Personal Loan: ಎಸ್‌ಬಿಐನಿಂದ ಎಚ್‌ಡಿಎಫ್‌ಸಿವರೆಗೆ ವೈಯಕ್ತಿಕ ಸಾಲ ಬಡ್ಡಿದರ ಹೇಗಿದೆ?

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ವೈಯಕ್ತಿಕ ಸಾಲಕ್ಕೆ ಬಡ್ಡಿ: ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಐದು ವರ್ಷ ಅವಧಿಯ 1 ಲಕ್ಷ ರೂ. ಸಾಲಕ್ಕೆ ಶೇ.9.3ರಿಂದ ಶೆ.13.4ರವರೆಗೆ ಬಡ್ಡಿ ದರ ವಿಧಿಸಲಾಗುತ್ತದೆ. ಬಡ್ಡಿ ದರಕ್ಕೆ ಅನುಗುಣವಾಗಿ ಇಎಂಐ ಕೂಡ 2090 ರೂ.ನಿಂದ 2296 ರೂ. ಮಧ್ಯೆ ಇರುತ್ತದೆ. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾವು ಸಾಲದ ಮೊತ್ತದ ಮೇಲೆ ಶೇ.0.5ರಷ್ಟು ಪ್ರೊಸೆಸಿಂಗ್‌ ಶುಲ್ಕವನ್ನು ವಿಧಿಸುತ್ತದೆ.

ಬ್ಯಾಂಕ್‌ ಆಫ್‌ ಮಹಾರಾಷ್ಟ್ರದಲ್ಲಿ ವೈಯಕ್ತಿಕ ಸಾಲಕ್ಕೆ ಬಡ್ಡಿದರ: ಬ್ಯಾಂಕ್‌ ಆಫ್ ಮಹಾರಾಷ್ಟ್ರದಲ್ಲಿ ಐದು ವರ್ಷಗಳ ಅವಧಿಯ 1 ಲಕ್ಷ ರೂ. ಸಾಲಕ್ಕೆ ಶೇ.9.5ರಿಂದ ಶೇ.12.8ರವರೆಗೆ ಬಡ್ಡಿ ದರವಿರುತ್ತದೆ. ಬಡ್ಡಿ ದರ ಆಧರಿಸಿ ಇಎಂಐ 2100ರೂ. ನಿಂದ 2265 ರೂ. ನಡುವೆ ಇರುತ್ತದೆ. ಬ್ಯಾಂಕ್‌ ಆಫ್‌ ಮಹಾರಾಷ್ಟ್ರವು ಜಿಎಸ್‌ಟಿ ಹೊರತಾಗಿ ಸಾಲದ ಮೊತ್ತಕ್ಕೆ ಶೇ.1ರಷ್ಟು ಪ್ರೊಸೆಸಿಂಗ್‌ ಶುಲ್ಕವನ್ನು ವಿಧಿಸುತ್ತದೆ.

 ಎಸ್‌ಬಿಐನಿಂದ ಎಚ್‌ಡಿಎಫ್‌ಸಿವರೆಗೆ ವೈಯಕ್ತಿಕ ಸಾಲ ಬಡ್ಡಿದರ ಹೇಗಿದೆ?

ಇಂಡಿಯನ್‌ ಬ್ಯಾಂಕ್‌ನಲ್ಲಿ ವೈಯಕ್ತಿಕ ಸಾಲಕ್ಕೆ ಬಡ್ಡಿ: ಇಂಡಿಯನ್‌ ಬ್ಯಾಂಕ್‌ನಲ್ಲಿ ಐದು ವರ್ಷಗಳ ಅವಧಿಯ 1 ಲಕ್ಷ ರೂ. ಸಾಲಕ್ಕೆ ಶೇ.10ರಿಂದ ಶೇ.12.4ರವರೆಗೆ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಬಡ್ಡಿ ದರ ಅವಲಂಬಿಸಿ ಇಎಂಐ ಮೊತ್ತ 2125ರೂ. ನಿಂದ 2245ರೂ. ವರೆಗೆ ಇರುತ್ತದೆ. ಇಂಡಿಯನ್‌ ಬ್ಯಾಂಕ್‌ ಸಾಲದ ಮೊತ್ತದ ಮೇಲೆ ಶೇ.1ರಷ್ಟು ಪ್ರೊಸೆಸಿಂಗ್‌ ಶುಲ್ಕವನ್ನು ವಿಧಿಸುತ್ತದೆ. ಆದರೆ ಈ ಬ್ಯಾಂಕ್‌ ಸರ್ಕಾರಿ ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿನ ಉದ್ಯೋಗಿಗಳಿಗೆ ಯಾವುದೇ ಪ್ರೊಸೆಸಿಂಗ್‌ ಶುಲ್ಕ ವಿಧಿಸುವುದಿಲ್ಲ.

ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸಾಲಕ್ಕೆ ಬಡ್ಡಿ: ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಐದು ವರ್ಷಗಳ ಅವಧಿಯ 1 ಲಕ್ಷ ರೂ. ಸಾಲಕ್ಕೆ ಬಡ್ಡಿ ದರವು ಶೇ.10.35ರಿಂದ ಶೇ.14.85ರವರೆಗೆ ಇರುತ್ತದೆ. ಬಡ್ಡಿ ದರ ಆಧರಿಸಿ 2142ರೂ.ನಿಂದ 2371ರೂ.ವರೆಗೆ ಇಎಂಐ ಇರುತ್ತದೆ. ಬ್ಯಾಂಕ್‌ ಆಫ್‌ ಇಂಡಿಯಾವು ಸಾಲದ ಮೊತ್ತದ ಮೇಲೆ ಶೇ.2ರಷ್ಟು ಪ್ರೊಸೆಸಿಂಗ್‌ ಶುಲ್ಕ ವಿಧಿಸುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಸಾಲದ ಬಡ್ಡಿದರ: ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಐದು ವರ್ಷಗಳ ಅವಧಿಯ 1 ಲಕ್ಷ ರೂ. ಸಾಲಕ್ಕೆ ಬಡ್ಡಿ ದರವು ಶೇ.10.35ರಿಂದ ಶೇ.21ರವರೆಗೆ ಇರುತ್ತದೆ. ಬಡ್ಡಿ ದರ ಆಧರಿಸಿ 2142ರೂ. ನಿಂದ 2705 ರೂ. ತನಕ ಇಎಂಐ ಇರುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಸಾಲದ ಮೊತ್ತದ ಮೇಲೆ ಶೇ.2.5ರಷ್ಟು ಪ್ರೊಸೆಸಿಂಗ್‌ ಶುಲ್ಕ ವಿಧಿಸುತ್ತದೆ.

ಆಕ್ಸಿಸ್‌ ಬ್ಯಾಂಕ್‌ನ ವೈಯಕ್ತಿಕ ಸಾಲಕ್ಕೆ ಬಡ್ಡಿ: ಐದು ವರ್ಷಗಳ ಅವಧಿಯ 1 ಲಕ್ಷ ರೂ. ಸಾಲಕ್ಕೆ ಆಕ್ಸಿಸ್‌ ಬ್ಯಾಂಕ್‌ ಶೇ.10.49ರಿಂದ ಶೇ.13.65ರವರೆಗೆ ಬಡ್ಡಿ ದರವನ್ನು ನಿಗದಿಪಡಿಸಿದೆ. ಬಡ್ಡಿ ಪ್ರಕಾರ ಇಎಂಐ 2149ರೂ. ನಿಂದ 2309 ರೂ. ಅಂತರದಲ್ಲಿ ಇರುತ್ತದೆ.

ಕ್ಯಾಥೋಲಿಕ್‌ ಸಿರಿಯನ್‌ ಬ್ಯಾಂಕ್‌ನಲ್ಲಿ ಬಡ್ಡಿದರ: ಕ್ಯಾಥೋಲಿಕ್‌ ಸಿರಿಯನ್‌ ಬ್ಯಾಂಕ್‌ನಲ್ಲಿ ಐದು ವರ್ಷಗಳ ಅವಧಿ 1 ಲಕ್ಷ ರೂ. ಸಾಲಕ್ಕೆ ಬಡ್ಡಿದರವು ಶೇ.10.49ರಿಂದ ಶೇ.24ರವರೆಗೆ ಇರುತ್ತದೆ. ಈ ಬ್ಯಾಂಕ್‌ನಲ್ಲಿ ಇಎಂಐ ಮೊತ್ತ 2149ರೂ.ನಿಂದ 2877ರೂ. ನಡುವೆ ಇರುತ್ತದೆ. ಕ್ಯಾಥೋಲಿಕ್‌ ಸಿರಿಯನ್‌ ಬ್ಯಾಂಕ್‌ ಲೋನ್‌ ಮೊತ್ತದ ಮೇಲೆ ಶೇ.1ರಷ್ಟು ಪ್ರೊಸೆಸಿಂಗ್‌ ಶುಲ್ಕ ವಿಧಿಸುತ್ತದೆ.

