ಬೆಂಗಳೂರು, ಏಪ್ರಿಲ್ 10: ಭಾರತೀಯ ಷೇರು ಮಾರುಕಟ್ಟೆ ಹೊಸ ಹೊಸ ದಾಖಲೆ ಬರೆಯುತ್ತಿದೆ. ಈ ಪೈಕಿ ಜಾಗತಿಕ ಮಟ್ಟದಲ್ಲಿ ಕೂಡ ಭಾರತೀಯ ಷೇರು ಮಾರುಕಟ್ಟೆ ದೊಡ್ಡ ನಂಬಿಕೆ ಗಳಿಸುತ್ತಿದೆ. ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಇರುವ ಸಮಯದಲ್ಲೇ ಮತ್ತೊಂದು ದಾಖಲೆಗೆ ಭಾರತೀಯ ಷೇರು ಮಾರುಕಟ್ಟೆ ಸಾಕ್ಷಿಯಾಗಿದೆ. ನಮ್ಮ ಷೇರು ಪೇಟೆಯ ಮೌಲ್ಯ, ₹400 ಲಕ್ಷ ಕೋಟಿಗೆ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ ಭಾರತದ ಷೇರ್ ಮಾರ್ಕೆಟ್.
ಕ್ರೂರಿ 'ಕೊರೊನಾ' ಅಪ್ಪಳಿಸಿದ ಸಮಯದಲ್ಲಿ ಭಾರತೀಯ ಷೇರು ಪೇಟೆ ಭಾರಿ ಪ್ರಮಾಣದ ಕುಸಿತ ಕಂಡಿತ್ತು. 2020 ರಲ್ಲಿ ಸಂಭವಿಸಿದ ಈ ಘಟನೆ ನಂತರ ಭಾರತೀಯ ಷೇರು ಪೇಟೆಯ ಮಹಾಕುಸಿತ ಆರಂಭ ಎಂಬ ಆರೋಪಗಳು ಕೇಳಿಬಂದವು. ಆದರೆ ಭಾರತ ಎಷ್ಟು ಗಟ್ಟಿ & ಭಾರತದ ಆರ್ಥಿಕ ನೀತಿಗಳು ಅದೆಷ್ಟು ಗಟ್ಟಿಯಾಗಿವೆ ಎಂಬ ಸತ್ಯ 2020ರ ಬಳಿಕ ನಿಜವಾಗಿ ಹೋಗಿದೆ. ಅದು ಹೇಗೆಂದರೆ ಭಾರತೀಯ ಷೇರು ಪೇಟೆ 2020ರ ಬಳಿಕ ಪುಟಿದೆದ್ದು ಹೊಸ ಹೊಸ ದಾಖಲೆ ನಿರ್ಮಿಸುವ ಹಂತಕ್ಕೆ ಬಂದಿದೆ. ಕೇವಲ 4 ವರ್ಷದಲ್ಲಿ ಇಡೀ ಜಗತ್ತಿನಲ್ಲೇ ಅತಿದೊಡ್ಡ ಷೇರು ಪೇಟೆ ಎನಿಸಿಕೊಳ್ಳುವ ಹಂತಕ್ಕೆ ತಲುಪುತ್ತಿದೆ.

2023ರಲ್ಲಿ ₹300 ಲಕ್ಷ ಕೋಟಿ
ಇದೀಗ ಮುಂಬೈ ಷೇರು ಪೇಟೆಯ ಸೂಚ್ಯಂಕದಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ ₹400.86 ಲಕ್ಷ ಕೋಟಿಗೆ ಏರಿಕೆ ಕಂಡು ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ಈ ಹಿಂದೆ 2023ರ ಜುಲೈ ತಿಂಗಳಲ್ಲಿ ಎಂ-ಕ್ಯಾಪ್ ₹300 ಲಕ್ಷ ಕೋಟಿ ರೂಪಾಯಿ ದಾಟಿ ಹೊಸ ಭರವಸೆ ಮೂಡಿಸಿತ್ತು. ಇದೀಗ ಮತ್ತೊಂದು ಹಂತಕ್ಕೆ ಭಾರತೀಯ ಷೇರು ಮಾರುಕಟ್ಟೆಯು ಹೆಜ್ಜೆ ಇಟ್ಟಿರುವುದು ಹೂಡಿಕೆದಾರರನ್ನು ಸೆಳೆಯುತ್ತಿದೆ. ಇದರ ಜೊತೆಗೆ ಹಲವು ಸ್ಟಾಕ್‌ಗಳ ಮಾರುಕಟ್ಟೆ ಮೌಲ್ಯ ಕೂಡ ಭಾರಿ ಏರಿಕೆ ಕಾಣುತ್ತಿದೆ.
ಜಾಗತಿಕ ಮಟ್ಟದಲ್ಲಿ ಭಾರಿ ನಂಬಿಕೆ!
ಭಾರತದ ಷೇರು ಮಾರುಕಟ್ಟೆಗೆ ಕಳೆದ 10 ವರ್ಷದಲ್ಲಿ ಭಾರಿ ಪ್ರಮಾಣದ ಬಂಡವಾಳವೂ ಹರಿದು ಬಂದಿದೆ. ಜಾಗತಿಕ ಆರ್ಥಿಕತೆ ಗಮನಿಸಿದರೆ ಭಾರತದ ಷೇರು ಮಾರುಕಟ್ಟೆ ಹೊಸ ಹಿಡಿತ ಹೊಂದಿದೆ. ಹೀಗಾಗಿ ಭಾರತೀಯ ಷೇರು ಮಾರುಕಟ್ಟೆಗೆ ಮೌಲ್ಯ ಕೂಡ ಹೆಚ್ಚಾಗಿ, ಬಂಡವಾಳದ ಹರಿವು ಕೂಡ ಹೆಚ್ಚಾಗುತ್ತಿದೆ. 2024ರ ಲೋಕಸಭೆ ಚುನಾವಣೆ ಸಮಯದಲ್ಲಿ ಭಾರತದ ಬಂಡವಾಳ ಮಾರುಕಟ್ಟೆ ಕೂಡ ಹೊಸ ಹೊಸ ಹಂತಕ್ಕೆ ತಲುಪುತ್ತಿದೆ. ಮುಂದಿನ ಕೆಲವೇ ವರ್ಷದಲ್ಲಿ ಷೇರು ಪೇಟೆ ಮತ್ತಷ್ಟು ದೊಡ್ಡ ಸಾಧನೆ ಮಾಡುವ ನಿರೀಕ್ಷೆ ಇದೆ.


Click it and Unblock the Notifications