ಭಾರತದ ಅತೀ ದೊಡ್ಡ ವಿಡಿಯೋ ಆಪ್ ಆದ ಯೂಟ್ಯೂಬ್‌ನ ಸಿಇಒ ಬದಲಾವಣೆ ಮಾಡಲಾಗಿದೆ. ಭಾರತ ಮೂಲದ, ಅಮೇರಿಕನ್ ನೀಲ್ ಮೋಹನ್ ಯೂಟ್ಯೂಬ್‌ನಲ್ಲಿ ಹಲವಾರು ಸ್ಥಾನಗಳನ್ನು ನಿರ್ವಹಣೆ ಮಾಡಿದ್ದಾರೆ. ಪ್ರಸ್ತುತ ನೀಲ್ ಮೋಹನ್ ಯೂಟ್ಯೂಬ್‌ನ ನೂತನ ಸಿಇಒ ಆಗಿ ಕಾರ್ಯನಿರ್ವಹಣೆ ಆರಂಭ ಮಾಡಿದ್ದಾರೆ.
ಯೂಟ್ಯೂಬ್ ಸಿಇಒ ನೀಲ್ ಮೋಹನ್ ಭಾರೀ ಮೊತ್ತದ ಮಾಸಿಕ ವೇತನವನ್ನು ಪಡೆಯುವ ಸಾಧ್ಯತೆಯಿದೆ. ಈ ಹಿಂದೆ ಸುಸಾನ್ ವೊಜ್ಸಿಕಿ ಸಿಇಒ ಆಗಿದ್ದಾಗ ನೀಲ್ ಮೋಹನ್ ಹಲವಾರು ಹಿರಿಯ ಸ್ಥಾನವನ್ನು ನಿರ್ವಹಣೆ ಮಾಡಿದ್ದಾರೆ. ಯೂಟ್ಯೂಬ್‌ನ ಸಿಇಒ ಸ್ಥಾನಕ್ಕೆ ಬೋರ್ಡ್‌ನ ಮೊದಲ ಆಯ್ಕೆ ನೀಲ್ ಮೋಹನ್ ಆಗಿದ್ದಾರೆ. ಈಗಾಗಲೇ ಹಲವಾರು ಸಂಸ್ಥೆಗಳು ಭಾರತೀಯ ಮೂಲದವರಿಗೆ ಸಿಇಒ ಸ್ಥಾನವನ್ನು ನೀಡಿದ್ದು, ಯೂಟ್ಯೂಬ್ ಕೂಡಾ ನೀಡಿದೆ.
ಯೂಟ್ಯೂಬ್ ಹೊರತಾಗಿ ನೀಲ್ ಮೋಹನ್ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಗೂಗಲ್‌ನಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭ ಮಾಡಿದ ನೀಲ್ ಮೋಹನ್, ಹಾಗೆಯೇ ಮೈಕ್ರೋಸಾಫ್ಟ್‌ನಲ್ಲಿ ಕೂಡಾ ಕಾರ್ಯನಿರ್ವಹಣೆ ಮಾಡಿದ್ದಾರೆ. ಗೂಗಲ್, ಗೂಗಲ್ ಡಿಸ್‌ಪ್ಲೇ, ಜಾಹೀರಾತು ವಿಭಾಗ, ಡಬಲ್‌ಕ್ಲಿಕ್ ಮೊದಲಾದವುಗಳಲ್ಲಿ ನೀಲ್ ಮೋಹನ್ ಕಾರ್ಯನಿರ್ವಹಣೆ ಮಾಡಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.. ಮುಂದೆ ಓದಿ...

ಯೂಟ್ಯೂಬ್ ಸಿಇಒ ನೀಲ್ ಮೋಹನ್ ವೇತನ
ಸುಸಾನ್ ವೊಜ್ಸಿಕಿ ಯೂಟ್ಯೂಬ್‌ನ ಮಾಜಿ ಸಿಇಒ ಆಗಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ವೇತನವನ್ನು ಪಡೆಯುತ್ತಿದ್ದರು. ವರದಿಗಳ ಪ್ರಕಾರ ಸುಸಾನ್ ವೊಜ್ಸಿಕಿ ಮಾಸಿಕ ವೇತನ 374,829 ಯುಎಸ್ ಡಾಲರ್ ಆಗಿತ್ತು. ನೀಲ್ ಮೋಹನ್ ವೇತನ ಕೂಡಾ ಅದೇ ಆಗಿರುವ ಸಾಧ್ಯತೆಯಿದೆ.
ಇನ್ನು ನೀಲ್ ಮೋಹನ್‌ಗೆ ಲಭ್ಯವಾಗಲಿರುವ ಮಾಸಿಕ ವೇತನವನ್ನು ಭಾರತೀಯ ರೂಪಾಯಿಗೆ ಬದಲಾವಣೆ ಮಾಡಿದಾಗ 3.1 ಕೋಟಿ ರೂಪಾಯಿ ಆಗಲಿದೆ. 2022ರಿಂದ ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಈ ಮಾಸಿಕ ವೇತನವನ್ನು ಪಡೆಯುತ್ತಾರೆ. ಆದರೆ ನೀಲ್ ಮೋಹನ್ ಮಾಸಿಕ ವೇತನವನ್ನು ಹೆಚ್ಚಳ ಮಾಡುವ ಸಾಧ್ಯತೆಯೂ ಇದೆ.
ಮಾಧ್ಯಮಗಳ ವರದಿ ಪ್ರಕಾರ, ನೀಲ್ ಮೋಹನ್ ಗೂಗಲ್‌ನಿಂದ 100 ಮಿಲಿಯನ್ ಡಾಲರ್ ಬೋನಸ್ ಅನ್ನು ಪಡೆದಿದ್ದಾರೆ. ನೀಲ್ ಮೋಹನ್ ನಿವ್ವಳ ಆದಾಯವು 150 ಮಿಲಿಯನ್ ಯುಎಸ್ ಡಾಲರ್ ಆಗಿದೆ, ಅಂದರೆ 1,242 ಕೋಟಿ ರೂಪಾಯಿ ಆಗಿದೆ.


Click it and Unblock the Notifications