ಬಿಲಿಯನೇರ್ ಮುಕೇಶ್ ಅಂಬಾನಿ ಪತ್ನಿ ಮತ್ತು ಪ್ರಸಿದ್ಧ ಸೋಷಲಿಸ್ಟ್ ಆದ ನೀತಾ ಅಂಬಾನಿ ಹಲವಾರು ಐಷಾರಾಮಿ, ದುಬಾರಿ ವಸ್ತುಗಳನ್ನು ಹೊಂದಿದ್ದಾರೆ. ದುಬಾರಿ ಸೀರೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ನೀತಾ ಅಂಬಾನಿ ದೇಶದ ಪ್ರತಿಯೊಬ್ಬರಂತೆ ತಮ್ಮ ಮುಂಜಾನೆಯನ್ನು ಆರಂಭಿಸುತ್ತಾರೆ.
ಸಾಮಾನ್ಯವಾಗಿ ಭಾರತದಲ್ಲಿ ಬೆಳಿಗ್ಗೆ ಚಹಾ, ಕಾಫಿಯನ್ನು ಸವಿಯಲಾಗುತ್ತದೆ. ನೀತಾ ಅಂಬಾನಿ ಕೂಡಾ ಬೆಳಿಗ್ಗೆ ತಾಜಾ ಬಿಸಿ ಚಹಾದೊಂದಿಗೆ ತನ್ನ ದಿನವನ್ನು ಆರಂಭ ಮಾಡುತ್ತಾರೆ. ಆದರೂ ನಮ್ಮಂತೆ ಅಲ್ಲ. ಯಾಕೆಂದರೆ ಬರೋಬ್ಬರಿ 3 ಲಕ್ಷ ರೂಪಾಯಿಯ ಐಷಾರಾಮಿ ಚಹಾ ಕಪ್‌ನಲ್ಲಿ ನೀತಾ ಅಂಬಾನಿ ಚಹಾ ಕುಡಿಯುತ್ತಾರೆ!

ಆದಾಯಕ್ಕೆ ತಕ್ಕುದಾದ ಐಷಾರಾಮಿ ಜೀವನ!
ಶ್ರೀಮಂತ ಮತ್ತು ಐಷಾರಾಮಿ ಜೀವನಶೈಲಿಯನ್ನು ಹೊಂದಿರುವ ನೀತಾ ಅಂಬಾನಿ ತಾನು ಬಳಸುವ ಪ್ರತಿಯೊಂದು ವಸ್ತಗಳನ್ನು ಕೂಡಾ ತನ್ನ ಆದಾಯಕ್ಕೆ ಅನುಗುಣವಾಗಿ ಇರಿಸಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರೆಯೂ ಕೂಡಾ ಹಾಗೆಯೇ ಆದಾಯಕ್ಕೆ ಅನುಗುಣವಾಗಿ ದುಬಾರಿ, ಐಷಾರಾಮಿಯಾಗಿದೆ.
ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಚಹಾ ಕುಡಿದು ತನ್ನ ದಿನವನ್ನು ಆರಂಭಿಸುತ್ತಾರೆ. ಆದರೆ 3 ಲಕ್ಷ ರೂಪಾಯಿಯ ಟೀ ಕಪ್‌ನಲ್ಲಿ ಚಹಾ ಕುಡಿಯುತ್ತಾರೆ. ನೀತಾ ಅಂಬಾನಿ ಜಪಾನ್‌ನ ಅತ್ಯಂತ ಹಳೆಯ ಕ್ರೋಕರಿ ಕಂಪನಿ ನೋರಿಟೆಕ್ ತಯಾರಿಸಿದ ಕಪ್‌ನಲ್ಲಿ ಚಹಾವನ್ನು ಕುಡಿಯುತ್ತಾರೆ.
ಒಂದು ಕಪ್‌ಗೆ 3 ಲಕ್ಷ ರೂಪಾಯಿ, ಒಟ್ಟು ಸೆಟ್‌ಗೆ....!
ಈ ಪುರಾತನ ಟೀ ಸೆಟ್‌ನ ಪ್ರತಿ ಕಪ್‌ನ ಬೆಲೆ ಸುಮಾರು 3 ಲಕ್ಷ ರೂಪಾಯಿ ಆಗಿದೆ. ಪ್ರಾಚೀನ ಜಪಾನೀಸ್ ಕ್ರೋಕರಿ ಬ್ರಾಂಡ್‌ನ ಸಂಪೂರ್ಣ ಟೀ ಕಪ್‌ಗಳ ಸೆಟ್‌ನ ಬೆಲೆ 1.5 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅಂದರೆ ನೀತಾ ಅಂಬಾನಿ ಮನೆಯಲ್ಲಿರುವ ಪ್ರತಿ ಕಪ್‌ನ ಬೆಲೆಯೂ ಕೂಡಾ 3 ಲಕ್ಷ ರೂಪಾಯಿ ಆಗಿದೆ.
ಪ್ರತಿ ಟೀ ಕಪ್ ಅನ್ನು ಚೀನಾದಲ್ಲಿ ತಯಾರಿ ಮಾಡಲಾಗಿದೆ. ಹಾಗೆಯೇ ಪ್ರತಿ ಕಪ್ ಕೂಡಾ ಚಿನ್ನ ಮತ್ತು ಪ್ಲಾಟಿನಂನಿಂದ ಲೇಪಿತವಾಗಿದೆ. ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ ಒಟ್ಟಾರೆ ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಾರೆ. ಗುಜರಾತಿ ರೀತಿಯಲ್ಲಿ ತಯಾರಿಸಿದ ದಾಲ್, ರೊಟ್ಟಿ, ಅಕ್ಕಿ ಮತ್ತು ಮಸೂರ ಸೇರಿದಂತೆ ಹೆಚ್ಚಿನ ದಿನಗಳಲ್ಲಿ ಗುಣಮಟ್ಟದ ಭಾರತೀಯ ಊಟವನ್ನು ಸೇವಿಸುತ್ತಾರೆ. ಇಡೀ ಕುಟುಂಬ ಸೇರಿ ಪ್ರತಿದಿನ ರಾತ್ರಿ ಊಟ ಮಾಡುತ್ತಾರೆ.
ನೀತಾ ಅಂಬಾನಿ ದುಬಾರಿ ಮತ್ತು ವಿಶಿಷ್ಟವಾದ ಬಟ್ಟೆಗಳು ಮತ್ತು ಡಿಸೈನ್‌ಗಳಿಗೆ ಆಗಾಗ್ಗೆ ಸುದ್ದಿಯಾಗುತ್ತಾರೆ. ನೀತಾ ವಿಶ್ವದ ಅತ್ಯಂತ ದುಬಾರಿ ಸೀರೆಯ ಮಾಲೀಕರಾಗಿದ್ದು, ಅದರ ಬೆಲೆ 40 ಲಕ್ಷ ರೂಪಾಯಿ ಆಗಿದೆ. ನೀತಾ ಪುತ್ರಿ ಇಶಾ ಅಂಬಾನಿ ತನ್ನ ಮದುವೆಯಲ್ಲಿ ವಿಶ್ವದ ಅತ್ಯಂತ ದುಬಾರಿ ಲೆಹೆಂಗಾವನ್ನು ಧರಿಸಿದ್ದು ಇದರ ಬೆಲೆ 90 ಕೋಟಿ ರೂಪಾಯಿ ಆಗಿದೆ.


Click it and Unblock the Notifications