ಭಾರತದಲ್ಲಿ ವಾಟ್ಸಾಪ್ ಅತೀ ಜನಪ್ರಿಯವಾದ, ಅತೀ ಹೆಚ್ಚು ಜನರು ಬಳಕೆ ಮಾಡುವಂತಹ ಆಪ್ ಆಗಿದೆ. ತಮ್ಮ ದಿನನಿತ್ಯದ ಎಲ್ಲ ಕಾರ್ಯಗಳ ಸಂದರ್ಭದಲ್ಲೂ ವಾಟ್ಸಾಪ್ ಬಳಸುವವರು ಎಷ್ಟೋ ಜನರು ಇದ್ದಾರೆ. ರಾಜಾಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಮಾತ್ರವಲ್ಲದೆ ಕ್ರಿಮಿನಲ್‌ಗಳು ಕೂಡಾ ವಾಟ್ಸಾಪ್ ಅನ್ನೇ ಪ್ರಮುಖ ದಾಳವನ್ನಾಗಿಸಿಕೊಂಡಿದ್ದಾರೆ.
ಕಚೇರಿಗಳಲ್ಲಿ, ವಿದ್ಯಾರ್ಥಿಗಳು, ವ್ಯಾಪಾರ ಸಂಸ್ಥೆಗಳಲ್ಲಿ ಹೆಚ್ಚಾಗಿ ವಾಟ್ಸಾಪ್ ಬಳಸಲಾಗುತ್ತಿದೆ. ಆದರೆ ನಾವು ಪ್ರತಿ ನಿತ್ಯ ವಾಟ್ಸಾಪ್ ಮಾಡುವಾಗ ಯಾವುದೇ ಸಂದರ್ಭದಲ್ಲಿ ವಾಟ್ಸಾಪ್ ನಿಯಮವನ್ನು ಉಲ್ಲಂಘನೆ ಮಾಡಿದರೆ, ನಮ್ಮ ವಾಟ್ಸಾಪ್ ಖಾತೆ ಬ್ಲಾಕ್ ಆಗುವುದು ಮಾತ್ರವಲ್ಲ, ನಾವು ಜೈಲು ಪಾಲಾಗಬಹುದು ಎಂಬುವುದು ನಿಮಗೆ ತಿಳಿದಿದೆಯೇ?.
ನಿಯಮ ಮತ್ತು ಷರತ್ತನ್ನು ಉಲ್ಲಂಘಿಸಿದ ಆರೋಪದಲ್ಲಿ ಪ್ರತಿ ತಿಂಗಳು ವಾಟ್ಸಾಪ್ ಹಲವಾರು ಖಾತೆಗಳನ್ನು ಬ್ಯಾನ್ ಮಾಡುತ್ತಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ನೀವು ಯಾವುದಾದರೂ ನಿಯಮವನ್ನು ಉಲ್ಲಂಘಿಸಿದರೆ, ಜೈಲು ಶಿಕ್ಷೆಗೂ ಅರ್ಹರಾಗುತ್ತೀರಿ. ಹಾಗಾದರೆ ಯಾವೆಲ್ಲ ನಿಯಮ ಉಲ್ಲಂಘನೆಗೆ ಖಾತೆ ಬ್ಯಾನ್ ಆಗಬಹುದು, ಜೈಲು ಶಿಕ್ಷೆಯಾಗಬಹುದು ತಿಳಿಯಿರಿ....
ಸ್ಪಾಮ್ ಮೆಸೇಜ್ ಬಗ್ಗೆ ತಿಳಿದಿರಿ
ವಾಟ್ಸಾಪ್‌ನಲ್ಲಿ ಯಾರು ಸ್ಪಾಮ್ ಮೆಸೇಜ್‌ಗಳನ್ನು ಕಳುಹಿಸುತ್ತಾರೋ ಅವರ ಖಾತೆಯನ್ನು ಬ್ಲಾಕ್ ಮಾಡುವುದು ಮಾತ್ರವಲ್ಲ, ಅವರು ದಂಡವನ್ನು ಕೂಡಾ ತೆರಬೇಕಾಗುತ್ತದೆ. ಸ್ಪಾಮ್ ಮೆಸೇಜ್ ಕಳುಸುತ್ತಿರುವ ಬಗ್ಗೆ ದೂರು ದಾಖಲಾದರೆ, ನಿಮ್ಮ ವಿರುದ್ಧ ಕಠಿಣ ಕ್ರಮವನ್ನು ಕೂಡಾ ಕೈಗೊಳ್ಳಲಾಗುತ್ತದೆ.
