ಅಕ್ಷಯ ತೃತೀಯ ದಿನ ಚಿನ್ನವನ್ನು ಖರೀದಿ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ತರುತ್ತದೆ ಎಂಬುವುದು ಹಿಂದೂ ಬಾಂಧವರ ನಂಬಿಕೆಯಾಗಿದೆ. ಅಕ್ಷಯ ತೃತೀಯವನ್ನು ಅಖಾತೀಜ್ ಎಂದು ಕೂಡಾ ಕರೆಯಲಾಗುತ್ತದೆ. ಅಕ್ಷಯ ಎಂಬ ಪದವೇ ಸಂಪತ್ತು ವೃದ್ದಿಯ ಪ್ರತೀಕವಾಗಿದೆ. ಎಂದಿಗೂ ಕಡಿಮೆಯಾಗದ್ದು ಅಥವಾ ಖಾಲಿಯಾಗಿದ್ದು ಎಂಬುವುದೇ ಅಕ್ಷಯ ಪದದ ಅರ್ಥ. ಹಲವಾರು ಪವಿತ್ರ ದಿನಗಳಲ್ಲಿ ಒಂದಾದ ಅಕ್ಷಯ ತೃತೀಯದಂದು ಚಿನ್ನದ ಮೇಲೆ ಹೂಡಿಕೆ ಮಾಡುವುದು ಪ್ರತೀತಿ.
ಅಕ್ಷಯ ತೃತೀಯ ದಿನದಂದು ಅಮೂಲ್ಯ ವಸ್ತುಗಳನ್ನು ಖರೀದಿ ಮಾಡಿದರೆ ಆ ಸಂಪತ್ತು ಎಂದಿಗೂ ಕಡಿಮೆಯಾಗದು ಬದಲಾಗಿ ಸಂಪತ್ತು ವೃದ್ದಿಯಾಗುತ್ತದೆ ಎಂಬ ನಂಬಿಕೆ. ಹಾಗೆಯೇ ಅಕ್ಷಯ ತೃತೀಯ ಯಶಸ್ವಿಯನ್ನು ಅದೃಷ್ಟವನ್ನು ತರುತ್ತದೆ ಎಂದು ಜನರು ನಂಬಿದ್ದಾರೆ. ಭಗವಂತ ಪರಶುರಾಮನ ಜನನದ ಆಚರಣೆ ಇದಾಗಿದ್ದು, ಹಿಂದೂಗಳಲ್ಲಿ ಅತೀ ಪ್ರಮುಖವಾಗಿ ದಿನವಾಗಿದೆ.

ಚಿನ್ನದ ಮಾರುಕಟ್ಟೆ ಮೇಲೆ ಅಕ್ಷಯ ತೃತೀಯ ಪ್ರಭಾವ
ಅಕ್ಷಯ ತೃತೀಯ ಪ್ರತಿ ವರ್ಷವೂ ಕೂಡಾ ಚಿನ್ನದ ಮಾರುಕಟ್ಟೆಯ ಮೇಲೆ ಭಾರೀ ಪ್ರಭಾವವನ್ನು ಉಂಟು ಮಾಡುತ್ತದೆ. ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮನೆಯಲ್ಲಿ ಸಮೃದ್ಧಿ ವೃದ್ಧಿಗೆ ಕಾರಣವಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದಾಗಿ ಈ ದಿನ ಚಿನ್ನಕ್ಕೆ ಅಧಿಕ ಬೇಡಿಕೆ ಇರುತ್ತದೆ. ಯಾವುದೇ ವಸ್ತುವಿಗೆ ಬೇಡಿಕೆ ಹೆಚ್ಚಾದಂತೆ ಅದರ ಬೆಲೆಯು ಕೂಡಾ ಅಧಿಕವಾಗುವುದು ಸಹಜ. ಅದರಂತೆಯೇ ಈ ಬೇಡಿಕೆ ಹೆಚ್ಚಾದಂತೆ ಚಿನ್ನದ ಬೆಲೆಯು ಕೂಡಾ ಹೆಚ್ಚಳವಾಗುತ್ತದೆ.
ರಜೆಯ ಸೀಸನ್‌ನಲ್ಲಿ ಸಾಮಾನ್ಯವಾಗಿ ಬಹುತೇಕ ಎಲ್ಲ ಜ್ಯುವೆಲ್ಲರಿ ಮಳಿಗೆಗಳಲ್ಲಿ ಉತ್ತಮ ಆಫರ್‌ಗಳನ್ನು ನೀಡಲಾಗುತ್ತದೆ. ನಿಗದಿತ ಪ್ರಮಾಣದ ಚಿನ್ನ ಖರೀದಿ ಮಾಡಿದರೆ, ಬೆಳ್ಳಿ ನಾಣ್ಯ ಉಚಿತ, ಇಷ್ಟು ಪ್ರಮಾಣದ ರಿಯಾಯಿತಿ ಎಂಬಿತ್ಯಾದಿ ಆಫರ್‌ಗಳು ಇರುತ್ತದೆ. ಈ ರಿಯಾಯಿತಿಯು ಚಿನ್ನದ ಬೇಡಿಕೆಯನ್ನು ಹೆಚ್ಚಳ ಮಾಡುತ್ತದೆ. ಹಾಗೆಯೇ ರಿಯಾಯಿತಿ ಇದ್ದಾಗ ಚಿನ್ನದ ಮಾರುಕಟ್ಟೆಯಲ್ಲಿ ಖರೀದಿ ಹೆಚ್ಚಳವಾಗುತ್ತದೆ.