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ನಲ್ಲಿ ಬಡ್ಡಿದರ: ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ನಲ್ಲಿ ಐದು ವರ್ಷಗಳ 1 ಲಕ್ಷ ರೂ. ಸಾಲಕ್ಕೆ ಶೇ.10.49ರಿಂದ ಶೇ.24ರವರೆಗೆ ಬಡ್ಡಿ ದರ ವಸೂಲಿ ಮಾಡಲಾಗುತ್ತದೆ. ಹಾಗೆಯೇ ಬಡ್ಡಿ ದರ ಅವಲಂಬಿಸಿ ಇಎಂಐ 2149ರೂ. ನಿಂದ 2877ರೂ. ತನಕ ಆಗಿರುತ್ತದೆ. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಶೇ.3.5ರಷ್ಟು ಪ್ರೊಸೆಸಿಂಗ್‌ ಶುಲ್ಕ ವಿಧಿಸುತ್ತದೆ.

ಐಸಿಐಸಿಐ ಬ್ಯಾಂಕ್‌ ವೈಯಕ್ತಿಕ ಸಾಲಕ್ಕೆ ಬಡ್ಡಿ: ಐಸಿಐಸಿಐ ಬ್ಯಾಂಕ್‌ನಲ್ಲಿ ಐದು ವರ್ಷಗಳ ಅವಧಿಯ 1 ಲಕ್ಷ ರೂ. ಸಾಲಕ್ಕೆ ಬಡ್ಡಿ ದರ ಶೇ.10.75ರಿಂದ ಶೇ.19ರಷ್ಟು ಆಗಿದೆ. ಬಡ್ಡಿ ದರ ಪ್ರಕಾರ ಇಎಂಐ 2162ರೂ.ನಿಂದ 2594ರೂ. ಮಧ್ಯೆ ಇರುತ್ತದೆ. ಐಸಿಐಸಿಐ ಬ್ಯಾಂಕ್‌ ಸಾಲದ ಮೊತ್ತದ ಮೇಲೆ ಶೇ.2.5ವರೆಗೆ ಪ್ರೊಸೆಸಿಂಗ್‌ ಶುಲ್ಕ ವಿಧಿಸುತ್ತದೆ.

ಬ್ಯಾಕ್‌ ಆಫ್‌ ಬರೋಡಾದಲ್ಲಿ ಬಡ್ಡಿದರ: ಸಾರ್ವಜನಿಕ ವಲಯದ ಮುಂಚೂಣಿಯ ಬ್ಯಾಂಕ್‌ ಆಫ್‌ ಬರೋಡಾ ವೈಯಕ್ತಿಕ ಸಾಲಕ್ಕೆ ಶೇ.10.9ರಿಂದ ಶೇ.18.25ರವರೆಗೆ ಬಡ್ಡಿ ವಸೂಲಿ ಮಾಡುತ್ತದೆ. ಜಿಎಸ್‌ಟಿ ಜತೆಗೆ ಶೇ.1ರಿಂದ ಶೇ.2ರವರೆಗೆ ಪ್ರೊಸೆಸಿಂಗ್‌ ಶುಲ್ಕ ವಿಧಿಸುತ್ತದೆ.

