ಭಾರತದಲ್ಲಿ ತೆರಿಗೆ ಪಾವತಿದಾರರ ಪ್ರಮಾಣದಲ್ಲಿ ಕೊಂಚ ಜಿಗಿತ ಕಂಡು ಬಂದಿದೆ. 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ತೆರಿಗೆದಾರರ ಸಂಖ್ಯೆಯು ಡಿಸೆಂಬರ್ 31, 2023 ರಂತೆ 216,217 ಕ್ಕೆ ತಲುಪಿದೆ. ವಾರ್ಷಿಕವಾಗಿ ಸುಮಾರು ಶೇಕಡ 15 ರಷ್ಟು ಏರಿಕೆಯಾಗಿದೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.
ಹಣಕಾಸು ವರ್ಷ 2023-24 ಕ್ಕೆ ಸಲ್ಲಿಸಲಾದ ಆದಾಯ ತೆರಿಗೆ ರಿಟರ್ನ್‌ಗಳನ್ನು ಮೌಲ್ಯಮಾಪನ ಮಾಡಿದ ನಂತರ ಈ ಮೇಲಿನ ಡೇಟಾವನ್ನು ಸಂಗ್ರಹಿಸಲಾಗಿದೆ. ಹಣಕಾಸು ವರ್ಷ 2022-23 ರಲ್ಲಿ, ಅಂತಹ ತೆರಿಗೆದಾರರ ಸಂಖ್ಯೆ 187,905 ಆಗಿತ್ತು. ಆದರೆ ಅದೀಗ 216,217 ಕ್ಕೆ ಏರಿಕೆಯಾಗಿದೆ.

ಹಣಕಾಸು ವರ್ಷ 2019-20 ರಿಂದ ಹಣಕಾಸು ವರ್ಷ 2021-22 ವರೆಗೆ, ಒಂದು ಕೋಟಿ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುವ ತೆರಿಗೆದಾರರ ಸಂಖ್ಯೆಯು ಸುಮಾರು ಶೇಕಡ 16 ರಷ್ಟು ಏರಿಕೆಯಾಗಿ, 127,256 ಕ್ಕೆ ತಲುಪಿದೆ. ಹಣಕಾಸು ವರ್ಷ 2023-24 ರಲ್ಲಿ 'ವೃತ್ತಿ'ಯಿಂದ ಆದಾಯವನ್ನು ವರದಿ ಮಾಡಿದ ಒಟ್ಟು ವ್ಯಕ್ತಿಗಳ ಸಂಖ್ಯೆ 12,218 ಆಗಿದೆ. ಹಣಕಾಸು ವರ್ಷ 2022-23 ರಲ್ಲಿ 10,528 ಆಗಿದ್ದು, ಹೆಚ್ಚಳವನ್ನು ನಾವು ಗಮನಿಸಬಹುದು. ಇನ್ನು ಹಣಕಾಸು ವರ್ಷ 2019-20ರಲ್ಲಿ ಈ ಸಂಖ್ಯೆ 6,555 ಆಗಿತ್ತು.
ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ, ತೆರಿಗೆದಾರರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಆದಾಯ ತೆರಿಗೆ ರಿಟರ್ನ್‌ಗಳ ಪೂರ್ವ-ಫೈಲಿಂಗ್, ಹೊಸ ನಮೂನೆ 26ಎಎಸ್ ಅನ್ನು ಸಲ್ಲಿಸುವುದು, ವೈಯಕ್ತಿಕ ಆದಾಯ ತೆರಿಗೆಯನ್ನು ಸರಳಗೊಳಿಸುವುದು ಮತ್ತು ಮೂಲದಲ್ಲಿ ಕಡಿತಗೊಳಿಸಿದ ತೆರಿಗೆಯ ವ್ಯಾಪ್ತಿಯ ವಿಸ್ತರಣೆಯನ್ನು ಪ್ರಸ್ತಾಪಿಸುವುದು (ಟಿಡಿಎಸ್), ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ (ಟಿಸಿಎಸ್) ಉಲ್ಲೇಖವನ್ನು ಮಾಡಿದ್ದಾರೆ.