ಕಾಪಿರೈಟ್ ನಿಯಮ ಉಲ್ಲಂಘನೆ
ನೀವು ವಾಟ್ಸಾಪ್‌ನಲ್ಲಿ ಯಾವುದಾದರೂ ಸಿನಿಮಾ ಲಿಂಕ್ ಅಥವಾ ಕಂಟೆಂಟ್ ಅನ್ನು ಶೇರ್ ಮಾಡುವ ಸಂದರ್ಭದಲ್ಲೂ ಅತೀ ಜಾಗರೂಕರಾಗಿ ಇರಬೇಕಾಗುತ್ತದೆ. ಒಂದು ವೇಳೆ ಖಾಸಗಿತನ ಹಕ್ಕಿನ ಉಲ್ಲಂಘನೆಯಾದರೆ ಅಥವಾ ಕಾಪಿರೈಟ್ ನಿಯಮ ಉಲ್ಲಂಘನೆಯಾದರೆ ನಿಮ್ಮ ವಾಟ್ಸಾಪ್ ಬ್ಲಾಕ್ ಆಗುತ್ತದೆ. ಈ ಬಗ್ಗೆ ನಿಮ್ಮ ವಿರುದ್ಧ ದೂರು ದಾಖಲಾದರೆ, ಜೈಲು ಶಿಕ್ಷೆ ಕೂಡಾ ಆಗಬಹುದು.
ಕ್ರಿಮಿನಲ್ ಚಟುವಟಿಕೆ
ಸಾಮಾಜಿಕ ಜಾಲತಾಣದಲ್ಲಿ ಅಥವಾ ವಾಟ್ಸಾಪ್‌ನಲ್ಲಿ ಮಾಡಲಾಗುವ ಮೆಸೇಜ್ ಮೂಲಕವೇ ಗಲಭೆಗಳು ಏಳುವ ಬಗ್ಗೆ ನೀವು ಕಾಣಬಹುದಾಗಿದೆ. ಇಂತಹ ಹಲವಾರು ಘಟನೆಗಳನ್ನು ನೀವು ನೋಡಿದ್ದೀರಿ. ಒಂದು ಮೆಸೇಜ್‌ನಿಂದಾಗಿ ಸಾವು, ಕೊಲೆ ನಡೆದಿರುವ ನಿದರ್ಶನಗಳು ಕೂಡಾ ಇದೆ. ಇಂತಹ ಸಂದರ್ಭದಲ್ಲಿ ಸೆಕ್ಯೂರಿಟಿ ಏಜೆನ್ಸಿಗಳ ದೂರಿನ ಆಧಾರದಲ್ಲಿ ವಾಟ್ಸಾಪ್ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ.
ವಾಟ್ಸಾಪ್ ಹ್ಯಾಕ್ ಮಾಡುವುದು ಅಪರಾಧ
ನಿಮ್ಮ ವಾಟ್ಸಾಪ್ ಖಾತೆಯನ್ನು ಯಾವುದೇ ವ್ಯಕ್ತಿ ಹ್ಯಾಕ್ ಮಾಡಿದರೆ, ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುವ ಹಕ್ಕು ನಿಮಗಿದೆ. ಕ್ರಮವೆಂದರೆ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿದವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬಹುದು. ಪೊಲೀಸ್ ಸೈಬರ್ ಯುನಿಟ್‌ನಲ್ಲಿ ನೀವು ದೂರು ದಾಖಲು ಮಾಡಬಹುದು. ವಾಟ್ಸಾಪ್ ಹ್ಯಾಕ್ ಮಾಡಿದ್ದಕ್ಕೆ ನೋಟಿಸ್ ಕೂಡಾ ನೀಡಲಾಗುತ್ತದೆ.
ಥರ್ಡ್ ಪಾರ್ಟಿ ಆಪ್ ಬಳಕೆ
ನೀವು ಥರ್ಡ್ ಪಾರ್ಟಿ ಆಪ್ ಅನ್ನು ಬಳಕೆ ಮಾಡಿದರೆ ನಿಮ್ಮ ವಾಟ್ಸಾಪ್ ಅನ್ನು ಬ್ಲಾಕ್ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ಥರ್ಡ್ ಪಾರ್ಟಿ ಆಪ್‌ಗಳು ಇದೆ. ಜಿಬಿ ವಾಟ್ಸಾಪ್, ವಾಟ್ಸಾಪ್ ಮೋಡ್, ವಾಟ್ಸಾಪ್ ಪಲ್ಸ್ ಥರ್ಡ್ ಪಾರ್ಟಿ ಆಪ್‌ಗಳಾಗಿದೆ. ಇಂತಹ ಆಪ್‌ಗಳನ್ನು ಬಳಸಿದರೆ ನಿಮ್ಮ ವಾಟ್ಸಾಪ್ ಬ್ಲಾಕ್ ಆಗಲಿದೆ.


Click it and Unblock the Notifications