ನಮ್ಮ ಆದಾಯವು ತೆರಿಗೆಗೆ ಒಳಪಡುವುದಿದ್ದರೆ ನಾವು ಪ್ರತಿ ವರ್ಷವು ಕೂಡಾ ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಈಗ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಆದ ಫೋನ್‌ಪೇ ಆಪ್‌ನಲ್ಲೇ ಆದಾಯ ತೆರಿಗೆ ಪಾವತಿ ಮಾಡುವ ಅವಕಾಶವನ್ನು ನೀಡಿದೆ. ಹೌದು, ಫೋನ್‌ಪೇ ಹೊಸ ಫೀಚರ್ ಅನ್ನು ಆರಂಭ ಮಾಡಿದ್ದು, ನೀವು ಅಪ್ಲಿಕೇಶನ್‌ನಲ್ಲಿ ಆದಾಯ ತೆರಿಗೆಯನ್ನು ಪಾವತಿಸಬಹುದಾಗಿದೆ.
ಈ ನಿಟ್ಟಿನಲ್ಲಿ ಫೋನ್‌ಪೇ ಪೇಮೇಟ್ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. "ಆದಾಯ ತೆರಿಗೆ ಪಾವತಿ" ಎಂದು ಕರೆಯಲ್ಪಡುವ ಈ ಹೊಸ ಫೀಚರ್ ಅನ್ನು ಬಳಸಿಕೊಂಡು ಜನರು ಮುಂಗಡ ತೆರಿಗೆಯನ್ನು ನೇರವಾಗಿ ಫೋನ್‌ಪೇ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದಾಗಿದೆ. ತೆರಿಗೆ ಪೋರ್ಟಲ್‌ಗೆ ಲಾಗ್ ಇನ್ ಮಾಡಿ ತೆರಿಗೆಯನ್ನು ನೀವು ಪಾವತಿ ಮಾಡಬೇಕಾಗುವುದಿಲ್ಲ. ತೆರಿಗೆಗಳನ್ನು ಪಾವತಿಸುವ ಪ್ರಕ್ರಿಯೆಯನ್ನು ಇದು ಸರಳವಾಗಿಸಿದೆ.

ಹೇಳಿಕೆ ನೀಡಿದ ಫೋನ್‌ಪೇ
"ಫೋನ್‌ಪೇನಲ್ಲಿ ನಮ್ಮ ಬಳಕೆದಾರರ ಪ್ರಸ್ತುತ ಅಗತ್ಯವನ್ನು ಪೂರೈಸಲು ನಮ್ಮ ಕೊಡುಗೆ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ಫೋನ್‌ಪೇ ಅಪ್ಲಿಕೇಶನ್‌ನಲ್ಲಿಯೇ ಆದಾಯ ತೆರಿಗೆಯನ್ನು ಪಾವತಿಸುವ ಅನುಕೂಲವನ್ನು ನಾವು ಜನರಿಗೆ ನೀಡಲು ಬಯಸುತ್ತೇವೆ. ಈ ಹೊಸ ಫೀಚರ್ ಅನ್ನು ಘೋಷಿಸಲು ನಾವು ಬಯಸುತ್ತೇವೆ," ಎಂದು ಫೋನ್‌ಪೇ ತಿಳಿಸಿದೆ.
"ತೆರಿಗೆಗಳನ್ನು ಪಾವತಿಸುವುದು ಸಾಮಾನ್ಯವಾಗಿ ಕ್ಲಿಷ್ಟಕರವಾಗಿದೆ ಮತ್ತು ಅದಕ್ಕಾಗಿ ಹೆಚ್ಚು ಸಮಯವು ಕೂಡಾ ಬೇಕಾಗುತ್ತದೆ. ಆದರೆ ಈಗ ಫೋನ್‌ಪೇ ತೆರಿಗೆ ಪಾವತಿ ಸಮಸ್ಯೆಯನ್ನು ಸುರಕ್ಷಿತ ಹಾಗೂ ಸರಳಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಪ್ರಕ್ರಿಯೆ ಸರಳ ಮತ್ತು ಸುಲಭವಾದ ಕಾರಣ ನಮ್ಮ ಬಳಕೆದಾರರು ತೆರಿಗೆ ಪಾವತಿಯನ್ನು ಮಾಡಲು ಕಷ್ಟವಿಲ್ಲ ಎಂದು ನಾವು ನಂಬುತ್ತೇವೆ," ಎಂದು ಫೋನ್‌ಪೇನಲ್ಲಿ ಬಿಲ್ ಪಾವತಿಗಳು ಮತ್ತು ರೀಚಾರ್ಜ್ ವ್ಯವಹಾರದ ಮುಖ್ಯಸ್ಥರಾದ ನಿಹಾರಿಕಾ ಸೈಗಲ್ ಹೇಳುತ್ತಾರೆ.
