್ರೆಡಿಟ್ ಫಿಟ್ ನೆಸ್ ವರದಿ ಶುಲ್ಕ ಪಾವತಿಸಬೇಕು ಎಂದೆಲ್ಲ ಹೇಳಿದರೆ ಅಂಥದ್ದರಿಂದ ಎಚ್ಚರವಾಗಿರಿ. ಸಾಲ ನೀಡುವ ಸಂಸ್ಥೆಯು ಕಡಿಮೆ ಪ್ರೊಸೆಸಿಂಗ್ ಶುಲ್ಕ ಹಾಗೂ ಕಡಿಮೆ ಬಡ್ಡಿ ಹಾಕುತ್ತಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

English summary

Must Know Facts About Processing Fee On Loan

Is loan approved or not processing fee must pay? Here is an explainer about loan processing fee.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X