For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಇಲಾಖೆಯ ಹೊಸ ಇ-ಪೋರ್ಟಲ್: ತೆರಿಗೆದಾರರೇ ಪೋರ್ಟಲ್‌ನ ವೈಶಿಷ್ಟ್ಯಗಳೇನು ತಿಳಿದುಕೊಳ್ಳಿ..

|

ಆದಾಯ ತೆರಿಗೆ ಇಲಾಖೆ ಇಂದಿನಿಂದ (ಜೂನ್ 7) ಹೊಸ ಐಟಿಆರ್ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ. ಹಳೆಯ ವೆಬ್‌ಸೈಟ್ www.incometaxindiaefiling.gov.in ಮುಂದುವರಿಯಲು www.incometaxgov.in ಹೊಸ ಪೋರ್ಟಲ್‌ಗೆ ಭೇಟಿ ನೀಡಿ.

ಹೊಸ ವೆಬ್‌ಸೈಟ್ ಲಾಂಚ್ ಆಗುವ ಹಿನ್ನೆಲೆಯಲ್ಲಿ ಜೂನ್ 1 ರಿಂದ 6 ರವರೆಗೆ ಇ-ಫೈಲಿಂಗ್ ಸೇವೆ ಕಾರ್ಯನಿರ್ವಹಿಸಲಿಲ್ಲ. ಇದೀಗ ಹೊಸ ವೆಬ್‌ಸೈಟ್ ಸೇವೆಗೆ ಸಜ್ಜಾಗಿದ್ದು, ತೆರಿಗೆದಾರರ ಅನುಕೂಲತೆ ಮತ್ತು ತೆರಿಗೆದಾರರಿಗೆ ಆಧುನಿಕ, ತಡೆರಹಿತ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'' ತೆರಿಗೆ ಪಾವತಿದಾರರಿಗೆ ಅನುಕೂಲವಾಗಲು ಸಂವಾದಾತ್ಮಕ ಪ್ರಶ್ನೆಗಳೊಂದಿಗೆ ತೆರಿಗೆ ಪಾವತಿಗೆ ಉಚಿತ ಐಟಿಆರ್ 1, 4 (ಆನ್‌ಲೈನ್ ಮತ್ತು ಆಫ್‌ಲೈನ್) ಮತ್ತು ಐಟಿಆರ್ 2 (ಆಫ್‌ಲೈನ್) ತಯಾರಿಕ ಸಾಫ್ಟ್‌ವೇರ್ ಲಭ್ಯವಿದೆ'' ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಐಟಿಆರ್ 3, 5, 6, 7ಗೂ ಉಚಿತ ಸಾಫ್ಟ್‌ವೇರ್ ಸಿಗಲಿದೆ

ಐಟಿಆರ್ 3, 5, 6, 7ಗೂ ಉಚಿತ ಸಾಫ್ಟ್‌ವೇರ್ ಸಿಗಲಿದೆ

ಐಟಿಆರ್ 3, 5, 6, 7ಗೆ ಈ ಮೇಲೆ ತಿಳಿಸಿದ ಸೌಲಭ್ಯ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಸಚಿವಾಲಯ ಹೇಳಿದೆ. ತೆರಿಗೆ ಪಾವತಿದಾರರು ಪರಿಷ್ಕರಿಸಿದ ವೆಬ್‌ಸೈಟ್‌ ಕುರಿತ ತಿಳಿಯಲು ಐಟಿ ಇಲಾಖೆಯು ವಿವರವಾದ FAQ ಗಳು, ಬಳಕೆದಾರರ ಕೈಪಿಡಿಗಳು, ವೀಡಿಯೊಗಳು ಮತ್ತು ಚಾಟ್‌ಬಾಟ್ / ಲೈವ್ ಏಜೆಂಟ್ ಅನ್ನು ಸಹ ನೀಡುತ್ತದೆ.

ಹೊಸ ತೆರಿಗೆದಾರರಿಗೆ ಸುಲಭವಾಗಿ ಅರ್ಥವಾಗುವಂತೆ ಸಂಯೋಜನೆ

ಹೊಸ ತೆರಿಗೆದಾರರಿಗೆ ಸುಲಭವಾಗಿ ಅರ್ಥವಾಗುವಂತೆ ಸಂಯೋಜನೆ

ಹೊಸ ಐಟಿಆರ್‌ ವೆಬ್‌ಸೈಟ್‌ ಹೊಸ ತೆರಿಗೆದಾರ ಸ್ನೇಹಿ ಪೋರ್ಟಲ್ ಆಗಿದ್ದು, ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ತ್ವರಿತ ಮರುಪಾವತಿಗೆ ಸಂಯೋಜಿಸಲಾಗಿದೆ. ತೆರಿಗೆದಾರರಿಂದ ಅನುಸರಣಾ ಕ್ರಮಕ್ಕಾಗಿ ಎಲ್ಲಾ ಸಂವಹನಗಳು ಮತ್ತು ಅಪ್‌ಲೋಡ್‌ಗಳು ಅಥವಾ ಬಾಕಿ ಇರುವ ಕ್ರಿಯೆಗಳನ್ನು ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಪ್ರದರ್ಶಿಸಲಾಗುತ್ತದೆ.