ಫೋನ್‌ಪೇ ಬಳಸಿ ತೆರಿಗೆ ಪಾವತಿಸುವುದು ಹೇಗೆ
ಹಂತ 1: ನಿಮ್ಮ ಅಂಡ್ರಾಯ್ಡ್ ಅಥವಾ iOS ನಲ್ಲಿ ಫೋನ್‌ಫೇ ಅಪ್ಲಿಕೇಶನ್ ತೆರೆಯಿರಿ.
ಹಂತ 2: Financial Services & Taxes ಮೇಲೆ ಕ್ಲಿಕ್ ಮಾಡಿ
ಹಂತ 3: ಆದಾಯ ತೆರಿಗೆ (Income Tax) ಆಯ್ಕೆಮಾಡಿ
ಹಂತ 4: ಪ್ಯಾನ್ ವಿವರಗಳು ಮತ್ತು ತೆರಿಗೆ ವಿವರಗಳಂತಹ ಎಲ್ಲಾ ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
ಹಂತ 5: ತೆರಿಗೆ ಪಾವತಿಯ ಪ್ರಕಾರ, ವರ್ಷ ಮತ್ತು ಇತರ ಪ್ರಮುಖ ವಿವರಗಳನ್ನು ಆಯ್ಕೆಮಾಡಿ.
ಹಂತ 6: ತೆರಿಗೆಯ ಮೊತ್ತವನ್ನು ನಮೂದಿಸಿ ಮತ್ತು ತೆರಿಗೆಗಳನ್ನು 2 ದಿನಗಳಲ್ಲಿ ಇಲಾಖೆಗೆ ಪಾವತಿಸಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಬಳಸಿ ತೆರಿಗೆಗಳನ್ನು ಪಾವತಿಸಿ
ಸೋಮವಾರ ಫೋನ್‌ಪೇ ತನ್ನ ಹೊಸ ಫೀಚರ್ ಅನ್ನು ಆರಂಭ ಮಾಡಿದೆ. ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಬಳಸಿಕೊಂಡು ತೆರಿಗೆಯನ್ನು ಪಾವತಿ ಮಡಬಹುದಾಗಿದೆ. 45-ದಿನಗಳ ಬಡ್ಡಿ-ಮುಕ್ತ ಅವಧಿ ಮತ್ತು ತೆರಿಗೆ ಪಾವತಿಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸುವ ಸಾಧ್ಯತೆಯಾಗಲಿದೆ. ಬಳಕೆದಾರರ ಬ್ಯಾಂಕ್ ಅನ್ನು ಅವಲಂಬಿಸಿ ಕ್ರೆಡಿಟ್ ಕಾರ್ಡ್ ಪಾವತಿಗಳಿಗೆ ಹೆಚ್ಚುವರಿ ಪ್ರಯೋಜನಗಳು ಲಭ್ಯವಾಗಲಿದೆ.
ಐಟಿಆರ್ 2022-23
2022-23ರ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಕೊನೆಯ ದಿನಾಂಕವು ಸಮೀಪವಾಗುತ್ತಿದೆ. ಅನೇಕ ತೆರಿಗೆದಾರರು ಇನ್ನೂ ಕೂಡಾ ಐಟಿಆರ್ ಪಾವತಿಸಲು ಕಷ್ಟಪಡುತ್ತಿದ್ದಾರೆ. ಆದರೆ, ಈಗಾಗಲೇ ಐಟಿಆರ್ ಸಲ್ಲಿಸಿದವರಿಗೆ ಆದಾಯ ತೆರಿಗೆ ಇಲಾಖೆ ಅರ್ಹರಿಗೆ ಮರುಪಾವತಿಯನ್ನು ಕಳುಹಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ತೆರಿಗೆದಾರರು ತಮ್ಮ ಐಟಿಆರ್ ಅನ್ನು ಜುಲೈ 31 ರ ಭಾನುವಾರ ಅಥವಾ ಮೊದಲು ಫೈಲ್ ಮಾಡಬೇಕಾಗುತ್ತದೆ. ಗಡುವು ವಿಸ್ತರಿಸಲಾಗುವುದಿಲ್ಲ ಎಂದು ಈಗಾಗಲೇ ಸರ್ಕಾರ ತಿಳಿಸಿದೆ.


Click it and Unblock the Notifications