ಪೇಟಿಎಂ ಆರ್‌ಬಿಐ ಅನುಮೋದನೆ ಮಾಡಿದ ಸುರಕ್ಷಿತ ಡಿಜಿಟಲ್ ಪ್ರಕ್ರಿಯೆಯಾಗಿದೆ. ನಗದುರಹಿತ ಹಣ ವರ್ಗಾವಣೆ ನಡೆಸಲು ಈ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ತೀರಾ ಅಗತ್ಯವಾಗಿದೆ.
ವಂಚನೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈ ಕೆವೈಸಿ ವೆರಿಫಿಕೇಶನ್ ತೀರಾ ಅಗತ್ಯವಾಗಿದೆ. ಹಾಗೆಯೇ ನಮ್ಮಲ್ಲಿ ಇರುವ ಮೊತ್ತವನ್ನು ಟ್ರಾಕಿಂಗ್ ಮಾಡಲು ಈ ಕೆವೈಸಿ ಮಾಡುವುದು ಮುಖ್ಯವಾಗಿದೆ.
ಪೇಟಿಂಎ ವ್ಯಾಲೆಟ್‌ನ ಆಕ್ಸಸ್ ಪಡೆಯಲು ಕೂಡಾ ಪೇಟಿಎಂ ಕೆವೈಸಿ ಅಗತ್ಯವಾಗಿದೆ. ಆದರೆ ಹಲವಾರು ಮಂದಿಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ತಿಳಿದಿಲ್ಲ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಫೀಚರ್ ಬಗ್ಗೆ ತಿಳಿಯಿರಿ
* ಮೊಬೈಲ್ ಸಂಖ್ಯೆ, ಕ್ಯೂಆರ್ ಕೋಡ್, ಪೇಟಿಂಎ ಇಕಾಮರ್ಸ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ನೀವು ಹಣವನ್ನು ಪಾವತಿ ಮಾಡಬಹುದು.
* ದಿನದ 24 ಗಂಟೆ, ವಾರದ ಎಲ್ಲ ದಿನವೂ ನೀವು ಹಣವನ್ನು ಪಾವತಿ ಮಾಡಬಹುದು.
* ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಐಡಿ ಮೂಲಕ ನೀವು ನಿಮ್ಮ ಪೆಟೀಎಂ ವ್ಯಾಲೆಟ್ ಅನ್ನು ಟಾಪ್‌ಅಪ್ ಮಾಡಬಹುದು.
* ನೀವು ಪೇಟಿಎಂ ಆಪ್ ಮೂಲಕ ಬೇರೆ ಹಣಕಾಸು ವಹಿವಾಟನ್ನು ಕೂಡಾ ನಡೆಸಬಹುದು. ಮೊಬೈಲ್ ರಿಚಾರ್ಜ್, ಡಿಟಿಎಚ್ ರಿಚಾರ್ಜ್, ಬಿಲ್ ಪಾವತಿಯನ್ನು ಕೂಡಾ ಮಾಡಬಹುದು.
* ಪೇಟಿಎಂ ಮೂಲಕ ಎಸ್‌ಐಪಿ ಹೂಡಿಕೆಯನ್ನು ಮಾಡಬಹುದು.
* ರೈಲು ಹಾಗೂ ವಿಮಾನಯಾನಕ್ಕಾಗಿ ಟಿಕೆಟ್ ಅನ್ನು ಬುಕ್ ಮಾಡಲು, ಸಿನಿಮಾ ಟಿಕೆಟ್ ಮೊತ್ತ ಪಾವತಿಸಲು ಕೂಡಾ ನೀವು ಪೇಟಿಎಂ ಅನ್ನು ಬಳಸಬಹುದು.
* ನೀವು ಪೇಟಿಎಂ ಮೂಲಕ ಬೇರೆ ವಸ್ತುಗಳ ಖರೀದಿಗಾಗಿ ಪಾವತಿಯನ್ನು ಕೂಡಾ ಮಾಡಬಹುದು.
ಕನಿಷ್ಠ ಕೆವೈಸಿಯನ್ನು ಹೇಗೆ ಮಾಡುವುದು?
ಹಂತ 1: ಪೇಟಿಎಂ ಆಪ್ ಅನ್ನು ತೆರಿಯಿರಿ, ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ
ಹಂತ 2: ಸ್ಕ್ರೋಲ್ ಡೌನ್ ಮಾಡಿ, ಪ್ರೊಫೈಲ್ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಹೆಸರು, ಇಮೇಲ್, ವ್ಯಾಲೆಟ್ ಸ್ಟೇಟಸ್ ಇರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ
ಹಂತ 4: ನಿಮ್ಮ ಪೇಟಿಎಂ ವ್ಯಾಲೆಟ್ 'Inactive' ಇದ್ದರೆ, 'Activate Now' ಮೇಲೆ ಕ್ಲಿಕ್ ಮಾಡಿ
ಹಂತ 5: 'Complete your minimum KYC to activate wallet' ಮೇಲೆ ಕ್ಲಿಕ್ ಮಾಡಿ
ಹಂತ 6: ಕನಿಷ್ಠ ಕೆವೈಸಿ ಪ್ರಕ್ರಿಯೆ ಪೂರ್ಣವಾದ ಬಳಿಕ, ಪೇಟಿಎಂ ವ್ಯಾಲೆಟ್ ಆಕ್ಟಿವ್ ಆಗಲಿದೆ. ಆದರೆ ಕೆಲವೇ ಕೆಲವು ಪ್ರಯೋಜನಗಳು ಮಾತ್ರ ಲಭ್ಯವಾಗಲಿದೆ.
