ನಮ್ಮ ಹಣಕಾಸು ನಿರ್ವಹಣೆ ಮಾಡುವುದು ಅತೀ ಮುಖ್ಯ. ನಾವು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದರೆ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಹುದು. ನಾವು ಸರಿಯಾದ ರೀತಿಯಲ್ಲಿ ಬಜೆಟ್ ನಿರ್ವಹಣೆ ಮಾಡಿದರೂ ಕೂಡಾ ಹಣಕಾಸು ತೊಂದರೆ ಉಂಟಾಗಬಹಹುದು. ಆ ಸಂದರ್ಭದಲ್ಲಿ ನಮಗೆ ತುರ್ತು ವೈಯಕ್ತಿಕ ಸಾಲವನ್ನು ನೀಡುತ್ತದೆ. ಈ ಆಪ್‌ಗಳು.
ಭಾರತದಲ್ಲಿ ಯಾವುದೇ ವ್ಯಕ್ತಿಯಾದರೂ ತನ್ನದೇ ಆದ ಹಣಕಾಸು ಗುರಿಯನ್ನು ಹೊಂದಿರುತ್ತಾರೆ. ಇತ್ತೀಚೆಗೆ ಈ ಬಜೆಟ್ ನಿರ್ವಹಣೆ, ಮುಂದಿನ ಜೀವನಕ್ಕಾಗಿ ಉಳಿತಾಯಗಳು ಅಧಿಕವಾಗುತ್ತಾ ಸಾಗುತ್ತಿದೆ. ಜನರು ತಮ್ಮ ಅಗತ್ಯಗಳನ್ನು ಪೂರೈಸಲು ಕೂಡಾ ವೈಯಕ್ತಿಕ ಸಾಲವನ್ನು ಪಡೆಯುವುದು ಹೆಚ್ಚಾಗುತ್ತಿದೆ. ಆದರೆ ಸಾಂಪ್ರಾದಾಯಿಕ ಬ್ಯಾಂಕುಗಳು ಈ ಸಾಲವನ್ನು ನೀಡಲು ಕೊಂಚ ಅಧಿಕ ಸಮಯವನ್ನೇ ತೆಗೆದುಕೊಳ್ಳುತ್ತದೆ. ಅದಕ್ಕೆ ಹೋಲಿಕೆ ಮಾಡಿದಾಗ ಈ ಆಪ್‌ಗಳಲ್ಲಿ ನಾವು ತ್ವರಿತವಾಗಿ ವೈಯಕ್ತಿಕ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.
ಇಲ್ಲಿ ನಾವು ಕೇವಲ ಒಂದು ಗಂಟೆಯಲ್ಲಿ ಸಾಲವನ್ನು ಪಡೆಯಲು ಸಾಧ್ಯವಾಗುವಂತಹ, ಸುರಕ್ಷಿತವಾದ, ಯಾವುದೇ ಅಡೆತಡೆಗಳು ಇಲ್ಲದೆ ಸಾಲವನ್ನು ಪಡೆಯಲು ಸಾಧ್ಯವಾಗುವಂತಹ ಆಪ್‌ಗಳ ಬಗ್ಗೆ ವಿವರಣೆ ನೀಡಿದ್ದೇವೆ. ಸಾಲ ನೀಡುವ ಬೆಸ್ಟ್ ಆಪ್‌ಗಳ ಬಗ್ಗೆ ಈ ಕೆಳಗಿದೆ ವಿವರ ಮುಂದೆ ಓದಿ..
ಪೇಸೆನ್ಸ್
ಪೇಸೆನ್ಸ್ ಭಾರತದ ಅತೀ ದೊಡ್ಡ ತ್ವರಿತ ಸಾಲ ನೀಡುವ ಆಪ್ ಆಗಿದೆ. ಇದರ ಆಪ್, ವೆಬ್‌ಸೈಟ್ ಎರಡರಲ್ಲೂ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಸಂಬಳವನ್ನು ಪಡೆಯುವ ಉದ್ಯೋಗಿಗಳು, ಸ್ವಯಂ ಉದ್ಯೋಗ ಮಾಡುತ್ತಿರುವವರು ಈ ತ್ವರಿತ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಇಲ್ಲಿ ನಾವು ಸಾಲವನ್ನು ಪಡೆಯಲು ಸ್ಯಾಲರಿ ಸ್ಲಿಪ್ ಬೇಕಾಗಿಲ್ಲ. ಇದು ಇತ್ತೀಚೆಗೆ ಲೇಝಿಪೇ ಜೊತೆ ವಿಲೀನವಾಗಿದೆ. ಇಲ್ಲಿ ಸಾಲವು ಅತೀ ತ್ವರಿತವಾಗಿ ಲಭ್ಯವಾಗುತ್ತದೆ.