ಐಡಿಬಿಐ ಬ್ಯಾಂಕ್‌ನಲ್ಲಿ ಸಾಲದ ಬಡ್ಡಿ: ಐಡಿಬಿಐ ಬ್ಯಾಂಕ್‌ ವೈಯಕ್ತಿಕ ಸಾಲಕ್ಕೆ ಶೇ.11ರಿಂದ ಶೇ.15.45ರವರೆಗೆ ಬಡ್ಡಿ ದರವನ್ನು ವಿಧಿಸುತ್ತದೆ. ಜತೆಗೆ ಸಾಲದ ಮೊತ್ತದ ಮೇಲೆ ಶೇ.1ರಷ್ಟು ಪ್ರೊಸೆಸಿಂಗ್‌ ಶುಲ್ಕವಿರುತ್ತದೆ. ಇನ್ನು ಇಎಂಐ 2174ರೂ.ನಿಂದ 2405ರೂ. ಮಧ್ಯೆ ಇರುತ್ತದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸಾಲಕ್ಕೆ ಬಡ್ಡಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ನೀವು ವೈಯಕ್ತಿಕ ಸಾಲವನ್ನು ಪಡೆಯಲು ಬಯಸುವುದಾದರೆ ಬಡ್ಡಿದರವು ಶೇ.11ರಿಂದ ಶೇ.14ರವರೆಗೆ ಇರುತ್ತದೆ. ಐದು ವರ್ಷದ ಅವಧಿಯ 1 ಲಕ್ಷ ರೂ. ಸಾಲಕ್ಕೆ ಇಎಂಐ ಮೊತ್ತ 2174ರೂ. ನಿಂದ 2327ರೂ. ಅಂತರದಲ್ಲಿ ಇರುತ್ತದೆ. ಈ ಬ್ಯಾಂಕ್‌ ಕೂಡ ಸಾಲದ ಮೊತ್ತದ ಮೇಲೆ ಶೇ.1.5ರಷ್ಟು ಪ್ರೊಸೆಸಿಂಗ್‌ ಶುಲ್ಕ ವಸೂಲಿ ಮಾಡುತ್ತದೆ.

ಪಂಜಾಬ್‌ ಅಂಡ್‌ ಸಿಂದ್‌ ಬ್ಯಾಂಕ್‌ನಲ್ಲಿ ಸಾಲಕ್ಕೆ ಬಡ್ಡಿ: ಪಂಜಾಬ್‌ ಆಂಡ್‌ ಸಿಂಧ್ ಬ್ಯಾಂಕ್‌ ಐದು ವರ್ಷ ಅವಧಿಯ 1 ಲಕ್ಷ ರೂ. ಸಾಲಕ್ಕೆ ಶೇ.11.15ರಿಂದ ಶೇ.12.75ರವರೆಗೆ ಬಡ್ಡಿಯನ್ನು ವಿಧಿಸುತ್ತದೆ. ಇನ್ನು ಇಎಂಐ ಮೊತ್ತ 2182ರೂ. ನಿಂದ 2263ರೂ. ಮಧ್ಯೆ ಇರುತ್ತದೆ. ಈ ಬ್ಯಾಂಕ್‌ ಕೂಡ ಸಾಲದ ಮೊತ್ತದ ಮೇಲೆ ಶೇ.0.5ರಿಂದ ಶೇ.1ರವರೆಗೆ ಪ್ರೊಸೆಸಿಂಗ್‌ ಶುಲ್ಕ ವಸೂಲಿ ಮಾಡುತ್ತದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಬಡ್ಡಿ ದರ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಐದು ವರ್ಷದ ಅವಧಿಯ 1 ಲಕ್ಷ ರೂ. ಸಾಲಕ್ಕೆ ಶೇ.11.4ರಿಂದ ಶೇ.16.25ರವರೆಗೆ ಬಡ್ಡಿ ದರ ವಿಧಿಸಲಾಗುತ್ತದೆ. ಸಾಲದ ಮೊತ್ತ ಆಧರಿಸಿ 2194ರೂ.ನಿಂದ 2445ರೂ. ಮಧ್ಯೆ ಇಎಂಐ ಇರುತ್ತದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿಯೂ ಶೇ.1ರಷ್ಟು ಪ್ರೊಸೆಸಿಂಗ್‌ ಶುಲ್ಕವಿದ್ದು, ಇಎಂಐ ಮೊತ್ತವು 2194ರೂ.ನಿಂದ 2445ರೂ. ಮಧ್ಯೆ ಇರುತ್ತದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಕೂಡ ಶೇ.1ರಷ್ಟು ಪ್ರೊಸೆಸಿಂಗ್‌ ಶುಲ್ಕ ವಿಧಿಸುತ್ತದೆ. ಆದರೆ ಈ ಬ್ಯಾಂಕ್‌ ರಕ್ಷಣಾ ಸಿಬ್ಬಂದಿಗೆ ಯಾವುದೇ ಪ್ರೊಸೆಸಿಂಗ್‌ ಶುಲ್ಕ ವಿಧಿಸುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+