ಇನ್ನು ಅಕ್ಷಯ ತೃತೀಯ ಮಾತ್ರವಲ್ಲದೇ ಈ ದಿನ ಇನ್ನೊಂದು ಹಬ್ಬವೂ ಕೂಡಾ ಇದೆ. ಭಾರತದಲ್ಲಿ ಮಾತ್ರ ಅಕ್ಷಯ ತೃತೀಯ ಇದ್ದರೆ, ಜಾಗತಿಕವಾಗಿ ರಮಾದಾನ್ ಅಥವಾ ರಮ್ಜಾನ್ ಕಾರಣದಿಂದಾಗಿ ಚಿನ್ನದ ಬೇಡಿಕೆ ಹೆಚ್ಚಳವಾಗುತ್ತದೆ. ಪ್ರಮುಖವಾಗಿ ಮುಸ್ಲಿಂ ನಾಗರಿಕರು ಅಧಿಕವಾಗಿರುವ ದೇಶಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿರುತ್ತದೆ.
ರಮಾದಾನ್ ತಿಂಗಳಲ್ಲಿ ಹಲವಾರು ಮಂದಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಅಕ್ಷಯ ತೃತೀಯದಂತೆ ಈ ದಿನ ಚಿನ್ನವನ್ನು ಖರೀದಿ ಮಾಡಿದರೆ, ಸಂಪತ್ತು ವೃದ್ಧಿಯಾಗುತ್ತದೆ , ಅದೃಷ್ಟ ಲಭಿಸುತ್ತದೆ ಎಂಬ ನಂಬಿಕೆಯಿದೆ. ಈ ನಂಬಿಕೆಯು, ಸಂಪ್ರದಾಯವು ಪ್ರಮುಖವಾಗಿ ಮಧ್ಯಪ್ರಾಚ್ಯ ಚಿನ್ನದ ಮಾರುಕಟ್ಟೆ ಹಾಗೂ ವಿಶ್ವಾದ್ಯಂತ ಚಿನ್ನದ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಿದೆ.
ಅಕ್ಷಯ ತೃತೀಯದ ದಿನದಲ್ಲಿ ಇರುವ ಚಿನ್ನದ ಬೇಡಿಕೆ ಆ ದಿನಕ್ಕೆ ಮಾತ್ರ ಸೀಮಿತವಾಗಿರದು, ಅದು ಚಿನ್ನದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ. ಮಾರುಕಟ್ಟೆಯಲ್ಲಿ ಒಂದು ವಾರಕ್ಕೂ ಮುನ್ನವೇ ಚಿನ್ನ ಖರೀದಿಯ ಭರಾಟೆ ಕಂಡು ಬರುತ್ತದೆ. ಈ ಚಿನ್ನದ ಬೇಡಿಕೆ ಹೆಚ್ಚಳದಿಂದಾಗಿ ಟ್ರೇಡರ್ ಮತ್ತು ಹೂಡಿಕೆದಾರರು ತಮ್ಮ ಟೆಕ್‌ನಿಕ್ ಅನ್ನು ಬದಲಾವಣೆ ಮಾಡುತ್ತಿದ್ದಾರೆ.
ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವ ಪದ್ಧತಿಯು ಚಿನ್ನದ ಮಾರುಕಟ್ಟೆಯಲ್ಲಿ ದೊಡ್ಡ ಪರಿಣಾಮವನ್ನು ಬೀರುತ್ತದೆ. ಹೆಚ್ಚಿನ ಬೇಡಿಕೆಯು ಚಿನ್ನದ ಬೆಲೆಗಳನ್ನು ಹೆಚ್ಚಿಸಬಹುದು. ಹೂಡಿಕೆದಾರರು ಮತ್ತು ವ್ಯಾಪಾರಿಗಳು ಅಕ್ಷಯ ತೃತೀಯವು ಚಿನ್ನದ ಮಾರುಕಟ್ಟೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ತಿಳಿದಿರಬೇಕು. ಅದಕ್ಕೆ ಅನುಗುಣವಾಗಿ ತಮ್ಮ ವ್ಯಾಪಾರ ಯೋಜನೆಗಳನ್ನು ಬದಲಾವಣೆ ಮಾಡಬೇಕು.


Click it and Unblock the Notifications