"ಹೊಸ ತೆರಿಗೆ-ಪಾವತಿದಾರರನ್ನು ಆದಾಯ ತೆರಿಗೆ ನಿವ್ವಳಕ್ಕೆ ತರಲು, ಬೃಹತ್ ನಗದು ಹಿಂಪಡೆಯುವಿಕೆ, ವಿದೇಶಿ ರವಾನೆ, ಐಷಾರಾಮಿ ಕಾರುಗಳ ಖರೀದಿ, ಇ-ಕಾಮರ್ಸ್ ಭಾಗವಹಿಸುವವರು, ಸರಕುಗಳ ಮಾರಾಟ, ಸ್ಥಿರ ಆಸ್ತಿಗಳ ಸ್ವಾಧೀನ, ಸಾಗರೋತ್ತರ ಪ್ರವಾಸ ಕಾರ್ಯಕ್ರಮದ ಪ್ಯಾಕೇಜ್ ಖರೀದಿ ಸೇರಿದಂತೆ ಇತ್ಯಾದಿಗಳನ್ನು ಟಿಡಿಎಸ್/ ಟಿಸಿಎಸ್ ವ್ಯಾಪ್ತಿಗೆ ವಿಸ್ತರಿಸಲಾಗಿದೆ," ಎಂದು ಚೌಧರಿ ಹೇಳಿದರು.
ಹೊಸ ಆದಾಯ ತೆರಿಗೆ ಸ್ಲ್ಯಾಬ್
* 3 ಲಕ್ಷ ರೂಪಾಯಿವರೆಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ
* 3-6 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇಕಡ 5 ರಷ್ಟು ತೆರಿಗೆ ವಿಧಿಸಲಾಗುತ್ತದೆ (ಸೆಕ್ಷನ್ 87ಎ ಅಡಿಯಲ್ಲಿ ತೆರಿಗೆ ರಿಯಾಯಿತಿ ಲಭ್ಯವಿದೆ)
* 6-9 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇಕಡ 10 ರಷ್ಟು ತೆರಿಗೆ. (ಸೆಕ್ಷನ್ 87ಎ ಅಡಿಯಲ್ಲಿ 7 ಲಕ್ಷ ರೂಪಾಯಿವರೆಗೆ ತೆರಿಗೆ ರಿಯಾಯಿತಿ ಲಭ್ಯವಿದೆ)
* 9-12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇಕಡ 15 ರಷ್ಟು ತೆರಿಗೆ.
* 12-15 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇಕಡ 20 ರಷ್ಟು ತೆರಿಗೆ.
* 15 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇಕಡ 30 ರಷ್ಟು ತೆರಿಗೆ.
ಹೊಸ ತೆರಿಗೆ ಪದ್ಧತಿಯಡಿಯಲ್ಲಿ ವೈಯಕ್ತಿಕ, ಹಿರಿಯ ನಾಗರಿಕರು, ಸೂಪರ್ ಸಿನಿಯರ್ ಸಿಟಿಜನ್ ಎಲ್ಲರಿಗೂ ಒಂದೇ ತೆರಿಗೆ ಆಗಿದೆ.
ಹಳೆಯ ಆದಾಯ ತೆರಿಗೆ ಸ್ಲ್ಯಾಬ್
* 2.5 ಲಕ್ಷ ರೂಪಾಯಿವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ.
* 2.5 ಲಕ್ಷದಿಂದ 5 ಲಕ್ಷ ರೂಪಾಯಿವರೆಗಿನ ಆದಾಯದ ಮೇಲೆ ಶೇಕಡ 5 ರಷ್ಟು ತೆರಿಗೆ.
* 5ರಿಂದ 20 ಲಕ್ಷ ರೂಪಾಯಿಯ ವೈಯಕ್ತಿಕ ಆದಾಯಕ್ಕೆ ಶೇಕಡ 20 ರಷ್ಟು ತೆರಿಗೆ ವಿಧಿಸಲಾಗುತ್ತದೆ.
* 10 ಲಕ್ಷ ರೂಪಾಯಿವರೆಗಿನ ವೈಯಕ್ತಿಕ ಆದಾಯದ ಮೇಲೆ ಶೇಕಡ 30 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ.
ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ ಹಿರಿಯ ನಾಗರಿಕರಿಗೆ 3 ಲಕ್ಷ ರೂಪಾಯಿವರೆಗೆ ವಿನಾಯಿತಿಯನ್ನು ನೀಡಲಾಗುತ್ತದೆ. 80 ವರ್ಷಕ್ಕಿಂತ ಮೇಲ್ಪಟ್ಟವರು 5 ಲಕ್ಷ ರೂಪಾಯಿಯನ್ನು ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತದೆ.


Click it and Unblock the Notifications