ಬಡ್ಡಿದರ: ಮಾಸಿಕ ಶೇಕಡ 1.4ರಿಂದ ಶೇಕಡ 2.3
ಗರಿಷ್ಠ ಸಾಲದ ಮೊತ್ತ: 5,00,000 ರೂಪಾಯಿ
ಕನಿಷ್ಠ ಸಾಲದ ಮೊತ್ತ: 5000 ರೂಪಾಯಿ
ಬಜಾಜ್ ಫಿನ್‌ಸರ್ವ್
ಬಜಾಜ್ ಫಿನ್‌ಸರ್ವ್ ಸಾಲವನ್ನು ಒದಗಿಸುವ ಸಂಸ್ಥೆಗಳ ಪೈಕಿ ಅತೀ ಹೆಸರುವಾಸಿಯಾದ ಸಂಸ್ಥೆಯಾಗಿದೆ. ಇದು ದಶಕಗಳಿಂದ ಭಾರತದಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ. ಹಾಗೆಯೇ ಭಾರತದಲ್ಲಿ ಅತೀ ಉತ್ತಮ ಸಾಲದ ಆಪ್ ಬಜಾಜ್ ಫಿನ್‌ಸರ್ವ್ ಆಗಿದೆ. ನಿಮಗೆ ಈ ಆಪ್ ಮೂಲಕ 24 ಗಂಟೆಗಳಲ್ಲೇ ಅನುಮೋದನೆಯಾಗಿ ಸಾಲ ಲಭ್ಯವಾಗಲಿದೆ. ಬರೀ ಬಡ್ಡಿದರವನ್ನು ಇಎಂಐ ಮೂಲಕ ಪಾವತಿ ಮಾಡುವ ಉಳಿದ ಮೊತ್ತವನ್ನು ಬೇರೆ ಬೇರೆ ಸಂದರ್ಭದಲ್ಲಿ ಪಾವತಿ ಮಾಡುವ ಆಯ್ಕೆಯೂ ಕೂಡಾ ಇದೆ. ಇದು ನಿಮ್ಮ ಮಾಸಿಕ ಪಾವತಿ ಮೊತ್ತವನ್ನು ಶೇಕಡ 45ರಷ್ಟು ಕಡಿಮೆ ಮಾಡುತ್ತದೆ.
ಬಡ್ಡಿದರ: ವಾರ್ಷಿಕ 12-34
ಗರಿಷ್ಠ ಸಾಲದ ಮೊತ್ತ: 25,00,000 ರೂಪಾಯಿ
ಕನಿಷ್ಠ ಸಾಲದ ಮೊತ್ತ: 30,000 ರೂಪಾಯಿ
ಲೇಝಿಪೇ
ಲೇಝಿಪೇ ಭಾರತದ ಅತೀ ಹೆಸರುವಾಸಿ ಸಾಲದ ಆಪ್‌ಗಳಲ್ಲಿ ಒಂದಾಗಿದೆ. ಪೇಸೆನ್ಸ್ ಅನ್ನು ನಿರ್ವಹಣೆ ಮಾಡುವ ಸಂಸ್ಥೆಯಾದ ಪೇಯು ಸಂಸ್ಥೆಯೇ ಲೇಝಿಪೇ ಅನ್ನು ನಿರ್ವಹಣೆ ಮಾಡುತ್ತದೆ. ಇತ್ತೀಚೆಗೆ ಪೇಸೆನ್ಸ್ ಹಾಗೂ ಲೇಝಿಪೇ ವಿಲೀನವಾಗಿದೆ. ಈ ಆಪ್‌ನಲ್ಲಿ ಶೀಘ್ರವಾಗಿ ಸಾಲ ಲಭ್ಯವಾಗಲಿದೆ. ನೀವು ಸಾಲವನ್ನು ಪಡೆಯಲು ಎಷ್ಟು ಅರ್ಹರು ಎಂದು ಲೆಕ್ಕಹಾಕಿಕೊಳ್ಳಲು ಲೇಝಿಪೇ ಕೇವಲ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೇಳುತ್ತದೆ. ತಿಂಗಳಲ್ಲಿ ಕೋಟ್ಯಾಂತರ ರೂಪಾಯಿ ಸಾಲ ವಹಿವಾಟನ್ನು ಈ ಸಂಸ್ಥೆಯು ನಡೆಸುತ್ತದೆ. ಒಂದು ಲಕ್ಷ ರೂಪಾಯಿವರೆಗೆ ಕಡಿಮೆ ಮೊತ್ತದ ಇಎಂಐ ಹಾಗೂ ತ್ವರಿತ ಸಾಲ ಲಭ್ಯವಾಗಲಿದೆ. ಇದಕ್ಕೆ ಅಧಿಕ ದಾಖಲೆಗಳನ್ನು ಸಲ್ಲಿಸುವ ಅಗತ್ಯವೂ ಕೂಡಾ ಇಲ್ಲ.