ಇದು ತೆರಿಗೆದಾರರಿಗೆ ಅಗತ್ಯವಾದ ಅನುಸರಣೆಗಳ ಬಗ್ಗೆ ನೆನಪಿಸುತ್ತದೆ. ಇದರಿಂದಾಗಿ ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ಮತ್ತು ಐಟಿಆರ್‌ ಸಬ್‌ಮಿಟ್‌ ಮಾಡಲು ಅವರ ನ್ನು ಪ್ರೇರೇಪಿಸುತ್ತದೆ.

 

ಶೀಘ್ರ ರೀಫಂಡ್

ಶೀಘ್ರ ರೀಫಂಡ್

ತಕ್ಷಣ ಪ್ರೊಸೆಸ್ ಆಗುವಂತೆ ಇನ್​ಕಮ್ ಟ್ಯಾಕ್ಸ್ ರಿಟರ್ನ್ಸ್ (ಐಟಿಆರ್) ಜೊತೆಗೆ ಹೊಸ ಇ- ಫೈಲಿಂಗ್ ಪೋರ್ಟಲ್ ಅನ್ನು ಇಂಟಿಗ್ರೇಟ್ ಮಾಡಲಾಗಿದೆ. ಇದರಿಂದಾಗಿ ತೆರಿಗೆಪಾವತಿದಾರರಿಗೆ ಶೀಘ್ರವಾಗಿ ರೀಫಂಡ್ ದೊರೆಯುತ್ತದೆ.

ಹೊಸ ಕಾಲ್‌ಸೆಂಟರ್ ಸ್ಥಾಪನೆ

ಹೊಸ ಕಾಲ್‌ಸೆಂಟರ್ ಸ್ಥಾಪನೆ

ಐಟಿಆರ್‌ ವೆಬ್‌ಸೈಟ್‌ನ ಹೆಚ್ಚುವರಿಯಾಗಿ, ತೆರಿಗೆದಾರರ ಪ್ರಶ್ನೆಗಳಿಗೆ ತ್ವರಿತ ಪ್ರತಿಕ್ರಿಯೆ ನೀಡಲು ಹೊಸ ಕಾಲ್ ಸೆಂಟರ್ ಅನ್ನು ಸಹ ಸ್ಥಾಪಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಟ್ಯುಟೋರಿಯರಲ್​ಗಳು, ವಿಡಿಯೋಗಳು, ಕಾಲ್​ಸೆಂಟರ್, ಚಾಟ್​ಬಾಟ್ ಅಥವಾ ಲೈವ್ ಏಜೆಂಟ್​ಗಳು ಈ ಸೈಟ್​ನಲ್ಲಿ ಇದ್ದು, ತೆರಿಗೆ ಪಾವತಿದಾರರ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ.

ITR Filing Deadline Extended : ಆದಾಯ ತೆರಿಗೆ ರಿಟರ್ನ್ಸ್ ಡೆಡ್‌ಲೈನ್ 2 ತಿಂಗಳು ವಿಸ್ತರಣೆITR Filing Deadline Extended : ಆದಾಯ ತೆರಿಗೆ ರಿಟರ್ನ್ಸ್ ಡೆಡ್‌ಲೈನ್ 2 ತಿಂಗಳು ವಿಸ್ತರಣೆ

ಮೊಬೈಲ್‌ ಅಪ್ಲಿಕೇಶನ್ ಸದ್ಯದಲ್ಲೇ ಬಿಡುಗಡೆ

ಮೊಬೈಲ್‌ ಅಪ್ಲಿಕೇಶನ್ ಸದ್ಯದಲ್ಲೇ ಬಿಡುಗಡೆ

ವೆಬ್‌ಸೈಟ್ ಅಷ್ಟೇ ಅಲ್ಲದೆ ತೆರಿಗೆದಾರರು ವಿವಿಧ ವೈಶಿಷ್ಟ್ಯಗಳೊಂದಿಗೆ ಪರಿಚಿತರಾಗಲು ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ತೆರಿಗೆದಾರರ ಅನಾನುಕೂಲತೆಯನ್ನು ತಪ್ಪಿಸುವ ಸಲುವಾಗಿ, ಯಾವುದೇ ಪೂರ್ವ ಮಾಹಿತಿ ಪಡೆಯಲು ಈ ಮೊಬೈಲ್ ಅಪ್ಲಿಕೇಶನ್ ಸಹಾಯವಾಗುತ್ತದೆ.

ಪೋರ್ಟಲ್‌ ಆರಂಭಿಕವಾಗಿ ತೆರಿಗೆದಾರರಿಗೆ ಹೆಚ್ಚು ಪರಿಚಿತವಾದ ಬಳಿಕ ಈ ಮೊಬೈಲ್ ಅಪ್ಲಿಕೇಶನ್‌ ಅನ್ನು ಪರಿಚಯಿಸಲಾಗುತ್ತದೆ.

 

English summary

New ITR e-filing portal : ITR e-filing 2.0 portal features, details – everything you need to know in Kannada

The Income Tax Department is set to unveil the new e-filing portal www.incometax.gov.in on June 7
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X