ಡಿಜಿಟಲ್ ಪಾವತಿ ವೇದಿಕೆ ಫೋನ್‌ಪೇ ಬುಧವಾರ, ಆಗಸ್ಟ್ 30 ರಂದು, ತನ್ನ ಸ್ಟಾಕ್ ಬ್ರೋಕಿಂಗ್ ಅಪ್ಲಿಕೇಶನ್ ಮತ್ತು ವೆಬ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ. ಈ ಮೂಲಕ ಫೋನ್‌ಪೇ ಸ್ಟಾಕ್ ಬ್ರೋಕಿಂಗ್‌ಗೆ ಪ್ರವೇಶವನ್ನು ಘೋಷಿಸಿದೆ. ಆಪ್ ಶೇರ್.ಮಾರ್ಕೆಟ್ (share.market) ಅಥವಾ ಶೇರ್ ಡಾಟ್ ಮಾರ್ಕೆಟ್ ಅನ್ನು ಫೋನ್‌ಪೇ ಆರಂಭ ಮಾಡಿದೆ.
ಕಂಪನಿಯು ತನ್ನ ಅಂಗಸಂಸ್ಥೆ ಫೋನ್‌ಪೇ ವೆಲ್ತ್ ಬ್ರೋಕಿಂಗ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಬ್ರೋಕಿಂಗ್ ವ್ಯವಹಾರವನ್ನು ನಡೆಸುತ್ತದೆ. " ಶೇರ್ ಡಾಟ್ ಮಾರ್ಕೆಟ್ ಮಾರುಕಟ್ಟೆ ಬುದ್ಧಿವಂತಿಕೆ, ಪರಿಮಾಣಾತ್ಮಕ ಸಂಶೋಧನೆ-ಆಧಾರಿತ, ಉತ್ತಮ ತಂತ್ರಜ್ಞಾನ ವೇದಿಕೆಯಾಗಿದೆ. ಹೂಡಿಕೆದಾರರು ಮತ್ತು ವ್ಯಾಪಾರಿಗಳಿಗೆ ಉತ್ತಮ ಗ್ರಾಹಕ ಅನುಭವವನ್ನು ಒದಗಿಸುವ ಮೂಲಕ ರಿಯಾಯಿತಿ ಬ್ರೋಕಿಂಗ್ ಅನ್ನು ಹೆಚ್ಚಿಸುತ್ತದೆ," ಎಂದು ಫೋನ್‌ಪೇ ಹೇಳಿಕೆಯಲ್ಲಿ ತಿಳಿಸಿದೆ.

"ಶೇರ್(ಡಾಟ್) ಮಾರ್ಕೆಟ್ ಮೊಬೈಲ್ ಅಪ್ಲಿಕೇಶನ್ ಮತ್ತು ಮೀಸಲಾದ ವೆಬ್ ಪ್ಲಾಟ್‌ಫಾರ್ಮ್ ಆಗಿ ಲಭ್ಯವಿದೆ. ಇಲ್ಲಿ ರಿಟೇಲ್ ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸಲು, ದಿನದ ವಹಿವಾಟುಗಳನ್ನು ಮಾಡಲು, ಕ್ಯುರೇಟೆಡ್ ಸಂಪತ್ತು ಬ್ಯಾಸ್ಕೆಟ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ," ಎಂದು ಫೋನ್‌ಪೇ ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ.
ಇತ್ತೀಚೆಗೆ, ವಿಶೇಷವಾಗಿ ಕೊರೊನಾ ಸಾಂಕ್ರಾಮಿಕದ ನಂತರ, ವೇಗವಾಗಿ ಬೆಳೆಯುತ್ತಿರುವ ಡಿಮ್ಯಾಟ್ ಖಾತೆಗಳು ಮತ್ತು ಮ್ಯೂಚುವಲ್ ಫಂಡ್ ಎಸ್‌ಐಪಿಗಳೊಂದಿಗೆ ಷೇರು ಮಾರುಕಟ್ಟೆಯು ಈಕ್ವಿಟಿಗಳನ್ನು ಪ್ರವೇಶಿಸುವ ರಿಟೇಲ್ ಹೂಡಿಕೆದಾರರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ನಾವು ಕಾಣಬಹುದಾಗಿದೆ.
ಶೇರ್(ಡಾಟ್)ಮಾರ್ಕೆಟ್ ಹೂಡಿಕೆಯ ಉತ್ಪನ್ನಗಳ ವಿವಿಧ ಆಯ್ಕೆಯನ್ನು ಒದಗಿಸುತ್ತದೆ. ಹೂಡಿಕೆದಾರರಿಗೆ ಸಮತೋಲಿತ ಪೋರ್ಟ್‌ಫೋಲಿಯೊವನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ವೇದಿಕೆಯು ಸ್ಟಾಕ್‌ಗಳನ್ನು (ಇಂಟ್ರಾಡೇ ಮತ್ತು ಡೆಲಿವರಿ), ಮ್ಯೂಚುಯಲ್ ಫಂಡ್‌ಗಳು, ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್‌ಗಳು (ಇಟಿಎಫ್‌ಗಳು) ನೀಡುತ್ತದೆ.