ಬಡ್ಡಿದರ: ವಾರ್ಷಿಕ 15- 32
ಗರಿಷ್ಠ ಸಾಲದ ಮೊತ್ತ: 1,00,000 ರೂಪಾಯಿ
ಕನಿಷ್ಠ ಸಾಲದ ಮೊತ್ತ: 10,000 ರೂಪಾಯಿ
ದಾನಿ ಆಪ್
ದಾನಿ ಆಪ್ ಸಾಲದ ಆಪ್ ಆಗಿದ್ದು ಇದರ ಮೂಲಕ ನಾವು ಯಾವುದೇ ಸಂದರ್ಭದಲ್ಲೂ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಯಾವುದೇ ಸ್ಥಳದಿಂದ, ಯಾವುದೇ ಉದ್ದೇಶಕ್ಕಾಗಿಯೂ ನಾವು ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಯಾವುದೇ ದಾಖಲೆ ಪ್ರತಿಯನ್ನು ಅಥವಾ ನಕಲನ್ನು ಸಲ್ಲಿಸದೆಯೇ ಅಸುರಕ್ಷಿತ ಸಾಲವನ್ನು ಪಡೆಯಬಹುದು. ನೀವು ಸುಮಾರು 5 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು. ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗಲಿದೆ. ಎಲ್ಲ ವಹಿವಾಟಿಗೂ ನಿಮಗೆ ಶೇಕಡ 2ರಷ್ಟು ಕ್ಯಾಷ್‌ಬ್ಯಾಂಕ್ ಲಭ್ಯವಾಗಲಿದೆ. ನೀವು ಸುಮಾರು 15 ಲಕ್ಷ ರೂಪಾಯಿವರೆಗೆ ಶೇಕಡ 12ರಷ್ಟು ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು.
ಬಡ್ಡಿದರ: ವಾರ್ಷಿಕ 13.99
ಗರಿಷ್ಠ ಸಾಲದ ಮೊತ್ತ: 15,00,000 ರೂಪಾಯಿ
ಕನಿಷ್ಠ ಸಾಲದ ಮೊತ್ತ: 1,000 ರೂಪಾಯಿ
ಮನಿಟ್ಯಾಪ್
ಮನಿಟ್ಯಾಪ್ ಒಂದು ಸರಳವಾದ, ಶೀಘ್ರವಾಗಿ ಲಭ್ಯವಾಗುವ ಸಾಲದ ಆಪ್ ಆಗಿದೆ. ಈ ಆಪ್ ಮೂಲಕ ಶೀಘ್ರವಾಗಿ ಸಾಲವನ್ನು ಪಡೆಯಬಹುದು. ಈ ಆಪ್‌ನಲ್ಲಿ ಸಾಲವನ್ನು ಪಡೆಯುವುದಾದರೆ ಮೊಬೈಲ್ ಆಪ್ ಅನ್ನು ಡೌನ್‌ಲೋಡ್ ಮಾಡಿ, ರಿಜಿಸ್ಟರ್ ಮಾಡಿ, ಕೆವೈಸಿ ಸಂಪೂರ್ಣಗೊಳಿಸಿ, ಅನುಮೋದನೆಗಾಗಿ ನೀವು ಕಾಯಬೇಕಾಗುತ್ತದೆ. ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ನೀವು 5,00,000 ರೂಪಾಯಿವರೆಗೆ ಸಾಲವನ್ನು ಪಡೆಯಬಹುದು.
ಬಡ್ಡಿದರ: ವಾರ್ಷಿಕ 13
ಗರಿಷ್ಠ ಸಾಲದ ಮೊತ್ತ: 5,00,000 ರೂಪಾಯಿ
ಕನಿಷ್ಠ ಸಾಲದ ಮೊತ್ತ: 3,000 ರೂಪಾಯಿ
ಕ್ಯಾಷ್‌ಇ
ಕ್ಯಾಷ್‌ಇ ಭಾರತದಲ್ಲಿ ಬೆಸ್ಟ್ ವೈಯಕ್ತಿಕ ಸಾಲದ ಆಪ್ ಎಂದೆನಿಸಿಕೊಂಡಿದೆ. ನೀವು ಈ ಆಪ್‌ಗೆ ಸುಲಭ, ಸರಳವಾಗಿ ಲಾಗಿನ್ ಆಗಬಹುದು ಶೀಘ್ರ ಸಾಲವನ್ನು ಪಡೆಯಬಹುದು. ನೀವು 4 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಬಹುದು. ನೀವೇ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಈ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಳ್ಳಬಹುದು. ಡೈರೆಕ್ಟ್ ಆಟೋ ಡೆಬಿಟ್ ಅನ್ನು ನೀವು ಆಯ್ಕೆ ಮಾಡಬಹುದು.
ಬಡ್ಡಿದರ: ಮಾಸಿಕ 2.5
ಗರಿಷ್ಠ ಸಾಲದ ಮೊತ್ತ: 4,00,000 ರೂಪಾಯಿ
ಕನಿಷ್ಠ ಸಾಲದ ಮೊತ್ತ: 1,000 ರೂಪಾಯಿ


Click it and Unblock the Notifications