ಹಂತ 7: ನೀವು ಸಂಪೂರ್ಣ ಕೆವೈಸಿ ಮಾಡುವ ಮೂಲಕ ಸುಲಭವಾಗಿ ಅಧಿಕ ಪ್ರಯೋಜನವನ್ನು ಪಡೆಯಬಹುದು.
ವಿಡಿಯೋ ಕೆವೈಸಿ
ಹಂತ 1: ಪೇಟಿಎಂ ಆಪ್ ಅನ್ನು ತೆರೆಯಿರಿ, ಪ್ರೊಫೈಲ್‌ಗೆ ಹೋಗಿ
ಹಂತ 2: ಸ್ಕ್ರೋಲ್ ಡೌನ್ ಮಾಡಿ, ಪ್ರೊಫೈಲ್ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಹೆಸರು, ಇಮೇಲ್, ವ್ಯಾಲೆಟ್ ಸ್ಟೇಟಸ್ ಇರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ
ಹಂತ 4: ಅಪ್‌ಡೇಟ್ ಕೆವೈಸಿ ಮೇಲೆ ಕ್ಲಿಕ್ ಮಾಡಿ
ಹಂತ 5: ನಿಮ್ಮ ಅಕೌಂಟ್ ಅಪ್‌ಗ್ರೇಡ್ ಮಾಡುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 6: ವಿಡಿಯೋ ಕೆವೈಸಿ ಮೇಲೆ ಕ್ಲಿಕ್ ಮಾಡಿ, 12 ಡಿಜಿಟ್ ಆಧಾರ್ ಸಂಖ್ಯೆ ಹಾಕಿ
ಹಂತ 7: ಒಟಿಪಿಯನ್ನು ನಮೂದಿಸಿ, ವೆರಿಫಿಕೇಷನ್ ಮಾಡಿದ ಬಳಿಕ ಎಲ್ಲ ಅಗತ್ಯ ಮಾಹಿತಿ ನಮೂದಿಸಿ
ಹಂತ 8: ವಿಡಿಯೋ ವೆರಿಫಿಕೇಷನ್ ಮಾಡುವ ಮುನ್ನ ಎಲ್ಲ ಅಗತ್ಯ ದಾಖಲೆಗಳನ್ನು ಕೈಯಲ್ಲಿ ಇರಿಸಿಕೊಳ್ಳಿ
ಹಂತ 9: proceed ಮೇಲೆ ಕ್ಲಿಕ್ ಮಾಡಿದರೆ ವಿಡಿಯೋ ವೆರಿಫಿಕೇಷನ್ ಆರಂಭವಾಗುತ್ತದೆ. ಪೇಟಿಎಂ ಸಿಬ್ಬಂದಿಗಳು ಮಾಹಿತಿಯನ್ನು ತಿಳಿಸುತ್ತಾರೆ.
ಹಂತ 10: ವಿಡಿಯೋ ವೆರಿಫಿಕೇಷನ್ ಬಳಿಕ ಸ್ಟೇಟಸ್ ಅಪ್‌ಡೇಟ್ ಆಗಲಿದೆ, ಸಂಪೂರ್ಣ ವೆರಿಫಿಕೇಷನ್ ಪ್ರಕ್ರಿಯೆ ಮುಕ್ತಾಯವಾಗಲಿದೆ.
ಕೆವೈಸಿ ಪಾಯಿಂಟ್ ಬಳಿಕ ಕೆವೈಸಿ
ನೀವು http://m.p-y.tm/kyc ಮೂಲಕ ನಿಮ್ಮ ಸಮೀಪದ ಕೆವೈಸಿ ಕೇಂದ್ರವನ್ನು ನೀವು ತಿಳಿಯಬಹುದು. ನೀವು Nearby ಐಕಾನ್ ಅನ್ನು ಕೂಡಾ ಕ್ಲಿಕ್ ಮಾಡಬಹುದು. ವೆರಿಫಿಕೇಷನ್‌ಗಾಗಿ ನೀವು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅನ್ನು ಹೊಂದಿರಬೇಕು. ನಿಮ್ಮ ಆಧಾರ್ ಕಾರ್ಡ್ ಬಯೋಮೆಟ್ರಿಕ್ ವೆರಿಫಿಕೇಷನ್ ಮಾಡಿರಬೇಕು.
ಮನೆ ಬಾಗಿಲಿಗೆ ಕೆವೈಸಿ ಸೇವೆ
ಹಂತ 1: ಪೇಟಿಎಂ ಆಪ್ ಅನ್ನು ತೆರೆಯಿರಿ, ಪ್ರೊಫೈಲ್‌ಗೆ ಹೋಗಿ
ಹಂತ 2: ಸ್ಕ್ರೋಲ್ ಡೌನ್ ಮಾಡಿ, ಪ್ರೊಫೈಲ್ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಹೆಸರು, ಇಮೇಲ್, ವ್ಯಾಲೆಟ್ ಸ್ಟೇಟಸ್ ಇರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ
ಹಂತ 4: ಅಪ್‌ಡೇಟ್ ಕೆವೈಸಿ ಮೇಲೆ ಕ್ಲಿಕ್ ಮಾಡಿ
ಹಂತ 5: ನಿಮ್ಮ ಅಕೌಂಟ್ ಅಪ್‌ಗ್ರೇಡ್ ಮಾಡುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 6: KYC at your doorstep ಆಯ್ಕೆ ಮಾಡಿಕೊಳ್ಳಿ
ಹಂತ 7: ಅಗತ್ಯ ಮಾಹಿತಿಯನ್ನು ನಮೂದಿಸಿ
ಹಂತ 8: ಅಪಾಯಿಂಟ್‌ಮೆಂಟ್ ಅನ್ನು ಮಾಡಿಕೊಂಡು ಆ ವಿಳಾಸಕ್ಕೆ ಭೇಟಿ ನೀಡಿ


Click it and Unblock the Notifications