"ಫೋನ್‌ಪೇ ಬಳಕೆದಾರರು ತಮ್ಮ ಫೋನ್‌ಪೇ-ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಬಹುದು ಮತ್ತು ವೆಬ್ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶ ಮಾಡಬಹುದು. ಲಾಗಿನ್ ಮಾಡಿದ ನಂತರ, ತಮ್ಮ ಬ್ರೋಕಿಂಗ್ ಮತ್ತು ಡಿಮ್ಯಾಟ್ ಖಾತೆಗಳನ್ನು ಸಕ್ರಿಯಗೊಳಿಸಲು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು,"ಎಂದು ಕಂಪನಿ ಹೇಳಿದೆ.
ಸಿಇಒ ಏನು ಹೇಳುವುದು?
ಶೇರ್(ಡಾಟ್)ಮಾರ್ಕೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಉಜ್ವಲ್ ಜೈನ್ ಮಾತನಾಡಿ, "ಆರ್ಥಿಕ ಸೇರ್ಪಡೆಗೆ ಚಾಲನೆ ನೀಡುವ ನಮ್ಮ ದೃಷ್ಟಿಕೋನವನ್ನು ಮತ್ತಷ್ಟು ಸಕ್ರಿಯಗೊಳಿಸುವ ಶೇರ್ (ಡಾಟ್) ಮಾರ್ಕೆಟ್ ಅನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ. ಕಳೆದ ಕೆಲವು ವರ್ಷಗಳಲ್ಲಿ, ಈಕ್ವಿಟಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯನ್ನು ನಾವು ನೋಡುತ್ತಿದ್ದೇವೆ," ಎಂದು ಹೇಳಿದ್ದಾರೆ.
"ನಮ್ಮ ತಾಂತ್ರಿಕ ಸಾಮರ್ಥ್ಯ, ತಲುಪುವಿಕೆ, ಉನ್ನತವಾದ ಬೆಂಬಲದೊಂದಿಗೆ ಶೇರ್(ಡಾಟ್)ಮಾರ್ಕೆಟ್ ಈ ಬೆಳವಣಿಗೆಯನ್ನು ಮುಂದೂಡುತ್ತದೆ ಎಂದು ನಾವು ನಂಬುತ್ತೇವೆ. ನಮ್ಮ ಗ್ರಾಹಕರು ಹೂಡಿಕೆ ಮಾಡುವಾಗ ಮತ್ತು ವ್ಯಾಪಾರ ಮಾಡುವಾಗ ರಿಯಾಯಿತಿ ಬ್ರೋಕಿಂಗ್‌ನ ಪ್ರಯೋಜನಗಳನ್ನು ನೀಡುವುದು ನಮ್ಮ ಗುರಿಯಾಗಿದೆ," ಎಂದು ಕೂಡಾ ಸಿಇಒ ಉಜ್ವಲ್ ಜೈನ್ ತಿಳಿಸಿದ್ದಾರೆ.
ಬೆಲೆ ವಿವರಗಳು:
ಬ್ರೋಕರೇಜ್ ಶುಲ್ಕಗಳು:
ಈಕ್ವಿಟಿ ವಿತರಣೆ: ಶೇಕಡ 0.05 ಕ್ಕಿಂತ ಕಡಿಮೆ ಅಥವಾ 20 ರೂಪಾಯಿ
ಇಕ್ವಿಟಿ ಇಂಟ್ರಾಡೇ: ಶೇಕಡ 0.05 ಕ್ಕಿಂತ ಕಡಿಮೆ ಅಥವಾ 20 ರೂಪಾಯಿ
ಷೇರು(ಡಾಟ್)ಮಾರ್ಕೆಟ್ ಪ್ಲಾಟ್‌ಫಾರ್ಮ್ ಶುಲ್ಕಗಳು:
31ನೇ ಮಾರ್ಚ್ 2024 ರವರೆಗೆ ಅನ್ವಯವಾಗುವ ವಿವಿಧ ಪ್ರಯೋಜನಗಳನ್ನು ಒಳಗೊಂಡಿರುವ ಒಂದು-ಬಾರಿ ಆನ್‌ಬೋರ್ಡಿಂಗ್ ಬೆಲೆ 199 ರೂಪಾಯಿ:
ವಹಿವಾಟಿನ ಮೇಲೆ 400 ರೂಪಾಯಿವರೆಗೆ ಶೂನ್ಯ ಬ್ರೋಕರೇಜ್
ಆಂತರಿಕ ಮತ್ತು ಮೂರನೇ ವ್ಯಕ್ತಿಯ ವೆಲ್ತ್‌ಬಾಸ್ಕೆಟ್‌ಗಳಿಗೆ ಶೂನ್ಯ ಪ್ಲಾಟ್‌ಫಾರ್ಮ್ ಶುಲ್ಕ
ಆಂತರಿಕ ಮತ್ತು ಮೂರನೇ ವ್ಯಕ್ತಿಯ ವೆಲ್ತ್‌ಬಾಸ್ಕೆಟ್‌ಗಳಲ್ಲಿ ವೆಲ್ತ್‌ಬಾಸ್ಕೆಟ್ ವಹಿವಾಟಿನ ಮೇಲೆ ಶೂನ್ಯ ಬ್ರೋಕರೇಜ್.


Click it and Unblock the Notifications